ಆಂಡ್ರಾಯ್ಡ್ ಎಮ್: ಆಂಡ್ರಾಯ್ಡ್‌ನ ಬಲಗೈಭಂಟ ಹೇಗೆ?

By Shwetha
|

ಆಂಡ್ರಾಯ್ಡ್ ಲಾಲಿಪಪ್‌ನ ಸಕ್ಸೆಸರ್ ಆಂಡ್ರಾಯ್ಡ್ ಎಮ್ ಉಗಮಗೊಂಡಿದೆ. ಆಂಡ್ರಾಯ್ಡ್‌ನ ವಿಪಿ ಎಂಜಿನಿಯರಿಂಗ್ ಗೂಗಲ್ ಈವೆಂಟ್‌ನಲ್ಲಿ ಆಂಡ್ರಾಯ್ಡ್ ಎಮ್ ಲಾಲಿಪಪ್ ಅನ್ನು ಮೀರಿಸಿ ದಾಖಲೆ ನರೆಯುತ್ತದೆ ಎಂದು ಭವಿಷ್ಯ ನುಡಿದಿದ್ದಾರೆ.

ಓದಿರಿ: ಆಂಡ್ರಾಯ್ಡ್ ಎಮ್ ಪ್ರಿವ್ಯೂ ಈ ಹಂತಗಳಲ್ಲಿ ಡೌನ್‌ಲೋಡ್ ಮಾಡಿ

ಲಾಲಿಪಪ್ ಅನ್ನು ಪ್ರಸ್ತುತಪಡಿಸಿದ ಸಂದರ್ಭದಲ್ಲಿ ಗೂಗಲ್ ಕಂಡುಕೊಂಡ ಕೆಲವೊಂದು ನವೀಕರಣಗಳನ್ನು ಆಂಡ್ರಾಯ್ಡ್ ಎಮ್‌ನಲ್ಲಿ ಒಳಪಡಿಸಿದೆ. ಗೂಗಲ್‌ನ ಹೆಚ್ಚು ಬಲಯುತ ಓಎಸ್ ಆಗಿ ಗೂಗಲ್ ಎಮ್ ತನ್ನ ನೆಲೆಯನ್ನು ಕಂಡುಕೊಂಡಿದ್ದು ಇಂದಿನ ಲೇಖನದಲ್ಲಿ ಇದನ್ನು ಕುರಿತಾದ ಇನ್ನಷ್ಟು ವಿಷಯಗಳನ್ನು ನಾವು ಅರಿತುಕೊಳ್ಳಲಿರುವೆವು.

ನೇಟೀವ್ ಫಿಂಗರ್ ಪ್ರಿಂಟ್ ಬೆಂಬಲ

ನೇಟೀವ್ ಫಿಂಗರ್ ಪ್ರಿಂಟ್ ಬೆಂಬಲ

ಹೆಚ್ಚಿನ ಸ್ಮಾರ್ಟ್‌ಫೋನ್‌ಗಳು ಬೆರಳಚ್ಚು ಸ್ಕ್ಯಾನರ್‌ಗಳನ್ನು ತಮ್ಮ ಡಿವೈಸ್‌ಗಳಲ್ಲಿ ಹೊಂದಿವೆ. ಇನ್ನು ಆಂಡ್ರಾಯ್ಡ್ ಎಮ್‌ನಲ್ಲಿ ಈ ಫೀಚರ್ ಅನ್ನು ಗೂಗಲ್ ಪ್ರಸ್ತುತಪಡಿಸಿದ್ದು ಪ್ರಮಾಣಿತ ಎಪಿಐ ಅನ್ನು ಇದಕ್ಕಾಗಿ ಬಳಸಿದೆ. ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್6 ನಂತೆಯೇ ಫಿಂಗರ್ ಪ್ರಿಂಟ್ ಸ್ಕ್ಯಾನರ್‌ನೊಂದಿಗೆ ಡಿವೈಸ್ ಬರಲಿದೆ.

ಆಂಡ್ರಾಯ್ಡ್ ಪೇ

ಆಂಡ್ರಾಯ್ಡ್ ಪೇ

ಲಾಲಿಪಪ್‌ನಲ್ಲಿ ಇಲ್ಲದ ಒಂದು ಫೀಚರ್ ಆಗಿದೆ ಆಂಡ್ರಾಯ್ಡ್ ಪೇ. ಎನ್‌ಎಫ್‌ಸಿ ಚಾಲನೆಯಲ್ಲಿರುವ ಆಂಡ್ರಾಯ್ಡ್ ಕಿಟ್‌ಕ್ಯಾಟ್ ಮತ್ತು ಮೇಲಿನವುಗಳಲ್ಲಿ ಇದು ಬೆಂಬಲವನ್ನು ನೀಡುತ್ತಿದೆ.

ಸುಧಾರಿತ ಬ್ಯಾಟರಿ ಲೈಫ್

ಸುಧಾರಿತ ಬ್ಯಾಟರಿ ಲೈಫ್

ಡೋಜ್ ಎಂಬ ಅತಿವಿಶಿಷ್ಟ ಫೀಚರ್ ಅನ್ನು ಆಂಡ್ರಾಯ್ಡ್ ತಂದಿದ್ದು, ಇದು ಬ್ಯಾಟರಿ ಶಕ್ತಿಯನ್ನು ವರ್ಧಿಸುವಲ್ಲಿ ಹೆಚ್ಚು ಸಹಕಾರಿಯಾಗಿದೆ.

ಚಾರ್ಜಿಂಗ್

ಚಾರ್ಜಿಂಗ್

ಯುಎಸ್‌ಬಿ ಸಿ ಬೆಂಬಲದೊಂದಿಗೆ ವೇಗವಾದ ಚಾರ್ಜಿಂಗ್ ಅನ್ನು ಇದು ತರುತ್ತಿದೆ. ಇದೊಂದು ಹೊಸ ರೀತಿಯ ಯುಎಸ್‌ಬಿ ಕನೆಕ್ಟರ್ ಆಗಿದ್ದು, ಸುಲಭ ಮತ್ತು ವೇಗವಾದ ಚಾರ್ಜಿಂಗ್‌ಗೆ ಅನುಕೂಲಕರವಾಗಿದೆ.

ಅಪ್ಲಿಕೇಶನ್ ಅನುಮತಿಗಳು

ಅಪ್ಲಿಕೇಶನ್ ಅನುಮತಿಗಳು

ಅಪ್ಲಿಕೇಶನ್ ಅನುಮತಿ ವ್ಯವಸ್ಥೆಗಳನ್ನು ಇದರಲ್ಲಿ ನಮಗೆ ಕಾಣಬಹುದಾಗಿದ್ದು ಬಳಕೆದಾರರು ಭದ್ರತಾ ವ್ಯವಸ್ಥೆಗಳನ್ನು ಅನುಮೋದಿಸುವುದು ಅಥವಾ ನಿರಾಕರಿಸುವುದನ್ನು ಬಳಕೆದಾರರು ಮಾಡಬಹುದಾಗಿದೆ. ನೀವು ಅಂಗೀಕರಿಸಲು ಇಚ್ಛಿಸಿದ ಕೆಲವೊಂದು ನಿಯಮಗಳನ್ನು ನಿರಾಕರಿಸುವ ವ್ಯವಸ್ಥೆಯನ್ನು ಆಂಡ್ರಾಯ್ಡ್ ಎಮ್ ಹೊಂದಿದೆ.

ಹೆಚ್ಚಿನ ಆಂಡ್ರಾಯ್ಡ್ ಎಮ್ ಫೀಚರ್‌ಗಳು

ಹೆಚ್ಚಿನ ಆಂಡ್ರಾಯ್ಡ್ ಎಮ್ ಫೀಚರ್‌ಗಳು

ಪಠ್ಯ ಆಯ್ಕೆಗಳು ಹೇಗೆ ಕೆಲಸ ಮಾಡುತ್ತವೆ ಅಂತೆಯೇ ಧ್ವನಿ ನಿಯಂತ್ರಣಗಳು ಕೆಲಸ ಮಾಡುವ ಪರಿಯನ್ನು ಇನ್ನಷ್ಟು ಸುಧಾರಣೆ ಮಟ್ಟದಲ್ಲಿ ಇದು ನಿರ್ವಹಿಸುತ್ತಿದೆ. ಆಂಡ್ರಾಯ್ಡ್ ಎಮ್ ಅಪ್‌ಡೇಟ್‌ನೊಂದಿಗೆ ಗೂಗಲ್ ಧ್ವನಿ ನಿಯಂತ್ರಣ ವ್ಯವಸ್ಥೆಗಳನ್ನು ಇನ್ನಷ್ಟು ಸರಳಗೊಳಿಸಿದೆ.

Best Mobiles in India

English summary
In this article we can see the 6 new Android M features never seen in lollipop features.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X