ಜೂಮ್‌ ಆಪ್‌ನಲ್ಲಿ ಮೀಟಿಂಗ್‌ ನಡೆಸುವಾಗ ಈ ಸುರಕ್ಷಾ ಕ್ರಮಗಳನ್ನು ಅನುಸರಿಸಿ!

|

ಇಡೀ ಜಗತ್ತನ್ನೇ ಬೆಚ್ಚಿ ಬೀಳಿಸಿರುವ ಮಹಾಮಾರಿ ಕೊರೊನಾ ವೈರಸ್‌ ನಿಯಂತ್ರಣಕ್ಕೆ ದೇಶದಲ್ಲಿ ಲಾಕ್‌ಡೌನ್ ಜಾರಿ ಮಾಡಲಾಗಿದೆ. ಈ ಸಂದರ್ಭದಲ್ಲಿ ವಿಡಿಯೊ ಕಾಲಿಂಗ್ ಆಪ್ಸ್‌ಗಳ ಬೇಡಿಕೆ ಹೆಚ್ಚಾಗಿದ್ದು, ಮುಖ್ಯವಾಗಿ ಚೀನಾ ಮೂಲದ ಜೂಮ್ ಆಪ್‌ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಆದ್ರೆ ಗೌಪ್ಯತೆಯ ದೃಷ್ಟಿಯಿಂದ ಜೂಮ್ ಆಪ್ ಬಳಕೆಗೆ ಸುರಕ್ಷಿತವಲ್ಲ ಎಂದು ಇತ್ತೀಚಿಗಷ್ಟೆ ಕೇಂದ್ರ ಸರ್ಕಾರ ಹೇಳಿದೆ. ಆದರೂ ಜೂಮ್ ಆಪ್ ಇನ್ನೂ ಜೂಮ್‌ನಲ್ಲಿಯೇ ಇದೆ.

ಸುರಕ್ಷತಾ ದೃಷ್ಟಿ

ಹೌದು, ಬಹುತೇಕ ಸಂಸ್ಥೆಗಳು ತಮ್ಮ ಉದ್ಯೋಗಿಗಳೊಂದಿಗೆ ಸಂವಹನ/ಮೀಟಿಂಗ್ ನಡೆಸಲು ಜೂಮ್ ಆಪ್‌ ಅನ್ನೇ ಬಳಕೆ ಮಾಡುತ್ತಿದ್ದಾರೆ. ಏಕಕಾಲದಲ್ಲಿ ಅಧಿಕ ಸದಸ್ಯರೊಂದಿಗೆ ಸಮೂಹವಾಗಿ ಕರೆ ಮಾಡುವ ಸೌಲಭ್ಯವನ್ನು ಈ ವಿಡಿಯೊ ಕಾಲಿಂಗ್ ಆಪ್ ಹೊಂದಿದ್ದು, ಬಳಕೆಯು ಸರಳವಾಗಿದೆ. ಹೀಗಾಗಿ ಅನೇಕರು ಜೂಮ್‌ ಇನ್‌ಸ್ಟಾಲ್‌ ಮಾಡಿಕೊಂಡು ವಿಡಿಯೊ ಕರೆ ಮಾಡುತ್ತಿದ್ದಾರೆ. ಹೀಗೆ ಜೂಮ್ ಆಪ್‌ ಅನ್ನು ನೀವು ಬಳಕೆ ಮಾಡುತ್ತಿದ್ದರೇ ಸುರಕ್ಷತಾ ದೃಷ್ಟಿಯಿಂದ ಕೆಲವು ಕ್ರಮಗಳನ್ನು ನೀವು ಅನುಸರಿಸಬೇಕಿದೆ. ಆ ಬಗ್ಗೆ ತಿಳಿಯಲು ಮುಂದೆ ಓದಿರಿ.

ಪಾಸ್‌ವರ್ಡ್‌ ಬಳಸಿ

ಪಾಸ್‌ವರ್ಡ್‌ ಬಳಸಿ

ಜೂಮ್ ಆಪ್‌ನಲ್ಲಿ ನೀವು ನಡೆಸುವ ಮೀಟಿಂಗ್/ಸಭೆಗಳಿಗೆ ಪಾಸ್‌ವರ್ಡ್‌ಗಳನ್ನು ಬಳಸಿ. ಈ ಮೂಲಕ Zoombombing(ಯಾರೊ ಒಬ್ಬರು ಮೀಟಿಂಗ್ ನಿಯಂತ್ರಣ ಪಡೆಯುವುದು) ತಡೆಯಬಹುದಾಗಿದೆ. ಹಾಗೂ ಮಾಲ್ವೇರ್, ಹ್ಯಾಕ್‌ ನಂತಹ ದಾಳಿಗಳಿಂದ ಮೀಟಿಂಗ್ ರಕ್ಷಿಸಬಹುದು. ಸುರಕ್ಷಿತವಾಗಿ ಮೀಟಿಂಗ್ ನಡೆಸಬಹುದು.

ವೇಟಿಂಗ್ ರೂಮ್

ವೇಟಿಂಗ್ ರೂಮ್

ಜೂಮ್‌ನಲ್ಲಿ ಮೀಟಿಂಗ್ ವೇಟಿಂಗ್ ಫೀಚರ್ ಆಯ್ಕೆಯು ಸದಸ್ಯರು ಮೀಟಿಂಗ್ ಸೇರುವ ಪ್ರಕ್ರಿಯೆಯನ್ನು ನಿಯಂತ್ರಿಸುವಲ್ಲಿ ಸಹಕಾರಿಯಾಗಲಿದೆ. ಜೂಮ್‌ ಆಪ್‌ನಲ್ಲಿ ನಡೆಸುವ ಅಡ್ಮಿನ್/ಹೊಸ್ಟ್ ಈ ಫೀಚರ್‌ ಬಳಕೆ ಮಾಡಬಹುದಾಗಿದೆ. ಮೀಟಿಂಗ್ ಭಾಗವಹಿಸುವವರನ್ನು ಸಂದರ್ಭದ ಅನುಗುಣವಾಗಿ ಮೀಟಿಂಗ್‌ಗೆ ಅನುಮತಿ ನೀಡಬಹುದಾಗಿದೆ.

ಹೋಸ್ಟ್ ಆಯ್ಕೆ

ಹೋಸ್ಟ್ ಆಯ್ಕೆ

ಜೂಮ್ ಆಪ್‌ನಲ್ಲಿ Disable join before host ಆಯ್ಕೆ ಇದ್ದು, ಈ ಆಯ್ಕೆಯು ಮೀಟಿಂಗ್ ವೇಳೆ ಅನಗತ್ಯ ವ್ಯಕ್ತಿಗಳ ಪ್ರವೇಶವನ್ನು ನಿರಾಕರಿಸಲು ಸಹಾಯಕವಾಗಿದೆ. ಮೀಟಿಂಗ್ ಆಯೋಜಿಸಿದವರು ಈ ಫೀಚರ್ ಮೂಲಕ ಮೀಟಿಂಗ್‌ಗೆ ಅಗತ್ಯ ಇಲ್ಲದವರನ್ನು ದೂರವಿರಿಸುವಲ್ಲಿ ನೆರವಾಗಲಿದೆ.

ಲಾಕಿಂಗ್ ಮೀಟಿಂಗ್

ಲಾಕಿಂಗ್ ಮೀಟಿಂಗ್

ಜೂಮ್ ಆಪ್‌ನಲ್ಲಿ ಮೀಟಿಂಗ್ ನಡೆಸುವ ವೇಳೆ ಮೀಟಿಂಗ್ ಸುರಕ್ಷತೆಗಾಗಿ ಲಾಕಿಂಗ್ ಮೀಟಿಂಗ್ ಆಯ್ಕೆ ಬಳಕೆ ಮಾಡಬಹುದಾಗಿದೆ. ಈ ಆಯ್ಕೆಯಲ್ಲಿ ಹೊಸ ಭಾಗವಹಿಸುವವರು ಮೀಟಿಂಗ್ ID ಮತ್ತು ಪಾಸ್‌ವರ್ಡ್ ಹೊಂದಿದ್ದರೂ ಸಹ ಸಭೆಯಲ್ಲಿ ಸೇರುವುದನ್ನು ತಡೆಯುತ್ತದೆ. ಕರೆ ಮಾಡಿರುವ ವೇಳೆ ಜೂಮ್ ವಿಂಡೋದ ಕೆಳಭಾಗದಲ್ಲಿರುವ ಭಾಗವಹಿಸುವವರು ಕ್ಲಿಕ್ ಮಾಡಿ, ಲಾಕ್ ಮೀಟಿಂಗ್ ಎಂದು ಹೇಳುವ ಬಟನ್ ಕ್ಲಿಕ್ ಮಾಡಬಹುದಾಗಿದೆ.

ಮತ್ತೆ ಮೀಟಿಂಗ್ ಸೇರುವ ನಿಯಂತ್ರಣದ ಆಯ್ಕೆ

ಮತ್ತೆ ಮೀಟಿಂಗ್ ಸೇರುವ ನಿಯಂತ್ರಣದ ಆಯ್ಕೆ

ಜೂಮ್ ಆಪ್‌ನಲ್ಲಿ ನಡೆಸುವ ಮೀಟಿಂಗ್‌ನಲ್ಲಿ ಆ ಮೀಟಿಂಗ್‌ನಿಂದ ತೆಗೆದುಹಾಕಲ್ಪಟ್ಟ ಸದಸ್ಯರು ಮತ್ತೆ ಮೀಟಿಂಗ್ ಸೇರುವುದನ್ನು ತಡೆಯುವಲ್ಲಿ/ನಿಯಂತ್ರಿಸುವಲ್ಲಿ ಈ ಸೌಲಭ್ಯ ನೆರವಾಗಲಿದೆ. ತೆಗೆದುಹಾಕಿರುವ ಸದಸ್ಯ ಮತ್ತೆ ಮೀಟಿಂಗ್‌ಗೆ ಅಗತ್ಯ ಎನಿಸಿದರೇ ಮೀಟಿಂಗ್‌ಗೆ ಸೇರಿಕೊಳ್ಳುವ ಸೌಲಭ್ಯವು ಈ ಫೀಚರ್‌ನಲ್ಲಿ ಇದೆ.

Best Mobiles in India

English summary
Follow these security tips for your next meeting in zoom app.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X