Subscribe to Gizbot

ಅತೀ ಶೀಘ್ರದಲ್ಲಿ 5G ನಿಮ್ಮೆಡೆಗೆ

Written By:

ಪ್ರಪಂಚ ದಿನದಿಂದ ದಿನಕ್ಕೆ ಟೆಕ್‌ ಆವಿಷ್ಕಾರ ಮತ್ತು ಅಭಿವೃದ್ದಿಯಿಂದ ಹೆಚ್ಚು ಹೆಚ್ಚು ಸ್ಮಾರ್ಟ್‌ ಆಗುತ್ತಲೇ ಇದೆ. ಟೆಕ್‌ ಸ್ಮಾರ್ಟ್‌ನೆಸ್‌ ಬಳಸಿಕೊಂಡು ಜನರು ಸಹ ಸ್ಮಾರ್ಟ್‌ ಅಲೋಚನೆಗಳಲ್ಲಿ ತೊಡಗುತ್ತಿದ್ದಾರೆ. ಕಳೆದ ಒಂದು ತಿಂಗಳ ಹಿಂದೆಯಷ್ಟೇ ಸ್ಮಾರ್ಟ್‌ಫೋನ್‌ ಬಳಕೆದಾರರು ಏರ್‌ಟೆಲ್‌ 4G ಇಂದ ಇಂಟರ್ನೆಟ್‌ ವೇಗ ಹೆಚ್ಚಿಸಿಕೊಂಡರು. ಅದರ ಬೆನ್ನ ಹಿಂದೆಯೇ ಈಗ ಗಿಜ್‌ಬಾಟ್‌ ಸ್ಮಾರ್ಟ್‌ಫೋನ್‌ ಬಳಕೆದಾರರಿಗೆ 5G ಬಗ್ಗೆ ಹೊಸ ಮಾಹಿತಿಯೊಂದನ್ನು ತನ್ನ ಲೇಖನದಲ್ಲಿ ನೀಡುತ್ತಿದೆ.

ಓದಿರಿ: ಆಂಡ್ರಾಯ್ಡ್‌ನಲ್ಲಿ ಇಂಟರ್‌ನೆಟ್‌ ವೇಗ ಹೆಚ್ಚಿಸುವುದು ಹೇಗೆ?

ಹೌದು, ಏರ್‌ಟೆಲ್‌ ಭಾರತಕ್ಕೆ ಈದೀಗ ತಾನೆ 4G ಪರಿಚಯಿಸಿದೆ. ಇದರ ಬೆನ್ನಲ್ಲೇ 5G ಇಂಟರ್ನೆಟ್‌ ವೇಗವನ್ನು ಜಪಾನ್‌ನಲ್ಲಿ ಈಗಾಗಲೇ ಪರೀಕ್ಷೆ ನೆಡೆಸಲಾಗಿದೆ. ಇದರ ಬಗ್ಗೆ ವಿಶೇಷ ಮಾಹಿತಿಯನ್ನು ಈ ಲೇಖನದಲ್ಲಿ ಓದಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
5G

5G

ಜಪಾನ್‌ ನಲ್ಲಿ 5G ಇಂಟರ್ನೆಟ್‌ ಪರೀಕ್ಷೆ ನೆಡೆದಿದ್ದು, ವಾಸ್ತವ ಪರಿಸ್ಥಿತಿಯಲ್ಲಿ ಇಂಟರ್ನೆಟ್‌ ವೇಗ 3.6 Gbps ತಲುಪಿದೆ.

ಹುವಾವೆ ಮತ್ತು NTT ಡೊಕೊಮೊ

ಹುವಾವೆ ಮತ್ತು NTT ಡೊಕೊಮೊ

ಹುವಾವೆ ಮತ್ತು NTT ಡೊಕೊಮೊ ಉತ್ಪಾದಕ ಕಂಪನಿಗಳು ಸ್ಮಾರ್ಟ್‌ಫೋನ್‌ ಒಂದರಲ್ಲಿ 5G ಪರೀಕ್ಷೆ ನೆಡೆಸಿ ಜಪಾನ್‌ನಲ್ಲಿ 3.6 Gbps ಡಾಟಾ ರೇಟ್‌ ಸಾಧನೆ ಮಾಡಿದ್ದಾರೆ. ಈ ಪರೀಕ್ಷೆಯನ್ನು ವಾಸ್ತವವಾಗಿ ಲ್ಯಾಬೋರೇಟರಿ ಹೊರವಲಯದಲ್ಲಿ ನೆಡೆಸಲಾಗಿದೆ.

ಹೋಲಿಕೆ

ಹೋಲಿಕೆ

ಭಾರತದಲ್ಲಿ 4G ಸರಾಸರಿ ವೇಗ 16 Mbps ಆಗಿದೆ. ಆದರೆ 5G ಗರಿಷ್ಟ ಸರಾಸರಿ ವೇಗ 20 Gbps ನಿರೀಕ್ಷೆ ಇಟ್ಟುಕೊಂಡಿದೆ. ಅಂದರೆ ಯಾವುದೇ ವಿಷಯವು 1 ಸೆಕೆಂಡಿನಲ್ಲಿ ಡೌನ್‌ಲೋಡ್‌ ಆಗುವುದು ಎಂದು ಹೇಳಲಾಗಿದೆ.

5G ಪರೀಕ್ಷೆಯ ಅಗತ್ಯತೆ

5G ಪರೀಕ್ಷೆಯ ಅಗತ್ಯತೆ

5G ಇಂಟರ್ನೆಟ್‌ ಸೇವೆಯು ಪ್ರಸ್ತುತ ಸ್ಮಾರ್ಟ್‌ಗಳಿಗೆ ಲಭ್ಯವಾಗುವ ರೀತಿಯಲ್ಲಿ ಸೇವೆ ಒದಗಿಸಲು, ಹಾಗೂ ಯಾವುದೇ ಹೊಸ ಟೆಕ್ನಾಲಜಿಯನ್ನು 5G ಸೇವೆಗಾಗಿ ಅಪ್‌ಗ್ರೇಡ್‌ ಮಾಡದಿರಲು ಪರೀಕ್ಷೆ ಅಗತ್ಯ ಎನ್ನಲಾಗಿದೆ.

5G ಪರೀಕ್ಷೆಯ ಅಗತ್ಯತೆ ಬಗ್ಗೆ ಸ್ಪಷ್ಟನೆ ನೀಡಿದ ಕಂಪನಿಗಳು

5G ಪರೀಕ್ಷೆಯ ಅಗತ್ಯತೆ ಬಗ್ಗೆ ಸ್ಪಷ್ಟನೆ ನೀಡಿದ ಕಂಪನಿಗಳು

ಸ್ಮಾರ್ಟ್‌ಫೋನ್‌ ಬ್ರಾಂಡ್‌ಗಳಾದ ನೋಕಿಯಾ, ಸ್ಯಾಮ್‌ಸಂಗ್‌, 5G ಅಗತ್ಯತೆ ಬಗ್ಗೆ ಸ್ಪಷ್ಟನೆ ನೀಡಿವೆ.

 2018ನೇ ಇಸವಿಯೊಳಗೆ ಸೇವೆ ಲಭ್ಯ

2018ನೇ ಇಸವಿಯೊಳಗೆ ಸೇವೆ ಲಭ್ಯ

ಹುವಾವೆ ಈ ಬಗ್ಗೆ 2018ನೇ ಇಸವಿಯೊಳಗೆ ಅಭಿವೃದ್ದಿ ಪಡಿಸಿ ಸೇವೆಯನ್ನು ಸಾರ್ವಜನಿಕವಾಗಿ ನೀಡುವ ಬಗ್ಗೆ ಭರವಸೆ ನೀಡಿದೆ. ಆದರೆ NTT ಡೊಕೊಮೊ ಮಾತ್ರ ಈ ಭರವಸೆಯನ್ನು 2020 ಕ್ಕೆ ಮುಂದೂಡಿದೆ.

ಅಮೇರಿಕ

ಅಮೇರಿಕ

ಅಮೇರಿಕದ ಸ್ಮಾರ್ಟ್‌ಫೋನ್‌ ಬಳಕೆದಾರರಿಗೆ 5G ಸೇವೆಯನ್ನು ಅಳವಡಿಸಲು 4G ಆಡಳಿತ ವ್ಯವಸ್ಥೆಯಿಂದ ಅಪ್‌ಡೇಟ್‌ ಮಾಡುವಲ್ಲಿ ಕಷ್ಟಕರವಾಗಬಹುದು ಎನ್ನಲಾಗಿದೆ.

4G LTE ಡೌನ್‌ಲೋಡ್‌

4G LTE ಡೌನ್‌ಲೋಡ್‌

ಸಾದಾರಣ 4G LTE ಡೌನ್‌ಲೋಡ್‌ 20 Mbps ತಲುಪುತ್ತದೆ. ಇದು 5G ನೆಟ್‌ವರ್ಕ್‌ ಪ್ರಾರಂಭವಾದರೂ ವೇಗ ಈ ರೀತಿಯೇ ಕೆಲವು ದಿನಗಳಕಾಲ ಇರುತ್ತದೆ.

ಇಂಟರ್ನ್ಯಾಷನಲ್ ಟೆಲಿಕಂಮ್ಯುನಿಕೇಷನ್ ಯೂನಿಯನ್‌

ಇಂಟರ್ನ್ಯಾಷನಲ್ ಟೆಲಿಕಂಮ್ಯುನಿಕೇಷನ್ ಯೂನಿಯನ್‌

ಇಂಟರ್ನ್ಯಾಷನಲ್ ಟೆಲಿಕಂಮ್ಯುನಿಕೇಷನ್ ಯೂನಿಯನ್‌ 5G ಇಂಟರ್ನೆಟ್‌ ಸೇವೆ ಖಂಡಿತವಾಗಿ ಯಾವುದೇ ಕಿರಿಕಿರಿ ಇಲ್ಲದೇ 20 Gbps ತಲುಪಲಿದೆ ಎಂದು ಹೇಳಿದೆ. ಹೋಮ್‌ ಬ್ರಾಡ್‌ಬ್ಯಾಂಡ್‌ ಅನ್ನು ಫೈಬರ್‌ ಆಪ್ಟಿಕ್ ಸಿಸ್ಟಮ್‌ ಸಹಾಯದಿಂದ 5G ಸೇವೆಯನ್ನು ಎಲ್ಲಾ ಪ್ರದೇಶಗಳಲ್ಲೂ ವೇಗಗೊಳಿಸಲಿದೆ.

3.6Gbps

3.6Gbps

ಹುವಾವೆ ಮತ್ತು NTT ಡೊಕೊಮೊ sub-6GHz ಬ್ಯಾಂಡ್ ಬಳಸಿ ಮಾಹಿತಿ ವೆಲಾಸಿಟಿ 3.6Gbps ತಲುಪಿವೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
If you already complains about the speed of the Internet 4G (LTE), the fastest mobile Internet technology currently on the market, just wait a little longer: the tests with the 5G are already underway and the results are impressive.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot