Subscribe to Gizbot

2014 ರಲ್ಲಿ ಹೆಚ್ಚು ಸುದ್ದಿ ಮಾಡಿದ ಟ್ರೆಂಡಿಂಗ್ ಸುದ್ದಿಗಳು

Posted By:

2014 ಮರೆತೇನೆಂದರೂ ಮರೆಯಲಿ ಹ್ಯಾಂಗೆ ಎಂಬಂತಹ ಕೆಲವೊಂದು ರಸನಿಮಿಷಗಳನ್ನು ಕೊಡುಗೆಯಾಗಿ ನೀಡಿ ಕಣ್ಮರೆಯಾಗಿದೆ. ಇದು ಎಲ್ಲಾ ರಂಗದಲ್ಲೂ ನಿಚ್ಚಳವಾಗಿ ಕಾಣುತ್ತಿದ್ದು ಟೆಕ್ ಕ್ಷೇತ್ರದಲ್ಲೂ ಅಪಾರ ಬದಲಾವಣೆಗಳನ್ನು ಮಾಡಿದೆ ಎನ್ನಬಹುದು. ಇಂಟರ್ನೆಟ್‌ನಲ್ಲೂ ಕೆಲವೊಂದು ಅದ್ಭುತಗಳು ನಡೆದಿದ್ದು ವ್ಯವಸ್ಥೆಯನ್ನೇ ಇದು ಅಡಿಮೇಲು ಮಾಡಿದೆ.

ಇದನ್ನೂ ಓದಿ: ವಿಶೇಷತೆಗಳಿಂದ ಮನಸೆಳೆಯುವ ಗ್ಯಾಲಕ್ಸಿ ಎಸ್6 ಡಿವೈಸ್

ಐಫೋನ್ 6ನ ಉಗಮ, ವಾಟ್ಸಾಪ್ ಕಮಾಲು, ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇ, ಮಂಗಳಯಾನ ಹೀಗೆ ಅಸಂಖ್ಯ ದಾಖಲೆಗಳ ಸಂಗ್ರಹ ಇಂಟರ್ನೆಟ್‌ನಲ್ಲಿ ಸಂಗ್ರಹವಾಗಿ ಒಂದು ರೀತಿಯ ಧಮಾಲನ್ನು ಉಂಟುಮಾಡಿದೆ. ಹಾಗಿದ್ದರೆ ಇಂದಿನ ಲೇಖನದಲ್ಲಿ ಆ ಧಮಾಲು ಮತ್ತು ಕಮಾಳು ಏನು ಎಂಬುದನ್ನು ಅರಿತುಕೊಳ್ಳೋಣ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ವಾಟ್ಸಾಪ್ ಫೇಸ್‌ಬುಕ್ ಒಪ್ಪಂದ

2014 ರಲ್ಲಿ ಹೆಚ್ಚು ಸುದ್ದಿ ಮಾಡಿದ ಟ್ರೆಂಡಿಂಗ್ ಸುದ್ದಿಗಳು

$ 19 ಬಿಲಿಯನ್ ನೀಡಿ ಫೇಸ್‌ಬುಕ್ ವಾಟ್ಸಾಪ್ ಅನ್ನು ಖರೀದಿಸಿದ್ದು ವರ್ಷದ ಅವಿಸ್ಮರಣೀಯ ಘಟನೆ ಎಂದೆನಿಸಿದೆ.

ಐಫೋನ್ 6

2014 ರಲ್ಲಿ ಹೆಚ್ಚು ಸುದ್ದಿ ಮಾಡಿದ ಟ್ರೆಂಡಿಂಗ್ ಸುದ್ದಿಗಳು

2014 ರ ಹೆಚ್ಚು ನಿರೀಕ್ಷೆಯ ಗ್ಯಾಜೆಟ್ ಆಗಿದೆ ಐಫೋನ್ 6. ಜಗತ್ತಿನಲ್ಲಿ ಕಿಚ್ಚು ಹಚ್ಚಿದ ಫೋನ್ ಆಗಿ ಬಿಂಬಿತವಾಗಿದೆ.

ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇ

2014 ರಲ್ಲಿ ಹೆಚ್ಚು ಸುದ್ದಿ ಮಾಡಿದ ಟ್ರೆಂಡಿಂಗ್ ಸುದ್ದಿಗಳು

ಪ್ರತಿಯೊಬ್ಬ ಭಾರತೀಯನೂ ಬಿಗ್ ಬಿಲಿಯನ್ ಡೇ ಮಾರಾಟವನ್ನು ನೆನಪಿನಲ್ಲಿಟ್ಟುಕೊಳ್ಳುವುದು ಖಂಡಿತ.

ಇಸ್ರೋ ಮಂಗಳಯಾನ

2014 ರಲ್ಲಿ ಹೆಚ್ಚು ಸುದ್ದಿ ಮಾಡಿದ ಟ್ರೆಂಡಿಂಗ್ ಸುದ್ದಿಗಳು

ನಾಸಾ ಮಾಡಲಾಗದ ಸಾಧನೆಯನ್ನು ಇಸ್ರೋ ಅದೇ ಸಮಯದಲ್ಲಿ ಮಂಗಳ ಉಪಗ್ರಹವನ್ನು ಉಡಾಯಿಸುವ ಮೂಲಕ ಮಾಡಿದೆ.

ಸಿಬಿಎಸ್ಇ ಟಾಪರ್ ಸಾರ್ಥಕ್ ಅಗರ್‌ವಾಲ್

2014 ರಲ್ಲಿ ಹೆಚ್ಚು ಸುದ್ದಿ ಮಾಡಿದ ಟ್ರೆಂಡಿಂಗ್ ಸುದ್ದಿಗಳು

12 ನೇ ಬೋರ್ಡ್ ಪರೀಕ್ಷೆಯಲ್ಲಿ ಸಾರ್ಥಕ್ ಅಗರ್‌ವಾಲ್ 99.6% ವನ್ನು ಗಳಿಸಿ ಸಾಧನೆಯನ್ನು ಮಾಡಿದ್ದಾರೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಸಾಧನೆಗಳು

2014 ರಲ್ಲಿ ಹೆಚ್ಚು ಸುದ್ದಿ ಮಾಡಿದ ಟ್ರೆಂಡಿಂಗ್ ಸುದ್ದಿಗಳು

ಪ್ರಧಾನ ಮಂತ್ರಿಯಾಗಿ ಜಯಗಳಿಸಿದ ಮೋದಿ ಮೋಡಿ ನಿಜಕ್ಕೂ ಕಮಾಲಿನದ್ದಾಗಿದೆ. ತಮ್ಮ ಸಾಧನೆಗಳ ಆರಂಭವನ್ನು 2014 ರಲ್ಲೇ ಶುರುಮಾಡಿ ಜನರ ಮನದಲ್ಲಿ ಸಂಚಲವನ್ನು ಉಂಟುಮಾಡಿದ್ದಾರೆ.

ಆಸ್ಕರ್ ಸೆಲ್ಫಿ

2014 ರಲ್ಲಿ ಹೆಚ್ಚು ಸುದ್ದಿ ಮಾಡಿದ ಟ್ರೆಂಡಿಂಗ್ ಸುದ್ದಿಗಳು

ಜಗತ್ತಿನ ಹೆಚ್ಚು ಸ್ಮರಣೀಯ ಸೆಲ್ಫಿಯಾಗಿ ಆಸ್ಕರ್ ಸೆಲ್ಫಿ ಪ್ರಚಲಿತದಲ್ಲಿದೆ. 2 ಮಿಲಿಯನ್‌ಗಿಂತಲೂ ಹೆಚ್ಚು ಬಾರಿ ಈ ಸೆಲ್ಫಿಯನ್ನು ಮರುಟ್ವೀಟ್ ಮಾಡಿದ್ದು ಸೆಲ್ಫಿ ತೆಗೆದ ಎಲೆನ್ ಡಿಜೆನರ್‌ಗೆ ಅಭಾರಿಯಾಗಿರಬೇಕು.

ಆಲಿಯಾ ಭಟ್ ಜೋಕ್ಸ್

2014 ರಲ್ಲಿ ಹೆಚ್ಚು ಸುದ್ದಿ ಮಾಡಿದ ಟ್ರೆಂಡಿಂಗ್ ಸುದ್ದಿಗಳು

ಆಲಿಯಾ ಭಟ್ ಜೋಕ್ಸ್ ಹೆಚ್ಚು ಪ್ರಚಲಿತದಲ್ಲಿರುವ ಸುದ್ದಿಯಾಗಿದ್ದು ಸಾಮಾಜಿಕ ತಾಣದಲ್ಲಿ ನಗೆಹಬ್ಬವನ್ನೇ ಸೃಷ್ಟಿಸಿದೆ.

ರಜನೀಕಾಂತ್ ಟ್ವಿಟ್ಟರ್ ಸೇರ್ಪಡೆ

2014 ರಲ್ಲಿ ಹೆಚ್ಚು ಸುದ್ದಿ ಮಾಡಿದ ಟ್ರೆಂಡಿಂಗ್ ಸುದ್ದಿಗಳು

ಮೇ 6 ರಂದು ತಮಿಳುನಾಡಿನ ದೇವರು ಎಂದೇ ಕರೆಯಿಸಿಕೊಳ್ಳುವ ರಜನೀಕಾಂತ್ ಟ್ವಿಟ್ಟರ್ನಲ್ಲಿ ತಮ್ಮ ಖಾತೆಯನ್ನು ತೆರೆದಿದ್ದಾರೆ. ಇವರು 17,000 ಫಾಲೋವರ್‌ಗಳನ್ನು ಈಗಾಗಲೇ ಹೊಂದಿದ್ದು ಇದು ಲಕ್ಷವನ್ನು ತಲುಪುವ ದಿನ ಸನಿಹದಲ್ಲಿದೆ.

ಐಸ್ ಬಕೇಟ್

2014 ರಲ್ಲಿ ಹೆಚ್ಚು ಸುದ್ದಿ ಮಾಡಿದ ಟ್ರೆಂಡಿಂಗ್ ಸುದ್ದಿಗಳು

ಪಾಶ್ಚಾತ್ಯ ಸಂಸ್ಕೃತಿ ಎಂದೆನಿಸಿರುವ ಐಸ್ ಬಕೇಟ್ ಭಾರತದಲ್ಲೂ ಹೆಚ್ಚಿನ ಧಮಾಲನ್ನೇ ಉಂಟುಮಾಡಿತು. ಬಾಲಿವುಡ್, ಕಾಲಿವುಡ್ ಎಂದೆನ್ನದೆ, ಟಿಮ್ ಕುಕ್, ಸತ್ಯನಡೇಲ್ಲಾರಂತಹ ದಿಗ್ಗಜರು ಭಾಗವಹಿಸಿದ ಚಾಲೆಂಜ್ ಈವೆಂಟ್ ಇದಾಗಿತ್ತು.

ಪಿಕೆ ಡಿಬೇಟ್

2014 ರಲ್ಲಿ ಹೆಚ್ಚು ಸುದ್ದಿ ಮಾಡಿದ ಟ್ರೆಂಡಿಂಗ್ ಸುದ್ದಿಗಳು

ಪಿಕೆ ಚಿತ್ರದಲ್ಲಿ ಅಮೀರ ಖಾನ್‌ರ ಬೆತ್ತಲೆ ಪೋಸು ನಿಜಕ್ಕೂ ಸಿನಿರಂಗದಲ್ಲಿ ಸುದ್ದಿಗೆ ಗ್ರಾಸವಾಗಿತ್ತು. ಹೆಚ್ಚು ಚರ್ಚಿತ ಚಿತ್ರವಾಗಿ ಪಿಕೆ ಮೂಡಿಬಂದಿದೆ.

ಹ್ಯಾಪಿ ವೀಡಿಯೊಗಳು

2014 ರಲ್ಲಿ ಹೆಚ್ಚು ಸುದ್ದಿ ಮಾಡಿದ ಟ್ರೆಂಡಿಂಗ್ ಸುದ್ದಿಗಳು

ವರ್ಷದ ಅತಿ ದೊಡ್ಡ ಹಾಡನ್ನು ಪ್ಯಾರೆಲ್ ವಿಲಿಯಮ್ಸ್ ನಿರ್ಮಿಸಿದ್ದು ಜಗತ್ತು ಇದನ್ನು ವಿಖ್ಯಾತ ಸಾಧನೆಯನ್ನಾಗಿ ಪರಿಗಣಿಸಿತು. ಈ ಹಾಡಿಗೆ ಮಿಲಿಯಗಟ್ಟಲೆ ಜನರು ಕುಣಿದಿದ್ದು ಇದನ್ನು ಜನಪ್ರಿಯತೆಯ ತುತ್ತ ತುದಿಗೇರಿಸಿದೆ.

ಜಾಕಿ ಬಗ್‌ನಾನಿ ಮಾಡಿದ ತಪ್ಪು

2014 ರಲ್ಲಿ ಹೆಚ್ಚು ಸುದ್ದಿ ಮಾಡಿದ ಟ್ರೆಂಡಿಂಗ್ ಸುದ್ದಿಗಳು

ಮಲಾಲಾಗೆ ನೋಬಲ್ ಬಹುಮಾನ ಬಂದಿರುವುದಕ್ಕಾಗಿ ಜಾಕಿ ಬಗ್‌ನಾನಿ ಟ್ವಿಟ್ಟರ್‌ನಲ್ಲಿ ಪ್ರಶಂಸೆಯನ್ನು ಮಾಡಿದ್ದು ಅವರ ಹೆಸರನ್ನು ಮಸಾಲಾ ಎಂದು ನಮೂದಿಸಿ ಸುದ್ದಿಗೆ ಆಹಾರವಾಗಿದ್ದಾರೆ. ಮಲಾಲಾ ಹೆಸರನ್ನು ಮಸಾಲಾ ಎಂದು ಟ್ವೀಟ್ ಮಾಡಿ ನಂತರ ಇದಕ್ಕಾಗಿ ಕ್ಷಮೆ ಕೋರಿದ್ದಾರೆ.

ರೋಬಿನ್ ವಿಲಿಯಮ್ಸ್ ಮರಣ

2014 ರಲ್ಲಿ ಹೆಚ್ಚು ಸುದ್ದಿ ಮಾಡಿದ ಟ್ರೆಂಡಿಂಗ್ ಸುದ್ದಿಗಳು

ಪರದೆಯಲ್ಲಿ ಆಗಮಿಸುವ ಪ್ರತೀ ನಿಮಿಷದಲ್ಲೂ ನಮ್ಮಲ್ಲಿ ನಗೆಬುಗ್ಗೆಯನ್ನುಂಟು ಮಾಡುವ ರಾಬಿನ್ ವಿಲಿಯಮ್ಸ್ ಆಗಸ್ಟ್‌ನಲ್ಲಿ ಆತ್ಮಹತ್ಯೆ ಮಾಡಿ ಅಪಾರ ಅಭಿಮಾನಿಗಳನ್ನು ದುಃಖದ ಕಡಲಿಗೆ ನೂಕಿದ್ದಾರೆ.

ಪೇಶಾವರ ಕೃತ್ಯ

2014 ರಲ್ಲಿ ಹೆಚ್ಚು ಸುದ್ದಿ ಮಾಡಿದ ಟ್ರೆಂಡಿಂಗ್ ಸುದ್ದಿಗಳು

ತೆಹ್ರಿಕ್-ಐ-ತಾಲಿಬಾನಿಗಳು 16 ಡಿಸೆಂಬರ್ 2014 ರಂದು 132 ಶಾಲಾ ಮಕ್ಕಳನ್ನು ಕೊಂದು ಮಾನವೀಯತೆಗೆ ಮಸಿ ಬಳಿದು ಇಡೀಯ ವಿಶ್ವವೇ ತಲ್ಲಣಗೊಂಡ ಕೃತ್ಯವನ್ನು ಎಸಗಿದ್ದಾರೆ.

ಅರ್ಪಿತಾ ಖಾನ್ ವಿವಾಹ

2014 ರಲ್ಲಿ ಹೆಚ್ಚು ಸುದ್ದಿ ಮಾಡಿದ ಟ್ರೆಂಡಿಂಗ್ ಸುದ್ದಿಗಳು

ಸಲ್ಮಾನ್ ಖಾನ್ ಸಹೋದರಿ ಅರ್ಪಿತಾ ವಿವಾಹ ಸಂಭ್ರಮ ಇಂಟರ್ನೆಟ್‌ನಲ್ಲಿ ಹೆಚ್ಚು ಜಗಜ್ಜಾಹಿರ ಸುದ್ದಿಯಾಗಿ ಹೊರಹೊಮ್ಮಿದೆ. ವಿವಾಹ, ಆರತಕ್ಷತೆ ಹೀಗೆ ವಿವಾಹದ ಪ್ರತೀ ಸನ್ನಿವೇಶ ಇಂಟರ್ನೆಟ್‌ನಲ್ಲಿ ಭಾರೀ ಸಂಚಲವನ್ನೇ ಉಂಟುಮಾಡಿತು.

ಫಿಲಿಪ್ ಹ್ಯೂಗಸ್ ಮರಣ

2014 ರಲ್ಲಿ ಹೆಚ್ಚು ಸುದ್ದಿ ಮಾಡಿದ ಟ್ರೆಂಡಿಂಗ್ ಸುದ್ದಿಗಳು

ಆಸ್ಟ್ರೇಲಿಯಾದ ಕ್ರಿಕೆಟ್ ಪಟು ಫಿಲಿಪ್ ಹ್ಯೂಗಸ್ ಪಿಚ್‌ನಲ್ಲೇ ತನ್ನ ಪ್ರಾಣ ತೆತ್ತ ಮನಕಲಕುವ ಘಟನೆ ಈ ವರ್ಷದ ಕಪ್ಪು ಚುಕ್ಕೆ ಎಂದೆನಿಸಿದೆ.

ಇಸ್ರೇಲ್ ಬಾಂಬಿಂಗ್ ಗಾಜಾ ಸ್ಟ್ರಿಪ್

2014 ರಲ್ಲಿ ಹೆಚ್ಚು ಸುದ್ದಿ ಮಾಡಿದ ಟ್ರೆಂಡಿಂಗ್ ಸುದ್ದಿಗಳು

ಜುಲೈ 8, 2014 ರಂದು ಹಮಾಸ್ ಆಡಳಿತದ ಗಾಜಾದ ಮೇಲೆ ಇಸ್ರೇಲ್ ಮಿಲಿಟರಿ ದಾಳಿಯನ್ನು ನಡೆಸಿತು. ಈ ದಾಳಿ 2,200 ಜನರ ಮರಣಕ್ಕೆ ಕಾರಣವಾಯಿತು.

ಇಬೋಲಾ

2014 ರಲ್ಲಿ ಹೆಚ್ಚು ಸುದ್ದಿ ಮಾಡಿದ ಟ್ರೆಂಡಿಂಗ್ ಸುದ್ದಿಗಳು

ಈ ವೈರಸ್ ದಾಳಿ ಇಡಿಯ ವಿಶ್ವವನ್ನೇ ತಲ್ಲಣಗೊಳಿಸಿ ಜನರ ಪ್ರಾಣಕ್ಕೆ ಸಂಚಕಾರವನ್ನು ತಂದೊಡ್ಡಿತ್ತು. ಇಂಟರ್ನೆಟ್‌ನಲ್ಲಿ ವ್ಯಾಪಕವಾಗಿ ಇಬೋಲಾ ಸುದ್ದಿ ಹರಿದಾಡಿದೆ.

ಹಾಂಕ್ ಕಾಂಗ್ ಮುಷ್ಕರ

2014 ರಲ್ಲಿ ಹೆಚ್ಚು ಸುದ್ದಿ ಮಾಡಿದ ಟ್ರೆಂಡಿಂಗ್ ಸುದ್ದಿಗಳು

ಸಪ್ಟೆಂಬರ್ 2014 ರಂದು ಆರಂಭವಾದ ಹಾಂಕ್ ಕಾಂಗ್ ಮುಷ್ಕರ ಇಂಟರ್ನೆಟ್‌ನಲ್ಲಿ ವ್ಯಾಪಕ ಸುದ್ದಿಗೆ ಕಾರಣವಾಗಿದೆ. ಈ ಮುಷ್ಕರದಲ್ಲಿ ಹೆಚ್ಚು ಪ್ರಚಾರ ಗಿಟ್ಟಿಸಿದ್ದು ಜೋಶುವಾ ವೋಂಗ್ ಸೂನ್.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
20 Things that broke the internet.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot