ಹೊಸ ಆಪ್‌ ಡೌನ್‌ಲೋಡ್‌ ಮಾಡುವ ಮುನ್ನ ಎಚ್ಚರ..ಎಚ್ಚರ..ಎಚ್ಚರ!

|

ಅಕ್ಟೋಬರ್ ಅನ್ನು ಜಾಗತಿಕವಾಗಿ ರಾಷ್ಟ್ರೀಯ ಸೈಬರ್ ಭದ್ರತಾ ಜಾಗೃತಿ ತಿಂಗಳು (NCSAM) ಎಂದು ಆಚರಿಸಲಾಗುತ್ತದೆ. ಈ ನಿಟ್ಟಿನಲ್ಲಿ ಕಂಪ್ಯೂಟರ್ ಭದ್ರತಾ ಘಟನೆಗಳಿಗೆ ಪ್ರತಿಕ್ರಿಯಿಸುವ ರಾಷ್ಟ್ರೀಯ ನೋಡಲ್ ಸಂಸ್ಥೆ ಸೆರ್ಟ್-ಇನ್ (Computer Response Emergency Team) ದೇಶಾದ್ಯಂತ ಸೈಬರ್ ಭದ್ರತಾ ಜಾಗೃತಿ ಅಭಿಯಾನಗಳನ್ನು ನಡೆಸುತ್ತಿದೆ.

ಆಂಡ್ರಾಯ್ಡ್‌

ಈ ಏಜೆನ್ಸಿಯು ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ ಬಳಕೆದಾರರಿಗೆ ಕೆಲವು ಪ್ರಮುಖ ಸುರಕ್ಷತಾ ಕ್ರಮಗಳ ಬಗ್ಗೆ ಸಲಹೆಗಳನ್ನು ನೀಡಿದೆ. ಗೂಗಲ್ ಪ್ಲೇ ಸ್ಟೋರ್‌ನಿಂದ ಯಾವುದೇ ಹೊಸ ಅಪ್ಲಿಕೇಶನ್ ಡೌನ್‌ಲೋಡ್ ಮಾಡುವ ಮೊದಲು ಯಾವೆಲ್ಲಾ ಅಂಶಗಳ ಬಗ್ಗೆ ಗಮನ ನೀಡಬೇಕು ಎನ್ನುವ ಬಗ್ಗೆ ಕೆಲವು ಬಹುಮುಖ್ಯ ಸಲಹೆ ನೀಡಿದೆ. ಹಾಗಾದರೇ ಆಪ್‌ ಡೌನ್‌ಲೋಡ್ ಮಾಡುವ ಮುನ್ನ ತಪ್ಪದೇ ಗಮನಿಸಬೇಕಾದ ಅಂಶಗಳ ಬಗ್ಗೆ ಮುಂದೆ ನೋಡೋಣ ಬನ್ನಿರಿ.

ಅಧಿಕೃತ ಅಪ್ಲಿಕೇಶನ್ ಸ್ಟೋರ್‌ ಬಳಕೆ

ಅಧಿಕೃತ ಅಪ್ಲಿಕೇಶನ್ ಸ್ಟೋರ್‌ ಬಳಕೆ

ಬಳಕೆದಾರರು ತಮ್ಮ ಸ್ಮಾರ್ಟ್‌ಫೋನಿಗೆ ಹೊಸ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡಲು ಅಧಿಕೃತ ಅಪ್ಲಿಕೇಶನ್ ಸ್ಟೋರ್‌ಗಳನ್ನು (ಗೂಗಲ್ ಪ್ಲೇ ಸ್ಟೋರ್) ಮಾತ್ರ ಬಳಸುವುದು ಅತೀ ಮುಖ್ಯವಾಗಿದೆ.

ಬಳಸದ ಆಪ್‌ ಅನ್‌ಇನ್‌ಸ್ಟಾಲ್ ಮಾಡಿ

ಬಳಸದ ಆಪ್‌ ಅನ್‌ಇನ್‌ಸ್ಟಾಲ್ ಮಾಡಿ

ಕೆಲವೊಮ್ಮೆ ಬಳಕೆದಾರರ ಸ್ಮಾರ್ಟ್‌ಫೋನ್‌ನಲ್ಲಿ ಮೇಲಿಂದ ಮೇಲೆ ಬಳಸದೆ ಇರುವ ಆಪ್‌ಗಳು ಹೆಚ್ಚಾಗಿರುತ್ತವೆ. ಹೀಗೆ ತುಂಬಾ ದಿನಗಳಿಂದ ಬಳಸದೇ ಇರುವ ಆಪ್‌ಗಳನ್ನು ನಿಮ್ಮ ಫೋನಿನಿಂದ ಗೇಟ್‌ಪಾಸ್‌ ನೀಡಿ. ಸುರಕ್ಷತೆಯ ದೃಷ್ಠಿಯಿಂದ ಇದು ಉತ್ತಮ.

ಆಪ್‌ ಡೌನ್‌ಲೋಡ್‌ಗೂ ಮುನ್ನ ರಿವ್ಯೂವ್‌ಗಳನ್ನು ಓದಿರಿ

ಆಪ್‌ ಡೌನ್‌ಲೋಡ್‌ಗೂ ಮುನ್ನ ರಿವ್ಯೂವ್‌ಗಳನ್ನು ಓದಿರಿ

ಗೂಗಲ್‌ ಪ್ಲೇ ಸ್ಟೋರ್‌ನಿಂದ ಹೊಸ ಆಪ್‌ ಅನ್ನು ಸ್ಮಾರ್ಟ್‌ಫೋನಿಗೆ ಡೌನ್‌ಲೋಡ್ ಮಾಡುವಾಗ ಆ ಬಗ್ಗೆ ಇತರೆ ಬಳಕೆದಾರರು ಬರೆದಿರುವ ವಿಮರ್ಶೆಗಳನ್ನು ಓದಿರಿ. ಹಾಗೂ ಆಪ್‌ ಡೆವಲಪರ್‌ಗಳ ಬಗ್ಗೆ ತಿಳಿಯಿರಿ.

ಡಿಸ್ಕೌಂಟ್‌ ನೀಡುವ ಆಪ್‌ಗಳಿಂದ ದೂರ ಇರಿ

ಡಿಸ್ಕೌಂಟ್‌ ನೀಡುವ ಆಪ್‌ಗಳಿಂದ ದೂರ ಇರಿ

ಬಹುತೇಕ ಆಪ್‌ಗಳಲ್ಲಿ ಆನ್‌ಲೈನ್ ಶಾಪಿಂಗ್ ರಿಯಾಯಿತಿಗಳನ್ನು ನೀಡುವ ಜಾಹಿರಾತು ತೋರಿಸುತ್ತಿರುತ್ತಾರೆ. ಇಂತಹ ಭರವಸೆ ನೀಡುವ ಅಪ್ಲಿಕೇಶನ್‌ಗಳ ಬಗ್ಗೆ ಬಳಕೆದಾರರು ಎಚ್ಚರದಿಂದಿರಬೇಕು.

ಲಿಂಕ್‌ ಮೂಲಕ ಆಪ್‌ ಡೌನ್‌ಲೋಡ್ ಬೇಡ

ಲಿಂಕ್‌ ಮೂಲಕ ಆಪ್‌ ಡೌನ್‌ಲೋಡ್ ಬೇಡ

ಇಮೇಲ್‌ಗಳು, ಸಾಮಾಜಿಕ ಮಾಧ್ಯಮ ಇತ್ಯಾದಿಗಳಲ್ಲಿನ ಲಿಂಕ್‌ಗಳನ್ನು ಕ್ಲಿಕ್ ಮಾಡುವುದರ ಮೂಲಕ ಅಪ್ಲಿಕೇಶನ್‌ಗಳನ್ನು ಇನ್‌ಸ್ಟಾಲ್‌ ಮಾಡುವುದನ್ನು ತಪ್ಪಿಸಿ.

Most Read Articles
Best Mobiles in India

English summary
Here are some important security tips for Android smartphone users, things they cannot miss before downloading any app from Google Play Store.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X