ಬೆಂಗಳೂರಿನಲ್ಲಿ ಏರ್‌ಟೆಲ್‌ 5G ಲಭ್ಯ!..ಬೆಲೆ ಎಷ್ಟು?..ಆಕ್ಟಿವ್ ಮಾಡುವುದು ಹೇಗೆ?

|

ಭಾರ್ತಿ ಏರ್‌ಟೆಲ್‌ನ 5G ಸೇವೆಯು ದೆಹಲಿ, ಮುಂಬೈ, ವಾರಣಾಸಿ ಮತ್ತು ಬೆಂಗಳೂರು ಸೇರಿದಂತೆ ಎಂಟು ನಗರಗಳಲ್ಲಿ ಶನಿವಾರದಿಂದ ಲಭ್ಯವಿರುತ್ತದೆ ಎಂದು ಅದರ ಅಧ್ಯಕ್ಷ ಸುನಿಲ್ ಭಾರ್ತಿ ಮಿತ್ತಲ್ ಇಂಡಿಯಾ ಮೊಬೈಲ್ ಕಾಂಗ್ರೆಸ್‌ನಲ್ಲಿ ತಿಳಿಸಿದ್ದಾರೆ. ಇದರೊಂದಿಗೆ, ಭಾರ್ತಿ ಏರ್‌ಟೆಲ್ ದೇಶದಲ್ಲಿ 5G ಸೇವೆಗಳನ್ನು ಪ್ರಾರಂಭಿಸುವ ಮೊದಲ ಕಂಪನಿಯಾಗಿದೆ.

ಸೇವೆಯು

ಹಾಗೆಯೇ ಏರ್‌ಟೆಲ್‌ನ 5G ಸೇವೆಯು ಮಾರ್ಚ್ 2023 ರ ವೇಳೆಗೆ ದೇಶದಾದ್ಯಂತ ಹಲವಾರು ನಗರಗಳಲ್ಲಿ ಮತ್ತು ಮಾರ್ಚ್ 2024 ರ ವೇಳೆಗೆ ಭಾರತದಾದ್ಯಂತ 5G ಸೇವೆಗಳನ್ನು ಭಾರ್ತಿ ಏರ್‌ಟೆಲ್ ಹೊರತರಲಿದೆ ಎಂದು ಮಿತ್ತಲ್ ಹೇಳಿದರು.

ಪ್ರಕಾರ

ದೂರಸಂಪರ್ಕ ಇಲಾಖೆಯ ಪ್ರಕಾರ, 5G ತಂತ್ರಜ್ಞಾನವು 4G ಗಿಂತ ಹತ್ತು ಪಟ್ಟು ಉತ್ತಮವಾದ ಡೌನ್‌ಲೋಡ್ ವೇಗವನ್ನು ಮತ್ತು ಮೂರು ಪಟ್ಟು ಹೆಚ್ಚಿನ ಸ್ಪೆಕ್ಟ್ರಮ್ ದಕ್ಷತೆಯನ್ನು ನೀಡುತ್ತದೆ ಎಂದು ನಿರೀಕ್ಷಿಸಲಾಗಿದೆ. ಕಂಪನಿಯ ಹಿರಿಯ ಅಧಿಕಾರಿಯೊಬ್ಬರ ಪ್ರಕಾರ, ಏರ್‌ಟೆಲ್ 5G ಸೇವೆಗಳು ಸದ್ಯ ಚಾಲ್ತಿ ಇರುವ 4G ದರಗಳಲ್ಲಿ ಲಭ್ಯವಾಗುವ ಸಾಧ್ಯತೆಗಳಿವೆ. ಹಾಗೆಯೇ ಸ್ವಲ್ಪ ಸಮಯದ ನಂತರ 5G ಗಾಗಿ ಹೊಸ ಶುಲ್ಕ ನಿಗದಿಪಡಿಸುವ ಸಾಧ್ಯತೆಗಳಿವೆ ಎನ್ನಲಾಗಿದೆ.

ನಾಗ್ಪುರ

ಇನ್ನು ಚೆನ್ನೈ, ಹೈದರಾಬಾದ್, ನಾಗ್ಪುರ ಮತ್ತು ಸಿಲಿಗುರಿಯಲ್ಲಿಯೂ 5G ಸೇವೆಗಳನ್ನು ಪ್ರಾರಂಭಿಸಲಾಗುತ್ತಿದೆ ಎಂದು ಹೇಳಲಾಗಿದ್ದು, ಕಂಪನಿಯ ಬ್ಯಾಕೆಂಡ್ ಮೂಲಸೌಕರ್ಯ ಸಿದ್ಧವಾಗಿದೆ ಎಂದು ಭಾರ್ತಿ ಏರ್‌ಟೆಲ್ ಮುಖ್ಯ ತಂತ್ರಜ್ಞಾನ ಅಧಿಕಾರಿ ರಣದೀಪ್ ಸಿಂಗ್ ಸೆಖೋನ್ ಹೇಳಿದ್ದಾರೆ.

ಮೊಬೈಲ್

ಹಾಗೆಯೇ 5G ಸೇವೆಗಾಗಿ ನಾವು ಮೊಬೈಲ್ ಟವರ್‌ಗಳಲ್ಲಿ ಕೆಲವು ಉಪಕರಣಗಳನ್ನು ಸ್ಥಾಪಿಸಬೇಕಾಗಿದೆ. ನಾವು ಅದನ್ನು ಹಂತಹಂತವಾಗಿ ಮಾಡುತ್ತಿದ್ದೇವೆ. ಇಂದಿನಿಂದ, ಉಪಕರಣಗಳನ್ನು ಅಳವಡಿಸಲಾಗಿರುವ ಟವರ್‌ಗಳಿಗೆ ಸಮೀಪವಿರುವ ಪ್ರದೇಶದಲ್ಲಿ ಸೇವೆಯು ಲಭ್ಯವಿರುತ್ತದೆ ಎಂದು ಸೆಖೋನ್ ತಿಳಿಸಿದ್ದಾರೆ.

ಸಿಲಿಗುರಿಯಲ್ಲಿಯೂ

ಇನ್ನು ಚೆನ್ನೈ, ಹೈದರಾಬಾದ್, ನಾಗ್ಪುರ ಮತ್ತು ಸಿಲಿಗುರಿಯಲ್ಲಿಯೂ 5G ಸೇವೆಗಳನ್ನು ಪ್ರಾರಂಭಿಸಲಾಗುತ್ತಿದೆ ಎಂದು ಹೇಳಲಾಗಿದ್ದು, ಕಂಪನಿಯ ಬ್ಯಾಕೆಂಡ್ ಮೂಲಸೌಕರ್ಯ ಸಿದ್ಧವಾಗಿದೆ ಎಂದು ಭಾರ್ತಿ ಏರ್‌ಟೆಲ್ ಮುಖ್ಯ ತಂತ್ರಜ್ಞಾನ ಅಧಿಕಾರಿ ರಣದೀಪ್ ಸಿಂಗ್ ಸೆಖೋನ್ ಹೇಳಿದ್ದಾರೆ.

ಸ್ಮಾರ್ಟ್‌ಫೋನ್‌ನಲ್ಲಿ 5G ಆಕ್ಟಿವ್‌ ಮಾಡುವುದು ಹೇಗೆ ಗೊತ್ತಾ?

ಸ್ಮಾರ್ಟ್‌ಫೋನ್‌ನಲ್ಲಿ 5G ಆಕ್ಟಿವ್‌ ಮಾಡುವುದು ಹೇಗೆ ಗೊತ್ತಾ?

* ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಸೆಟ್ಟಿಂಗ್‌ಗಳ ಅಪ್ಲಿಕೇಶನ್ ಅನ್ನು ಟ್ಯಾಪ್ ಮಾಡಿ
* ಮೊಬೈಲ್ ನೆಟ್‌ವರ್ಕ್ ಆಯ್ಕೆಗೆ ನ್ಯಾವಿಗೇಟ್ ಮಾಡಿ
* ನೆಟ್‌ವರ್ಕ್ ಮೋಡ್ > 5G/4G/3G/2G ಆಯ್ಕೆಯನ್ನು ಆಯ್ಕೆ ಮಾಡಿ

ಏರ್ಟೆಲ್ 5G ಲಭ್ಯವಿರುವ ನಗರಗಳು

ಏರ್ಟೆಲ್ 5G ಲಭ್ಯವಿರುವ ನಗರಗಳು

ಮೊದಲ ಹಂತದಲ್ಲಿ, ಏರ್ಟೆಲ್ 5G ಸೇವೆಯು ದೆಹಲಿ, ಮುಂಬೈ, ವಾರಣಾಸಿ, ಬೆಂಗಳೂರು, ಚೆನ್ನೈ, ಹೈದರಾಬಾದ್, ನಾಗ್ಪುರ ಮತ್ತು ಸಿಲಿಗುರಿ ಸೇರಿದಂತೆ ಎಂಟು ನಗರಗಳಲ್ಲಿ ಲಭ್ಯವಿದೆ.

ಏರ್‌ಟೆಲ್‌ 5G ದರ ಎಷ್ಟು

ಏರ್‌ಟೆಲ್‌ 5G ದರ ಎಷ್ಟು

5G ಸೇವೆಗಳು ಸದ್ಯ ಚಾಲ್ತಿ ಇರುವ 4G ದರಗಳಲ್ಲಿ ಲಭ್ಯವಿರುತ್ತವೆ ಎಂದು ಏರ್‌ಟೆಲ್ ಘೋಷಿಸಿದೆ. ಆದರೆ 5G ಗಾಗಿ ಹೊಸ ದರ ಪಟ್ಟಿಯನ್ನು ನಂತರ ಪ್ರಕಟಿಸಲಾಗುವುದು ಎಂದು ತಿಳಿಸಿದೆ.

ಇತರೆ 200 ನಗರಗಳಲ್ಲಿ 5G ಸೇವೆ ಪ್ರಾರಂಭ

ಇತರೆ 200 ನಗರಗಳಲ್ಲಿ 5G ಸೇವೆ ಪ್ರಾರಂಭ

ಮುಂದಿನ ಆರು ತಿಂಗಳಲ್ಲಿ 200 ನಗರಗಳಲ್ಲಿ 5G ಆರಂಭಿಸಲು ಸರ್ಕಾರ ಕೆಲಸ ಮಾಡುತ್ತಿದೆ ಎಂದು ದೂರಸಂಪರ್ಕ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ. 200 ನಗರಗಳನ್ನು ವ್ಯಾಪಿಸುವ ಗುರಿ ಹೊಂದಿದ್ದರೂ, ಮುಂದಿನ ಆರು ತಿಂಗಳಲ್ಲಿ 600 ನಗರಗಳನ್ನು ಒಳಗೊಂಡಿರುವ ಕಾರ್ಯದ ಆವೇಗವಿದೆ ಎಂದು ಅವರು ಹೇಳಿದರು.

ಜಿಯೋ ಮತ್ತು ವಿ ಟೆಲಿಕಾಂ 5G

ಜಿಯೋ ಮತ್ತು ವಿ ಟೆಲಿಕಾಂ 5G

ಜಿಯೋ ಟೆಲಿಕಾಂ ದೀಪಾವಳಿ ವೇಳಗೆ 5G ಸೇವೆಯನ್ನು ಪ್ರಾರಂಭಿಸುವುದಾಗಿ ಹೇಳಿದೆ. ಹಾಗೆಯೇ 5G ಸೇವೆಗಳು ಕೈಗೆಟುಕುವ ದರದಲ್ಲಿ ಇರಲಿದೆ ಎಂದು ಹೇಳಿದೆ. ಇನ್ನು ವೊಡಾಫೋನ್ ಐಡಿಯಾ ಟೆಲಿಕಾಂ (ವಿ ಟೆಲಿಕಾಂ) 5G ಅನ್ನು ಯಾವಾಗ ಪ್ರಾರಂಭಿಸಲಿದೆ ಎನ್ನುವ ಬಗ್ಗೆ ಅಧಿಕೃತ ದಿನಾಂಕ ತಿಳಿಸಿಲ್ಲ.

Best Mobiles in India

English summary
5G in Bangalore: Airtel Announces Launch of 5G services in 8 cities including Bangalore: Details here.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X