16ಜಿಬಿಯ ಒನ್ ಪ್ಲಸ್ ಒನ್ ಫೋನ್ ಬರೇ ರೂ 12,999 ಕ್ಕೆ
ಓವರ್ ಕಾರ್ಟ್.ಕಾಮ್ ಎಂಬ ವೆಬ್‌ಸೈಟ್ ಅನ್‌ಬಾಕ್ಸ್ ಉತ್ಪನ್ನಗಳನ್ನು ಭಾರತದಲ್ಲಿ ಮಾರಾಟ ಮಾಡುತ್ತಿದೆ. ಈಗ ಈ ಸೈಟ್‌ನಲ್ಲಿ 16 ಜಿಬಿ ಆವೃತ್ತಿಯ ಒನ್ ಪ್ಲಸ್ ಒನ್ ಸ್ಮಾರ್ಟ್‌ಫೋನ್ ಅನ್ನು ರೂ 12,999 ಕ್ಕೆ ದೊರೆಯುತ್ತಿದೆ. ಅಮೆಜಾನ್ ಇದೇ ಫೋನ್ ಅನ್ನು ರೂ 18,999 ಕ್ಕೆ ಮಾರಾಟ ಮಾಡುತ್ತಿದೆ.
ಓದಿರಿ: ವಾಟ್ಸಾಪ್ ಕಣ್ಮರೆ: ಮರೆತೇನೆಂದರೂ ಮರೆಯಲಿ ಹ್ಯಾಂಗ!!!

ಆರು ತಿಂಗಳ ವಾಯಿದೆಯನ್ನು ಫೋನ್ ಪಡೆದುಕೊಳ್ಳುತ್ತಿದ್ದು ಅನ್‌ಬಾಕ್ಸ್ ಮತ್ತು ಸೆಕೆಂಡ್ ಹ್ಯಾಂಡ್ ಉತ್ಪನ್ನದಂತೆಯೇ ಇದು ಸೈಟ್‌ನಲ್ಲಿ ಮಾರಾಟವಾಗುತ್ತಿದೆ. ಇ ಕಾಮರ್ಸ್ ವೆಬ್‌ಸೈಟ್ ಮೊದಲು ಶ್ಯೋಮಿಯೊಂದಿಗೆ ಪಾಲುದಾರಿಕೆಯನ್ನು ಮಾಡಿಕೊಂಡು ರೆಡ್ಮೀ 2ಎಸ್ ಮತ್ತು ರೆಡ್ಮೀ ನೋಟ್ 4ಜಿಯನ್ನು ಮಾರಾಟ ಮಾಡಿತ್ತು.
ಓದಿರಿ: ವಿಶ್ವದ ಅತಿಶ್ರೀಮಂತರಿಗಾಗಿ ಮಾತ್ರ: ಏನಿರಬಹುದು?

ಒನ್ ಪ್ಲಸ್ ಒನ್ ಸ್ಪರ್ಧಾತ್ಮಕ ಹಾರ್ಡ್‌ವೇರ್ ಅನ್ನು ಒಳಗೊಂಡಿದ್ದು, 2.5GHZ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 801 ಪ್ರೊಸೆಸರ್, 3ಜಿಬಿ RAM, 5.5 ಇಂಚಿನ 1080 ಪಿ ಡಿಸ್‌ಪ್ಲೇಯೊಂದಿಗೆ ಬಂದಿದೆ. 13 ಎಮ್‌ಪಿ ಕ್ಯಾಮೆರಾವನ್ನು ಇದು ಒಳಗೊಂಡಿದ್ದು ಸೋನಿ ಇಮೇಜ್ ಸೆನ್ಸಾರ್ ಇದರಲ್ಲಿದೆ. ಮುಂಭಾಗದಲ್ಲಿ 5 ಎಮ್‌ಪಿ ಕ್ಯಾಮೆರಾವನ್ನು ಇದು ಒಳಗೊಂಡಿದ್ದು, 3100mAh ಬ್ಯಾಟರಿ ಇದರಲ್ಲಿದೆ. ಇದು 4ಜಿಗೆ ಬೆಂಬಲವನ್ನು ಒದಗಿಸುತ್ತಿದ್ದು ಎನ್‌ಎಫ್‌ಸಿ ಇದರಲ್ಲಿದೆ. ಇದರಲ್ಲಿ ಸಿನಾಜಿನ್ ಓಎಸ್ ಚಾಲನೆಯಾಗುತ್ತಿದೆ.


Click it and Unblock the Notifications








