3 ವಿಧದ ಆಂಟಿ-ವೈರಸ್ ಸ್ಕ್ಯಾನ್ಗಳು ಮತ್ತು ಅದರ ಉಪಯೋಗಗಳು

By Tejaswini P G

  ಆಂಟಿವೈರಸ್ ಪ್ರೋಗ್ರಾಮ್ಗಳ ಸೃಷ್ಟಿಗೆ ಮೂಲ ಕಾರಣ ಡಿಜಿಟಲ್ ಸಾಧನಗಳಲ್ಲಿರುವ ವೈರಸ್ಗಳನ್ನು ಸದೆ ಬಡಿಯುವುದೇ ಆಗಿತ್ತು. ಆದರೆ ಈಗ ಡಿಜಿಟಲ್ ಲೋಕದಲ್ಲಿ ಹಬ್ಬುತ್ತಿರುವ ಮುಂದುವರೆದ ಮಾಲ್ವೇರ್, ಸ್ಪೈವೇರ್ ಗಳು ಆಂಟಿವೃಸ್ ನ ಅಗತ್ಯವನ್ನು ಹೆಚ್ಚಿಸಿದ್ದು ಅದರ ಸುಧಾರಣೆ ಅತ್ಯಾವಶ್ಯಕವೆನಿಸಿದೆ. ಆಂಟಿವೈರಸ್ ನಲ್ಲಿ ಹೆಚ್ಚು ವೈರಸ್ ಪತ್ತೆಹಚ್ಚುವ ವಿಧಾನಗಳ ಬಳಕೆಯನ್ನು ನಾವೀಗ ಕಾಣಬಹುದಾಗಿದೆ.

  3 ವಿಧದ ಆಂಟಿ-ವೈರಸ್ ಸ್ಕ್ಯಾನ್ಗಳು ಮತ್ತು ಅದರ ಉಪಯೋಗಗಳು

  ಮಾಲ್ವೇರ್ಗಳ ಸತತ ವಿಕಸನದಿಂದಾಗಿ ಈಗ ಹೆಚ್ಚಿನ ಆಂಟಿವೈರಸ್ಗಳು ಈಗಾಗಲೇ ಲಭ್ಯವಿರುವ ವೈರಸ್ ಮತ್ತು ಇತರ ದೋಷಗಳನ್ನು ಪತ್ತೆಹಚ್ಚಲು ಸಮರ್ಥವಾಗಿರುತ್ತದಲ್ಲದೆ ಕಂಪ್ಯೂಟರ್ ಗೆ ಹಾನಿ ಮಾಡಬಲ್ಲ ಸಂಶಯಾಸ್ಪದ ವರ್ತನೆಗಳನ್ನೂ ಇದು ಗಮನಿಸುತ್ತದೆ. ಈ ಆಂಟಿವೈರಸ್ ಪ್ರೋಗ್ರಾಮ್ಗಳು ನಿಮ್ಮ ಕಂಪ್ಯೂಟರ್ಗಳನ್ನು ವೈರಸ್/ಮಾಲ್ವೇರ್ಗಳ ಅಪಾಯದಿಂದ ರಕ್ಷಿಸುತ್ತದಲ್ಲದೆ ನಿಮ್ಮ ಖಾಸಗಿ ಮಾಹಿತಿಯನ್ನೂ ಸುರಕ್ಷಿತವಾಗಿರಿಸುತ್ತದೆ. ಕೆಲವು ಖ್ಯಾತ ಆಂಟಿವೈರಸ್ ಪ್ರೋಗ್ರಾಮ್ ಗಳು ಈ ಕೆಳಿಗಿನಂತಿವೆ

  1. ನಾರ್ಟನ್ ಆಂಟಿವೈರಸ್

  2. ಮೆಕ್ ಕಫೀ ವೈರಸ್ ಸ್ಕ್ಯಾನ್ ಪ್ಲಸ್

  3. ಟ್ರೆಂಡ್ ಮೈಕ್ರೋ (ಪಿಸಿ-ಸಿಲ್ಲಿನ) ಇಂಟರ್ನೆಟ್ ಸೆಕ್ಯೂರಿಟಿ

  4. ಬಿಟ್ ಡಿಫೆಂಡರ್

  5. ಎವಿಜಿ ಆಂಟಿವೈರಸ್

  ಈ ಆಂಟಿವೈರಸ್ ಪ್ರೋಗ್ರಾಮ್ಗಳು ಹಾನಿಕಾರಕ ಮಾಲ್ವೇರ್/ವೈರಸ್ಗಳ ಪ್ರಮುಖ ಸಿಗ್ನೇಚರ್ಗಳ ಡೇಟಾಬೇಸ್ ಅನ್ನು ಹೊಂದಿರುತ್ತದೆ. ಪಿಸಿ/ಇತರ ಸಾಧನಗಳನ್ನು ಸ್ಕ್ಯಾನ್ ಮಾಡುವಾಗ ಹಾನಿಕಾರಕ ಅಂಶಗಳನ್ನು ಗುರುತಿಸಲು ಇದು ಇಂತಹ ಸಿಗ್ನೇಚರ್ಗಳನ್ನು ಹುಡುಕುತ್ತದೆ. ಅಲ್ಲದೆ ಇತರ ಪ್ರೋಗ್ರಾಮ್ಗಳ ಕ್ರಿಯೆಗಳು ಮತ್ತು ಅವು ಸಿಸ್ಟಮ್ ನೊಂದಿಗೆ ಹೇಗೆ ಇಂಟರ್ಯಾಕ್ಟ್ ಮಾಡುತ್ತದೆ ಎನ್ನುವುದನ್ನು ವಿಶ್ಲೇಷಿಸಲು ಇದು ಬಿಹೇವಿಯರಲ್ ಎನ್ಯಾಲಿಸಿಸ್ ನ ಬಳಕೆ ಮಾಡುತ್ತದೆ. ಏನಾದರೂ ಸಂಶಯಾಸ್ಪದವಾಗಿ ಕಂಡರೆ ಕೂಡಲೇ ಅದು ಆ ಆಪ್ ಅಥವಾ ಫೈಲ್ ಅನ್ನು ಕ್ವಾರೆಂಟೈನ್(ದಿಗ್ಬಂಧನ) ಮಾಡುತ್ತದೆ.

  ಫೇಸ್‌ಬುಕ್ ಅನ್ನು ಸಹ ಬಳಸಬಹುದಾದ ಈ ಫೀಚರ್ ಪೋನ್ ಅತ್ಯುತ್ತಮವಾಗಿದೆ
  ನಿಮ್ಮ ಸಾಧನವನ್ನು ಆಗ್ಗಾಗ್ಗೆ ತಪಾಸಣೆ ನಡೆಸುವ ಮೂಲಕ ಅದನ್ನು ಈ ವೈರಸ್ ಮತ್ತು ಇತರ ಹಾನಿಕಾರಕ ಮಾಲ್ವೇರ್ಗಳ ಪ್ರಭಾವದಿಂದ ರಕ್ಷಿಸಬಹುದು. ಇದಕ್ಕಾಗಿ ಮೂರು ರೀತಿಯ ಸ್ಕ್ಯಾನ್ಗಳು ಲಭ್ಯವಿದೆ.

  1. ಫುಲ್ ಸ್ಕ್ಯಾನ್

  2. ಕಸ್ಟಮ್ ಸ್ಕ್ಯಾನ್

  3. ಕ್ವಿಕ್ ಸ್ಕ್ಯಾನ್

  ಈ ಮೂರು ರೀತಿಯ ಸ್ಕ್ಯಾನ್ ಗಳ ಉಪಯೋಗಗಳೇನು ಮತ್ತು ಅವನ್ನು ಯಾವಾಗ ಬಳಸಬೇಕೆಂದು ತಿಳಿಯಬೇಕಾದರೆ ಈ ಲೇಖನವನ್ನು ಓದಿ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  ಫುಲ್ ಸ್ಕ್ಯಾನ್:

  ನಿಮ್ಮ ಸಾಧನದಲ್ಲಿ ಸಾಕಷ್ಟು ಡೇಟಾ ಇದ್ದರೆ ಈ ಫುಲ್ ಸ್ಕ್ಯಾನ್ ಪೂರ್ತಿಯಾಗಲು ಕೆಲವು ಘಂಟೆಗಳು ಬೇಕಾಗಬಹುದು. ಸಿಸ್ಟಮ್ ಅನ್ನು ಫುಲ್ ಸ್ಕ್ಯಾನ್ ಮಾಡುವಾಗ ಒಂದು ಆಂಟಿವೈರಸ್ ಸಿಸ್ಟಮ್ ಸಾಮನ್ಯವಾಗಿ ಈ ಕೆಳಗಿನದನ್ನು ಸ್ಕ್ಯಾನ್ ಮಾಡುತ್ತದೆ.

  1. ಎಲ್ಲಾ ನೆಟ್ವರ್ಕ್ ಡ್ರೈವ್ಗಳು, ಹಾರ್ಡ್ ಡ್ರೈವ್ಗಳು ಮತ್ತು ರಿಮೂವೆಬಲ್ ಸ್ಟೋರೇಜ್ಗಳು

  2. ಸಿಸ್ಟಮ್ ಮೆಮೋರಿ (RAM)

  3. ಸಿಸ್ಟಮ್ ಬ್ಯಾಕಪ್

  4. ಸ್ಟಾರ್ಟಪ್ ಫೋಲ್ಡರ್

  5. ರೆಜಿಸ್ಟ್ರಿ ಐಟಮ್ಗಳು

  ಪ್ರತೀ ಎರಡುವಾರಗಳಿಗೊಮ್ಮೆ ಫುಲ್ ಸ್ಕ್ಯಾನ್ ಮಾಡುವುದು ಉತ್ತಮ ಅಭ್ಯಾಸವಾಗಿದೆ.

  ಕಸ್ಟಮ್ ಸ್ಕ್ಯಾನ್

  ನೀವು ಒಂದು ಪೆನ್ ಡ್ರೈವ್ ಅಥವಾ ಹಾರ್ಡ್ ಡ್ರೈವ್ ಅನ್ನು ವೈರಸ್ ಇದೆಯೇ ಎಂದು ಪರಿಶೀಲಿಸಬೇಕಾಗಿದ್ದರೆ ಅದಕ್ಕಾಗಿ ಫುಲ್ ಸ್ಕ್ಯಾನ್ ನಡೆಸಿ ಹಲವು ಘಂಟೆಗಳನ್ನು ವ್ಯಯಿಸಬೇಕಾಗಿಲ್ಲ. ಕಸ್ಟಮ್ ಸ್ಕ್ಯಾನ್ ಮಾಡುವ ಮೂಲಕ ನೀವು ನಿಮಗೆ ಯಾವ ಡ್ರೈವ್ ಅನ್ನು ಸ್ಕ್ಯಾನ್ ಮಾಡಬೇಕು, ಯಾವುದನ್ನು ನಿರ್ಲಕ್ಷಿಸಬೇಕೆಂಬುದನ್ನು ಆಯ್ಕೆ ಮಾಡಬಹುದು. ಈ ಮೂಲಕ ನೀವು ಸಾಕಷ್ಟು ಸಮಯ ಉಳಿಸಬಹುದು.

  ಪೆನ್ ಡ್ರೈವ್ಗಳನ್ನು ಅಥವಾ ಹಾರ್ಡ್ ಡ್ರೈವ್ಗಳನ್ನು ಪರೀಕ್ಷಿಸಲು ಕಸ್ಟಮ್ ಸ್ಕ್ಯಾನ್ ಉತ್ತಮ ಆಯ್ಕೆಯಾಗಿದೆ.

  ಅಮೆಜಾನ್‌ನಲ್ಲಿ ಒನ್‌ಪ್ಲಸ್ 6 ಸ್ಮಾರ್ಟ್‌ಫೋನ್ ಖರೀದಿಸುವವರಿಗೆ ಬಂಪರ್..!

  ಕ್ವಿಕ್ ಸ್ಕ್ಯಾನ್

  ಕ್ವಿಕ್ ಸ್ಕ್ಯಾನ್ ಫುಲ್ ಸ್ಕ್ಯಾನ್ ನಂತೆಯೇ ಪೂರ್ತಿ ಸಿಸ್ಟಮ್ ಅನ್ನು ಸ್ಕ್ಯಾನ್ ಮಾಡುವ ಗುರಿ ಹೊಂದಿದೆಯಾದರೂ ಅದರಷ್ಟು ಸಮಯ ತೆಗೆದುಕೊಳ್ಳುವುದಿಲ್ಲ. ಕ್ವಿಕ್ ಸ್ಕ್ಯಾನ್ ನಲ್ಲಿ ಈ ಕೆಳಗಿನ ಫೈಲ್ಗಳನ್ನು ಸ್ಕ್ಯಾನ್ ಮಾಡಲಾಗುತ್ತದೆ.

  1. ಸಾಮನ್ಯವಾಗಿ ಸೋಂಕಿಗೊಳಗಾಗುವ ಫೈಲ್ ಮತ್ತು ಫೋಲ್ಡರ್ಗಳು

  2. ರನ್ ಆಗುತ್ತಿರುವ ಪ್ರೋಸೆಸ್ ಮತ್ತು ಥ್ರೆಡ್ ಗಳು

  3. ಸಿಸ್ಟಮ್ ಮೆಮೋರಿ( RAM)

  4. ಸ್ಟಾರ್ಟಪ್ ಫೋಲ್ಡರ್ಗಳು

  5. ರೆಜಿಸ್ಟ್ರಿ ಐಟಮ್ಗಳು

  ಈ ಪಟ್ಟಿಯನ್ನು ನೋಡಿದರೆ ಫುಲ್ ಸ್ಕ್ಯಾನ್ ನಲ್ಲಿ ಪರಿಶೀಲಿಸಲ್ಪಡುವ ಫೈಲ್ಗಳಂತೆಯೇ ಗೋಚರಿಸಿದರೂ ಕ್ವಿಕ್ ಸ್ಕ್ಯಾನ್ ನಲ್ಲಿ ಪ್ರತಿಯೊಂದು ಫೈಲ್/ಫೋಲ್ಡರ್ಗಳನ್ನು ಸ್ಕ್ಯಾನ್ ಮಾಡುವ ಬದಲು ಹೆಚ್ಚಾಗಿ ಸೋಂಕಿಗೊಳಗಾಗುವ ಫೋಲ್ಡರ್ಗಳನ್ನಷ್ಟೇ ಸ್ಕ್ಯಾನ್ ಮಾಡಲಾಗುವುದು. ಅಲ್ಲದೆ ಕಳೆದ ಸ್ಕ್ಯಾನ್ ನ ನಂತರ ಬದಲಾವಣೆಗೊಳಗಾಗಿರುವ ಫೈಲ್ಗಳನ್ನಷ್ಟೇ ಕ್ವಿಕ್ ಸ್ಕ್ಯಾನ್ ನಲ್ಲಿ ಪರಿಗಣಿಸಲಾಗುವುದು.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  Read more about:
  English summary
  Antivirus programs have the three types of scans available - Full Scan, Custom Scan, and the Quick Scan.
  Opinion Poll

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more