Subscribe to Gizbot

ವಾಟ್ಸಾಪ್ ಬಳಕೆದಾರರು ತಪ್ಪದೇ ಓದಿಕೊಳ್ಳಬೇಕಾದ 5 ವಂಚನೆಗಳು

Written By:

ಫೇಸ್‌ಬುಕ್‌, ಟ್ವಿಟರ್, ವಾಟ್ಸಾಪ್, ಇನ್‌ಸ್ಟಗ್ರಾಂ ಅಥವಾ ಇತರೆ ಯಾವುದೇ ಸಾಮಾಜಿಕ ಜಾಲತಾಣಗಳಾದರು ಸಹ ಅನುಕೂಲ, ಅನಾನುಕೂಲಗಳು ಎರಡು ಸಹ ಇದ್ದೇ ಇರುತ್ತವೆ.

ಪ್ರಸ್ತುತದಲ್ಲಿ ವಾಟ್ಸಾಪ್ ಎಲ್ಲರ ಅಚ್ಚುಮೆಚ್ಚಿನ ಬೆಸ್ಟ್‌ ಫ್ರೆಂಡ್. ಆದ್ರೆ ಸ್ವಲ್ಪ ಹುಷಾರ್‌, ಇದರಲ್ಲೂ ಸಹ ಟ್ರ್ಯಾಪ್ ಮಾಡಲಾಗುತ್ತದೆ. ಇಂತಹ ವಂಚನೆಗಳ ಬಗ್ಗೆ ಎಚ್ಚರವಿರಬೇಕು. ಅಂದಹಾಗೆ ವಾಟ್ಸಾಪ್‌ ಸಾಮಾಜಿಕ ತಾಣಗಳ ಹಲವು ಸ್ಕ್ಯಾಮ್‌ಗಳ ಬಗ್ಗೆ ಪರಿಚಯಿಸಿದೆ.

ವಾಟ್ಸಾಪ್ ಲೇಟೆಸ್ಟ್ ವರ್ಸನ್ ಡೌನ್‌ಲೋಡ್‌ ಮಾಡಿ ವೀಡಿಯೊ ಕರೆ ಫೀಚರ್ ಪಡೆಯುವುದು ಹೇಗೆ?

ನೀವು ಹೆಚ್ಚು ವಾಟ್ಸಾಪ್‌(WhatsApp) ಬಳಕೆದಾರರೇ ಆಗಿದ್ದಲ್ಲಿ, ವಾಟ್ಸಾಪ್‌ ಎಚ್ಚರದಿಂದಿರಲು ತಿಳಿಸಿರುವ ಈ 5 ವಂಚನೆಗಳ ಬಗ್ಗೆ ತಪ್ಪದೇ ಓದಿಕೊಳ್ಳಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ವೋಚರ್‌ ಬಳಸಿ 100 ರೂ ಪಡೆಯಿರಿ

ವೋಚರ್‌ ಬಳಸಿ 100 ರೂ ಪಡೆಯಿರಿ

ವಾಟ್ಸಾಪ್‌ನಲ್ಲಿ ಬಹುಸಂಖ್ಯಾತರು "Get Rs. 100 Off Using This Voucher! Click on the Link " ಎಂಬ ಮೆಸೇಜ್‌ ಅನ್ನು ಸ್ವೀಕರಿಸಿರಬಹುದು. ಇಂತಹ ಮೆಸೇಜ್‌ಗಳ ಬಗ್ಗೆ ಎಚ್ಚರದಿಂದಿರಿ.

ನಿಮ್ಮ ಸ್ನೇಹಿತರೇ ಫಾರ್ವರ್ಡ್‌ ಮಾಡಿದ ಈ ಮೆಸೇಜ್‌ ಮೇಲೆ ಕ್ಲಿಕ್‌ ಮಾಡಿದಲ್ಲಿ ನಿಮ್ಮ ವೈಯಕ್ತಿಕ ಮಾಹಿತಿಗಳನ್ನು ಕೇಳಲಾಗುತ್ತದೆ. ಇಂತಹ ಮೆಸೇಜ್‌ ಗಳನ್ನು ಕ್ಲಿಕ್ ಮಾಡದಿರಿ.

ವಾಟ್ಸಾಪ್‌ ಎಂಡಿಂಗ್ ಮತ್ತು ನಿಮ್ಮ ಖಾತೆ ಮುಕ್ತಾಯ

ವಾಟ್ಸಾಪ್‌ ಎಂಡಿಂಗ್ ಮತ್ತು ನಿಮ್ಮ ಖಾತೆ ಮುಕ್ತಾಯ

"WhatsApp is Ending" ಎಂಬ ಮೆಸೇಜ್‌ ಒಂದು ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿದೆ. ವಾಟ್ಸಾಪ್‌ ಅಧಿಕೃತವಾಗಿ ಹೇಳದ ಯಾವುದೇ ಮೆಸೇಜ್‌ ಅನ್ನು ನಂಬದಿರಿ. ಇಂತಹ ಮೆಸೇಜ್‌ ವರ್ಷಗಳಿಂದಲೂ ಸಾಮಾಜಿಕ ತಾಣ ವೇದಿಕೆಗಳಲ್ಲಿ ಹರಿದಾಡುತ್ತಿದೆ.

 ಅಪ್‌ಡೇಟ್ ವಾಟ್ಸಾಪ್‌ ಗೋಲ್ಡ್ ವರ್ಸನ್ ವಂಚನೆ

ಅಪ್‌ಡೇಟ್ ವಾಟ್ಸಾಪ್‌ ಗೋಲ್ಡ್ ವರ್ಸನ್ ವಂಚನೆ

ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಹಲವು ವಂಚನೆಯ ಆಪ್‌ಗಳು ಇವೆ. ಅವುಗಳಲ್ಲಿ ವಾಟ್ಸಾಪ್‌ ಗೋಲ್ಡ್‌ ವರ್ಸನ್‌ ಸಹ ಒಂದು. ಅಂದಹಾಗೆ ಕೆಲವು ಮೋಸಗಾರರು ಇತ್ತೀಚೆಗೆ ವಾಟ್ಸಾಪ್‌ ಸೇರಿದಂತೆ ಹಲವು ಸಾಮಾಜಿಕ ತಾಣಗಳಲ್ಲಿ ವಾಟ್ಸಾಪ್‌ ಗೋಲ್ಡ್‌ ವರ್ಸನ್ ಇನ್‌ಸ್ಟಾಲ್‌ಗೆ ಪ್ರೇರೇಪಿಸುವ ಮೆಸೇಜ್‌ ಅನ್ನು ಹರಿಯಬಿಟ್ಟಿದ್ದಾರೆ. ಇದು ಆಪ್‌ನ ಲಿಂಕ್‌ ಅನ್ನು ಸಹ ಹೊಂದಿದೆ. ಆದರೆ ಈ ಆಪ್‌ ವಂಚನೆ ಮಾಡುವ ಆಪ್‌ ಆಗಿದ್ದು, ಇನ್‌ಸ್ಟಾಲ್‌ ಮಾಡದಿರಿ.

ವಾಟ್ಸಾಪ್‌ ಕಂಪನಿ ಕೇವಲ ಒಂದು ಅಧಿಕೃತ ವರ್ಸನ್‌ ಆಪ್‌ ಹೊಂದಿದೆ ಎಂಬುದನ್ನು ಮರೆಯದಿರಿ.

ವಾಟ್ಸಾಪ್ ಸ್ಪೈ ಆಪ್‌ಗಳು ಫೇಕ್‌

ವಾಟ್ಸಾಪ್ ಸ್ಪೈ ಆಪ್‌ಗಳು ಫೇಕ್‌

ಹಲವು ಆಪ್‌ಗಳು ನಿಮ್ಮ ವಾಟ್ಸಾಪ್ ಗೆಳೆಯರ ಬಗ್ಗೆ ಗೂಢಚರ್ಯೆ ನಡೆಸುವ ಭರವಸೆ ನೀಡುತ್ತಿವೆ. ಆದರೆ ಅವುಗಳು ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿನ ಡಾಟಾವನ್ನು ಮಾಲ್‌ವೇರ್‌ಗಳ ಮುಖಾಂತರ ಕದಿಯುತ್ತವೆ.

ವಾಟ್ಸಾಪ್‌ ಅಧಿಕೃತ ಆಪ್‌ನಿಂದ ಯಾವುದೇ ಗೂಢಚರ್ಯೆ ನಡೆಸಲು ಆಗುವುದಿಲ್ಲ. ಥರ್ಡ್‌ ಪಾರ್ಟಿ ಆಪ್‌ಗಳ ಡೌನ್‌ಲೋಡ್‌ನಿಂದ, ಫೋನ್‌ಗೆ ಹೆಚ್ಚು ಹಾನಿಕರ.

ವಾಟ್ಸಾಪ್ ಅಲ್ಟ್ರಾ ಲೈಟ್ ವೈಫೈ

ವಾಟ್ಸಾಪ್ ಅಲ್ಟ್ರಾ ಲೈಟ್ ವೈಫೈ

'ವಾಟ್ಸಾಪ್ ಅಲ್ಟ್ರಾ ಲೈಟ್ ವೈಫೈ' ಲಭ್ಯ ಎಂಬ ಮೆಸೇಜ್‌ ಒಂದು ಎಲ್ಲಾ ವಾಟ್ಸಾಪ್ ಬಳಕೆದಾರರಿಗೂ ತಲುಪುತ್ತಿದೆ. ಇದು ಡಾಟಾ ಕಾಸ್ಟ್‌ ಅನ್ನು ಕಡಿಮೆ ಮಾಡುತ್ತದೆ ಮತ್ತು ಸಂಪೂರ್ಣವಾಗಿ ಉಚಿತ ಎಂದು ಹೇಳಲಾಗುತ್ತಿದೆ. ವಾಸ್ತವವಾಗಿ ಈ ಆಪ್‌ ಸಂಪೂರ್ಣ ವಂಚನೆಯದಾಗಿದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

English summary
5 Scams That Every WhatsApp User Should Be Aware Of. To know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot