ಯುಸಿ ಬ್ರೌಸರ್: ಕ್ರಿಕೆಟ್ ಫೀವರ್‌ಗಾಗಿ ಹೇಳಿಮಾಡಿಸಿದ ಅಪ್ಲಿಕೇಶನ್
ಕ್ರಿಕೆಟ್ ಸೀಸನ್ ಮರಳಿದೆ! 4 ಟೆಸ್ಟ್ ಮ್ಯಾಚ್‌ಗಳು, 5 ಒನ್ ಡೇ ಇಂಟರ್ನ್ಯಾಶನಲ್‌ಗಳು ಮತ್ತು 3 T20 ಗಳನ್ನು ದೇಶವು ದಕ್ಷಿಣ ಆಫ್ರಿಕಾದೊಂದಿಗೆ ಎದುರಿಸಬೇಕಾಗಿದೆ. ಉಸಿರು ಬಿಗಿ ಹಿಡಿದು ಕಾಯುವ ಪರಿಸ್ಥಿತಿ ಭಾರತೀಯರ ಕ್ರಿಕೆಟ್ ಅಭಿಮಾನಿಗಳಿಗೆ ಉಂಟುಮಾಡಿದೆ. ನಿಮ್ಮ ಕ್ರಿಕೆಟ್ ಮ್ಯಾಚ್‌ಗಳನ್ನು ಮಿಸ್ ಮಾಡದೇ ಇರುವವರಲ್ಲಿ ಒಬ್ಬರು ನೀವು ಎಂದಾದಲ್ಲಿ ಕ್ರಿಕೆಟ್ ಜಗತ್ತಿನ ಕ್ಷಣ ಕ್ಷಣದ ಮಾಹಿತಿಯನ್ನು ನಾವು ನಿಮಗೆ ನೀಡಲಿದ್ದೇವೆ.
ಭಾರತದ ಹೆಚ್ಚು ಜನಪ್ರಿಯ ಮೊಬೈಲ್ ಬ್ರೌಸರ್ ಯುಸಿ ಬ್ರೌಸರ್ ಯುಸಿ ಕ್ರಿಕೆಟ್ ಅನ್ನು ಅಪ್‌ಡೇಟ್ ಮಾಡಿದೆ. ಸಂಪೂರ್ಣ ಕ್ರಿಕೆಟ್ ಸೇವೆ ಇದಾಗಿದ್ದು ತನ್ನ ಇಂಟರ್ಫೇಸ್ ಮತ್ತು ಆಕರ್ಷಕ ವಿನ್ಯಾಸದ ಮೂಲಕ ಯುವಕರಿಗೆ ಇದು ಟಾಪ್ ಫೇವರೇಟ್ ಎಂದೆನಿಸಿದೆ. ಯುಸಿ ಕ್ರಿಕೆಟ್ ಮೂಲಕ ನಿಮ್ಮ ಕ್ರಿಕೆಟ್ ಅನ್ನು ವೀಕ್ಷಿಸುವುದು ಮನರಂಜಕ ಏಕೆ ಎಂಬುದನ್ನು ಇಂದಿನ ಲೇಖನದಲ್ಲಿ ನಾವು ನಿಮಗೆ ತಿಳಿಸಲಿರುವೆವು.

ಬ್ರ್ಯಾಂಡ್ ಅಂಬಾಸಿಡರ್
ಯುಸಿ ಬ್ರೌಸರ್ ಅಂಬಾಸಿಡರ್ ಆಗಿ ಯುವರಾಜ್ ಸಿಂಗ್ ಮಿಂಚಿದ್ದಾರೆ. ಯುಸಿ ಕ್ರಿಕೆಟ್‌ನ ನಿಯಮಿತ ಬಳಕೆದಾರರಾಗಿರುವ ಯುವರಾಜ್ ಸಾಮಾಜಿಕ ಮಾಧ್ಯಮಗಳಲ್ಲಿ ಸಲಹೆಗಳನ್ನು ನೀಡುತ್ತಿರುತ್ತಾರೆ.

ಕ್ರಿಕೆಟ್ ಅಪ್ಲಿಕೇಶನ್
ಲೈವ್ ಸ್ಕೋರ್ಸ್, ಪ್ರಿವ್ಯೂಗಳು, ಮುಂಬರಲಿರುವ ಪಂದ್ಯಗಳು, ಕಮೆಂಟ್ರಿಗಳು, ಸಂದರ್ಶನಗಳು ಹೀಗೆ ಕ್ರಿಕೆಟ್ ಕುರಿತಾದ ಸಂಪೂರ್ಣ ಮಾಹಿತಿಯನ್ನು ನೀಡುತ್ತದೆ ಮತ್ತು ಬಳಕೆದಾರರು ಇದನ್ನು ಆರಾಮವಾಗಿ ಬಳಸಬಹುದಾಗಿದೆ.

ಮ್ಯಾಚ್ ರಿಮೈಂಡರ್ ಮತ್ತು ಅಧಿಸೂಚನೆಗಳು
ಕ್ರಿಕೆಟ್ ಪಂದ್ಯವನ್ನು ಮಿಸ್ ಮಾಡದೇ ನೋಡಬೇಕೆಂಬ ಹೆಚ್ಚು ತುಮುಲ ನಿಮ್ಮಲ್ಲಿ ಇದೆ ಎಂದಾದಲ್ಲಿ ಯುಸಿ ಬ್ರೌಸರ್ ನಿಮಗೆ ಸಾಥ್ ನೀಡುತ್ತದೆ. ಹಿನ್ನಲೆಯಲ್ಲಿ ಅಧಿಸೂಚನೆ ಫೀಚರ್ ಚಾಲನೆಯಾಗುತ್ತಿದ್ದು ಸ್ಕೋರ್ ಮತ್ತು ಫಲಿತಾಂಶಗಳನ್ನು ಕುರಿತು ಇದು ಅಪ್‌ಡೇಟ್ ಮಾಡುತ್ತಿರುತ್ತದೆ.

ಸಂವಹನಗಳು
ಕ್ರಿಕೆಟ್ ಥೀಮ್ ಉಳ್ಳ ಎಮೋಟಿಕಾನ್‌ಗಳ ಮೂಲಕ ಜಗತ್ತಿನಾದ್ಯಂತ ಪರಸ್ಪರ ಸಂವಹನವನ್ನು ಮಾಡಿಕೊಳ್ಳಬಹುದಾಗಿದೆ.

ಬಹುಮಾನಗಳನ್ನು ಗೆಲ್ಲಿ
ಕ್ರಿಕೆಟ್ ಗೆಸ್ಸಿಂಗ್ ಗೇಮ್ ಮೂಲಕ ಬಳಕೆದಾರರು ಪಾಯಿಂಟ್‌ಗಳನ್ನು ಗಳಿಸಬಹುದು ಮತ್ತು ಆಕರ್ಷಕ ಬಹುಮಾನಗಳನ್ನು ಗಳಿಸುವ ಅವಕಾಶ ಕೂಡ ಇಲ್ಲಿದೆ.


Click it and Unblock the Notifications








