Subscribe to Gizbot

ಎಚ್ಚರ !! ಆನ್‌ಲೈನ್‌ನಲ್ಲಿ ಈ ಚಟುವಟಿಕೆಗಳು ಅಪರಾಧ

Written By:

ಒಂದು ಟೈಮ್‌ ಊಟ ಬಿಟ್ರು ಒಂದು ದಿನ ಮೊಬೈಲ್‌ ಬಿಟ್ಟರಲಾರೆವು ಎನ್ನುವವರು ಇಂದು ಬಹುಸಂಖ್ಯಾತರಿದ್ದಾರೆ. ಇಂದು ಸ್ಮಾರ್ಟ್‌ಫೋನ್‌ ಮತ್ತು ಕಂಪ್ಯೂಟರ್‌ನಲ್ಲಿ ಇಂಟರ್ನೆಟ್‌ ಬಳಸಿ ಹಲವು ವೆಬ್‌ಸೈಟ್‌ಗಳಿಗೆ ಯಾವುದಾದರೂ ಮಾಹಿತಿಗಾಗಿ ಬೇಟಿನೀಡುತ್ತಾ ಹಲವು ಚಟುವಟಿಕೆಗಳನ್ನು ಆನ್‌ಲೈನ್‌ನಲ್ಲಿ ನಿರ್ವಹಿಸುತ್ತಿರುತ್ತೀರಿ. ಆದರೆ ಒಂದು ವಿಷಯ ನೆನಪಿರಲಿ. ಆನ್‌ಲೈನ್‌ ಬಳಕೆ ಮಾಡುವ ನೀವು ಕೆಲವು ಕಾನೂನುಬಾಹಿರ ಚಟುವಟಿಕೆಗಳಿಂದ ಎಚ್ಚರ ವಹಿಸಲೇಬೇಕು.

ಓದಿರಿ: ಬೆಂಗಳೂರಿಗರು ಆನ್‌ಲೈನ್‌ನಲ್ಲಿ ದಿನಸಿ ಕೊಳ್ಳಲು ''Terraa" ಆಪ್‌ 
ಹೌದು, ತಿಳಿದು ತಿಳಿಯದೇನೆ ಕಾನೂನಿಗೆ ವಿರುದ್ಧವಾದ ಹಲವು ಚಟುವಟಿಕೆಗಳು ನಿಮ್ಮಿಂದ ಆನ್‌ಲೈನ್‌ನಲ್ಲಿ ಜರುಗುತ್ತದೆ. ಇವುಗಳಿಂದ ಎಚ್ಚರ ವಹಿಸಬೇಕಾಗಿದ್ದು, ಅಂತಹ ಚಟುವಟಿಕೆಗಳು ಯಾವುವು ಎಂಬುದನ್ನು ಗಿಜ್‌ಬಾಟ್‌ ನಿಮಗಾಗಿ ಇಂದಿನ ಲೇಖನದಲ್ಲಿ ತಿಳಿಸುತ್ತಿದೆ. ಈ ಮಾಹಿತಿಯು ನಿಮ್ಮ ಆನ್‌ಲೈನ್‌ ಚಟುವಟಿಕೆ ಸುರಕ್ಷತೆಗೆ ಎಂದಿಗೂ ಉಪಯುಕ್ತವಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸಾರ್ವಜನಿಕವಲ್ಲದ ಅಸುರಕ್ಷಿತ ವೈಫೈಗೆ ಸಂಪರ್ಕ ಹೊಂದುವುದು.

ಸಾರ್ವಜನಿಕವಲ್ಲದ ಅಸುರಕ್ಷಿತ ವೈಫೈಗೆ ಸಂಪರ್ಕ ಹೊಂದುವುದು.

ಟೆಕ್ನಾಲಜಿ ತಿಳಿದಿರುವ ನೀವು ಎಲ್ಲ ಬಲ್ಲವೆಂದು ಸಾರ್ವಜನಿಕವಲ್ಲದ ವೈಫೈ ನೆಟ್‌ವರ್ಕ್‌ಗೆ ಕನೆಕ್ಟ್‌ ಆಗುವುದು ಕಾನೂನುಬಾಹಿರವು ಹೌದು ಮತ್ತು ನಿಮಗೆ ಎಂದು ತೊಂದರೆ ತಪ್ಪಿದಲ್ಲ. ವೈಫೈ ಸಂಪರ್ಕ ಕಳವು ಮಾಡಿದ ಆರೋಪ ಬರಬಹುದು.

ಹ್ಯಾಪಿ ಬರ್ಥಡೇ ಹಾಡಿನ ವೀಡಿಯೊ ಅಪ್‌ಲೋಡ್‌

ಹ್ಯಾಪಿ ಬರ್ಥಡೇ ಹಾಡಿನ ವೀಡಿಯೊ ಅಪ್‌ಲೋಡ್‌

ಸಾರ್ವಜನಿಕವಾಗಿ ಹ್ಯಾಪಿ ಬರ್ಥಡೇ ಹಾಡುವುದು ಮತ್ತು ವೀಡಿಯೊ ಅಪ್‌ಲೋಡ್‌ ಮಾಡುವುದು ಕಾನೂನಿಗೆ ವಿರುದ್ಧ ಚಟುವಟಿಕೆಯಾಗಿದೆ. ಕಾರಣ "ಹ್ಯಾಪಿ ಬರ್ಥಡೇ" ಒಂದು ಸಾಂಗ್ ಆಗಿದ್ದು, ಕೃತಿಚೌರ್ಯ ಹೊಂದಿದೆ.

ಸಾಫ್ಟ್‌ವೇರ್‌ಗಳನ್ನು ನಕಲು(Copy) ಮಾಡುವುದು

ಸಾಫ್ಟ್‌ವೇರ್‌ಗಳನ್ನು ನಕಲು(Copy) ಮಾಡುವುದು

ಆನ್‌ಲೈನ್‌ನಲ್ಲಿ ಕೆಲವು ಸಾಫ್ಟ್‌ವೇರ್‌ಗಳು ವಿತರಣೆ ಮಾಡದೆ ಕೆಲವರಿಗೆ ಮಾತ್ರ ಹಕ್ಕುಗಳನ್ನು ನೀಡಿರುತ್ತವೆ. ಅಂತಹ ಸಾಫ್ಟ್‌ವೇರ್‌ಗಳನ್ನು ಹಕ್ಕಿಲ್ಲದೇ ನಕಲು ಮಾಡಿದರೆ ಕಾನೂನು ವಿರೋಧಿ ಚಟುವಟಿಕೆ ಆಗುತ್ತದೆ.

ಯೂಟ್ಯೂಬ್‌ಗೆ ಕೃತಿಚೌರ್ಯ ವಿಷಯಗಳನ್ನು ಅಪ್‌ಲೋಡ್‌ ಮಾಡುವುದು.

ಯೂಟ್ಯೂಬ್‌ಗೆ ಕೃತಿಚೌರ್ಯ ವಿಷಯಗಳನ್ನು ಅಪ್‌ಲೋಡ್‌ ಮಾಡುವುದು.

ಯಾವುದೇ ವಿಷಯಗಳನ್ನು ಯೂಟ್ಯೂಬ್‌ಗೆ ಅಪ್‌ಲೋಡ್‌ ಮಾಡುವ ಮೊದಲು ಆಳವಾಗಿ ವಿಷಯ ತಿಳಿದಿರಬೇಕು. ಇಲ್ಲವಾದಲ್ಲಿ ಶಿಕ್ಷೆಗೆ ಗುರಿಯಾಗುವ ಅವಕಾಶವಿರುತ್ತದೆ.

 ಪಾಸಿಂಗ್‌ ಪೇವಾಲ್ಸ್‌

ಪಾಸಿಂಗ್‌ ಪೇವಾಲ್ಸ್‌

ವೆಬ್‌ಸೈಟ್‌ಗಳಲ್ಲಿ ಪ್ರಾಕ್ಸಿ ಸರ್ವರ್‌ನ ಲೇಖನದ ಪೇವಾಲ್ಸ್ ಬಳಸುವುದು ಅಕ್ರಮವಾಗುತ್ತದೆ.

ಸೈಬರ್‌ ಬೆದರಿಕೆ

ಸೈಬರ್‌ ಬೆದರಿಕೆ

ಆನ್‌ಲೈನ್‌ ಜಾಲತಾಣಗಳ ಮೂಲಕ ಬೆದರಿಕೆ ಹಾಕುವುದು ಕಾನೂನು ಬಾಹಿರವಾಗಿದ್ದು, ಎಲ್ಲಾ ದೇಶಗಳು ಸಂವಿಧಾನದಲ್ಲಿ ಈ ಅಪರಾಧದ ಬಗ್ಗೆ ಮಾಹಿತಿ ಅಳವಡಿಸಿವೆ.

 13 ವರ್ಷ ವಯಸ್ಸಾಗದೆ ಫೇಸ್‌ಬುಕ್‌ ಖಾತೆ ಹೊಂದುವುದು

13 ವರ್ಷ ವಯಸ್ಸಾಗದೆ ಫೇಸ್‌ಬುಕ್‌ ಖಾತೆ ಹೊಂದುವುದು

ಫೇಸ್‌ಬುಕ್‌ ಖಾತೆ ಹೊಂದಲು 13 ವರ್ಷ ವಯಸ್ಸಾಗಿರಬೇಕು. ಈ ನಿಯಮ ಉಲ್ಲಂಘಿಸಿ ಖಾತೆ ತೆರೆಯುವುದು ಅಪರಾಧವಾಗಿದೆ

ವಿಡಂಬನೆ ಖಾತೆ

ವಿಡಂಬನೆ ಖಾತೆ

ಸಾಮಾಜಿಕ ಜಾಲತಾಣಗಳಲ್ಲಿ ವಿಡಂಬನೆ ಹಾಗೂ ಅಣಕ ಮಾಡುವಂತಹ ಬರಹಗಳನ್ನು, ಪೋಸ್ಟ್‌ಗಳನ್ನು ಹಾಕಲು ಖಾತೆ ಹೊಂದುವುದು ಅಪರಾಧವಾಗಿದೆ.

ಆಕ್ಸೆಸಿಂಗ್ ಡೀಪ್‌ ವೆಬ್‌

ಆಕ್ಸೆಸಿಂಗ್ ಡೀಪ್‌ ವೆಬ್‌

ಕೆಲವು ತಪ್ಪುಗಳ ಮೂಲಕ ರಾಂಗ್‌ ಸೈಟ್‌ಗಳಿಗೆ ಬೇಟಿ ನೀಡುವುದು ಹೆಚ್ಚು ಅಪಾಯಕಾರಿಯಾಗಿದೆ.

ಅನಧಿಕೃತ ಟಿವಿ ಸ್ಟ್ರೀಮಿಂಗ್ ಸೇವೆಗಳು

ಅನಧಿಕೃತ ಟಿವಿ ಸ್ಟ್ರೀಮಿಂಗ್ ಸೇವೆಗಳು

ಆನ್‌ಲೈನ್‌ನಲ್ಲಿ ಉಚಿತವಾಗಿ ವೀಡಿಯೋಗಳನ್ನು ನೊಡಿದರು ಸಹ, ಟಿವಿಶೋಗಳನ್ನು ಅನಧಿಕೃತವಾಗಿ ಸೇವೆ ನೀಡುವ ಸೈಟ್‌ಗಳನ್ನು ನೋಡಬಾರದು.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
10 Things You’re Doing Online That Are Probably Illegal.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot