ನೋಕಿಯಾ ಕಂಪೆನಿ ಕುರಿತ ಟಾಪ್ 10 ವಿಶೇಷತೆಗಳು

By Shwetha
|

ನೋಕಿಯಾ ಫೋನ್ ಒಂದು ಕಾಲದಲ್ಲಿ ಫೋನ್‌ಗಳ ರಾಜ ಎಂಬ ಹೆಗ್ಗಳಿಕೆ ಪಾತ್ರವಾಗಿತ್ತು. ಕಡಿಮೆ ಬಜೆಟ್‌ನ ಫೋನ್‌ಗಳನ್ನು ತಯಾರಿಸುವಲ್ಲಿ ಈ ನಿಸ್ಸೀಮನಾಗಿದ್ದ ಈ ಕಂಪೆನಿ ಹಂತ ಹಂತವಾಗಿ ಮೇಲೇರುತ್ತಲೇ ಬಳಕೆದಾರರ ಮೆಚ್ಚಿನ ಬ್ರ್ಯಾಂಡ್ ಆಗಿ ಮೂಡಿಬಂದಿತ್ತು.

[ಓದಿರಿ: ನೋಕಿಯಾದ ಸೋಲಿಗೆ ಪ್ರಮುಖವಾಗಿರುವ 8 ಕಾರಣಗಳು]

ಆದರೆ ಇತ್ತೀಚಿನ ದಿನಗಳಲ್ಲಿ ಇತರ ದುಬಾರಿ ಬ್ರ್ಯಾಂಡ್ ಫೋನ್‌ಗಳ ಪೈಪೋಟಿ ಅಂತೆಯೇ ಹೊಸ ಫೀಚರ್‌ಗಳತ್ತ ಬಳಕೆದಾರರು ಮುಖ ಮಾಡಿರುವುದರ ಪರಿಣಾಮದಿಂದಾಗಿ ನೆಲಕ್ಕಚ್ಚಿತು. ತದನಂತರ ಮೈಕ್ರೋಸಾಫ್ಟ್‌ನ ಆಡಳಿತದಲ್ಲಿ ಈ ಕಂಪೆನಿ ತುಸು ಚಿಗುರಿಕೊಳ್ಳುತ್ತಿದ್ದರೂ ತನ್ನ ಹಿಂದಿನ ಖ್ಯಾತಿಗೆ ಬರಲು ಇದು ಕೊಂಚ ಸಮಯವನ್ನು ತೆಗೆದುಕೊಳ್ಳುವುದು ಖಂಡಿತ. ಇಂದಿನ ಲೇಖನದಲ್ಲಿ ನೋಕಿಯಾದ ಟಾಪ್ ವಿಶೇಷತೆಗಳನ್ನು ನಾವು ತಿಳಿಸಲಿದ್ದು ಇದು ನಿಜಕ್ಕೂ ರೋಚಕವಾಗಿದೆ.

ನೋಕಿಯಾ ಟ್ಯೂನ್

ನೋಕಿಯಾ ಟ್ಯೂನ್

ನೋಕಿಯಾ ಟ್ಯೂನ್ ಆಗಿದ್ದ ರಿಂಗ್ ಟೋನ್ 19 ನೇ ಶತಮಾನದ ಗಿಟಾರ್ ವರ್ಕ್ ಆದ "ಗ್ರಾನ್ ವಾಲ್ಸ್" ಎಂಬುದರಿಂದ ತೆಗೆದುಕೊಳ್ಳಲಾಗಿದೆ. ನೋಕಿಯಾ ಟ್ಯೂನ್‌ ಅನ್ನು ಮೂಲತಃ "ಗ್ರಾಂಡ್ ವಾಲ್ಸ್" ಎಂಬ ಹೆಸರಿನಿಂದ ಕರೆಯಲಾಗಿತ್ತು.

ಜಿಎಸ್‌ಎಮ್ ಕರೆ

ಜಿಎಸ್‌ಎಮ್ ಕರೆ

ವಿಶ್ವದ ಮೊದಲ ವಾಣಿಜ್ಯ ಜಿಎಸ್‌ಎಮ್ ಕರೆಯನ್ನು 1991 ರಲ್ಲಿ ಹೆಲ್ಸಿಂಕಿಯಲ್ಲಿ ನೋಕಿಯಾ ಒದಗಿಸಿದ ನೆಟ್‌ವರ್ಕ್ ಅನ್ನು ಆಧರಿಸಿ ಮಾಡಲಾಯಿತು.

ಅತಿ ದೊಡ್ಡ ಕ್ಯಾಮೆರಾ ತಯಾರಕ ಸಂಸ್ಥೆ

ಅತಿ ದೊಡ್ಡ ಕ್ಯಾಮೆರಾ ತಯಾರಕ ಸಂಸ್ಥೆ

ಜಗತ್ತಿನ ಅತಿ ದೊಡ್ಡ ಕ್ಯಾಮೆರಾ ತಯಾರಕ ಸಂಸ್ಥೆಯಾಗಿ ನೋಕಿಯಾ. ಕ್ಯಾಮೆರಾ ಇರುವ ಮೊಬೈಲ್ ಫೋನ್‌ಗಳ ಮಾರಾಟವು ಇತರ ಸಾಂಪ್ರದಾಯಿಕ ಕ್ಯಾಮೆರಾ ತಯಾರಿಕೆಯನ್ನು ಮೀರಿಸಿತ್ತು.

ವಿಶೇಷ ಟೋನ್

ವಿಶೇಷ ಟೋನ್

ನೋಕಿಯಾ ಫೋನ್‌ಗಳ ಬಳಕೆದಾರರಿಗೆ ವಿಶೇಷ ಟೋನ್‌ಗಳು ಲಭ್ಯವಿದ್ದು, ಎಸ್‌ಎಮ್‌ಎಸ್ ಸ್ವೀಕರಿಸುವಾಗ ಮೋರ್ಸ್ ಕೋಡ್ ಅನ್ನು ನಿಮಗೆ ಆಲಿಸಬಹುದು.

 ನೋಕಿಯಾ ಫಾಂಟ್

ನೋಕಿಯಾ ಫಾಂಟ್

ನೋಕಿಯಾ ಕಾರ್ಪೊರೇಟ್ ಫಾಂಟ್ ಅನ್ನು ಮೂಲತಃ ಎರಿಕ್ ಸ್ಪೈಕರ್ ಮಾನ್ ವಿನ್ಯಾಸಗೊಳಿಸಿದ್ದಾರೆ. ನೋಕಿಯಾ ಹೆಚ್ಚಾಗಿ ಅಗ್ಫಾ ರೊಟೀಸ್ ಸಾಂಸ್ ಫಾಂಟ್ ಅನ್ನು ಬಳಸುತ್ತದೆ.

4 ದುರಾದೃಷ್ಟ ಸಂಖ್ಯೆ

4 ದುರಾದೃಷ್ಟ ಸಂಖ್ಯೆ

ಏಷ್ಯಾದಲ್ಲಿ, 4 ಅಂಕೆ ನೋಕಿಯಾ ಹ್ಯಾಂಡ್‌ಸೆಟ್ ಮೊಬೈಲ್ ಸಂಖ್ಯೆಯಲ್ಲಿ ಕಾಣಿಸಿಕೊಳ್ಳುವುದಿಲ್ಲ. ಏಷ್ಯಾದ ಹೆಚ್ಚಿನ ದಕ್ಷಿಣ ಮತ್ತು ಉತ್ತರ ಭಾಗದಲ್ಲಿ 4 ಅನ್ನು ದುರಾದೃಷ್ಟ ಸಂಖ್ಯೆ ಎಂದು ನಂಬಲಾಗುತ್ತದೆ.

ಫೋರ್ಚ್ಯೂನ್ ಪಟ್ಟಿ

ಫೋರ್ಚ್ಯೂನ್ ಪಟ್ಟಿ

2006 ರ ಫೋರ್ಚ್ಯೂನ್ ಪಟ್ಟಿಯಲ್ಲಿ ನೋಕಿಯಾವನ್ನು 20 ನೇ ಪ್ರಶಂಸನೀಯ ಕಂಪೆನಿ ಎಂದು ಪಟ್ಟಿ ಮಾಡಲಾಗಿದೆ.

ಕಾಲ್ ಟೈಮರ್

ಕಾಲ್ ಟೈಮರ್

ಇತರ ಆಧುನಿಕ ಹ್ಯಾಂಡ್‌ಸೆಟ್‌ಗಳಂತೆಯೇ, ನೋಕಿಯಾ ಫೋನ್‌ಗಳು ಸ್ವಯಂಚಾಲಿತವಾಗಿ ಕಾಲ್ ಟೈಮರ್ ಅನ್ನು ಆರಂಭಿಸುವುದಿಲ್ಲ. ಕರೆಯನ್ನು ಸಂಪರ್ಕಗೊಳಿಸುತ್ತದೆ, ಆದರೆ ಕರೆ ಆರಂಭವಾದಾಗ ಮಾತ್ರ ಸ್ಟಾರ್ಟ್ ಆಗುತ್ತದೆ.

ಅಯ್ಕಾನ್

ಅಯ್ಕಾನ್

ನೋಕಿಯಾ ಫೋನ್ ಅನ್ನು ಬಳಸದ ಬಳಕೆದಾರರು ಅಂತೆಯೇ ಮೊಬೈಲ್ ಸಾಫ್ಟ್‌ವೇರ್ ಡೆವಲಪರ್‌ಗಳು, ನೋಕಿಯಾವನ್ನು 'ಅಯ್ಕಾನ್' ಎಂದು ಕರೆದದ್ದೂ ಉಂಟು. ನೋಕಿಯಾದ ಸಿಂಬಿಯನ್ S60 SDK ಸೇರಿದಂತೆ ಹೆಚ್ಚಿನ ಎಸ್‌ಡಿಕೆ ಸಾಫ್ಟ್‌ವೇರ್ ಪ್ಯಾಕೇಜ್‌ಗಳಲ್ಲಿ 'ಅಯ್ಕಾನ್' ಅನ್ನು ಬಳಸಲಾಗಿದೆ.

ನೋಕಿಯಾ ಹೆಸರು

ನೋಕಿಯಾ ಹೆಸರು

ಪಟ್ಟಣದ ಮೂಲಕ ಹರಿಯುತ್ತಿದ್ದ ನದಿಯ ಹೆಸರಾದ ನೋಕಿಯಾವನ್ನು ಕಂಪೆನಿಗೆ ಇರಿಸಲಾಗಿತ್ತು. ನದಿಯ ಹೆಸರು ನೋಕಿಯಾನ್ ವಿತ್ರಾ ಆಗಿದೆ.

Best Mobiles in India

English summary
Nokia is considered as one of the worlds mobile manufacturing company now under the control of microsoft. In this article we can see the 1O interesting facts about nokia.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X