ಮೊಬೈಲ್‌ ಬಿಲ್‌ ಕಡಿಮೆಗೊಳಿಸಲು ಟಾಪ್‌ 5 ವಿಧಾನಗಳು!

Written By:

ಹೆಚ್ಚಿನ ಸಂಖ್ಯೆಯ ಮೊಬೈಲ್‌ ಬಳಕೆದಾರರಿಗೆ ತಮ್ಮ ತಿಂಗಳ ಮೊಬೈಲ್ ಬಿಲ್‌ ಅನ್ನು ಕಡಿಮೆಗೊಳಿಸುವ ಮಾರ್ಗಗಳು ತಿಳಿದಿಲ್ಲ. ತಾವು ಬಳಸುತ್ತಿರುವ ಟೆಲಿಕಾಂ ಕಂಪನಿಗಳು ಕರೆ ಮತ್ತು ಮೆಸೇಜ್‌ ದರ ಏರಿಕೆ ಮಾಡಿದರೆ ಇನ್ನೊಂದು ಟೆಲಿಕಾಂ ಕಂಪನಿಗೆ ಪೋರ್ಟ್‌ ಆಗುತ್ತಾರೆ. ಆದರೆ ಪೋರ್ಟ್‌ ಆಗದೆಯೇ ಹಲವು ರೀತಿಯಲ್ಲಿ ಆಫರ್‌ಗಳನ್ನು ಪಡೆಯಬಹುದು. ತಿಂಗಳ ಮೊಬೈಲ್‌ ಬಿಲ್‌ ಅನ್ನು ಕಡಿಮೆಗೊಳಿಸಬಹುದು. ಮೊಬೈಲ್ ಬಿಲ್‌ ಅನ್ನು ಕಡಿಮೆಗೊಳಿಸುವ ಟಾಪ್‌ ಸಲಹೆಗಳನ್ನು ಸ್ಲೈಡರ್‌ ಓದಿ ತಿಳಿಯಿರಿ.

ರಿಲಾಯನ್ಸ್ ಜಿಯೋ ಸಿಮ್ ಬೆಂಬಲಿಸುವ 4ಜಿ ಸ್ಮಾರ್ಟ್‌ಫೋನ್‌ಗಳು

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ನಿಮ್ಮ ತಿಂಗಳ ಬಿಲ್‌ ಚೆಕ್ ಮಾಡಿ

ನಿಮ್ಮ ತಿಂಗಳ ಬಿಲ್‌ ಚೆಕ್ ಮಾಡಿ

ಮೊದಲಿಗೆ ನಿಮ್ಮ ಹಿಂದಿನ 6 ತಿಂಗಳ ಮೊಬೈಲ್‌ ಬಿಲ್‌ ಚೆಕ್‌ ಮಾಡಿ. ಇದರಿಂದ ನೀವು ಹೆಚ್ಚಾಗಿ ಯಾರಿಗೆ ಕರೆ ಮಾಡುತ್ತೀರಿ, ಹೆಚ್ಚಾಗಿ ಯಾರಿಗೆ ಮೆಸೇಜ್‌ ಮಾಡುತ್ತೀರಿ ಎಂದು ತಿಳಿದು, ಹಣ ಹೆಚ್ಚು ವೆಚ್ಚವಾಗುತ್ತಿದೆ ಎಂದು ತಿಳಿಯಬಹುದು.

 6 ತಿಂಗಳ ವೆಚ್ಚದ ಪಟ್ಟಿ ನೋಟ್‌ ಮಾಡಿ

6 ತಿಂಗಳ ವೆಚ್ಚದ ಪಟ್ಟಿ ನೋಟ್‌ ಮಾಡಿ

ಹಿಂದೆ ವೆಚ್ಚವಾದ ಹಣ ಬರಿಸಲು ಸಾಧ್ಯವಿಲ್ಲದಿರಬಹುದು. ಆದರೆ ISD ಕರೆ ಸಮಯ ಎಷ್ಟು, ಒಂದು ನಿಮಿಷಕ್ಕೆ ಎಷ್ಟು ಹಣ ವೆಚ್ಚವಾಗುತ್ತಿದೆ, ನೀವು ರೋಮಿಂಗ್‌ ಸಮಯದಲ್ಲಿ ಎಷ್ಟು ಹಣ ವ್ಯಯಮಾಡುತ್ತಿದ್ದೀರಾ, ಜಿಪಿಆರ್‌ಎಸ್‌ಗೆ ಸಬ್‌ಸ್ಕ್ರೈಬ್‌ ಆಗಿದ್ದೀರಾ ಎಂಬುದನ್ನು ಪಟ್ಟಿ ಮಾಡಿ. ಈ ಚಟುವಟಿಕೆಯಿಂದ ಅವಶ್ಯಕವಿಲ್ಲದ ಪ್ಲಾನ್‌ಗಳನ್ನು ಕಡಿತಗೊಳಿಸಬಹುದು. ಆದ್ದರಿಂದ ನಿಮ್ಮ ಟೆಲಿಕಾಂ ಸರ್ವೀಸ್ ಪ್ರೊವೈಡರ್‌ ಅನ್ನು ಸಂಪರ್ಕಿಸಿ.

ಕಸ್ಟಮ್‌ ಟ್ಯಾರಿಫ್ ಆಯ್ಕೆ

ಕಸ್ಟಮ್‌ ಟ್ಯಾರಿಫ್ ಆಯ್ಕೆ

ಟೆಲಿಕಾಂ ಕಂಪನಿಗಳು ನಿರಂತರವಾಗಿ ಟ್ಯಾರಿಫ್(ಸುಂಕ) ಪ್ಲಾನ್‌ಗಳನ್ನು ಅಪ್‌ಡೇಟ್‌ ಮಾಡುತ್ತಿರುತ್ತವೆ. ಆದ್ದರಿಂದ ಟೆಲಿಕಾಂ ಸೇವೆ ಒದಗಿಸುವ ನಿಮ್ಮ ಹತ್ತಿರದ ಬ್ರ್ಯಾಂಚ್‌ಗಳಿಗೆ ಅಥವಾ ವೆಬ್‌ಸೈಟ್‌ಗಳಿಗೆ ಭೇಟಿ ನೀಡಿ ಲೇಟೆಸ್ಟ್ ಆಫರ್‌ ಚೆಕ್‌ ಮಾಡಿ. ನಂತರ ನಿಮ್ಮ ಉಪಯೋಗದ ಪ್ರಕಾರ ಒಂದು ಪ್ಲಾನ್‌ ಅನ್ನು ಆಯ್ಕೆ ಮಾಡಿಕೊಳ್ಳಿ. ಸ್ಥಳೀಯ ಕರೆಗಳಿಗಿಂತ, STD ಕರೆಗಳು ಹೆಚ್ಚಾಗಿದ್ದಲ್ಲಿ ನಿಮಿಷಕ್ಕೆ 60 ಪೈಸೆ ಪ್ಲಾನ್‌ ಅನ್ನು ಅಥವಾ ಅದಕ್ಕಿಂತ ಕಡಿಮೆ ಇರುವ ಪ್ಲಾನ್‌ ಅನ್ನು ಆಯ್ಕೆ ಮಾಡಿಕೊಳ್ಳಿ.

ಟ್ಯಾರಿಫ್‌ ಪ್ಲಾನ್‌

ಟ್ಯಾರಿಫ್‌ ಪ್ಲಾನ್‌

ನಿಮ್ಮ ಕರೆಗಳು ನಿಮ್ಮ ಸಿಟಿಯಲ್ಲಿ ಕಡಿಮೆ ಇದ್ದಲ್ಲಿ ಒಂದು ನಿಮಿಷಕ್ಕೆ 30-50 ಪೈಸೆ ಇರುವ ಪ್ಲಾನ್‌ ಅನ್ನು ಸ್ವೀಕರಿಸಿ. ಕಾರಣ STD ಕರೆಗಳು ಸಹ ನಿಮಿಷಕ್ಕೆ 1 ರೂ ಚಾರ್ಜ್‌ ಮಾಡುತ್ತಿರುತ್ತವೆ. ಈ ಪ್ಲಾನ್‌ ಪೋಸ್ಟ್‌ಪೇಡ್ ಮತ್ತು ಪ್ರಿಪೇಡ್‌ಗೂ ವ್ಯತ್ಯಾಸವಿರುವುದಿಲ್ಲ. ಪೋಸ್ಟ್‌ಪೇಡ್‌ನಲ್ಲಿಯೂ ಹಲವು ನಂಬರ್‌ಗಳಿಗೆ ಉತ್ತಮ ಆಫರ್‌ಗಳನ್ನು ನೀಡಲಾಗುತ್ತದೆ.

ಅಗತ್ಯವಲ್ಲದ ಸೇವೆಗಳನ್ನು ತೆಗೆಯಿರಿ

ಅಗತ್ಯವಲ್ಲದ ಸೇವೆಗಳನ್ನು ತೆಗೆಯಿರಿ

ಪ್ರತಿ ತಿಂಗಳ ಬಿಲ್‌ಗಳನ್ನು ಚೆಕ್‌ ಮಾಡುವುದರಿಂದ ಅಗತ್ಯವಿಲ್ಲದ ಸೇವೆಗಳಿಗೆ ಹಣ ವೆಚ್ಚ ಮಾಡುತ್ತಿರುವುದನ್ನು ಕಂಡುಕೊಳ್ಳಬಹುದು. ಉದಾಹರಣೆ ಮ್ಯಾಚ್‌ ಸ್ಕ್ರೋರ್‌, ದೈನಂದಿನ ಜಾತಕ, ವಾತಾವರಣ ಮಾಹಿತಿ ಮತ್ತು ಕಾಲರ್‌ ಟ್ಯೂನ್‌ಗಳಿರಬಹುದು. ಇವುಗಳು ಅಗತ್ಯವಿಲ್ಲದಿದ್ದಲ್ಲಿ ಈ ಸೇವೆಗಳನ್ನು ಡಿಆಕ್ಟಿವೇಟ್ ಮಾಡಿಸಬಹುದು. ಈ ಸೇವೆಗಳು ಸ್ಕ್ರೀನ್‌ ಮೇಲೆ ನೋಟಿಫಿಕೇಶನ್‌ ಬಂದು ತಿಳಿಯದಂತೆ ಆಕ್ಟಿವೇಟ್ ಆಗಿರುತ್ತವೆ.

 ಇಂಟರ್ನೆಟ್‌ ಬಳಕೆ

ಇಂಟರ್ನೆಟ್‌ ಬಳಕೆ

ನೀವು ಮೆಸೇಜ್‌ ಮಾಡುವ ಹೆಚ್ಚಿನ ಹವ್ಯಾಸ ಹೊಂದಿದ್ದಲ್ಲಿ ಉಚಿತ ಮೆಸೇಜ್‌ ಸೇವೆಯ ಹಲವು ಅಪ್ಲಿಕೇಶನ್‌ಗಳಿದ್ದು, ಅವುಗಳನ್ನು ಇನ್‌ಸ್ಟಾಲ್ ಮಾಡಿಕೊಳ್ಳಬಹುದಾಗಿದೆ. ಈ ಚಟುವಟಿಕೆ ನಿಮ್ಮ ಮೊಬೈಲ್ ಬಿಲ್ ಅನ್ನು ಹೆಚ್ಚಿನ ಸಂಖ್ಯೆಯಲ್ಲಿ ಕಡಿಮೆ ಮಾಡುತ್ತದೆ.

ಅಪ್ಲಿಕೇಶನ್‌ಗಳು

ಅಪ್ಲಿಕೇಶನ್‌ಗಳು

ವಾಟ್ಸಾಪ್, ನಿಮ್‌ಬಜ್‌ ಮತ್ತು ಚಾಟ್‌ ಆನ್‌ ಆಪ್‌ಗಳು ಜಿಪಿಆರ್‌ಎಸ್‌ ಮತ್ತು 2G ಕನೆಕ್ಷನ್‌ಗಳಿಂದ ವರ್ಕ್‌ ಆಗಬಲ್ಲವು. ಕೆಲವು ಆಪ್‌ಗಳು ಸ್ಮಾರ್ಟ್‌ಫೋನ್‌ ಮತ್ತು ಫೀಚರ್‌ ಫೋನ್‌ಗಳಲ್ಲಿಯೂ ವರ್ಕ್‌ ಆಗಬಲ್ಲವು. ಗ್ರೂಪ್ ಚಾಟ್‌ ಅನ್ನು ಸಹ ನಿರ್ವಹಿಸಬಹುದಾಗಿದೆ.

ವಿಶೇಷ ಯೋಜನೆಗಳ ಆಯ್ಕೆ

ವಿಶೇಷ ಯೋಜನೆಗಳ ಆಯ್ಕೆ

ಎಲ್ಲಾ ಟೆಲಿಕಾಂ ಕಂಪನಿಗಳು ಸಹ ವಿಶೇಷ ಟ್ಯಾರಿಫ್‌ ಪ್ಲಾನ್‌ಗಳನ್ನು ಆಗಾಗ ನೀಡುತ್ತಿರುತ್ತಾರೆ. ವಿಶೇಷವಾಗಿ ರಾತ್ರಿ ಟ್ಯಾರಿಫ್‌ ಪ್ಲಾನ್, ಫ್ರೆಂಡ್ಸ್ ಚಾಟ್‌ ಮತ್ತು STD/ISD ಪ್ಲಾನ್‌ಗಳನ್ನು ನೀಡುತ್ತಾರೆ. ನಿಮ್ಮ ಬಳಕೆ ಮಿತವಾಗಿದ್ದರೆ. ಈ ಪ್ಲಾನ್‌ಗಳನ್ನು ಬಳಸಿಕೊಳ್ಳಬಹುದು.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
5 ways to cut your mobile phone bill. Read more about this in kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot