Subscribe to Gizbot

ವಿಶ್ವದ ಅತಿಶ್ರೀಮಂತರಿಗಾಗಿ ಮಾತ್ರ: ಏನಿರಬಹುದು?

Written By:

ಗ್ಯಾಜೆಟ್‌ಗಳನ್ನು ಅತಿಯಾಗಿ ಪ್ರೀತಿಸುವ ಬಳಕೆದಾರರಿರುತ್ತಾರೆ. ಎಷ್ಟೇ ದುಬಾರಿ ಗ್ಯಾಜೆಟ್ ಆದರೂ ಅದನ್ನು ಖರೀದಿಸಿ ತಮ್ಮ ಪ್ರತಿಷ್ಠೆಯನ್ನು ತೋರಿಸುತ್ತಾರೆ. ವಜ್ರಖಚಿತ ಐಫೋನ್ ಕೇಸ್‌ಗಳಾಗಿರಬಹುದು, ಚಿನ್ನದಿಂದಲೇ ಲೇಪಿತ ಲ್ಯಾಪ್‌ಟಾಪ್‌ಗಳಾಗಿರಬಹುದು, ಚಿನ್ನದಿಂದ ತಯಾರಿಸಲಾದ ಹೆಚ್ಚು ದುಬಾರಿ ಫೋನ್‌ಗಳೇ ಆಗಿರಬಹುದು.

ಓದಿರಿ: ಭಾರತದಲ್ಲಿ ವಿಫುಲ ಉದ್ಯೋಗವಕಾಶ: ಸ್ವರ್ಗಕ್ಕೆ ಮೂರೇ ಗೇಣು

ಇವುಗಳ ಬೆಲೆ ಎಷ್ಟಿದ್ದರೂ ಅದನ್ನು ಖರೀದಿಸಿ ತಮ್ಮಲ್ಲಿ ಸಂಗ್ರಹಣೆಯನ್ನು ಮಾಡುತ್ತಾರೆ. ಇದು ಅವರ ಹವ್ಯಾಸಗಳಲ್ಲಿ ಒಂದಾಗಿರುತ್ತದೆ. ಇಂತಹುದೇ ದುಬಾರಿ ವಸ್ತುಗಳನ್ನು ನಿಮ್ಮ ಬಳಿ ಇರಿಸಿಕೊಳ್ಳುವ ಹವ್ಯಾಸವುಳ್ಳ ಗ್ಯಾಜೆಟ್ ಪ್ರೇಮಿಗಳು ನೀವಾಗಿದ್ದಲ್ಲಿ ಇಲ್ಲಿದೆ ಅಂತಹ ಗ್ಯಾಜೆಟ್‌ಗಳ ವಿಫುಲ ಸಂಗ್ರಹ

ಓದಿರಿ: ಗ್ಯಾಜೆಟ್ಸ್: ಕೇವಲ ಅಂಬಾನಿಗಳಿಗೆ ಮಾತ್ರ!!!

ಕೆಳಗಿನ ಸ್ಲೈಡರ್‌ಗಳಲ್ಲಿ ಈ ಗ್ಯಾಜೆಟ್‌ಗಳ ಮಾಹಿತಿಯನ್ನು ಅರಿತುಕೊಳ್ಳಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಮೋಟಾರ್‌ಸೈಕಲ್

ಇಕೋಸ್ ಟೈಟಾನಿಯಮ್ ಸಿರೀಸ್ ಮೋಟಾರ್‌ಸೈಕಲ್

ಇದು $300000 ದರದಲ್ಲಿ ಬರುತ್ತಿದ್ದು, ಜಗತ್ತಿನಲ್ಲೇ ಇದು ಹೆಚ್ಚು ದುಬಾರಿ ಬೈಕ್ ಎಂದೆನಿಸಿದೆ. ಕಾರ್ಬನ್ ಫಿಲ್ಟರ್ ಚಕ್ರಗಳು ಮತ್ತು ಟೈಟಾನಿಯಮ್ ಚಾಸಿಸ್ ಅನ್ನು ಇದು ಹೊಂದಿದೆ.

ಒಪೋಸ್ 12 ವಾಚ್

ಹ್ಯಾರಿ ವಿನ್‌ಸ್ಟನ್ ಒಪೋಸ್ 12 ವಾಚ್

ವಾಚ್ ಸಂಗ್ರಹಣೆಯ ಹುಚ್ಚು ನಿಮ್ಮಲ್ಲಿದೆ ಎಂದಾದಲ್ಲಿ ಹ್ಯಾರಿ ವಿನ್‌ಸ್ಟನ್ ಒಪೋಸ್ 12 ವಾಚ್ ನಿಮ್ಮ ವಾಚ್ ಸಂಗ್ರಹಣೆಯಲ್ಲಿ ಇರಲೇ ಬೇಕು. ಸಫಾಯರ್ ಕ್ರಿಸ್ಟಲ್ ವಿನ್ಯಾಸವನ್ನು ಈ ವಾಚ್ ಹೊಂದಿದ್ದು ಬಿಳಿ ಚಿನ್ನವನ್ನು ವಾಚ್‌ನಲ್ಲಿ ಬಳಸಲಾಗಿದೆ.

ಸ್ಪೀಕರ್ಸ್

ಮೆಗಾ ಟ್ರೆಂಡ್ ಸ್ಪೀಕರ್ಸ್

ಸಂಗೀತ ಪ್ರಿಯರು ಮೆಚ್ಚುವ ಗ್ಯಾಜೆಟ್ ಇದಾಗಿದ್ದು ದುಬಾರಿಯಾಗಿದ್ದರೂ ಇದನ್ನು ಖರೀದಿಸುವುದು ನಿಮ್ಮಲ್ಲಿನ ಸಂಗೀತ ಉತ್ಸಾಹವನ್ನು ಇಮ್ಮಡಿಸುವುದು ಖಂಡಿತ.

ಹೆಚ್ಚು ದುಬಾರಿ ಗ್ಯಾಜೆಟ್

200 ಪಿಸಿ ವರ್ಕ್ ಸ್ಟೇಶನ್

2015 ರಲ್ಲಿ ಹೆಚ್ಚು ದುಬಾರಿ ಗ್ಯಾಜೆಟ್ ಎಂಬ ಹಣೆಪಟ್ಟಿಯನ್ನು ಹೊತ್ತಿರುವ ಇದು $45000 ಗಳಲ್ಲಿ ಬರುತ್ತಿದೆ.

ಬೈಸಿಕಲ್

ಎಸ್ ವರ್ಕ್ಸ್ + ಮೆಕ್‌ಲ್ಯಾರೆನ್ ವೆಂಜ್ ಬೈಸಿಕಲ್

ದುಬಾರಿ ಗ್ಯಾಜೆಟ್ ಹಣೆಪಟ್ಟಿಯನ್ನು ಹೊತ್ತುಕೊಂಡು ಬಂದಿರುವುದರಲ್ಲಿ ಈ ಸೈಕಲ್ ಕೂಡ ಸೇರಿದ್ದು ಹೆಚ್ಚು ವೇಗ, ಪೆಡಲ್ ಫ್ರಿ ಲೊ ಫ್ರಿಕ್ಶನ್ ಮುಂತಾದ ಫೀಚರ್‌ಗಳನ್ನು ಒಳಗೊಂಡಿದೆ.

ಸ್ಮಾರ್ಟ್‌ಫೋನ್

ವರ್ಚ್ಯು ಸ್ಮಾರ್ಟ್‌ಫೋನ್

ಈ ವರ್ಚ್ಯು ಸ್ಮಾರ್ಟ್‌ಫೋನ್ ದುಬಾರಿ ಗ್ಯಾಜೆಟ್‌ಗಳ ಪಟ್ಟಿಯಲ್ಲಿ ಪ್ರಮುಖವಾಗಿದೆ. ಕೆಂಪು ಮತ್ತು ಚಿನ್ನದ ಬಣ್ಣದಲ್ಲಿ ಈ ಸ್ಮಾರ್ಟ್‌ಫೋನ್ ಬರುತ್ತಿದ್ದು ಸಿಂಬಿಯನ್ ಓಎಸ್ ಇದರಲ್ಲಿದೆ.

ಟಾಯ್ಲೆಟ್ ಸಿಸ್ಟಮ್

ಕೋಹ್ಲೆರ್ ನ್ಯುಮಿ ಟಾಯ್ಲೆಟ್ ಸಿಸ್ಟಮ್

ಇನ್ನೊಂದು ದುಬಾರಿ ಗ್ಯಾಜೆಟ್ ಎಂಬ ಹಣೆಪಟ್ಟಿಯನ್ನು ಹೊಂದಿರುವ ನ್ಯುಮಿ ಟಾಯ್ಲೆಟ್ ಸಿಸ್ಟಮ್ ಟಚ್ ಸ್ಕ್ರೀನ್‌ನೊಂದಿಗೆ ಹೀಟ್ ಸ್ಕ್ರೀನ್ ಅನ್ನು ಒಳಗೊಂಡಿದೆ.

ಜೋಡಿ ಸ್ಪೀಕರ್‌

ಇಯರ್ ಸ್ಪೀಕರ್ಸ್

ಜೋಡಿ ಸ್ಪೀಕರ್‌ಗಳನ್ನು ಒಳಗೊಂಡು ಇದು ಬಂದಿದ್ದು, ಸಂಗೀತ ಪ್ರಿಯರಿಗೆ ಸುಗ್ಗಿಯನ್ನು ನೀಡುವಂತಿದೆ.

ನೈಫ್

ವಿಕ್ಟ್ರೋನಿಕ್ಸ್ 1 ಟಿಬಿ ಸ್ವಿಸ್ ಆರ್ಮಿ ನೈಫ್

ಸ್ವಿಸ್ ನೈಫ್ ಉತ್ತಮ ಹಾಗೂ ಅತ್ಯಾಧುನಿ ಎಂಬ ಖ್ಯಾತಿಗೆ ಒಳಪಟ್ಟಿದೆ. ಯುಎಸ್‌ಬಿ ಸ್ಟಿಕ್ ಅನ್ನು ಇದು ಒಳಗೊಂಡಿದ್ದು ದುಬಾರಿಯಾದರೂ ಸ್ಪೈಲಿಶ್ ಎಂದೆನಿಸಿದೆ.

 ಡಾಕಿಂಗ್ ಸ್ಟೇಶನ್

ಐಫೋನ್ 4 ಕ್ರಿಸ್ಟಲ್ ಡಾಕಿಂಗ್ ಸ್ಟೇಶನ್

ಐಫೋನ್ ಮಾತ್ರವಲ್ಲದೆ, ಇದರ ಡಾಕಿಂಗ್ ಸ್ಟೇಶನ್ ಕೂಡ ಹೆಚ್ಚು ಜನಪ್ರಿಯವಾದುದು. ಕ್ರಿಸ್ಟಲ್ ಮತ್ತು ಪ್ಲಾಟಿನಮ್‌ನಿಂದ ಇದನ್ನು ತಯಾರಿಸಲಾಗಿದ್ದು, ದುಬಾರಿ ಬೆಲೆಯನ್ನೊಳಗೊಂಡು ಬಂದಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
There are many people in the world who are passionate about gadgets, literally addicted to gadget love. There are a number of unique and functional gadgets available today, which command a great price because of their rarity and usefulness.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot