1 ಸೆಕೆಂಡ್‌ಗೆ 200 HD ಸಿನಿಮಾ ಡೌನ್‌ಲೋಡ್‌ "ಬಿಟಿ 5.6Tbps ಫೈಬರ್ ಸಂಪರ್ಕ"

Written By:

"ಬಿಟಿ ಗ್ರೂಪ್‌"(BT Group) ಟಿಲಿಕಂಮ್ಯೂನಿಕೇಷನ್‌ ಕಂಪನಿಯಾಗಿದ್ದು, ಇದು ಬ್ರಿಟಿಷ್‌ ಟೆಲಿಕಂಮ್ಯೂನಿಕೇಷನ್‌'ನ ಮಾಲೀಕತ್ವವನ್ನು ಹೊಂದಿದೆ. ಬ್ರಿಟಿಷ್‌ ಟೆಲಿಕಂಮ್ಯೂನಿಕೇಷನ್‌ ಸರ್ವೀಸ್‌ ಕಂಪನಿಯು ಬಹುರಾಷ್ಟ್ರೀಯ ಕಂಪನಿಯಾಗಿದ್ದು, ಬ್ರಿಟನ್‌ನ ಲಂಡನ್‌ ಮೂಲದ ಕಂಪನಿಯಾಗಿದೆ. 170 ಕ್ಕಿಂತ ಹೆಚ್ಚು ದೇಶಗಳಿಗೆ ತನ್ನ ಸೇವೆಯನ್ನು ನೀಡುತ್ತಿದೆ. ಅಂದಹಾಗೆ ಬಿಟಿ(BT) ಟೆಲಿಕಾಂ ಕಂಪನಿಯು ಹುವಾವೇ ನೆರವಿನೊಂದಿಗೆ ಡೇಟಾ ಡೌನ್‌ಲೋಡ್‌ನಲ್ಲಿ ವಿಶ್ವ ದಾಖಲೆ ನಿರ್ಮಿಸಿದೆ. ಒಂದು ಫೈಬರ್‌ ಸಂಪರ್ಕದ ಮೂಲಕ 5.6Tbps ಸಾಮರ್ಥ್ಯವನ್ನು ತೋರಿಸಿದೆ. ಈ ಹಿಂದೆ ಬಿಟಿ ಕಂಪನಿಯೇ 2014 ರಲ್ಲಿ 3Tbps ಡೌನ್‌ಲೋಡ್‌ ವೇಗ ಹೊಂದಿತ್ತು. ಈ ಬಗ್ಗೆ ವಿಶೇಷ ಮಾಹಿತಿಯನ್ನು ಲೇಖನದ ಸ್ಲೈಡರ್‌ನಲ್ಲಿ ಓದಿರಿ.

ಬಿಎಂಟಿಸಿ' ಬಸ್‌ಗಳ ಸಂಪೂರ್ಣ ಮಾಹಿತಿ ಒಂದೇ ಅಪ್ಲಿಕೇಶನ್‌ನಲ್ಲಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 5.6Tbps ವೇಗ

5.6Tbps ವೇಗ

1

5.6Tbps ವೇಗವು Ipswich ನಲ್ಲಿನ ಬಿಟಿ ಲ್ಯಾಬ್ಸ್‌ ಮತ್ತು ಲಂಡನ್‌ನಲ್ಲಿರುವ ಬಿಟಿ ಟವರ್‌ಗಳ ನಡುವೆ ಇದೆ. 200Gbps ಉಪ ಚಾನೆಲ್‌ಗಳು ಸಹ ಬಿಟಿಯೊಂದಿಗೆ ಸಂಯೋಜನೆ ಹೊಂದಿ ಕೇವಲ ಒಂದು ಸೆಕೆಂಡ್‌ನಲ್ಲಿ 200 HD ಸಿನಿಮಾಗಳನ್ನು ಡೌನ್‌ಲೋಡ್‌ ಮಾಡಬಹುದಾದ ವೇಗವನ್ನು ಹೊಂದಿದೆಯಂತೆ.

 1.125Tbps

1.125Tbps

2

ಈ ವರ್ಷದ ಫೆಬ್ರವರಿಯಲ್ಲಿ ಲಂಡನ್‌ ವಿಶ್ವವಿದ್ಯಾಲಯ ಕಾಲೇಜ್‌ನ ಸಂಶೋಧಕರು ಡೇಟಾ ವರ್ಗಾವಣೆಯಲ್ಲಿ 1.125Tbps ವೇಗವನ್ನು ದಾಖಲಿಸಿ ದಾಖಲೆ ನಿರ್ಮಿಸಿದ್ದರು. ಸಂಶೋಧಕರು ಈ ಇಂಟರ್ನೆಟ್‌ ವೇಗದ ಮೂಲಕ "ಗೇಮ್‌ ಆಫ್‌ ಥ್ರೋನ್ಸ್‌"ನ ಸಂಪೂರ್ಣ ಸೀಸನ್‌ ಅನ್ನು HD ಫಾರ್ಮ್ಯಾಟ್‌ನಲ್ಲಿ ಒಂದು ಸೆಕೆಂಡ್‌ಗೆ ಡೌನ್‌ಲೋಡ್‌ ಮಾಡಿದ್ದರು.

 ಬಿಟಿ ಮತ್ತು ಹುವಾವೆ

ಬಿಟಿ ಮತ್ತು ಹುವಾವೆ

3

ಬಿಟಿ ಮತ್ತು ಹುವಾವೆ ಕಂಪನಿಗಳು, 'ಲಂಡನ್‌ ಮತ್ತು ಡುಬ್ಲಿನ್‌ ಪ್ರದೇಶದ 727 km ಅನ್ನು ಆಪರೇಟರ್‌ ಲೈವ್‌ ಸ್ಕೋರ್‌ ನೆಟ್‌ವರ್ಕ್‌ ವಿಭಾಗದಲ್ಲಿ 2Tbps ಇಂಟರ್ನೆಟ್‌ ವೇಗ ಗಳಿಸಿದ್ದವು.

 ಬಿಟಿ ಟೆಕ್ನಾಲಜಿ

ಬಿಟಿ ಟೆಕ್ನಾಲಜಿ

4

ಬಿಟಿ ಟೆಕ್ನಾಲಜಿಯ ಸೇವೆ ಮತ್ತು ಆಪರೇಷನ್‌ನ ಮುಖ್ಯ ಕಾರ್ಯನಿರ್ವಾಹಕ "ಹೋವರ್ಡ್ ವ್ಯಾಟ್ಸನ್" ರವರು, " 5.6Tbps ವೇಗ ಮರೆಯಲಾಗದ ವಿಶೇಷ ಯಶಸ್ವಿ ಯೋಜನೆಯಾಗಿದ್ದು, ಅತ್ಯಾಧುನಿಕ ಡೇಟಾ ಬೇಡಿಕೆಯನ್ನು ಕಾದಿರಿಸಿಕೊಳ್ಳಬಹುದಾಗಿದೆ" ಎಂದಿದ್ದಾರೆ.

ಹೋವರ್ಡ್ ವ್ಯಾಟ್ಸನ್

ಹೋವರ್ಡ್ ವ್ಯಾಟ್ಸನ್

5

" ಕೋರ್‌ ನೆಟ್‌ವರ್ಕ್‌ ಇಂಟರ್ನೆಟ್‌ನ ಸೂಪರ್‌ ಹೈವೇ ಆಗಿದೆ. ಕೋರ್‌ ನೆಟ್‌ವರ್ಕ್‌ ಹೆಚ್ಚು ಪ್ರಾಮುಖ್ಯತೆ ಪಡೆದಿದ್ದು ಅತಿ ವೇಗದ ಫೈಬರ್‌ ಬ್ರಾಡ್‌ಬ್ಯಾಂಡ್‌, HD ಕಂಟೆಂಟ್‌, 4G ಸ್ಮಾರ್ಟ್‌ಫೋನ್‌, ಟ್ಯಾಬ್ಲೆಟ್‌, ಭವಿಷ್ಯದ 5G ನೆಟ್‌ವರ್ಕ್‌ಗಳ ಮೇಲೆ ಬೇಡಿಕೆಯನ್ನು ಕಾಯ್ದಿರಿಸಿಕೊಳ್ಳಬಹುದಾಗಿದೆ" ಹೋವರ್ಡ್‌ ವ್ಯಾಟ್ಸನ್‌ ಹೇಳಿದ್ದಾರೆ.

G.fast ಟೆಕ್ನಾಲಜಿ

G.fast ಟೆಕ್ನಾಲಜಿ

6

ಅಂದಹಾಗೆ ಬಿಟಿ ಕಂಪನಿಯು ಪ್ರಸ್ತುತ G.fast ಟೆಕ್ನಾಲಜಿಯನ್ನು ಅಭಿವೃದ್ದಿ ಪಡಿಸುತ್ತಿದ್ದು, ಕಾಪರ್‌ ಸಂಪರ್ಕ 300Mbps ಇಂಟರ್ನೆಟ್‌ ವೇಗ ನೀಡಲಿದೆ. ಶೀಘ್ರದಲ್ಲಿ ಹಲವು ಜನರಿಗೆ ಇಂಟರ್ನೆಟ್‌ ವೇಗದ ಸೇವೆಯನ್ನು ನೀಡಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
200 HD Films Can Be Downloaded in 1 Second with BT’s. Read more about this in kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot