Subscribe to Gizbot

ನಿಮ್ಮ ಫೋನ್ ಜಗತ್ತಿನ ಸಂರಕ್ಷಕ ಇಲ್ಲಿದೆ ಕಾರಣ

Posted By:

ಜಗತ್ತನ್ನು ಉಳಿಸಲು ನಿಮ್ಮ ಫೋನ್ ಬಳಕೆ ಎಷ್ಟೊಂದು ಮಹತ್ವದ್ದು ಎಂಬ ಸತ್ಯ ನಿಮಗೆ ತಿಳಿದಿದೆಯೇ? ಹೌದು ಆಧುನಿಕ ಜಗತ್ತಿನಲ್ಲಿ ನಿಮ್ಮ ಫೋನ್ ಜಗತ್ತನ್ನು ಉಳಿಸುವ ಮಾಂತ್ರಿಕ ಶಕ್ತಿಯಾಗಿ ಕಾರ್ಯನಿರ್ವಹಿಸಲಿದೆ ಹೇಗೆ ಎಂಬುದನ್ನು ನೀವು ಅರಿಯಲೇಬೇಕೇ. ಕ್ಲೌಡ್ ಕಂಪ್ಯೂಟಿಂಗ್‌ನಿಂದ ಹಿಡಿದು ನಿಮ್ಮನ್ನು ಸಂತಸವಾಗಿರಿಸುವ ಕೌಶಲ್ಯ, ಡೇಟಾ ಸಂಗ್ರಹಣೆ ಹೀಗೆ ವಿಜ್ಞಾನ ಸಂಬಂಧಿತ ವಿಶ್ವಕ್ಕೆ ಹೆಚ್ಚು ಅಗತ್ಯವಾಗಿರುವ ಹತ್ತು ಹಲವು ಕಾರ್ಯಗಳನ್ನು ನಿಮ್ಮ ಅಂಗೈಯಗಲದ ಫೋನ್ ಮಾಡಲಿದೆ.

ಇದನ್ನೂ ಓದಿ: ಫೇಸ್‌ಬುಕ್ ಸಂಸ್ಥೆಯಲ್ಲಿ ಎಲ್ಲವೂ ಸುಖವಾಗಿಲ್ಲ ಏನಿದು ಕಥೆ?

ಈ ಕೆಲಸಗಳನ್ನು ನಿಮ್ಮ ಸ್ಮಾರ್ಟ್‌ಫೋನ್ ಹೇಗೆ ಮಾಡುತ್ತದೆ ಎಂಬುದನ್ನು ತಿಳಿದುಕೊಳ್ಳಬೇಕು ಎಂಬುದು ನಿಮ್ಮ ಬಯಕೆಯಾಗಿದ್ದಲ್ಲಿ ಕೆಳಗಿನ ಸ್ಲೈಡರ್ ಈ ಎಲ್ಲಾ ಮಾಹಿತಿಗಳನ್ನು ನಿಮಗೆ ತಲುಪಿಸಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಕ್ಲೌಡ್ ಕಂಪ್ಯೂಟಿಂಗ್
  

ವಿಜ್ಞಾನಿಗಳು ಒಂದು ಅಪ್ಲಿಕೇಶನ್ ಅನ್ನು ರಚನೆ ಮಾಡಿದ್ದು ವಿಶ್ವದಾದ್ಯಂತ ಬಳಸುತ್ತಿರುವ ಆಂಡ್ರಾಯ್ಡ್ ಡಿವೈಸ್‌ಗಳ ಶಕ್ತಿಯನ್ನು ಒಂದೇ ಕಡೆ ಸಂಗ್ರಹಿಸುವುದು. ಫೋನ್‌ನ ಕಂಪ್ಯೂಟಿಂಗ್ ಪವರ್ ಅನ್ನು ಪಡೆದುಕೊಂಡು ಈ ಕೆಲಸವನ್ನು ಮಾಡುತ್ತದೆ.

ಸಂತೋಷವನ್ನು ಅಭ್ಯಸಿಸಲು
  

ನಿಮ್ಮ ಮೂಡ್ ಅನ್ನು ಅರಿತುಕೊಂಡು ಜನರು ಹೇಗೆ ಸಂತಸಕರವಾಗಿ ಇರಬಹುದು ಎಂಬುದನ್ನು ತಿಳಿದುಕೊಳ್ಳುವ ಕೆಲಸವನ್ನು ಕೇಂಬ್ರಿಡ್ಜ್ ಯೂನಿವರ್ಸಿಟಿ ಮಾಡುತ್ತಿದೆ. ಇಮೋಶನ್ ಸೆನ್ಸ್ ಎಂಬ ಅಪ್ಲಿಕೇಶನ್ ಇದಾಗಿದ್ದು, ಅವರ ಮೂಡ್ ಅನ್ನು ಅರಿತುಕೊಳ್ಳುವ ಪ್ರಯತ್ನವನ್ನು ಈ ಅಪ್ಲಿಕೇಶನ್ ಮಾಡುತ್ತದೆ.

ಕ್ರೌಡ್ ಸೋರ್ಸಿಂಗ್ ಸೈನ್ಸ್
  

ಸಾಮಾನ್ಯ ಜನರನ್ನು ಬಳಸಿಕೊಂಡು ಅವರ ಬಗೆಗಿನ ಮಾಹಿತಿ ಸಂಗ್ರಹಿಸುವುದು. ಪ್ರಾಣಿಗಳು ಮತ್ತು ಹಕ್ಕಿಗಳ ಜನಸಂಖ್ಯೆಯನ್ನು ಅರಿತುಕೊಳ್ಳುವುದು.

 ಸ್ಮಾರ್ಟ್‌ಫೋನ್ ಸ್ಯಾಟಲೈಟ್
  

ಬಾಹ್ಯಾಕಾಶದ ಬಳಕೆಗಾಗಿ ವೆಚ್ಚದಾಯಕವಲ್ಲದ ಗ್ರಾಹಕ ತಂತ್ರಜ್ಞಾನವದ ಸಾಮರ್ಥ್ಯಗಳ ಆಳ್ವಿಕೆ. ಬಾಹ್ಯಾಕಾಶದಲ್ಲಿ ಮಾತ್ರ ಚಾಲನೆಯಾಗುವ ಸ್ಕ್ರೀಮ್ ಇನ್ ಸ್ಪೇಸ್ ಎಂಬ ಅಪ್ಲಿಕೇಶನ್ ಅನ್ನು ಅಭಿವೃದ್ಧಿಪಡಿಸಿತು. ಕಕ್ಷೆಯಲ್ಲಿರುವ ಇಂಟರ್ನೆಟ್ ಮೂಲಕ ಸಲ್ಲಿಸಿರಿವ ವೀಡಿಯೊಗಳನ್ನು ಇದು ಪ್ಲೇ ಮಾಡುತ್ತದೆ.

ಫೀಲ್ಡ್ ಡೇಟಾ ಕಲೆಕ್ಷನ್
  

ಎಪಿ ಕಲೆಕ್ಟ್ ಎಂಬ ಅಪ್ಲಿಕೇಶನ್ ಅನ್ನು ಲಂಡನ್‌ನ ಇಂಪೀರಿಯಲ್ ಕಾಲೇಜು ಅಭಿವೃದ್ಧಿಪಡಿಸಿದ್ದು ತಾವು ಕಾರ್ಯನಿರ್ವಹಿಸುತ್ತಿರುವ ಕ್ಷೇತ್ರದಲ್ಲಿ ಡೇಟಾ ಸಂಗ್ರಹಿಸಲು ಇದು ವಿಜ್ಞಾನಿಗಳನ್ನು ಅನುಮತಿಸುತ್ತದೆ.

ವೆದರ್ ಪ್ರಿಡಿಕ್ಶನ್
  

ಸತ್‌ಕ್ಯಾಮ್ ಹೆಸರಿನ ಐಓಎಸ್ ಅಪ್ಲಿಕೇಶನ್ ಹವಾಮಾನ ಸ್ಯಾಟಲೈಟ್ ಹಾದುಹೋದಾಗ ಈ ಅಪ್ಲಿಕೇಶನ್ ಸೂಚನೆಗಳನ್ನು ಪಡೆದುಕೊಳ್ಳುತ್ತದೆ.

ಮೆಡಿಕಲ್ ಅಟ್ಯಾಚ್‌ಮೆಂಟ್ಸ್
  

ಲ್ಯಾಬ್ ಮತ್ತು ಆಸ್ಪತ್ರೆಗಳಿಗೆ ಪ್ರವೇಶ ಅಸಾಧ್ಯವಾಗಿರುವಲ್ಲಿ ವೈದ್ಯರುಗಳಿಗೆ ಸ್ಮಾರ್ಟ್‌ಫೋನ್ ಒದಗಿಸಿರುವ ಮೊಬೈಲ್ ಕಂಪ್ಯೂಟಿಂಗ್ ಪವರ್ ಸಹಾಯವನ್ನು ಒದಗಿಸುತ್ತದೆ. ಎಮ್‌ಐಟಿ ವಿಜ್ಞಾನಿಗಳು ಒಂದು ಡಿವೈಸ್ ಅನ್ನು ಪತ್ತೆಹಚ್ಚಿದ್ದು ಇದನ್ನು ನಿಮ್ಮ ಸ್ಮಾರ್ಟ್‌ಫೋನ್‌ಗೆ ಅಟ್ಯಾಚ್ ಮಾಡಬೇಕು. ನಂತರ ಇದನ್ನು ನಿಮ್ಮ ಕಣ್ಣಿಗೆ ಧರಿಸಿಕೊಂಡರೆ ಕಣ್ಣಿನ ಎಲ್ಲಾ ಸಮಸ್ಯೆಗಳನ್ನು ನಿಮಗೆ ತಿಳಿದುಕೊಳ್ಳಬಹುದು.

ಭೂಕಂಪ
  

ಎಮ್‌ಇಎಮ್ಎಸ್ ಎಕ್ಲರೊಮೀಟರ್ ಎಂದೇ ಪ್ರಸಿದ್ಧವಾಗಿದೆ. ಈ ಚಿಪ್ ಅನ್ನು ಐಫೋನ್ 4 ಮತ್ತು 5 ಗೆ ಬಳಸಿ ಭೂಕಂಪ ಅಳತೆಯನ್ನು ಪತ್ತೆಹಚ್ಚಬಹುದಾಗಿದೆ.

ಪೋರ್ಟೇಬಲ್ ಮೈಕ್ರೋಸ್ಕೋಪ್
  

ಸಾಂಪ್ರದಾಯಿಕ ಲ್ಯಾಬ್ ಪರಿಕರಗಳು ಲಭ್ಯವಾಗದಿರುವ ಸ್ಥಳಗಳಲ್ಲಿ ಚಿಕಿತ್ಸೆಯ ಪರಿಣಾಮವನ್ನು ಅರಿತುಕೊಳ್ಳಲು ಈ ಮೈಕ್ರೋಸ್ಕೋಪ್‌ನ ಬಳಕೆಯನ್ನು ಮಾಡುತ್ತಾರೆ.

ಮಾಲಿನ್ಯ
  

ಕ್ಯಾಲಿಫೋರ್ನಿಯಾ ಯೂನಿವರ್ಸಿಟಿಯ ವಿಜ್ಞಾನಿಗಳು ಸಣ್ಣ ಸ್ಮಾರ್ಟ್‌ಫೋನ್ ಅನ್ನು ಅಭಿವೃದ್ಧಿಪಡಿಸಿದ್ದು ಇದು ಗಾಳಿಯ ಮಾಲಿನ್ಯವನ್ನು ಅಳತೆ ಮಾಡುತ್ತದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
10 Ways Scientists Are Using Your Smartphone To Save The World here we are mentioning the factors which will help to Scientists find the solutions to various problems.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot