2016 ರಲ್ಲಿ ಐಫೋನ್ 'ಆಂಡ್ರಾಯ್ಡ್‌'ನಿಂದ ಕದ್ದ ಟಾಪ್ 5 ಫೀಚರ್‌ಗಳು ಇವು..!

2016 ರಲ್ಲಿ ಆಪಲ್ ತನ್ನ ಐಫೋನ್‌ಗೆ, ಆಂಡ್ರಾಯ್ಡ್'ನಿಂದ ಕಳ್ಳತನ ಮಾಡಿದ ಟಾಪ್ 5 ಫೀಚರ್‌ಗಳು ಯಾವುವು ಎಂದು ತಿಳಿಯಿರಿ.

By Suneel
|

ಐಫೋನ್ 7'ನಲ್ಲಿ ಆಪಲ್ ಹಲವು ಕುತೂಹಲಕಾರಿ ಫೀಚರ್‌ಗಳನ್ನು ಪರಿಚಯಿಸಿರುವುದು ನಿಮಗೆಲ್ಲಾ ಗೊತ್ತೇ ಇದೆ. ಆಂಡ್ರಾಯ್ಡ್ ಮತ್ತು ಐಓಎಸ್‌ಗಳ ನಡುವೆ ಯಾವಾಗಲು ಕಠಿಣ ಸ್ಪರ್ಧೆ ಇದ್ದದ್ದೇ. ವಿಶೇಷ ಅಂದ್ರೆ ಆಪಲ್ ಮತ್ತು ಆಂಡ್ರಾಯ್ಡ್ ಅಭಿಮಾನಿಗಳು ಇವುಗಳ ಫೀಚರ್‌ಗಳನ್ನು ವಿಭಾಗಿಸಲು 'Stole' ಎಂಬ ಪದವನ್ನು ಬಳಸುತ್ತಿರುತ್ತಾರೆ. ಅಂದ್ರೆ ಕಳ್ಳತನ ಮಾಡಿದ ಎಂದು.

2016 ರಲ್ಲಿ ಐಫೋನ್ 'ಆಂಡ್ರಾಯ್ಡ್‌'ನಿಂದ ಕದ್ದ ಟಾಪ್ 5 ಫೀಚರ್‌ಗಳು ಇವು..!

ಆಪಲ್‌ ತನ್ನ ಐಓಎಸ್ 10 ನಲ್ಲಿ ಮತ್ತು ನವೀನತೆಯಲ್ಲಿ ಹಲವು ಹೊಸ ಅಪ್‌ಡೇಟ್‌ಗಳನ್ನು ನೀಡಿರಬಹುದು. ಆದರೆ ಆಪಲ್‌ ಈ ಹಲವು ಫೀಚರ್‌ಗಳನ್ನು ಆಂಡ್ರಾಯ್ಡ್'ನಿಂದ ಸಾಲ ಪಡೆದು (ಅಥವಾ ಕಳ್ಳತನ ಮಾಡಿದ್ದು ಎಂದು ಹೇಳಬಹುದು) ಮರು ಆವಿಷ್ಕಾರ ಮಾಡಿ ಆಪಲ್‌ ಟಚ್ ನೀಡಿ ಪರಿಚಯಿಸಿದೆ.

'ಮೊಟೊ ಎಂ' ಸ್ಮಾರ್ಟ್‌ಫೋನ್‌ ಮಂಗಳವಾರ ಭಾರತದಲ್ಲಿ ಲಾಂಚ್‌: ವಿಶೇಷತೆಗಳೇನು?

ನೀವು ಆಂಡ್ರಾಯ್ಡ್ ಮತ್ತು ಐಓಎಸ್ ಬಳಕೆದಾರರಾಗಿದ್ದಲ್ಲಿ, ಆಪಲ್, ಆಂಡ್ರಾಯ್ಡ್‌ನಿಂದ ಕದ್ದು ಪಾರ್ಟಿ ಮಾಡಿದ ಆ ಫೀಚರ್‌ಗಳು ಯಾವುವು ಎಂದು ಇಲ್ಲೊಮ್ಮೆ ನೋಡಿರಿ.

 ಐಫೋನ್ 7 ಪ್ಲಸ್‌'ನಲ್ಲಿ ಡ್ಯುಯಲ್ ಕ್ಯಾಮೆರಾ ಸೆಟಪ್

ಐಫೋನ್ 7 ಪ್ಲಸ್‌'ನಲ್ಲಿ ಡ್ಯುಯಲ್ ಕ್ಯಾಮೆರಾ ಸೆಟಪ್

ಆಪಲ್ 2 12MP ಕ್ಯಾಮೆರಾ ಸೆನ್ಸಾರ್‌ಗಳನ್ನು ಐಫೋನ್ 7 ಪ್ಲಸ್‌ನಲ್ಲಿ ಬಳಸುತ್ತಿದೆ. ಇದರಲ್ಲಿ ಒಂದು ಟೆಲಿಪೋಟೋ ಫೋಟೋಗ್ರಫಿಗಾಗಿ ಮತ್ತು ಇನ್ನೊಂದು ಸ್ಟ್ಯಾಂಡರ್ಡ್‌ ಫೋಟೋಗ್ರಫಿಗಾಗಿ. ಆದರೆ ಡ್ಯುಯಲ್ ಕ್ಯಾಮೆರಾ ಸೆಟಪ್ ಆರಂಭವಾಗಿದ್ದು ಎಚ್‌ಟಿಸಿ(HTC) ಇಂದ. ಎಚ್‌ಟಿಸಿ ಅಲ್ಟ್ರಾಪಿಕ್ಸೆಲ್ ಹಿಂಭಾಗ ಡ್ಯುಯಲ್‌ ಕ್ಯಾಮೆರಾ ಸೆಟಪ್‌ ಅನ್ನು ಎಚ್‌ಟಿಸಿ ಒನ್ ಎಂ8, ಎಚ್‌ಟಿಸಿ, ಎಲ್‌ಜಿ ಜಿ5 ಸ್ಮಾರ್ಟ್‌ಫೋನ್‌ಗಳಲ್ಲಿ ನೀಡಲಾಯಿತು. ನಂತರ ಈಗ ಆಪಲ್ ಬಳಸುತ್ತಿದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 ನೀರು ನಿರೋಧಕ(Water Resistant)

ನೀರು ನಿರೋಧಕ(Water Resistant)

ಹಲವರಿಗೆ ತಿಳಿದಿರುವಂತೆ ಸೋನಿ ಹಲವು ನೀರು ನಿರೋಧಕ ಡಿವೈಸ್‌ಗಳನ್ನು ಕೆಲವು ವರ್ಷಗಳ ಹಿಂದೆಯೇ ಬಿಡುಗಡೆ ಮಾಡಿದೆ. ಇತ್ತೀಚೆಗೆ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್‌7, ಎಸ್‌7 ಎಡ್ಜ್‌, ಗ್ಯಾಲಕ್ಸಿ ನೋಟ್ 7 ಡಿವೈಸ್‌ಗಳು ಸಹ ನೀರು ನಿರೋಧಕ ಡಿವೈಸ್‌ಗಳಾಗಿವೆ. ಈ ಡಿವೈಸ್‌ಗಳು ಐಫೋನ್ 7 ಬಿಡುಗಡೆಗೂ ಮುನ್ನ ಬಂದಿವೆ. ನೋಟ್ 7, ಐಫೋನ್ 7 ಅನ್ನು ನೀರು ನಿರೋಧಕ ಫೀಚರ್‌ನಲ್ಲಿ ಹಿಂಧಿಕ್ಕೂತ್ತದೆ. ಕಾರಣ ಐಫೋನ್ 7 ಧೂಳು ಮತ್ತು ನೀರು ನಿರೋಧಕ ರೇಟಿಂಗ್ ಐಪಿ67 ಹೊಂದಿದ್ದು, ನೋಟ್ 7 ಐಪಿ68 ರೇಟಿಂಗ್ ಪಡೆದಿದೆ.

ತಂತಿ ರಹಿತ ಇಯರ್‌ಪೋನ್ಸ್ (Cordless Earphones)

ತಂತಿ ರಹಿತ ಇಯರ್‌ಪೋನ್ಸ್ (Cordless Earphones)

ಆಪಲ್ 3.5mm ಹೆಡ್‌ಫೋನ್‌ ಜಾಕ್‌ ಅನ್ನು ಪರಿಚಯಿಸಿದೆ ಮತ್ತು ತಂತಿರಹಿತ ಸ್ಪೀಕರ್ ಅನ್ನು ನೀಡಿದೆ. ಸ್ಯಾಮ್‌ಸಂಗ್'ನ ಗಿಯರ್ ಐಕಾನ್ಎಕ್ಸ್ ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಆಪಲ್‌ನ ಏರ್‌ಪೋಡ್ ರೀತಿಯಲ್ಲೇ ವರ್ಕ್‌ ಆಗುತ್ತದೆ. ಈ ಎರಡು ಡಿವೈಸ್‌ಗಳು ಸಹ ವೈರ್‌ಲೆಸ್‌ ಆಗಿ ಚಾರ್ಜ್‌ ಆಗುತ್ತವೆ.

 3.5mm ಹೆಡ್‌ಫೋನ್‌ ಜಾಕ್‌

3.5mm ಹೆಡ್‌ಫೋನ್‌ ಜಾಕ್‌

ಆಪಲ್ ಬಹುಶಃ 3.5mm ಆಡಿಯೋ ಜಾಕ್‌ ಅನ್ನು ಸ್ಮಾರ್ಟ್‌ಫೋನ್‌ನಿಂದ ರಿಮೂವ್ ಮಾಡಬಹುದು. ಆದರೆ ಲಿಕೋ ಲೀ 2 ಮತ್ತು ಮ್ಯಾಕ್ಸ್ 2 ಹೊಸ ಆಡಿಯೋ ಸ್ಟ್ಯಾಂಡರ್ಡ್ ಜಾಕ್‌ ಹೊಂದಿವೆ. ಇವುಗಳು ಡಿಜಿಟಲ್ ಲಾಸ್‌ಲೆಸ್ ಆಡಿಯೋವನ್ನು ಯುಎಸ್‌ಬಿ ಟೈಪ್‌ ಸಿ ಪೋರ್ಟ್‌ ಮೂಲಕ ಡೆಲಿವರಿ ಮಾಡುತ್ತದೆ.

ಕ್ವಾಡ್ ಕೋರ್ ಚಿಪ್‌ಸೆಟ್

ಕ್ವಾಡ್ ಕೋರ್ ಚಿಪ್‌ಸೆಟ್

ಆಫಲ್ ಎ10 ಫ್ಯೂಶನ್ ಶಾಕ್ ಪರಿಚಯಿಸಿದೆ. ಕಂಪನಿ ಪ್ರಕಾರ ಆಪಲ್ ಮೊಟ್ಟ ಮೊದಲು ಕ್ವಾಡ್‌ ಕೋರ್ ಪ್ರೊಸೆಸರ್ ಅನ್ನು ಐಫೋನ್‌ನಲ್ಲಿ ಪರಿಚಯಿಸಿದೆ ಎಂದು ಹೇಳಿದೆ. ಕ್ವಾಡ್ ಕೋರ್ ವಿನ್ಯಾಸ ಅವರ ದೊಡ್ಡ ಸಾಧನೆ. ಆದರೆ ದುಃಖದ ವಿಷಯ ಅಂದ್ರೆ ಆಂಡ್ರಾಯ್ಡ್ ಕ್ವಾಡ್ ಕೋರ್ ಪ್ರೊಸೆಸರ್ ಅನ್ನು 2011 ರಿಂದಲೇ ಹೊಂದಿದೆ. ಎಚ್‌ಟಿಸಿ ಎಡ್ಜ್ ಮೊಟ್ಟ ಮೊದಲು ಕ್ವಾಡ್‌ ಕೋರ್ ಪ್ರೊಸೆಸರ್ ಡಿವೈಸ್‌ ಅನ್ನು ಲಾಂಚ್ ಮಾಡಿತ್ತು.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

Read more about:
English summary
5 Best Features That iPhone ‘Stole’ From Android This Year!. To know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X