ಫೇಸ್‌ಬುಕ್‌ ಲೈಕ್ಸ್‌, ಕಾಮೆಂಟ್‌ಗಳನ್ನೂ ಖರೀದಿ ಮಾಡಬಹುದು; ಇಲ್ಲಿದೆ ನೋಡಿ ವಿವರ!

|

ಈಗಂತೂ ಸಾಮಾಜಿಕ ಜಾಲತಾಣದಲ್ಲಿ ಬಹುಪಾಲು ಎಲ್ಲರೂ ಸಹ ಫೇಮಸ್‌ ಆಗಲು ಬಯಸುತ್ತಾರೆ. ಈ ಮೂಲಕ ಅದೆಷ್ಟೋ ಜನರು ಜೀವನ ಕಟ್ಟಿಕೊಂಡಿದ್ದಾರೆ. ಹಾಗೆಯೇ ಜೀವನವನ್ನು ಹಾಳು ಮಾಡುಕೊಂಡಿರುವವರೂ ಸಹ ಇದ್ದಾರೆ. ಇದರೊಂದಿಗೆ ಫೇಸ್‌ಬುಕ್‌ ಅಥವಾ ಇನ್‌ಸ್ಟಾಗ್ರಾಮ್‌ನಲ್ಲಿ ಕೇವಲ ಲೈಕ್ಸ್‌ ಪಡೆಯುವ ಉದ್ದೇಶದಿಂದ ಅದೆಷ್ಟೋ ಜನ ಟ್ರೋಲ್‌ಗೆ ಒಳಗಾಗುವುದು ನಮ್ಮ ಕಣ್ಣ ಮುಂದಿರುವ ಸತ್ಯ.

ಸಾಮಾಜಿಕ

ಹೌದು, ಈಗ ಎದುರುಗಡೆ ನಿಂತು ನೀವು ಇಷ್ಟ ಎನ್ನುವವರನ್ನು ಮೆಚ್ಚುವ ಜನರಿಗಿಂತ ಸಾಮಾಜಿಕ ಜಾಲತಾಣದಲ್ಲಿ ಸಿಗುವ ಲೈಕ್ಸ್‌ ಹಾಗೂ ಕಾಮೆಂಟ್ಸ್‌ಗೆ ಹೆಚ್ಚಿನ ಮೌಲ್ಯ ಬಂದಿದೆ. ಇದಕ್ಕಾಗಿಯೇ ಕ್ರಿಯೇಟರ್ಸ್‌ ಒಂದಲ್ಲಾ ಒಂದು ರೀತಿ ಭಿನ್ನವಾಗಿ ತಮ್ಮನ್ನು ತಾವು ಸಮಾಜಕ್ಕೆ ತೋರಿಸಿಕೊಳ್ಳುತ್ತಿದ್ದಾರೆ. ಅದರಲ್ಲೂ ಸಾಮಾಜಿಕ ಪ್ಲಾಟ್‌ಫಾರ್ಮ್‌ನಲ್ಲಿ ಯಾವುದೇ ಪೋಸ್ಟ್‌ಗೆ ಲೈಕ್ಸ್‌ ಹೆಚ್ಚಾಗಿ ಬಂದರೆ ಅದು ಹೆಚ್ಚು ಸದ್ದು ಮಾಡುತ್ತದೆ. ಅದಾಗ್ಯೂ ಹೆಚ್ಚು ಲೈಕ್ಸ್‌ ಗಳಿಸಿಕೊಳ್ಳಲು ಕೆಲವರು ಬೇರೆಯದೇ ಮಾರ್ಗವನ್ನು ಅನುಸರಿಸುವುದುಂಟು.

ಬಲ್ಕೋಯ್ಡ್

ಬಲ್ಕೋಯ್ಡ್

ಬಲ್ಕೋಯ್ಡ್ ಎಂಬುದು ಫೇಸ್‌ಬುಕ್‌ ಲೈಕ್ಸ್‌ಗಳನ್ನು ಖರೀದಿ ಮಾಡುವ ಪ್ಲಾಟ್‌ಫಾರ್ಮ್‌ ಆಗಿದೆ. ಹಾಗೆಯೇ ನಿಮ್ಮ ಪೇಜ್‌ನ ಎಂಗೇಜ್‌ಮೆಂಟ್‌ನ್ನು ಇದರ ಮೂಲಕ ಹೆಚ್ಚಿಗೆ ಮಾಡಿಕೊಳ್ಳಬಹುದಾಗಿದ್ದು, ಇದರೊಂದಿಗೆ ನಿಮ್ಮ ವ್ಯವಹಾರವನ್ನು ಸುಲಭವಾಗಿಸಿಕೊಳ್ಳಬಹುದು. ಈ ವೆಬ್‌ಸೈಟ್‌ ಮೂಲಕ ಯೂಟ್ಯೂಬ್, ಇನ್‌ಸ್ಟಾಗ್ರಾಮ್ ಮತ್ತು ಸ್ಪಾಟಿಫೈ ಸೇರಿದಂತೆ ಇತರ ಪ್ರಮುಖ ಪ್ಲಾಟ್‌ಫಾರ್ಮ್‌ಗಳಿಗೆ ಮಾರ್ಕೆಟಿಂಗ್ ಸೇವೆಗಳನ್ನು ಪಡೆಯಬಹುದಾಗಿದೆ. ಅದಾಗ್ಯೂ ಈ ರೀತಿಯ ಮಾರ್ಗದಲ್ಲಿ ಲೈಕ್ಸ್‌ಗಳನ್ನು ಪಡೆಯುವುದರ ಬಗ್ಗೆ ಎಚ್ಚರಿಕೆ ವಹಿಸುವುದು ಸಹ ಒಳ್ಳೆಯದು.

ವೈರಲ್ ಹೆಚ್‌ಕ್ಯೂ

ವೈರಲ್ ಹೆಚ್‌ಕ್ಯೂ

ಫೇಸ್‌ಬುಕ್‌ ಹಾಗೂ ಇನ್ನಿತರೆ ಪ್ಲಾಟ್‌ಫಾರ್ಮ್‌ನಲ್ಲಿ ಲೈಕ್‌ಗಳನ್ನು ಖರೀದಿ ಮಾಡಲು ವೈರಲ್ ಹೆಚ್‌ಕ್ಯೂ ಅಪ್ಲಿಕೇಶನ್‌ ಮತ್ತೊಂದು ಪ್ಲಾಟ್‌ಫಾರ್ಮ್‌ ಆಗಿದೆ. ಇದರಲ್ಲಿ ಅತ್ಯುತ್ತಮ ಸೇವೆಗಳು ಲಭ್ಯವಾಗಲಿದ್ದು, ಉತ್ತಮ ಬೆಲೆಗಳೊಂದಿಗೆ ಅತ್ಯುತ್ತಮ ಲೈಕ್ಸ್‌ಗಳನ್ನು ಗಳಿಸಿಕೊಳ್ಳಬಹುದಾಗಿದೆ. ಇನ್ನು ನಕಲಿ ಹಾಗೂ ಮೋಸದ ಪ್ಲಾಟ್‌ಫಾರ್ಮ್‌ಗಳಿಗೆ ಇದು ಸೇವೆ ನೀಡುವುದಿಲ್ಲ. ಈ ಪ್ಲಾಟ್‌ಫಾರ್ಮ್‌ನಿಂದ ನೀವು ಅಂದುಕೊಂಡಷ್ಟು ಫಾಲೋವರ್ಸ್‌ ಗಳನ್ನು ಸಹ ಪಡೆದುಕೊಳ್ಳಬಹುದಾಗಿದೆ.

ಯೂಸ್‌ವೈರಲ್‌(UseViral)

ಯೂಸ್‌ವೈರಲ್‌(UseViral)

ಫೇಸ್‌ಬುಕ್ ಲೈಕ್ಸ್ ಪಡೆದುಕೊಳ್ಳುವ ಆಯ್ಕೆಯಲ್ಲಿ ಮತ್ತೊಂದು ವೆಬ್‌ಸೈಟ್‌ ಎಂದರೆ ಯೂಸ್‌ವೈರಲ್. ಇದು ಉತ್ತಮ ಗುಣಮಟ್ಟದ ಮತ್ತು ಇತ್ತೀಚಿನ ತಂತ್ರಜ್ಞಾನದೊಂದಿಗೆ ಕೆಲಸ ಮಾಡಲಿದೆ. ಫೇಸ್‌ಬುಕ್‌ ಅಥವಾ ಇತರೆ ಪ್ಲಾಟ್‌ಫಾರ್ಮ್‌ನಲ್ಲಿ ಬಳಕೆದಾರರು ತಮ್ಮದೇ ಆದ ಫಾಲೋವರ್ಸ್‌ ಅಥವಾ ಲೈಕ್ಸ್‌ಗಳನ್ನು ಪಡೆದುಕೊಳ್ಳಲು ಇದು ಸುಲಭ ಮಾರ್ಕೆಟಿಂಗ್ ಸೇವೆಗಳನ್ನು ನೀಡುತ್ತದೆ.

ಎಫ್‌ಬಿ ಪೋಸ್ಟ್‌ ಲೈಕ್ಸ್‌

ಎಫ್‌ಬಿ ಪೋಸ್ಟ್‌ ಲೈಕ್ಸ್‌

ಎಫ್‌ಬಿ ಪೋಸ್ಟ್‌ ಲೈಕ್ಸ್‌ ವೆಬ್‌ಸೈಟ್‌ ಮೂಲಕವೂ ತ್ವರಿತ ಫೇಸ್‌ಬುಕ್ ಲೈಕ್ಸ್‌ಗಳನ್ನು ಗಳಿಕೆ ಮಾಡಬಹುದಾಗಿದೆ. ಇದರ ವಿಶೇಷ ಎಂದರೆ ನೀವು ಕಡಿಮೆ ಸಮಯದಲ್ಲಿ ಬೇಗನೇ ಹೆಚ್ಚು ಲೈಕ್ಸ್‌ಗಳನ್ನು ಗಳಿಸಬಹುದು. ಇದರಿಂದ ನಿಮ್ಮ ಸಮಯ ಉಳಿತಾಯ ಆಗುತ್ತದೆ. ಹಾಗೆಯೇ ನೈಜ ಖಾತೆಗಳಿಗಷ್ಟೇ ಇದು ಸೇವೆ ನೀಡುತ್ತದೆ ಎನ್ನುವುದು ನಿಮ್ಮ ಗಮನಕ್ಕಿರಲಿ.

ವೈರಾಲಿಫ್ಟ್

ವೈರಾಲಿಫ್ಟ್

ವೈರಾಲಿಫ್ಟ್ ಮೂಲಕವೂ ಫೇಸ್‌ಬುಕ್‌ನಲ್ಲಿ ತ್ವರಿತವಾಗಿ ವೈರಲ್ ಆಗಬಹುದಾಗಿದೆ. ಕೈಕೆಟಕುವ ದರದಲ್ಲಿ ಸೇವೆ ನೀಡಲಿದ್ದು, ಯಾವುದೇ ಸಾಮಾಜಿಕ ಪ್ಲಾಟ್‌ಫಾರ್ಮ್‌ ಬಳಕೆದಾರರು ಇದರ ಸೇವೆ ಪಡೆದುಕೊಳ್ಳಬಹುದು. ನಿಮ್ಮ ಯಾವುದಾದರೂ ಕಂಟೆಂಟ್‌ ಹೆಚ್ಚು ವೈರಲ್‌ ಆಗಬೇಕು ಎಂದರೆ ಈ ಪ್ಲಾಟ್‌ಫಾರ್ಮ್‌ ಸಹಾಕಯವಾಗಲಿದೆ.

ಸೋಶಿಯಲ್‌ ವೈರಲ್

ಸೋಶಿಯಲ್‌ ವೈರಲ್

ಸೋಶಿಯಲ್‌ ವೈರಲ್ ವೆಬ್‌ಸೈಟ್‌ ಮೂಲಕ ಸುಲಭ ಮತ್ತು ವಿಶ್ವಾಸಾರ್ಹವಾದ ಸೇವೆ ಪಡೆದುಕೊಳ್ಳಬಹುದಾಗಿದೆ. ಇದರಲ್ಲಿ ಫೇಸ್‌ಬುಕ್‌ ಲೈಕ್ಸ್‌ ಹಾಗೂ ಕಾಮೆಂಟ್‌ಗಳನ್ನು ಪಡೆದುಕೊಳ್ಳಬಹುದಾಗಿದೆ. ಇದಿಷ್ಟೇ ಅಲ್ಲದೆ ಫಾಲೋವರ್ಸ್‌ಗಳನ್ನೂ ಈ ಮೂಲಕ ಗಳಿಸಬಹುದು. ಇದರೊಂದಿಗೆ ನಿಮ್ಮ ಪೋಸ್ಟ್‌ನ ಎಂಗೇಜ್‌ಮೆಂಟ್‌ ಹೆಚ್ಚಿಗೆ ಮಾಡಲು ಇದು ಸಹಕಾರಿಯಾಗಲಿದೆ.

ಫೇಸ್‌ಬುಕ್‌

ಫೇಸ್‌ಬುಕ್‌ನಲ್ಲಿ ಇಷ್ಟೆಲ್ಲಾ ಮಾರ್ಗದ ಮೂಲಕ ಲೈಕ್ಸ್‌ ಪಡೆಯುವ ಹೊರತಾಗಿಯೂ ನೀವು ನಿಮ್ಮ ಫಾಲೋವರ್ಸ್‌ಗಳ ಮನೋಭಾವವನ್ನು ಅರ್ಥ ಮಾಡಿಕೊಂಡು ಅವರಿಗೆ ಇಷ್ಟವಾಗವ ಕಂಟೆಂಟ್‌ ಅನ್ನು ನೀಡಿದರೆ ಯಾವುದೇ ಹಣ ವ್ಯಯ ಮಾಡದೆ ಲೈಕ್ಸ್‌ ಪಡೆದುಕೊಳ್ಳಬಹುದು. ಹಾಗೆಯೇ ಟ್ರೆಂಡ್‌ಗಳೊಂದಿಗೆ ತಕ್ಕಂತೆ ನಡೆದುಕೊಳ್ಳುವುದು ಸಹ ಪ್ರಮುಖವಾದ ವಿಷಯವಾಗಿದೆ.

Best Mobiles in India

English summary
6 Best Sites To Buy Facebook Likes For Page, Photos Or Post .

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X