ಜಿಯೋ ಮತ್ತು ಏರ್‌ಟೆಲ್‌ 5G ಸೇವೆ ಲಭ್ಯ!..ನಿಮ್ಮ ಫೋನ್‌ 5G ಸಪೋರ್ಟ್‌ ಮಾಡುತ್ತಾ?

|

ಬಹುನಿರೀಕ್ಷಿತ 5G ಸೇವೆ ಈಗಾಗಲೇ ಭಾರತದಲ್ಲಿ ಲಾಂಚ್ ಆಗಿದೆ. ಜನಪ್ರಿಯ ಟೆಲಿಕಾಂಗಳಾದ ಜಿಯೋ ಮತ್ತು ಏರ್‌ಟೆಲ್ ದೇಶದ ಕೆಲವು ಪ್ರದೇಶಗಳ ವ್ಯಾಪ್ತಿಯಲ್ಲಿ ತಮ್ಮ 5G ಸೇವೆಗಳನ್ನು ಪ್ರಾರಂಭಿಸಿವೆ. ಭಾರ್ತಿ ಏರ್‌ಟೆಲ್‌ ಈಗಾಗಲೇ ಬೆಂಗಳೂರು ಸೇರಿದಂತೆ ದೇಶದ 8 ನಗರಗಳಲ್ಲಿ 5G ಲಭ್ಯ ಮಾಡಿದೆ. ಅದೇ ರೀತಿ ರಿಲಾಯನ್ಸ್‌ ಜಿಯೋ ಟೆಲಿಕಾಂ (ಅಕ್ಟೋಬರ್‌ 5 ರಿಂದ) ಪ್ರಮುಖ 4 ನಗರಗಳಲ್ಲಿ ಪ್ರಾರಂಭಿಸಿದೆ. ಅಂತೂ 5G ಬಂತೂ, ಇನ್ನು ಪ್ರಸ್ತುತ ನೀವು ಬಳಕೆ ಮಾಡುವ ಸ್ಮಾರ್ಟ್‌ಫೋನ್‌ 5G ಸಪೋರ್ಟ್ ಮಾಡುತ್ತಾ?

ಸ್ವಾಮ್ಯದ

ಹೌದು, ಜಿಯೋ (Jio) ಮತ್ತು ಏರ್‌ಟೆಲ್‌ (Airtel) ಟೆಲಿಕಾಂಗಳು ಕೆಲವು ನಗರಗಳಲ್ಲಿ 5G ಸೇವೆಯನ್ನು ಲಭ್ಯ ಮಾಡಿವೆ. ಹಾಗೆಯೇ ವೊಡಾಫೋನ್‌ ಐಡಿಯಾ (ವಿ ಟೆಲಿಕಾಂ) ಮತ್ತು ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್‌ ಟೆಲಿಕಾಂ ಸಹ 5G ಹೊರತರುವಲ್ಲಿ ನಿರತವಾಗಿವೆ. ಆದರೆ ಸದ್ಯ ಬಹುತೇಕರು 3G ಅಥವಾ 4G ಬೆಂಬಲಿತ ಸ್ಮಾರ್ಟ್‌ಫೋನ್‌ಗಳನ್ನು ಬಳಕೆ ಮಾಡುತ್ತಿದ್ದಾರೆ. ಅವರ ಸ್ಮಾರ್ಟ್‌ಫೋನ್‌ 5G ಸಪೋರ್ಟ್‌ ಮಾಡುತ್ತದೆಯೇ ಅಥವಾ ಇಲ್ಲವೇ ಎಂಬುದರ ಬಗ್ಗೆ ತಿಳಿದಿರುವುದಿಲ್ಲ. ಹಾಗಾದರೆ ಸದ್ಯ ನೀವು ಬಳಕೆ ಮಾಡುವ ಫೋನ್ 5G ಬೆಂಬಲ ಪಡೆದಿದೆಯೇ ಚೆಕ್ ಮಾಡಲು ಹೀಗೆ ಮಾಡಿರಿ.

ಜಿಯೋ 5G ಸೇವೆ ಶುರು:

ಜಿಯೋ 5G ಸೇವೆ ಶುರು:

ರಿಲಯನ್ಸ್ ಜಿಯೋ ಕೋಲ್ಕತ್ತಾ, ದೆಹಲಿ, ಮುಂಬೈ ಮತ್ತು ವಾರಣಾಸಿ ಸೇರಿದಂತೆ 4 ನಗರಗಳಲ್ಲಿ ಬೀಟ್ ಟ್ರಯಲ್ ಆಗಿ 5G ಸೇವೆಯನ್ನು ಪರಿಚಯಿಸಿದೆ. ಹಾಗೆಯೇ ಡಿಸೆಂಬರ್ 2023 ರ ವೇಳೆಗೆ 5G ಎಲ್ಲರಿಗೂ ಲಭ್ಯವಾಗಲಿದೆ ಎಂದಿದೆ. ಮತ್ತೊಂದೆಡೆ, ಏರ್‌ಟೆಲ್ ದೆಹಲಿ, ವಾರಣಾಸಿ, ನಾಗ್ಪುರ, ಬೆಂಗಳೂರು, ಹೈದರಾಬಾದ್, ಮುಂಬೈ, ಚೆನ್ನೈ ಮತ್ತು ಸಿಲಿಗುರಿ ಸೇರಿದಂತೆ 8 ನಗರಗಳಲ್ಲಿ ಈಗಾಗಲೇ 5G ಸೇವೆ ಪ್ರಾರಂಭಿಸಿದೆ. ಮಾರ್ಚ್ 2024 ರ ವೇಳೆಗೆ 5G ಸೇವೆಗಳ ಪ್ಯಾನ್ ಇಂಡಿಯಾ ರೋಲ್‌ಔಟ್ ಆಗಲಿದೆ ಎಂದು ಏರ್‌ಟೆಲ್ ಸಿಇಒ ಇತ್ತೀಚೆಗೆ ಹೇಳಿದ್ದಾರೆ.

ನಿಮ್ಮ ಸ್ಮಾರ್ಟ್‌ಫೋನ್‌ 5G ಸಪೋರ್ಟ್‌ ಮಾಡುತ್ತದೆಯೇ?..ಹೀಗೆ ಚೆಕ್‌ ಮಾಡಿ:

ನಿಮ್ಮ ಸ್ಮಾರ್ಟ್‌ಫೋನ್‌ 5G ಸಪೋರ್ಟ್‌ ಮಾಡುತ್ತದೆಯೇ?..ಹೀಗೆ ಚೆಕ್‌ ಮಾಡಿ:

ಹಂತ 1: ನಿಮ್ಮ ಫೋನ್‌ನಲ್ಲಿ, ಸೆಟ್ಟಿಂಗ್‌ಗಳ ಅಪ್ಲಿಕೇಶನ್‌ಗೆ ಹೋಗಿ

ಹಂತ 2: ನಂತರ 'Wi-Fi ಮತ್ತು Network' ಆಯ್ಕೆಯ ಮೇಲೆ ಕ್ಲಿಕ್ ಮಾಡಿ

ಹಂತ 3: ಆ ಬಳಿಕ 'SIM ಮತ್ತು Network' ಆಯ್ಕೆಯ ಮೇಲೆ ಕ್ಲಿಕ್ ಮಾಡಿ

ಹಂತ 4: 'Preferred network type' ಆಯ್ಕೆಯಲ್ಲಿ ನೀವು ಲಭ್ಯವಿರುವ ನೆಟ್‌ವರ್ಕ್ ಮಾಹಿತಿ ಬಗ್ಗೆ ನೋಡಲು ಸಾಧ್ಯವಾಗುತ್ತದೆ.

ಹಂತ 5: ನಿಮ್ಮ ಫೋನ್ 5G ಅನ್ನು ಬೆಂಬಲಿಸಿದರೆ, ಅಲ್ಲಿ 2G/3G/4G/5G ಎಂದು ಪಟ್ಟಿ ಮಾಡಲಾಗುತ್ತದೆ.

ಏರ್‌ಟೆಲ್‌ ಟೆಲಿಕಾಂ 5G ದರ ಎಷ್ಟು

ಏರ್‌ಟೆಲ್‌ ಟೆಲಿಕಾಂ 5G ದರ ಎಷ್ಟು

5G ಸೇವೆಗಳು ಸದ್ಯ ಚಾಲ್ತಿ ಇರುವ 4G ದರಗಳಲ್ಲಿ ಲಭ್ಯವಿರುತ್ತವೆ ಎಂದು ಏರ್‌ಟೆಲ್ ಘೋಷಿಸಿದೆ. ಆದರೆ 5G ಗಾಗಿ ಹೊಸ ದರ ಪಟ್ಟಿಯನ್ನು ನಂತರ ಪ್ರಕಟಿಸಲಾಗುವುದು ಎಂದು ತಿಳಿಸಿದೆ.

ಜಿಯೋ ಮತ್ತು ವಿ ಟೆಲಿಕಾಂ 5G

ಜಿಯೋ ಟೆಲಿಕಾಂ ಸದ್ಯ 4 ನಗರಗಳಲ್ಲಿ ಬೀಟ್ ಟ್ರಯಲ್ ಆಗಿ 5G ಸೇವೆ ಶುರು ಮಾಡಿದ್ದು, ದೀಪಾವಳಿ ವೇಳಗೆ 5G ಸೇವೆಯನ್ನು ಪ್ರಾರಂಭಿಸುವುದಾಗಿ ಹೇಳಿದೆ. ಹಾಗೆಯೇ 5G ಸೇವೆಗಳು ಕೈಗೆಟುಕುವ ದರದಲ್ಲಿ ಇರಲಿದೆ ಎಂದು ಹೇಳಿದೆ. ಇನ್ನು ವೊಡಾಫೋನ್ ಐಡಿಯಾ ಟೆಲಿಕಾಂ (ವಿ ಟೆಲಿಕಾಂ) ಸಹ 5G ಅನ್ನು ಪ್ರಾರಂಭಿಸಲಿದೆ. ಆದರೆ ಬೆಲೆಯ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ತಿಳಿಸಿಲ್ಲ.

Best Mobiles in India

English summary
5G is now available on Jio and Airtel: how to check if your smartphone has 5G support?.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X