ಈ ಆಪ್‌ಗಳಿಂದ ಮೊಬೈಲ್‌ನಲ್ಲೇ ಸಿನಿಮಾ ತಯಾರಿಸಿ

  By Suneel
  |

  ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳ ಬಳಕೆ ಹೆಚ್ಚಿ ಅವುಗಳಲ್ಲೇ ಎಷ್ಟೋ ಜನರು ಕಿರು ಚಿತ್ರಗಳನ್ನು ಅಪ್‌ಲೋಡ್‌ ಮಾಡುತ್ತಾರೆ. ಅಲ್ಲದೇ ಯುವಜನತೆಯಲ್ಲೂ ಸಹ ಕ್ಯಾಮೆರಾ ಮೇಲಿನ ಆಸಕ್ತಿ ಹೆಚ್ಚಿದ್ದು, ಎಲ್ಲರಿಗೂ ಸಹ ಡಿಜಿಟಲ್‌ ಕ್ಯಾಮೆರಾವನ್ನು ತಮ್ಮೊಂದಿಗೆ ಸಾಗಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಮೂವಿಗಾಗಿ ಅವುಗಳಲ್ಲಿ ವಿಡಿಯೋ ಕ್ಲಿಪ್‌ಗಳನ್ನು ಸೆರೆಹಿಡಿಯಬಹುದು. ಆದರೆ ಅವುಗಳಿಂದ ಸೆರೆಹಿಡಿದ ದೃಶ್ಯಗಳನ್ನು ಸಾಮಾಜಿಕ ಸಂಪರ್ಕ ತಾಣಗಳು ಮತ್ತು ಅವಸರದ ಮೇಸೆಜಿಂಗ್‌ಗಳಿಂದ ಇತರರಿಂದ ಗಮನ ಸೆಳೆಯುತ್ತದೆಯೇ ಎಂಬುದು ಪ್ರಶ್ನೆ.

  ಓದಿರಿ: ಅಕ್ಟೋಬರ್ ಫೋನ್ ಸೇಲ್: ಇಲ್ಲಿ ಫೋನ್ ಖರೀದಿಸಿದವನೇ ಜಾಣ

  ಕ್ಯಾಮೆರಾ ಇರುವವರೆಲ್ಲಾ ಪ್ರೊಡಕ್ಷನ್‌ ಆರಂಭಿಸಲು ಸಾಧ್ಯವಿಲ್ಲ. ಆದರೆ ನಾವು ಈ ಲೇಖನದಲ್ಲಿ ನಿಮಗೆ ಪರಿಚಯ ಮಾಡಿಕೊಡುವ ಉಚಿತ ಆಪ್ಲಿಕೇಶನ್‌ಗಳಿಂದ ನೀವು ಸೆರೆಹಿಡಿದ ದೃಶ್ಯಗಳನ್ನು ವಿವಿಧ ರೀತಿಯಲ್ಲಿ ನಿಮ್ಮ ಸ್ಮಾರ್ಟ್‌ಫೋನ್‌ಗಳಿಂದಲೇ ಸಿನಿಮಾ ಮಾಡಬಹುದಾಗಿದೆ. ಸಿನಿಮಾ ಫೋಸ್ಟ್‌ಪ್ರೊಡಕ್ಷನ್‌ನಲ್ಲಿ ನೀಡುವ ಎಫೆಕ್ಟ್‌ಗಳು ಸಹ ಈ ಅಪ್ಲಿಕೇಶನ್‌ನಲ್ಲಿ ಲಭ್ಯವಿವೆ. ಹಾಗಾದರೆ ಬನ್ನಿ ಈ ಲೇಖನದಲ್ಲಿ ಆ ಅಪ್ಲಿಕೇಶನ್‌ಗಳು ಯಾವುವು ಮತ್ತು ಅವುಗಳು ನೀಡುವ ಫೀಚರ್‌ಗಳನ್ನು ತಿಳಿಯಿರಿ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  ಪೋಸ್ಟ್‌ ಪ್ರೊಡಕ್ಷನ್‌( post production)

  ನಿಮ್ಮ ಪ್ರವಾಸ ದಿನಗಳು, ಬರ್ತ್‌ಡೇ ಆಚರಣೆ, ಕಾಲೇಜ್‌ ವಿಡಿಯೋಗಳು ನಿಮ್ಮಲ್ಲಿದ್ದರೂ ಸಹ ಅವು ನೋಡಲು ಚೆನ್ನಾಗಿಲ್ಲ ಎಂದು ಚಿಂತಿಸ ಬೇಡಿ. ಈ ಅಪ್ಲಿಕೇಶನ್‌ ಆ ಎಲ್ಲಾ ವಿಡಿಯೋ ತುಣುಕುಗಳಿಗೆ ಸಿನಿಮಾ ಟಚ್‌ ಕೊಡುವ ಎಫೆಕ್ಟ್‌ ಹೊಂದಿದೆ. ಅಲ್ಲದೇ ಸಿನಿಮಾ ಪೋಸ್ಡ್‌ ಪ್ರೊಡಕ್ಷನ್‌ ಎಫೆಕ್ಟ್‌ಗಳು ಸಹ ಲಭ್ಯ.

  ವಿವವಿಡಿಯೋ (VivaVideo)

  ಈ ಅಪ್ಲಿಕೇಶನ್‌ನಲ್ಲಿ ಸ್ಕ್ರೀನ್‌ ತುಣುಕುಗಳನ್ನು ಸ್ಪ್ಲಿಟ್‌ ಮಾಡಲು ಅವಕಾಶವಿದೆ. ವಿಡಿಯೋ ತುಣುಕುಗಳನ್ನು ಟ್ರಿಮ್‌ಮಾಡಬಹುದು. ವಿಡಿಯೋ ಮರ್ಜ್‌, ಫಿಲ್ಟರ್‌ ಟ್ರ್ಯಾನ್ಸಿಶನ್‌ಅಪ್ಲೇ, ‌ ಸ್ಟಿಕ್ಕರ್ಸ್‌ ಮತ್ತು ಹೆಸರುಗಳನ್ನು ಆನಿಮೇಟೆಡ್ ಮಾಡುವ ಹಾಗೂ ಸಂಗೀತದೊಂದಿಗೆ ಲೈವ್‌ ಡಬ್ಬಿಂಗ್‌ ಮಾಡಬಹುದಾಗಿದೆ. ಅಲ್ಲದೇ 60 ಕ್ಕಿಂತ ಹೆಚ್ಚು ಲೈವ್‌ ಎಫೆಕ್ಟ್‌ಗಳನ್ನು ಅಯ್ಕೆ ಮಾಡಬಹುದಾಗಿದೆ

  ವಿಡಿಯೋ ಶೋ (VideoShow)

  ಈ ಅಪ್ಲಿಕೇಶನ್‌ ಸೌಂಡ್‌ ಎಫೆಕ್ಟ್‌ಗಳನ್ನು ಡೌನ್‌ಲೋಡ್‌ ಮಾಡಲು, ವಿಡಿಯೋ ಕನ್ವರ್ಟ್‌ಮಾಡಲು, ಹಾಗೂ ವಿಡಿಯೋ ಕ್ಲಿಪ್‌ ಅನ್ನು ಕಡಿಮೆ ರೆಸಲ್ಯೂಶನ್‌ಗೆ ಕಂಪ್ರೆಸ್‌ ಮಾಡಲು ಸಹಾಯಕವಾಗಿದೆ.ಇದರಲ್ಲಿ ಕೂಲ್‌ ಆನಿಮೇಟೆಡ್‌ ಫ್ರೇಮ್‌ಗಳನ್ನು ಅಳವಡಿಸಬಹುದಾಗಿದೆ.

  ರಿವರ್ಸ್‌ ಮೂವಿ FX(Reverse Movie FX)

  ಈ ಸರಳ ಅಪ್ಲಿಕೇಶನ್‌ ವಿಡಿಯೋವನ್ನು ಹಿಂದಿನಿಂದ ಪ್ರಾರಂಭಮಾಡುವ ಫೀಚರ್‌ಹೊಂದಿದೆ. ಅಲ್ಲದೇ ಬ್ಯಾಗ್ರೌಂಡ್‌ ಧ್ವನಿಯನ್ನು ತೆಗೆದುಹಾಕಬಹುದಾಗಿದೆ. ಹಾಸ್ಯಾಭರಿತ ವಿಡಿಯೋ ಮಾಡಲು ಹೆಚ್ಚು ಸಹಾಯಕವಾಗಿದೆ.

  ಲ್ಯಾಪ್ಸ್‌(Lapse It)

  ಈ ಅಪ್ಲಿಕೇಶನ್‌ನಲ್ಲಿ ಫೋಕಸ್‌ಮೋಡ್‌, ಎಕ್ಸ್‌ಪೋಸರ್‌, ಕಲರ್‌ ಎಫೆಕ್ಟ್‌, ಮತ್ತು ವೈಟ್‌ ಬ್ಯಾಲೆನ್ಸ್‌ ಮಾಡಲು ಸಹಾಯಕವಾಗಿದೆ. ಅಲ್ಲದೇ ಇದರಲ್ಲಿ 3 ವಿಡಿಯೋ ಫಾರ್‌ಮ್ಯಾಟ್‌ಗಳ ಮೂಲಕ ಕಲರ್‌ ಬ್ಯಾಲೆನ್ಸ್‌ಮಾಡಲು ಅವಕಾಶವಿದೆ.

  ಟ್ರಿಮ್‌ ವಿಡಿಯೋಸ್‌(Trim Your Videos)

  ಈ ಅಪ್ಲಿಕೇಶನ್‌ ನಿಮ್ಮ ಮೊಬೈಲ್‌ ನಲ್ಲಿ ಇದ್ದರೇ ಸಂಪೂರ್ಣ HD ದೃಶ್ಯಗಳನ್ನು ಸೆರೆಹಿಡಿಯಬಹುದಾಗಿದೆ. ದೊಡ್ಡ ಸ್ಕ್ರೀನ್‌ಗಳ ಟಿವಿಗಳಲ್ಲಿ ಈ ವಿಡಿಯೋಗಳನ್ನು ನೋಡಬಹುದಾಗಿದೆ. ಆದರೆ ಅವಸರದ ಮೆಸೇಜಿಂಗ್‌ ಮತ್ತು ಸಾಮಾಜಿಕ ಜಾಲತಾಣಗಳಿಗೆ ಅಪ್‌ಲೋಡ್‌ ಮಾಡುವುದು ಸುಲಭವಲ್ಲ. ವಿಡಿಯೋಗಳನ್ನು ಶ್ರಿಂಕ್‌ ಮಾಡಿ ಫೈಲ್‌ ಫಾರ್‌ಮ್ಯಾಟ್‌ಗೆ ಕಂಪ್ರೆಸ್ ಮಾಡಲೇಬೇಕು.

  ವಿಡಿಯೋ ಟ್ರಿಮ್ಮರ್‌ ಗುರು( Video Trimmer Guru)

  ಈ ಅಪ್ಲಿಕೇಶನ್‌ ವಾಟ್ಸಾಪ್‌, ಸ್ನಾಪ್‌ಚಾಟ್ ಗಳಿಗೆ ವಿಡಿಯೋ ಫೈಲ್‌ಗಳನ್ನು ಕತ್ತರಿಸಿ ‌ ಶೇರ್‌ಮಾಡಲು ಸಹಾಯಕವಾಗಿದೆ ಅಲ್ಲದೇ ನಿಮ್ಮ ಆಯ್ಕೆಯ ವಿಡಿಯೋ ಕ್ವಾಲಿಟಿಯಾಗಿ ಬದಲಿಸಬಹುದಾಗಿದೆ.

  ವಿಡಿಯೋ ಡೈಟರ್‌ 2( Video Dieter 2)

  ಇದು ವಿಡಿಯೋ ರೇಟಿಯೋ ಮತ್ತು ರೆಸಲ್ಯೂಶನ್‌ ಅನ್ನು ಬದಲಿಸಿ ವೆಬ್‌ಸೈಟ್‌ಗೆ ಶೇರ್‌ ಮಾಡಲು ಅವಕಾಶ ಒದಗಿಸಿದೆ. ಅಲ್ಲದೇ ಟೈಮ್‌ ಲ್ಯಾಪ್ಸ್ ಆಯ್ಕೆ ಮತ್ತು ಸ್ಲೋ ಮೋಶನ್‌ ಫೀಚರ್‌ ಹೊಂದಿದೆ.

  ಗಿಫ್ ಮಿ( Gif Me)

  ವಿಡಿಯೋವನ್ನು ಗಾತ್ರ ಕಡಿಮೆ ಮಾಡಿ ಸಾಮಾಜಿಕ ಜಾಲತಾಣಗಳಿಗೆ ಶೇರ್‌ ಮಾಡುವ ಮೊದಲು ಇದನ್ನು ಗಿಫ್‌ ಮಿ ಯಲ್ಲಿ ಸೇವ್‌ ಮಾಡಿ. ಹೀಗೆ ಮಾಡುವುದರಿಂದ ನಿಮ್ಮ ಅಂತಿಮ ಔಟ್‌ಪುಟ್‌ ಹಾಗೆ ಉಳಿಯುತ್ತದೆ.

  ಕೊಲಾಬೊರೇಟ್‌ (Collaborate)

  ನಿಮ್ಮ ಗೆಳೆಯರ ಮದುವೆ ಮನೆಯ ವಿಡಿಯೋವನ್ನು ಎಲ್ಲಾರೂ ತಮ್ಮ ತಮ್ಮ ಫೋನ್‌ಗಳಿಂದ ಸೆರೆ ಹಿಡಿದಿರುತ್ತೀರಿ. ಆ ವಿಡಿಯೋಗಳು ಬೇರೆ ಬೇರೆ ದೃಶ್ಯಗಳಾಗಿರುತ್ತವೆ. ಇವುಗಳನ್ನು ಒಟ್ಟಿಗೆ ಸೇರಿಸಿ ಉತ್ತಮವಾದ ವಿಡಿಯೋ ಮಾಡಲು ಈ ಅಪ್ಲಿಕೇಶನ್‌ ಬಳಸಿ.

  ವೈಕ್ಲೋನ್‌(Vyclone)

  ಹಬ್ಬ ಹಾಗೂ ಆಚರಣೆ ದಿನಗಳಲ್ಲಿ ಸೆರೆ ಹಿಡಿದ ಎಲ್ಲಾ ವಯಕ್ತಿಕ ದೃಶ್ಯಗಳನ್ನು ಒಟ್ಟಿಗೆ ಸೇರಿಸಿ ಒಂದೇ ಸ್ಥಳದಲ್ಲಿ ಸೆರೆ ಹಿಡಿದ ದೃಶ್ಯಗಳಂತೆ ಸಿಂಕ್‌ ಮಾಡಿ ವಿವಿಧ ಆಂಗಲ್‌ ಗಳಲ್ಲಿ ತೆಗೆದ ಮೂವಿಯಂತೆ ಮಾಡಲು ಸಹಾಯಕವಾಗಿದೆ.

  ಶಾಟ್‌ ಕ್ಲಿಪ್‌ (Shot clip)

  ಈ ಅಪ್ಲಿಕೇಶನ್‌ ಟೆಂಪ್ಲೇಟ್ಸ್‌ಗಳ ಮೂಲಕ ಸ್ಟೋರಿ ಲೈನ್‌ ಹೇಳುವ ರೀತಿ ವಿಡಿಯೋ ತಯಾರಿಸಬಹುದಾಗಿದೆ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  English summary
  Everyone carries a digital camera nowadays, and shooting a 'movie' clip is as easy as pulling a smartphone from your pocket and hitting 'record'. But how do you make your home 'productions' stand out when it's competing for attention against so many others on social networks and instant messaging.

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more