ಜಿಯೋ ಸಿಮ್‌ನಲ್ಲಿ 'ನೊ ಸಿಗ್ನಲ್ ಸಮಸ್ಯೆ' ಪರಿಹಾರವೇನು?

ಜಿಯೋ ನೆಟ್‌ವರ್ಕ್‌ನ ಸೊ ಸಿಗ್ನಲ್ ಸಮಸ್ಯೆಗೆ ಇಂದಿನ ಲೇಖನದಲ್ಲಿ ನಾವು ಪರಿಹಾರಗಳನ್ನು ನೀಡುತ್ತಿದ್ದು ಇದು ಸೂಪರ್ ಟ್ರಿಕ್ಸ್ ಎಂದೆನಿಸಿದ್ದು ಅತಿ ಸರಳವಾಗಿ ನೀವಿದನ್ನು ಅನುಸರಿಸಬಹುದಾಗಿದೆ.

By Shwetha
|

ದೇಶದಲ್ಲಿ ಹೊಸ ಯೋಜನೆಗಳನ್ನು ಆರಂಭಿಸುವ ಮೂಲಕ ಜಿಯೋ ಪ್ರತಿಯೊಬ್ಬ ಬಳಕೆದಾರರ ಪಾಲಿಗೆ ಬಂಪರ್ ಕೊಡುಗೆ ಎಂದೆನಿಸಿದೆ. ಈವರೆಗೆ ಯಾವುದೇ ಟೆಲಿಕಾಮ್ ಕಂಪೆನಿಗಳು ಒದಗಿಸದೇ ಇರುವ ಆಫರ್‌ಗಳನ್ನು ಬಳಕೆದಾರರಿಗೆ ನೀಡುವ ಮೂಲಕ ಜಿಯೋ ಜೀವದಾನ ಎಂದೆನಿಸಿದೆ.

ಓದಿರಿ: ಎಚ್ಚರ: ರಿಲಾಯನ್ಸ್ ಜಿಯೋ ಮೇಲೆ ತೂಗುತ್ತಿದೆ ಅಪಾಯದ ತೂಗುಗತ್ತಿ!!!

ಅದಾಗ್ಯೂ ಹೆಚ್ಚಿನ ಬಳಕೆದಾರರು ಒಂದಿಲ್ಲೊಂದು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂಬುದು ನಮ್ಮ ಗಮನಕ್ಕೆ ಬಂದಿದ್ದು ಸಾಧ್ಯವಾದಷ್ಟು ಅದಕ್ಕೆ ಪರಿಹಾರಗಳನ್ನು ತೋಚಿದ ರೀತಿಯಲ್ಲಿ ನೀಡುತ್ತಿದ್ದೇವೆ. ಇಂದಿಲ್ಲಿ ಜಿಯೋ ನೆಟ್‌ವರ್ಕ್ ಸಮಸ್ಯೆಗೆ ಪರಿಹಾರವೇನು ಎಂಬುದನ್ನು ನಾವು ಕಂಡುಕೊಳ್ಳಲಿದ್ದೇವೆ.

ಓದಿರಿ: ಎಲ್‌ಟಿಇ ನೆಟ್‌ವರ್ಕ್ ಲಾಕ್ ಮಾಡಿ ಜಿಯೋ 4ಜಿ ಸ್ಪೀಡ್ ವರ್ಧಿಸಿ

ಮೊದಲಿಗೆ ಟೆಲಿ ವೆರಿಫಿಕೇಶನ್ ಮಾಡಿ

ಮೊದಲಿಗೆ ಟೆಲಿ ವೆರಿಫಿಕೇಶನ್ ಮಾಡಿ

ಇದು ಪ್ರಥಮ ಹಂತವಾಗಿದೆ. ನಿಮ್ಮ ಟೆಲಿ ವರಿಫಿಕೇಶನ್ ನಡೆಸಲಾಗಿದೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ. ಆಗಿಲ್ಲದೇ ಇದ್ದರೆ, 1800-8901-977 ಗೆ ಪರ್ಯಾಯ ಸಂಖ್ಯೆಯಿಂದ ಕರೆ ಮಾಡಿ ಮತ್ತು ಭಾಷೆಯನ್ನು ಆಯ್ಕೆಮಾಡಿ. ನಿಮ್ಮ ಜಿಯೋ ಸಂಖ್ಯೆಯನ್ನು ನಮೂದಿಸಿ ಹಾಗೂ ಸ್ಟೇಟಸ್ ಪರಿಶೀಲಿಸಿ. ಟೆಲಿ ವೆರಿಫಿಕೇಶನ್ ನಂತರವಷ್ಟೇ, ನಿಮ್ಮ ಫೋನ್‌ನಲ್ಲಿ ಸಿಗ್ನಲ್ ಬಾರ್‌ಗಳನ್ನು ನೀವು ಕಂಡುಕೊಳ್ಳುತ್ತೀರಿ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನಿಮ್ಮ ಫೋನ್ ರಿಸ್ಟಾರ್ಟ್ ಮಾಡಿ

ನಿಮ್ಮ ಫೋನ್ ರಿಸ್ಟಾರ್ಟ್ ಮಾಡಿ

ಸಿಗ್ನಲ್ ಬಾರ್ ಸಮಸ್ಯೆಗಳಿಗೆ ನೀವು ಅನುಸರಿಸಬಹುದಾದ ಪರಿಹಾರ ವಿಧಾನಗಳಲ್ಲಿ ಇದೂ ಕೂಡ ಒಂದು. ಸಿಮ್ ಸ್ಲಾಟ್‌ಗೆ ಜಿಯೋ ಸಿಮ್ ಅನ್ನು ಅಳವಡಿಸಿದ ನಂತರ ಫೋನ್ ಅನ್ನು ರಿಸ್ಟಾರ್ಟ್ ಮಾಡಲು ಆರಂಭಿಸಿ. ಇದು ನಿಜಕ್ಕೂ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಹೆಚ್ಚಿನ ಸಂದರ್ಭಗಳಲ್ಲಿ ಸಿಗ್ನಲ್ ಬಾರ್‌ಗಳನ್ನು ನೀವು ಕಂಡುಕೊಳ್ಳುತ್ತೀರಿ.

ಜಿಯೋ ಸಿಮ್ ಅನ್ನು ಸರಿಯಾದ ಸ್ಲಾಟ್‌ಗೆ ಅಳವಡಿಸಿ

ಜಿಯೋ ಸಿಮ್ ಅನ್ನು ಸರಿಯಾದ ಸ್ಲಾಟ್‌ಗೆ ಅಳವಡಿಸಿ

ಬಳಕೆದಾರರು ಮಾಡುವ ಸಾಮಾನ್ಯ ತಪ್ಪು ಇದಾಗಿದೆ. ನೀವು ಡ್ಯುಯಲ್ ಸಿಮ್ ಫೋನ್ ಅನ್ನು ಬಳಸುತ್ತಿದ್ದೀರಿ ಎಂದಾದಲ್ಲಿ, ಪ್ರಥಮ ಸ್ಲಾಟ್‌ಗೆ ಜಿಯೋ 4ಜಿ ಸಿಮ್ ಅನ್ನು ಇನ್‌ಸರ್ಟ್ ಮಾಡಿ. ಇದು ಎಲ್‌ಟಿಇ ಸಕ್ರಿಯಗೊಂಡಿರುತ್ತದೆ. ಇದು ಸಮಸ್ಯಯೆನ್ನು ತ್ವರಿತವಾಗಿ ಪರಿಹರಿಸುತ್ತದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನೆಟ್‌ವರ್ಕ್ ಸೆಟ್ಟಿಂಗ್‌ಗಳನ್ನು ಪರಿಶೀಲಿಸಿ

ನೆಟ್‌ವರ್ಕ್ ಸೆಟ್ಟಿಂಗ್‌ಗಳನ್ನು ಪರಿಶೀಲಿಸಿ

ನೀವು ಆಂಡ್ರಾಯ್ಡ್ ಡಿವೈಸ್ ಅನ್ನು ಬಳಸುತ್ತಿದ್ದೀರಿ ಎಂದಾದಲ್ಲಿ, ನೆಟ್‌ವರ್ಕ್ ಸೆಟ್ಟಿಂಗ್‌ಗಳಲ್ಲಿ ನೀವು ಸಣ್ಣ ಬದಲಾವಣೆಯನ್ನು ಮಾಡಬೇಕಾಗುತ್ತದೆ. ಕೋಡ್ *#*#4636#*#* ಅನ್ನು ಎಂಟರ್ ಮಾಡಿ. ನಿಮ್ಮನ್ನು ಇದು ಫೋನ್ ಮಾಹಿತಿಗೆ ಕರೆದೊಯ್ಯುತ್ತದೆ ಹಾಗೂ ಇಲ್ಲಿ ನೀವು 'ರನ್ ಪಿಂಗ್ ಟೆಸ್ಟ್' ಆಪ್ಶನ್ ಮೇಲೆ ಸ್ಪರ್ಶಿಸಿ. ರೇಡಿಯೊ ಆಪ್ಶನ್ ಆನ್ ಆಗುತ್ತದೆ ಮತ್ತು ಡಿವೈಸ್ ಅನ್ನು ರಿಬೂಟ್ ಮಾಡಿ. ನಿಮ್ಮ ನೆಟ್‌ವರ್ಕ್ ಹಿಂತಿರುಗಿದೆ ಇಲ್ಲವೇ ಎಂಬುದನ್ನು ಹೀಗೆ ಕಂಡುಕೊಳ್ಳಿ.

ಐಫೋನ್ ಬಳಕೆದಾರರಿಗೆ ಈ ಟ್ರಿಕ್ಸ್

ಐಫೋನ್ ಬಳಕೆದಾರರಿಗೆ ಈ ಟ್ರಿಕ್ಸ್

ಸೆಟ್ಟಿಂಗ್ಸ್‌ಗೆ ಹೋಗಿ > ಸೆಲ್ಯುಲರ್ ಆಪ್ಶನ್ ಇಲ್ಲಿ ಸೆಲ್ಯುಲಾರ್ ಡೇಟಾ ಆನ್ ಆಗಿದೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ. ಸಿಗ್ನಲ್ ಬಾರ್ ತೋರುತ್ತಿಲ್ಲ ಎಂದಾದಲ್ಲಿ, ನೆಟ್‌ವರ್ಕ್ ಸೆಟ್ಟಿಂಗ್ಸ್ ರಿಸ್ಟೋರ್ ಮಾಡಿ. ಸೆಟ್ಟಿಂಗ್ಸ್‌ನಿಂದ ನೀವು ಎಲ್‌ಟಿಇ ನೆಟ್‌ವರ್ಕ್‌ನಲ್ಲಿದ್ದೀರಿ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ ಮತ್ತು ಸೆಟ್ಟಿಂಗ್ಸ್‌ನಲ್ಲಿ ಜಿಯೋ ಸೆಕ್ಯುರಿಟಿ ಸರ್ವೀಸ್ ಅನ್ನು ಆನ್ ಮಾಡಿ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
In this article we are giving you some tremendous tips on how to find a solution to the jio 4g sim no network signal problem how to solve.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X