1 ರೂಪಾಯಿಗೆ 10GB ಡೇಟಾ ನೀಡಲಿವೆಯೇ ಟೆಲಿಕಾಂ ಕಂಪೆನಿಗಳು?!

  ನಾವಿನ್ನೂ 4ನೇ ತಲೆಮಾರಿನ ಇಂಟರ್ನೆಟ್ ಪಡೆಯಲು ಹರಸಾಹಸಪಡುತ್ತಿದ್ದರೆ, 2019ರಲ್ಲಾಗಲೇ ವಿದ್ಯುತ್‌ನ ವೇಗಕ್ಕೆ ಸಾಟಿಯಾಗಿರುವ 5ಜಿ ಅಂತರ್ಜಾಲ ಸಂಪರ್ಕ ವಾಸ್ತವವಾಗಲಿದೆ ಎಂದು ತಜ್ಞರು ಹೇಳುತ್ತಿದ್ದಾರೆ.! 2019ರಲ್ಲಿ 5G ಇಂಟರ್‌ನೆಟ್‌ನ ವೇಗವನ್ನು ಈಗಲೇ ಊಹಿಸಲು ಅಸಾಧ್ಯ ಎಂದು ಟೆಕ್ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.!!

  5ಜಿ ಅಂತರ್ಜಾಲ ವಾಸ್ತವವಾದರೆ ಈಗಿರುವ ತಂತು ವ್ಯವಸ್ಥೆಯಲ್ಲೇ ಹೆಚ್ಚಿನ ಸ್ಪೀಡ್ ಇಂಟರ್‌ನೆಟ್ ಒದಗಿಸಲು ಸಾಧ್ಯವಾಗುತ್ತದೆ. ಹಾಗಾಗಿ, ಭವಿಷ್ಯದಲ್ಲಿ ಇಂಟರ್‌ನೆಟ್ ಸೇವೆಗಳು ಭಾರಿ ಅಗ್ಗವಾಗಲಿವೆ ಎಂದು ತಜ್ಞರು ತಿಳಿಸಿದ್ದಾರೆ.! ಸ್ಟ್ರೀಮಿಂಗ್ ಸೇವೆ ಎಲ್ಲವೂ ಇಂಟರ್‌ನೆಟ್ ಆಧಾರದಲ್ಲಿಯೇ ಕಾರ್ಯನಿರ್ವಹಿಸಲಿವೆ ಎಂದು ತಿಳಿಸಿದ್ದಾರೆ.! ಹಾಗಾದರೆ, 5ಜಿ ಅಂತರ್ಜಾಲ ಸಂಪರ್ಕ ವಾಸ್ತವವಾದರೆ ಅಂತರ್ಜಾಲ ಪ್ರಪಂಚ ಹೇಗಿರಲಿದೆ ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  ಭವಿಷ್ಯದಲ್ಲಿ ಡೇಟಾ(ಇಂಟರ್‌ನೆಟ್) ಮಾತ್ರ!!

  ಈಗಲೂ ಹಣ ನೀಡಿ ಎಸ್‌ಎಮ್‌ಎಸ್, ಮತ್ತು ಕಾಲ್‌ ಸೇವೆಯನ್ನು ಬಳಕೆ ಮಾಡುತ್ತಿರುವವರನ್ನು ನೋಡಬಹುದು. ಆದರೆ, ಮುಂದಿನ ವರ್ಷದ ಒಳಗಾಗಿಯೇ ಎಸ್‌ಎಮ್‌ಎಸ್, ಮತ್ತು ಕಾಲ್‌ ಸೇವೆಗೆ ಹಣವನ್ನು ನೀಡಲುವ ಅವಶ್ಯಕತೆ ಇಲ್ಲ. ಬರಿ ಡೇಟಾದಲ್ಲಿಯೇ ಇವೆಲ್ಲವೂ ನಡೆದುಹೋಗುತ್ತದೆ.!!

  ಡೇಟಾ ಸ್ಪೀಡ್ ಎಷ್ಟಿರುತ್ತೆ?

  ಇಲ್ಲಿಯವರೆಗೂ 2G, 3G, 4G ಬಳಕೆ ಮಾಡುತ್ತಿದ್ದ ಕಾಲ ಮುಗಿಯುತ್ತದೆ.ಭವಿಷ್ಯದಲ್ಲಿ 5Gಗಿಂತಲೂ ಹೆಚ್ಚಿನ ವೇಗದ ಡೇಟಾ ಸ್ಪೀಡ್ ಜನರಿಗೆ ದೊರೆಯುತ್ತದೆ.! ಒಂದು GB ಡೇಟಾ ಒಂದು ಸೆಕೆಂಟ್‌ನಲ್ಲಿಯೇ ಡೌನ್‌ಲೋಡ್ ಆಗಬಹುದಾದ ತಂತ್ರಜ್ಞಾನ ಬರುತ್ತದೆ.!!

  1 ರೂಪಾಯಿಗೆ 10GB ಡೇಟಾ!!

  ಹೌದು, ಕೆವಲ ಒಂದು ವರ್ಷದ ಹಿಂದಷ್ಟೆ ಹಿಂದಷ್ಟೆ ನೀವು ಒಂದು ಜಿಬಿ ಡೇಟಾಗೆ 300 ರೂಪಾಯಿಗಳನ್ನು ಪಾವತಿ ಮಾಡುತ್ತಿದ್ದಿರಿ. ಆದರೆ, ಪ್ರಸ್ತುತ 5 ರೂಪಾಯಿಗೆ ಒಂದು ಜಿಬಿ ಡೇಟಾ ನಿಮಗೆ ಲಭ್ಯವಿದೆ.! ಹಾಗಾಗಿ, 5Gಯಿಂದ ಇನ್ನೆರಡು ವರ್ಷಗಳಲ್ಲಿ ಒಂದು ರೂಪಾಯಿಗೆ 10GB ಡೇಟಾ ಸಿಕ್ಕರೂ ಆಶ್ಚರ್ಯವಿಲ್ಲ.!!

  ಡೇಟಾ ಟಿವಿ.!!

  ರೋಡಿನಲ್ಲಿ ಹರಡಿರುವ ಟಿವಿ ಕೇಬಲ್‌ಗಳು, ಮನೆಯ ಅಂದ ಕೆಡಿಸುವ ಡಿಟಿಹೆಚ್ ಬಾಂಡಲಿಗಳು ಭವಿಷ್ಯದಲ್ಲಿ ಮರೆಯಾಗುತ್ತವೆ. ಕೇವಲ ಇಂಟರ್‌ನೆಟ್ ಕನೆಕ್ಷನ್ ಮೂಲಕವೇ ನಿಮ್ಮ ಟಿವಿ ಕಾರ್ಯ ನಿರ್ವಹಿಸುತ್ತವೆ.! ಈಗಾಗಲೇ ಮುಂದುವರೆದ ರಾಷ್ಟಗಳಲ್ಲಿ ಈ ಸೇವೆ ಲಭ್ಯವಿದ್ದು, ಇವುಗಳ ಬೆಲೆ ಭವಿಷ್ಯದಲ್ಲಿ ಭಾರಿ ಕಡಿಮೆಯಾಗಲಿದೆ.!

  How to Activate UAN Number? KANNADA
  ಎಲ್ಲವೂ ಸ್ಮಾರ್ಟ್‌ಫೋನ್!!

  ಎಲ್ಲವೂ ಸ್ಮಾರ್ಟ್‌ಫೋನ್!!

  ಈಗಾಗಲೇ ಸ್ಮಾರ್ಟ್‌ಫೋನ್ ಮೂಲಕವೇ ಎಲ್ಲಾ ಇಂಟರ್‌ನೆಟ್ ವ್ಯವಹಾರಗಳು ನಡೆಯುತ್ತಿವೆ. ಹಾಗೆಯೇ ಭವಿಷ್ಯದಲ್ಲಿ ಪ್ರತಿಯೋರ್ವರ ಬಳಿಯೂ ಸ್ಮಾರ್ಟ್‌ಫೋನ್ ಇರಲೇಬೇಕಾದ ಪರಿಸ್ಥಿತಿ ಸಹ ಸೃಷ್ಟಿಯಾಗಲಿದೆ.! ಏಕೆಂದರೆ ಸ್ಮಾರ್ಟ್‌ಫೋನ್ ಮತ್ತು ಇಂಟರ್‌ನೆಟ್ ಇಲ್ಲದಿದ್ದರೆ ಮುಂದೆ ಬದುಕಲೂ ಕಷ್ಟವಾಗಬಹುದು.!!

  ಓದಿರಿ:ಮಾರುಕಟ್ಟೆಯಲ್ಲಿ ಧೂಳೆಬ್ಬಿಸಲು ಬರುತ್ತಿದೆ ಶಿಯೋಮಿ 'ಮಿಕ್ಸ್ 2ಎಸ್'!!..ಒನ್‌ಪ್ಲಸ್ 5T, ಆಪಲ್ 10 ಕಥೆ?

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  English summary
  Already starting to look beyond 4G, 5G promises significantly more in various ways. We are expecting to see it becoming popular in 2019. to know more visit to kannada.gizbot.com
  Opinion Poll

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more