ಫೇಸ್‌ಬುಕ್ ಸಂಸ್ಥೆಯಲ್ಲಿ ಎಲ್ಲವೂ ಸುಖವಾಗಿಲ್ಲ ಏನಿದು ಕಥೆ?

Written By:

ಫೇಸ್‌ಬುಕ್ ಜಾಲತಾಣ ದಿನದಿಂದ ದಿನಕ್ಕೆ ಪ್ರಗತಿಯನ್ನು ಕಾಣುತ್ತಾ ಅಭಿವೃದ್ಧಿ ಪಥದತ್ತ ಸಾಗುತ್ತಿದೆ. ಉದ್ಯೋಗಿಗಳ ನೆರವಿನಿಂದಲೇ ಯಶಸ್ಸಿನ ಪಥದತ್ತ ಮುಖ ಮಾಡಿರುವ ಈ ಸಂಸ್ಥೆ ಕೆಲವೊಂದು ಕರಾಳ ಸತ್ಯವನ್ನು ತನ್ನಲ್ಲಿ ಮುಚ್ಚಿಟ್ಟುಕೊಂಡು ನಿರಾಳತೆಯ ನಿಟ್ಟುಸಿರು ಬಿಡುತ್ತಿದೆ.

ಓದಿರಿ: ಫೇಸ್‌ಬುಕ್ ಒಡೆಯನ ಸುತ್ತ ವಿವಾದಗಳ ಹುತ್ತ

ಬಿಡುವಿನ ವೇಳೆಯಲ್ಲೂ ಕೆಲಸದ ಒತ್ತಡ, ದಿನವೂ ಕೋಡಿಂಗ್ ಭಾಷೆಯಲ್ಲಿ ಕೆಲಸ ನಿರ್ವಹಣೆ ಇದು ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ಉದ್ಯೋಗಿಗಳ ಅಂತರಾಳದ ಮಾತಾಗಿದೆ. ಅದು ಏನು ಎಂಬುದನ್ನು ಅರಿತುಕೊಳ್ಳಲು ಕೆಳಗಿನ ಸ್ಲೈಡರ್ ಕ್ಲಿಕ್ಕಿಸಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
24/7 ಕಾರ್ಯನಿರ್ವಹಿಸುವುದು
  

ವರ್ಷದ ಆರು ವಾರಗಳಲ್ಲಿ 24/7 ಚಟುವಟಿಕೆಯಿಂದ ಕೆಲಸ ಮಾಡುವುದು ಇದು ಫೇಸ್‌ಬುಕ್ ಇಂಜಿನಿಯರ್ ಕೇತ್ ಅಡಾಮ್ಸ್ ಮಾತಾಗಿದೆ.

ತಂಡ ರಚನೆ
  

ತಂಡದ ಗೆಲುವು ಎಂದರೆ ವೈಯಕ್ತಿಕ ಗೆಲುವು ಎಂಬ ಮಂತ್ರ ಫೇಸ್‌ಬುಕ್‌ನದ್ದಾಗಿದೆ. ವೈಯಕ್ತಿಕವಾಗಿ ಗೆಲುವು ಸಾಧಿಸಿದಾಗ ಮಾತ್ರವೇ ತಂಡವು ಯಶಸ್ಸಿನ ಮೆಟ್ಟಿಲನ್ನು ತಾನೇ ತಾನಾಗಿ ಏರುತ್ತದೆ.

ಪ್ರಚಾರವಿಲ್ಲದೆ ಕೆಲಸ ಮಾಡುವುದು
  

ಕಚೇರಿಗಳಲ್ಲಿ ಅಹಂಕಾರವಿಲ್ಲದೆ ಕೆಲಸ ಮಾಡುವುದು, ಪರಿಶ್ರಮವೇ ಮೂಲ ಮಂತ್ರ ಎಂಬುದನ್ನೇ ಧ್ಯೇಯವಾಗಿರಿಸಿಕೊಂಡು ತಂಡದಲ್ಲಿ ಶ್ರಮ ವಹಿಸುವುದು ನಿಜಕ್ಕೂ ಗೆಲುವಿನ ಹಾದಿಯನ್ನು ನಮಗೆ ತೋರಿಸುತ್ತದೆ.

ಕಂಪೆನಿಯ ಭಾಗ ಎಂದು ನಮ್ಮನ್ನು ನಾವು ಕರೆಯುವುದು
  

ಕಂಪೆನಿಯ ಒಂದು ಭಾಗವಾಗಿ ನಮ್ಮನ್ನು ನಾವೇ ಅಂದುಕೊಂಡು ಕೆಲಸ ಮಾಡುವುದು ಪ್ರತಿಯೊಂದು ಹೆಜ್ಜೆಯನ್ನು ಜವಬ್ದಾರಿಯುತವಾಗಿ ಇಡುವಲ್ಲಿ ನಮಗೆ ಸಹಾಯವನ್ನೀಯುತ್ತದೆ.

ವೈಭವೋಪೇತ ಕಚೇರಿಯನ್ನು ಮರೆತುಬಿಡಿ
  

ವೈಭವೋಪೇತ ಕಚೇರಿ ನೆನಪನ್ನೇ ಮರೆತು ಪರಿಶ್ರಮದಿಂದ ಕೆಲಸ ಮಾಡಿ ನಿಮಗೆ ಬೇಕಾದ್ದು ತಾನೇ ನಿಮ್ಮನ್ನು ಹುಡುಕಿಕೊಂಡು ಬರುತ್ತದೆ.

ಮಾರ್ಕ್ ಮತ್ತು ಶೆರಿಲ್ ಕುರಿತು
  

ಮಾರ್ಕ್ ಮತ್ತು ಶೆರಿಲ್ ಹೆಚ್ಚುವರಿ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ ಎಂಬುದು ಫೇಸ್‌ಬುಕ್ ಉದ್ಯೋಗಿಗಳ ಅಳಲಾಗಿದೆ. ಬೇರೆ ಮಾಧ್ಯಮಗಳ ಕೆಲವೊಂದು ಅಂಶಗಳನ್ನು ಕದಿಯುವುದು ಇದರಲ್ಲಿ ಸೇರಿದೆ.

ತಾವೇ ನಿರ್ಧಾರಗಳನ್ನು ಕೈಗೊಳ್ಳುವುದು
  

ತಮಗೆ ತಾವೇ ಮೇಲಾಧಿಕಾರಿಗಳಿಗೆ ತಿಳಿಸದೇ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಫೇಸ್‌ಬುಕ್‌ನಲ್ಲಿ ನಡೆಯುತ್ತಿರುವ ಅಂಶವಾಗಿದೆ. ಕೋಡಿಂಗ್ ಭಾಷೆಯಲ್ಲೇ ಕಚೇರಿಯಲ್ಲಿ ಸಂವಾದಗಳು ನಡೆಯುತ್ತಿರುತ್ತದೆ.

ಇಮೇಲ್ ಸುರಿಮಳೆ
  

ದಿನವೊಂದಕ್ಕೆ 1600 ಕ್ಕಿಂತಲೂ ಹೆಚ್ಚಿನ ಇಮೇಲ್ ಸುರಿಮಳೆಯೇ ಉದ್ಯೋಗಿಗಳನ್ನು ಸಂಪರ್ಕಿಸುತ್ತಿರುತ್ತದೆ. ಅಷ್ಟೊಂದು ಸಂವಹನವನ್ನು ಅವರು ಮಾಡಬೇಕಾಗಿರುತ್ತದೆ.

ರಜೆ ಇದ್ದಾಗಲೂ ಕೆಲಸ
  

ನೀವು ವಿರಾಮ ಸಮಯದಲ್ಲೂ ಕೆಲಸ ಮಾಡುತ್ತಲೇ ಇರಬೇಕಾಗುತ್ತದೆ. ಅಂದರೆ ರಜಾಸಮಯದಲ್ಲೂ ವಿಶ್ರಾಂತಿ ಮರೀಚಿಕೆಯಾಗಿದೆ.

ವೇಗದ ಜೀವನಕ್ಕೆ ಹೊಂದಿಕೊಳ್ಳುವುದು
  

4,000 ಜನ ಮಾಡುವ ಕೆಲಸವನ್ನು 500 ಸದಸ್ಯರುಳ್ಳ ತಂಡದೊಂದಿಗೆ ಮಾಡುವುದು ಹೆಚ್ಚಿನ ಸವಾಲಿನ ಕೆಲಸವಾಗಿದೆ. ನಾವು ಹೆಚ್ಚು ವೇಗವಾಗಿ ಬೆಳೆಯುತ್ತಿದ್ದೇವೆ ಮತ್ತು ಅದಕ್ಕನುಗುಣವಾಗಿ ನಮ್ಮ ಜೀವನ ಶೈಲಿಯನ್ನು ನಾವು ಹೊಂದಿಸಿಕೊಳ್ಳುತ್ತಿದ್ದೇವೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
Facebook has often been regarded as one of the best places to work in the tech industry. After all, the company's interns make $25,000 more than the average citizen. And famously, employees on Glassdoor have voted Facebook the No. 1 company to work for overall.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot