ನಿಮ್ಮ ಕ್ರೋಮ್‌ ಬ್ರೌಸರ್‌ ತುಂಬಾ ನಿಧಾನವಾಗಿದೆಯಾ?..ಚಿಂತೆ ಬೇಡ ಈ ಮಾರ್ಗ ಅನುಸರಿಸಿ

|

ಸಾಮಾನ್ಯವಾಗಿ ಕೊರೊನಾ ನಂತರದ ಸಮಯದಲ್ಲಿ ಬಹುಪಾಲು ಮಂದಿ ಮನೆಯಲ್ಲೇ ಕೆಲಸ ಮಾಡುವ ಪ್ರವೃತ್ತಿ ಬೆಳೆಸಿಕೊಂಡಿದ್ದಾರೆ. ಹಾಗೆಯೇ ಲ್ಯಾಪ್‌ಟಾಪ್‌ ಅಥವಾ ಪಿಸಿ ಬಳಕೆ ಮಾಡಿಕೊಂಡು ಕೆಲಸ ಮಾಡುತ್ತಿದ್ದು, ಕೆಲವು ಪ್ರಯೋಜನದ ಜೊತೆಗೆ ಹಲವು ಸಮಸ್ಯೆಗಳನ್ನು ಎದುರಿಸುವುದು ಸಾಮಾನ್ಯ. ಕೇವಲ ಮನೆಯಲ್ಲಿ ಕೆಲಸ ಮಾಡುವವರಷ್ಟೇ ಅಲ್ಲದೆ ಆಫೀಸ್‌ನಲ್ಲಿ ಕೆಲಸ ಮಾಡುವವರು ಸಹ ಇಂಟರ್ನೆಟ್‌, ವಿದ್ಯುತ್‌ ಅಥವಾ ಇನ್ನಿತರೆ ಸಮಸ್ಯೆ ಎದುರಿಸುವುದು ನಮ್ಮ ಕಣ್ಣಮುಂದೆ ಇರುವ ವಿಷಯ. ಅದಾಗ್ಯೂ ಗೂಗಲ್‌ ಕ್ರೋಮ್‌ ಬ್ರೌಸರ್‌ ನಿಧಾನವಾದರಂತೂ ಕೆಲವರಿಗೆ ಮುಂದೆ ಇರುವ ಡಿವೈಸ್‌ ಅನ್ನು ಹೊಡೆದು ಹಾಕುವಷ್ಟು ಸಿಟ್ಟು ಬರುತ್ತದೆ.

ಲ್ಯಾಪ್‌ಟಾಪ್‌

ಹೌದು, ಲ್ಯಾಪ್‌ಟಾಪ್‌ ಅಥವಾ ಕಂಪ್ಯೂಟರ್‌ನಲ್ಲಿ ಏನಾದರೂ ಪ್ರಮುಖ ಮಾಹಿತಿ ಪಡೆಯುವಾಗ ಬ್ರೌಸಿಂಗ್‌ ತುಂಬಾ ನಿಧಾನವಾಗಿದ್ದರೆ ಬಹುಪಾಲು ಮಂದಿಗೆ ಕೋಪ ನೆತ್ತಿಗೇರುತ್ತದೆ. ಇದಿಷ್ಟೇ ಅಲ್ಲದೆ ಕೆಲಸಗಾರರು ತಮ್ಮ ಟಾರ್ಗೆಟ್‌ ಅನ್ನು ಆ ಸಮಯಕ್ಕೆ ಪೂರೈಸಲು ಬ್ರೌಸರ್‌ ಸಹಕರಿಸದಿದ್ದರೆ ಮೇಲಾಧಿಕಾರಿಗಳಿಂದ ಛೀಮಾರಿ ಹಾಕಿಸಿಕೊಳ್ಳುವುದೂ ಉಂಟು. ಇದಕ್ಕೆಲ್ಲ ಮೂಲ ಕಾರಣವಾಗಿರುವ ಗೂಗಲ್‌ ಕ್ರೋಮ್‌ ಬ್ರೌಸರ್‌ ನ ಕಾರ್ಯಕ್ಷಮತೆಯನ್ನು ಹೇಗೆ ಹೆಚ್ಚಿಗೆ ಮಾಡಬೇಕು ಎಂಬುದನ್ನು ಈ ಲೇಖನದಲ್ಲಿ ವಿವರಿಸಲಾಗಿದೆ ಓದಿರಿ.

ಕ್ರೋಮ್‌

ಗೂಗಲ್‌ ಇತ್ತೀಚೆಗೆ ಕ್ರೋಮ್‌ ನವೀಕರಣವನ್ನು ಹೊರತಂದಿದ್ದು, ಇದು ಉತ್ತಮ ಸಂಪನ್ಮೂಲ ನಿರ್ವಹಣೆ ಮತ್ತು ವಿದ್ಯುತ್ ನಿರ್ವಹಣೆಯನ್ನು ಮಾಡುತ್ತದೆ. ಇದರಲ್ಲಿರುವ ಮೆಮೊರಿ ಸೇವರ್ ಮತ್ತು ಎನರ್ಜಿ ಸೇವರ್ ಫೀಚರ್ಸ್‌ ಬಳಕೆದಾರರಿಗೆ ಸಾಕಷ್ಟು ಅನುಕೂಲ ಮಾಡಿಕೊಡಲಿದೆ. ಈ ಫೀಚರ್ಸ್‌ ಜೊತೆಗೆ ಬ್ರೌಸರ್‌ನ ಕಾರ್ಯಕ್ಷಮತೆಯನ್ನು ಹೆಚ್ಚಿಗೆ ಮಾಡಲು ಈ ಮಾರ್ಗ ಅನುಸರಿಸಿ.

ಇತ್ತೀಚಿನ ಆವೃತ್ತಿಗೆ ಕ್ರೋಮ್‌ ನವೀಕರಿಸಿ

ಇತ್ತೀಚಿನ ಆವೃತ್ತಿಗೆ ಕ್ರೋಮ್‌ ನವೀಕರಿಸಿ

ಏನೇ ಕೆಲಸ ಮಾಡಬೇಕೆಂದರೂ ಅಥವಾ ಮಾಹಿತಿ ಬೇಕೆಂದರೂ ಕ್ರೋಮ್‌ ಬಳಕೆ ಕಡ್ಡಾಯ. ಹೀಗಾಗಿ ಆಗಾಗ್ಗೆ ಕ್ರೋಮ್‌ ಅಪ್‌ಡೇಟ್‌ ಆಗಲಿದ್ದು, ಇದನ್ನು ಪರಿಶೀಲಿಸಿಕೊಂಡು ನಿಮ್ಮ ಲ್ಯಾಪ್‌ಟಾಪ್‌ನಲ್ಲಿ ಅಪ್‌ಡೇಟ್‌ ಮಾಡಿ. ಹಾಗೆಯೇ ಈ ಕಾರ್ಯ ಮಾಡುವುದರಿಂದ ಹೊಸ ರೀತಿಯ ಫೀಚರ್ಸ್‌ ಸಹ ಸಿಗುತ್ತವೆ. ಜೊತೆಗೆ ಕೆಲವು ಸಮಸ್ಯೆಗಳು ನಿವಾರಣೆಯಾಗಿ ಕಾರ್ಯಕ್ಷಮತೆ ಸುಧಾರಣೆಯಾಗುತ್ತದೆ.

ಬಳಕೆಯಾಗದ ಟ್ಯಾಬ್‌ ಕ್ಲೋಸ್‌ ಮಾಡಿ, ಮೆಮೊರಿ ಸೇವರ್ ಫೀಚರ್ಸ್‌ ಬಳಸಿ

ಬಳಕೆಯಾಗದ ಟ್ಯಾಬ್‌ ಕ್ಲೋಸ್‌ ಮಾಡಿ, ಮೆಮೊರಿ ಸೇವರ್ ಫೀಚರ್ಸ್‌ ಬಳಸಿ

ಯಾವುದಾದರೂ ಮಾಹಿತಿ ಪಡೆಯಲು ಒಂದು ಟ್ಯಾಬ್‌ ಓಪನ್‌ ಮಾಡಿದರೆ ಅದನ್ನು ಕೊನೆವರೆಗೂ ಕ್ಲೋಸ್‌ ಮಾಡುವುದಿಲ್ಲ. ಈ ರೀತಿ ಮಾಡುವುದರಿಂದ ಸಿಸ್ಟಂ ಕಾರ್ಯಕ್ಷಮತೆಯನ್ನೇ ನಿಧಾನವಾಗಿಸುತ್ತದೆ. ಅದರಲ್ಲೂ 4GB ಅಥವಾ 8GB RAM ಹೊಂದಿರುವ ಮಧ್ಯಮ ಶ್ರೇಣಿಯ ಡಿವೈಸ್‌ಗಳಲ್ಲಿ ಕಾರ್ಯಕ್ಷಮತೆಯನ್ನು ನಿಧಾನವಾಗುತ್ತವೆ. ಅದರಂತೆ ಹೊಸ ನವೀಕರಣದಲ್ಲಿ ಮೆಮೊರಿ ಸೇವರ್ ಫೀಚರ್ಸ್‌ ಪರಿಚಯಿಸಲಾಗಿದ್ದು, ಇದು ಮೆಮೊರಿಯನ್ನು ಉಳಿಸುವ ಉದ್ದೇಶದಿಂದ ಅನಗತ್ಯ ಟ್ಯಾಬ್‌ಗಳನ್ನು ಆಟೋಮ್ಯಾಟಿಕ್‌ ಆಗಿ ಕೆಲಸ ಮಾಡದಂತೆ ಮಾಡುತ್ತದೆ.

ಅನಗತ್ಯ ಪ್ರಕ್ರಿಯೆ ಬೇಡ

ಅನಗತ್ಯ ಪ್ರಕ್ರಿಯೆ ಬೇಡ

ಕ್ರೋಮ್‌ನಲ್ಲಿ ಅನಗತ್ಯ ಪ್ರಕ್ರಿಯೆಗಳನ್ನು ನಡೆಸುವುದರಿಂದ ಇವು ಡಿವೈಸ್‌ನ ಹೆಚ್ಚಿನ ಶಕ್ತಿಯನ್ನು ಬಳಕೆ ಮಾಡುತ್ತವೆ. ಇದರಿಂದ ಕ್ರೋಮ್‌ ನಿಧಾನವಾಗಲಿದ್ದು, ಸಾಧ್ಯವಾದಷ್ಟು ನಿಮಗೆ ಅಗತ್ಯ ಇರುವ ಪ್ರಕ್ರಿಯೆಯಲ್ಲಿ ಮಾತ್ರ ತೊಡಗಿ. ಇಲ್ಲವಾದರೆ ಅನಗತ್ಯ ಎನಿಸುವ ಟಾಸ್ಕ್ಸ್‌ಗಳನ್ನು ಕ್ಲೋಸ್‌ ಮಾಡಿ.

ನೆಟ್‌ವರ್ಕ್ ಆಕ್ಷನ್‌ ಪ್ರೆಡಿಕ್ಷನ್

ನೆಟ್‌ವರ್ಕ್ ಆಕ್ಷನ್‌ ಪ್ರೆಡಿಕ್ಷನ್

ಹೊಸದಾಗಿ ನವೀಕರಣಗೊಂಡ ಕ್ರೋಮ್‌ ನಲ್ಲಿ ವೆಬ್‌ಪುಟಗಳನ್ನು ವೇಗವಾಗಿ ತೆರೆಯುವಂತೆ ಮಾಡಲು ನೆಟ್‌ವರ್ಕ್ ಆಕ್ಷನ್‌ ಪ್ರೆಡಿಕ್ಷನ್ ಎಂಬ ಫೀಚರ್ಸ್‌ ಪರಿಯಿಸಲಾಗಿದ್ದು, ನೀವು ಇದನ್ನು ಸಕ್ರಿಯಗೊಳಿಸಿದರೆ ಉತ್ತಮ ಅನುಭವ ಪಡೆಯಬಹುದಾಗಿದೆ. ಇದಕ್ಕಾಗಿ ಕ್ರೋಮ್‌ ಸೆಟ್ಟಿಂಗ್‌ ವಿಭಾಗಕ್ಕೆ ತೆರಳಬೇಕಾಗುತ್ತದೆ.

ಎನರ್ಜಿ ಸೇವರ್ ಆಯ್ಕೆ ಸಕ್ರಿಯಗೊಳಿಸಿ

ಎನರ್ಜಿ ಸೇವರ್ ಆಯ್ಕೆ ಸಕ್ರಿಯಗೊಳಿಸಿ

ಹೊಸ ಕ್ರೋಮ್‌ ಆವೃತ್ತಿಯಲ್ಲಿ ಮಗದೊಂದು ಫೀಚರ್ಸ್‌ ಎಂದರೆ ಎನರ್ಜಿ ಸೇವರ್ ಮೋಡ್. ಈ ಎನರ್ಜಿ ಸೇವರ್ ಮೋಡ್ ಉತ್ತಮ ಕಾರ್ಯಕ್ಷಮತೆ ಮತ್ತು ಉತ್ತಮ ಬ್ಯಾಟರಿ ಬ್ಯಾಕಪ್ ನೀಡಲು ಸಹಕಾರಿಯಾಗಲಿದ್ದು, ಇದು ಕ್ರೋಮ್‌ನ ಕಾರ್ಯಕ್ಷಮತೆಯನ್ನು ಆಟೋಮ್ಯಾಟಿಕ್‌ ಆಗಿ ಟ್ಯೂನ್ ಮಾಡುತ್ತದೆ.

Best Mobiles in India

English summary
5 tips to boost Google chrome browser performance.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X