ಅತೀ ಶೀಘ್ರದಲ್ಲಿ ವಾಟ್ಸಾಪ್‌ ಸೇರಲಿರುವ 5 ಬೆಸ್ಟ್‌ ಫೀಚರ್ಸ್‌ ಲಿಸ್ಟ್‌ ಇಲ್ಲಿದೆ!

|

ಮೆಟಾ ಮಾಲೀಕತ್ವದ ವಾಟ್ಸಾಪ್‌ ಬಳಕೆದಾರರ ನೆಚ್ಚಿನ ಮೆಸೇಜಿಂಗ್‌ (WhatsApp) ಅಪ್ಲಿಕೇಶನ್‌ ಆಗಿ ಗುರುತಿಸಿಕೊಂಡಿದೆ. ತನ್ನ ಬಳಕೆದಾರರ ಅನುಕೂಲಕ್ಕಾಗಿ ಈಗಾಗಲೇ ಹಲವು ಉಪಯುಕ್ತ ಫೀಚರ್ಸ್‌ಗಳನ್ನು ಪರಿಚಯಿಸಿದೆ. ಅಲ್ಲದೆ ಬಳಕೆದಾರರ ಮಾಹಿತಿ ಸುರಕ್ಷತೆಗೂ ಹಲವು ಆಯ್ಕೆಗಳನ್ನು ಅಳವಡಿಸಿಕೊಂಡಿದೆ. ಸದ್ಯ ವಾಟ್ಸಾಪ್‌ ಪ್ಲಾಟ್‌ಫಾರ್ಮ್ ಮತ್ತಷ್ಟು ಕುತೂಹಲಕಾರಿ ಫೀಚರ್ಸ್‌ಗಳು ಸೇರಿಸುವ ತಯಾರಿಯಲ್ಲಿದೆ.

ವಾಟ್ಸಾಪ್‌

ಹೌದು, ಜನಪ್ರಿಯ ವಾಟ್ಸಾಪ್‌ (WhatsApp) ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಅನೇಕ ಹೊಸ ಫೀಚರ್ಸ್‌ಗಳನ್ನು ಪರೀಕ್ಷಿಸುತ್ತಿದೆ. ಇವುಗಳಲ್ಲಿ ಕೆಲವು ಫೀಚರ್ಸ್‌ಗಳು ಈಗಾಗಲೇ ಬೀಟಾ ವರ್ಷನ್‌ನಲ್ಲಿ ಲಭ್ಯವಿದ್ದು, ಬೀಟಾ ಪರಿವೀಕ್ಷಕರ ಗಮನ ಸೆಳೆದಿದೆ. ಇನ್ನು ಅನೇಕ ಫೀಚರ್ಸ್‌ಗಳನ್ನು ಅಭಿವೃದ್ದಿಯ ಹಂತದಲ್ಲಿದ್ದು, ಶೀಘ್ರದಲ್ಲೇ ಬೀಟಾ ವರ್ಷನ್‌ನಲ್ಲಿ ಲಭ್ಯವಾಗಲಿದೆ ಎಂದು ಹೇಳಲಾಗಿದೆ. ಹಾಗಾದರೆ ಸದ್ಯದಲ್ಲೇ ವಾಟ್ಸಾಪ್‌ನಲ್ಲಿ ಕಾಣಿಸಿಕೊಳ್ಳಲಿರುವ 5 ನೂತನ ಫೀಚರ್ಸ್‌ಗಳ ಬಗ್ಗೆ ಇಲ್ಲಿದೆ ಮಾಹಿತಿ.

ವಾಟ್ಸಾಪ್‌ ಡೆಸ್ಕ್‌ಟಾಪ್‌ನಲ್ಲಿ ಸ್ಟೇಟಸ್‌ಗೆ ರಿಪ್ಲೇ ಮಾಡುವ ಆಯ್ಕೆ

ವಾಟ್ಸಾಪ್‌ ಡೆಸ್ಕ್‌ಟಾಪ್‌ನಲ್ಲಿ ಸ್ಟೇಟಸ್‌ಗೆ ರಿಪ್ಲೇ ಮಾಡುವ ಆಯ್ಕೆ

ವಾಟ್ಸಾಪ್‌ ಡೆಸ್ಕ್‌ಟಾಪ್ ಬಳಕೆದಾರರಿಗೆ ಹೊಸ ಸೈಡ್‌ಬಾರ್ ಮತ್ತು ಡೆಸ್ಕ್‌ಟಾಪ್‌ನಲ್ಲಿಯೇ ಸ್ಟೇಟಸ್‌ಗೆ ರಿಪ್ಲೇ ಶೀಘ್ರದಲ್ಲೇ ಪ್ಲಾಟ್‌ಫಾರ್ಮ್‌ನಲ್ಲಿ ಲಭ್ಯವಾಗಲಿದೆ. ಸ್ಟೇಟಸ್ ರಿಪ್ಲೇ ಡೆಸ್ಕ್‌ಟಾಪ್ ಬಳಕೆದಾರರಿಗೆ ವಾಟ್ಸಾಪ್‌ ಅನ್ನು ಅವರ ಕಾಂಟ್ಯಾಕ್ಟ್‌ಗಳ ಮೂಲಕ ಸ್ಟೋರಿಗಳನ್ನು ಪರಿಶೀಲಿಸಲು ಅನುಮತಿಸುತ್ತದೆ. ಜೊತೆಗೆ ಫೋನ್‌ನಲ್ಲಿ ವಾಟ್ಸಾಪ್‌ ಸ್ಟೇಟಸ್‌ಗೆ ರಿಪ್ಲೇ ಮಾಡುವ ಹಾಗೆಯೇ ಅವರಿಗೆ ರಿಪ್ಲೇ ಮಾಡಲು ಅವಕಾಶ ನೀಡುತ್ತವೆ. ಸೈಡ್‌ಬಾರ್ ಸ್ಟೇಟಸ್‌ ಅಪ್‌ಡೇಟ್‌ ಟ್ಯಾಬ್, ಸೆಟ್ಟಿಂಗ್‌ಗಳು ಮತ್ತು ಪ್ರೊಫೈಲ್‌ಗೆ ಆಕ್ಸಸ್‌ ಮಾಡಲು ಅನುಮತಿಸುತ್ತದೆ.

ವಾಟ್ಸಾಪ್‌ ಸ್ಟೇಟಸ್‌ನಲ್ಲಿ ಕ್ಲಿಕ್ ಮಾಡಬಹುದಾದ ಲಿಂಕ್‌ಗಳು

ವಾಟ್ಸಾಪ್‌ ಸ್ಟೇಟಸ್‌ನಲ್ಲಿ ಕ್ಲಿಕ್ ಮಾಡಬಹುದಾದ ಲಿಂಕ್‌ಗಳು

ಇತ್ತೀಚಿನ ದಿನಗಳಲ್ಲಿ ಹಲವು ಸೋಶಿಯಲ್‌ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಲ್ಲಿ ಸ್ಟೋರಿಸ್‌ ಆಯ್ಕೆ ಹೆಚ್ಚು ಜನಪ್ರಿಯವಾಗಿರುವುದನ್ನು ಕಾಣಬಹುದಾಗಿದೆ. ಈ ಸ್ಟೇಟಸ್‌ ಆಯ್ಕೆಯಲ್ಲಿ ಬದಲಾವಣೆ ತರಲಿದ್ದು, ಶೀರ್ಷಿಕೆಯಲ್ಲಿ ಹೈಪರ್‌ಲಿಂಕ್ ಮಾಡುವ URL ಗಳನ್ನು ಸಕ್ರಿಯಗೊಳಿಸುತ್ತದೆ. ಈ ಮೂಲಕ ವಾಟ್ಸಾಪ್‌ ಬಳಕೆದಾರರು ತಮ್ಮ ವೆಬ್‌ಸೈಟ್‌ಗಳು ಮತ್ತು ಪೇಜ್‌ಗಳಿಗೆ URL ಗಳನ್ನು ಶೇರ್ ಮಾಡಲು ಸಾಧ್ಯವಾಗುತ್ತದೆ. ಸ್ಟೇಟಸ್‌ ನೋಡುವವರು ಲಿಂಕ್‌ಗಳ ಮೇಲೆ ಸರಳವಾಗಿ ಕ್ಲಿಕ್ ಮಾಡಿದಾಗ ಪೇಜ್‌ ತೆರೆಯಲಿದೆ.

ವಾಟ್ಸಾಪ್‌ ಸೇರಲಿದೆ ಹೊಸ ಬಿಸಿನೆಸ್ ಟೂಲ್ ಟ್ಯಾಬ್

ವಾಟ್ಸಾಪ್‌ ಸೇರಲಿದೆ ಹೊಸ ಬಿಸಿನೆಸ್ ಟೂಲ್ ಟ್ಯಾಬ್

ಸದ್ಯದಲ್ಲೇ ವಾಟ್ಸಾಪ್‌ ಬಿಸಿನೆಸ್ ಅಪ್ಲಿಕೇಶನ್‌ನ ಮುಖ್ಯ ಪುಟದಲ್ಲಿ ಹೊಸ ಟ್ಯಾಬ್ ಲಭ್ಯವಾಗಲಿದೆ. ಎಡಭಾಗದಲ್ಲಿರುವ ಕ್ಯಾಮರಾ ಟ್ಯಾಬ್ ಅನ್ನು ಬದಲಿಸಿದರೆ, ಬಿಸಿನೆಸ್ ಖಾತೆಯ ಬಳಕೆದಾರರಿಗೆ ಬಿಸಿನೆಸ್ ಟೂಲ್ ಟ್ಯಾಬ್ (Business Tool Tab) ಪ್ರಮುಖ ಕೇಂದ್ರವಾಗಲಿದೆ. ಅಲ್ಲಿ ಅವರು ಅಪ್ಲಿಕೇಶನ್‌ನಲ್ಲಿನ ಸೆಟ್ಟಿಂಗ್‌ಗಳ ಮೂಲಕ ಹೋಗದೆ ಬಿಸಿನೆಸ್ ಬಳಕೆದಾರರು ಪರಿಕರಗಳನ್ನು ಸುಲಭವಾಗಿ ಆಕ್ಸಸ್ ಮಾಡಬಹುದಾಗಲಿದೆ. ಈ ಪರಿಕರಗಳು ವ್ಯಾಪಾರ ಪ್ರೊಫೈಲ್ ನಿರ್ವಹಣೆ, ಕ್ಯಾಟಲಾಗ್ ಸೆಟ್ಟಿಂಗ್‌ಗಳು ಮತ್ತು ಜಾಹೀರಾತುಗಳ ಮೂಲಕ ಫೇಸ್‌ಬುಕ್‌ ಮತ್ತು ಇನ್‌ಸ್ಟಾಗ್ರಾಮ್‌ ನೊಂದಿಗೆ ಲಿಂಕ್ ಆಗಿರಲಿದೆ.

ವಾಟ್ಸಾಪ್‌ ಪ್ರೀಮಿಯಂ ಆಯ್ಕೆ

ವಾಟ್ಸಾಪ್‌ ಪ್ರೀಮಿಯಂ ಆಯ್ಕೆ

ವಾಟ್ಸಾಪ್‌ ಬಿಸಿನೆಸ್ ಬಳಕೆದಾರರಿಗಾಗಿ ವಾಟ್ಸಾಪ್‌ ಪ್ರೀಮಿಯಂ (WhatsApp Premium) ಚಂದಾದಾರಿಕೆ ಮಾದರಿಯಲ್ಲಿ ವಾಟ್ಸಾಪ್‌ ಕಾರ್ಯನಿರ್ವಹಿಸುತ್ತಿದೆ. ಟೆಲಿಗ್ರಾಮ್ ಪ್ರೀಮಿಯಂನಲ್ಲಿರುವ ಸೇವೆಗಳಂತೆಯೇ, ವಾಟ್ಸಾಪ್‌ ಪ್ರೀಮಿಯಂ ಬಿಸಿನೆಸ್ ಖಾತೆಯ ಬಳಕೆದಾರರಿಗೆ ಹೆಚ್ಚುವರಿ ಪ್ರಯೋಜನಗಳನ್ನು ನೀಡುತ್ತದೆ. ಈ ಫೀಚರ್ಸ್‌ಗಳು ಕಸ್ಟಮ್ ಬಿಸಿನೆಸ್ ಲಿಂಕ್‌ಗಳು ಮತ್ತು ಒಂದೇ ಖಾತೆಯಲ್ಲಿ ನಾಲ್ಕಕ್ಕಿಂತ ಹೆಚ್ಚು ಡಿವೈಸ್‌ಗಳನ್ನು ಒಟ್ಟಿಗೆ ಲಿಂಕ್ ಮಾಡುವ ಸಾಮರ್ಥ್ಯವನ್ನು ಒಳಗೊಂಡಿವೆ.

ಸ್ಕ್ರೀನ್‌ಶಾಟ್‌ ಬ್ಲಾಕಿಂಗ್ ಆಯ್ಕೆ

ಸ್ಕ್ರೀನ್‌ಶಾಟ್‌ ಬ್ಲಾಕಿಂಗ್ ಆಯ್ಕೆ

ಬಳಕೆದಾರರ ಮಾಹಿತಿ ಸುರಕ್ಷತೆಯ ನಿಟ್ಟಿನಲ್ಲಿ ವಾಟ್ಸಾಪ್‌ ಹೊಸದಾಗಿ ಸ್ಕ್ರೀನ್‌ಶಾಟ್‌ ಬ್ಲಾಕಿಂಗ್ ಆಯ್ಕೆ ಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಬೀಟಾ ಆವೃತ್ತಿಯಲ್ಲಿ ಲಭ್ಯವಾಗಿದೆ. ಸದ್ಯದಲ್ಲೇ ಇತರೆ ಎಲ್ಲ ಬಳಕೆದಾರರಿಗೂ ಈ ಸೇವೆ ಲಭ್ಯವಾಗಲಿದೆ. ಈ ಆಯ್ಕೆಯು ಬಳಕೆದಾರರು 'View Once' ಮೆಸೆಜ್‌/ ಮೀಡಿಯಾ ಸ್ಕ್ರೀನ್‌ಶಾಟ್ ತೆಗೆದುಕೊಳ್ಳುವುದನ್ನು ತಡೆಯುತ್ತದೆ ಮತ್ತು ಗೌಪ್ಯತೆಯನ್ನು ಸುಧಾರಿಸುತ್ತದೆ.

Best Mobiles in India

English summary
5 upcoming WhatsApp Features: Clickable links, Business Tool Tab and more.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X