ಗೂಗಲ್‌ ಉದ್ಯೋಗಿಗಳು ಯಾರಿಗೂ ಹೇಳದ ಮಾಹಿತಿ ಏನು ಗೊತ್ತೇ ?

By Suneel
|

ದಿನ ಬೆಳಗಾಯ್ತು ಅಂದ್ರೆ ಸಾಕು ಈ ಕಂಪ್ಯೂಟರ್‌ ಮತ್ತು ಮೊಬೈಲ್‌ ಬಳಕೆಮಾಡೋರೆಲ್ಲಾ ಯಾವುದೇ ಮಾಹಿತಿ ಬೇಕು ಅಂದ್ರು ಸಹ ಗೂಗಲ್‌ ಮೋರೆ ಹೋಗುತ್ತಾರೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ಆದ್ರೆ ಪ್ರತಿಯೊಂದು ಕಂಪನಿಗಳು ತಮ್ಮದೇ ಆದ ಯಶಸ್ಸು ಕಂಡುಹಿಡಿವೆ. ಅದರಲ್ಲಿ ಗೂಗಲ್‌ ಯಶಸ್ಸುಗಳು ಎಷ್ಟು ಎಂಬುದು ಬಹುಸಂಖ್ಯಾತರಿಗೆ ತಿಳಿಯದು.

ಓದಿರಿ: ಫೇಸ್‌ಬುಕ್‌ನ ಇನ್ನೊಂದು ವೆಬ್‌ಸೈಟ್‌ ರಹಸ್ಯ ಬಯಲು

ಗಿಜ್‌ಬಾಟ್‌ ಇಂದಿನ ಲೇಖನದಲ್ಲಿ ಸರ್ಚ್ ಇಂಜಿನ್‌ ಗೂಗಲ್‌ ಕಂಪನಿಯಲ್ಲಿ ಕೆಲಸ ಮಾಡುವವರು ಯಾರಿಗೂ ಹೇಳದ 6 ವಿಶೇಷ ಮಾಹಿತಿಯನ್ನು ನೀಡುತ್ತಿದೆ. ಅಂತಹ ಮಾಹಿತಿಗಳು ಯಾವುವು ಎಂದು ಲೇಖನದ ಸ್ಲೈಡರ್‌ಗಳಲ್ಲಿ ತಿಳಿಯಿರಿ.

 ಗೂಗಲ್‌ ನೇಮಕಾತಿ ಸಮಿತಿ

ಗೂಗಲ್‌ ನೇಮಕಾತಿ ಸಮಿತಿ

ಗೂಗಲ್‌ ಸಂದರ್ಶನದಲ್ಲಿ ಪಕ್ಷಪಾತ ನಡೆಯಬಹುದು ಅಥವಾ ಕೇವಲ 10 ಸೆಕೆಂಡುಗಳಲ್ಲಿ ಸಂದರ್ಶನ ಮುಗಿಯಬಹುದು. ಆದರೆ ನಂತರದಲ್ಲಿ ಸಂದರ್ಶನು ನೇಮಕಾತಿ ಮಾಡಲು ರಚಿಸಲಾದ ಆಧಾರವನ್ನು ವಿಮರ್ಶಿಸಲು ಇನ್ನೊಂದು ನೇಮಕಾತಿ ಸಮಿತಿ ಹೊಂದಿದೆ.

ಮೆದುಳಿನ ಕಸರತ್ತುಗಳು

ಮೆದುಳಿನ ಕಸರತ್ತುಗಳು

ಗೂಗಲ್‌ ಹೆಚ್ಚು ಗೌರವ ಹೊಂದಿರುವ ಕಂಪನಿಯಾಗಿದ್ದು, ಮೆದುಳಿನ ಪ್ರಶ್ನೆ ಕೇಳುವಲ್ಲಿ ಹೆಚ್ಚು ಉತ್ಸುಕವಾಗಿದೆ. ಉದಾಹರಣೆ " ರಾಕೆಟ್‌ ವಿಜ್ಞಾನವಲ್ಲವೇ", ಮತ್ತು "ನೀವು ಬಗೆಹರಿಸಿರುವ ಅತಿ ಕಷ್ಟದ ಸಮಸ್ಯೆ ಯಾವುದು" ಎಂದು ಗೂಗಲ್‌ನಲ್ಲಿ ಪ್ರಶ್ನೆ ಕೇಳಲಾಗುತ್ತದೆ. ಆದರೆ ಈ ರೀತಿ ವಿಷಯವನ್ನು ಗೂಗಲ್‌ನ ಯಾವುದೇ ಉದ್ಯೋಗಿ ಎಲ್ಲೂ ಸಹ ಹೇಳುವುದಿಲ್ಲವಂತೆ.

ಮ್ಯಾನೇಜರ್‌ ಎಲ್ಲಾ ಅಧಿಕಾರ ಹೊಂದಿರುವುದಿಲ್ಲ

ಮ್ಯಾನೇಜರ್‌ ಎಲ್ಲಾ ಅಧಿಕಾರ ಹೊಂದಿರುವುದಿಲ್ಲ

ಇತರೆ ಕಂಪನಿಗಳಲ್ಲಿ ಮ್ಯಾನೇಜರ್ ಎಲ್ಲಾ ಅಧಿಕಾರಗಳನ್ನು ಹೊಂದಿರುತ್ತಾನೆ ಆದರೆ ನಾವು ಅಲ್ಲಿ ಕೆಲಸಕ್ಕೆ ಮಾತ್ರ ಸೇರಿರುವುದು ಎಂದು ಭಾವಿಸಲಾಗುತ್ತದೆ. ಆದರೆ ಗೂಗಲ್‌ನಲ್ಲಿ ಮ್ಯಾನೇಜರ್‌ ಎಲ್ಲಾ ವಿಷಯಗಳಲ್ಲೂ ತಲೆಹಾಕುವುದಿಲ್ಲಾ. ಕಾರಣ ಅಲ್ಲಿಯ ಉದ್ಯೋಗಿ ಯಾವುದೇ ಹೊಸ ನಿರ್ಧಾರ ಹೇಳಬಹುದು. ಅಲ್ಲಿ ಉತ್ತಮರನ್ನೇ ಕಂಪನಿಯ ಮೊದಲ ಸ್ಥಾನಕ್ಕೆ ಆಯ್ಕೆ ಮಾಡಲಾಗಿದೆ ಎಂದು ನಂಬಿಕೆ ಇರುತ್ತದೆ.

ಸಣ್ಣ ವಿಷಯಗಳ ಮೇಲೆ ಆಸಕ್ತಿ

ಸಣ್ಣ ವಿಷಯಗಳ ಮೇಲೆ ಆಸಕ್ತಿ

ಗೂಗಲ್‌ನಲ್ಲಿ ಉದ್ಯೋಗಿಗಳು ದೊಡ್ಡ ವಿಷಯಗಳಿಗೆ ಹೆಚ್ಚು ಆಸಕ್ತಿ ತೋರಿಸದೆ, ಸಣ್ಣ ಸಣ್ಣ ವಿಷಯಗಳ ಮೇಲೆ ಹೆಚ್ಚು ಆಸಕ್ತಿ ತೋರಿಸುತ್ತಾರಂತೆ. ಮುಂದಿನ ದಿನಗಳಲ್ಲಿ ಅದೇ ದೊಡ್ಡ ವಿಷಯಗಳಾಗಿ ಅಭಿವೃದ್ದಿಗೊಳ್ಳುತ್ತವೆ ಎಂಬ ನಂಬಿಕೆ.

ಸಂಬಳ ನ್ಯಾಯೋಚಿತವಲ್ಲ

ಸಂಬಳ ನ್ಯಾಯೋಚಿತವಲ್ಲ

ಬಹುಶಃ ಈ ಅಂಶ ಹೆಚ್ಚು ಕುತೂಹಲಕಾರಿ ಎಂದರೆ ತಪ್ಪಿಲ್ಲ. ಕಾರಣ ಗೂಗಲ್‌ನ ಒಬ್ಬ ಉದ್ಯೋಗಿ ಸ್ಟಾಕ್‌ ಅವಾರ್ಡ್‌ ಆಗಿ $10,000 (678,899 ರೂ) ಸ್ವೀಕರಿಸಿದರೆ, ಅದೇ ಸ್ಥಾನದ ಇನ್ನೊಬ್ಬ ಸ್ಟಾಕ್‌ ಅವಾರ್ಡ್‌ ಆಗಿ $1 ಮಿಲಿಯನ್‌ (67,889,950 ರೂ ) ಸ್ವೀಕರಿಸುತ್ತಾನೆ. ಇಲ್ಲಿ ಟ್ಯಾಲೆಂಟ್‌ ಮೇಲೆ ಸ್ಟಾಕ್‌ ಅವಾರ್ಡ್‌ ಆಧಾರವಾಗಿರುತ್ತದೆ.

ಸರಣಿ ಆಫರ್‌ಗಳನ್ನು ನಿರ್ವಹಿಸುವುದಿಲ್ಲ

ಸರಣಿ ಆಫರ್‌ಗಳನ್ನು ನಿರ್ವಹಿಸುವುದಿಲ್ಲ

ಬಾಕ್‌ ಪ್ರಕಾರ, ಜನರು ಹೆಚ್ಚು ಭಾರಿ ಹೋಗುತ್ತಾರೆ, ಬರುತ್ತಾರೆ. ಆದರೆ ನೇಮಕಾತಿ ಮಾಡುವವರು ಕರೆ ಸ್ವೀಕರಿಸುವುದಿಲ್ಲಾ. ಅವರನ್ನು ಸೂಕ್ಷ್ಮವರ್ತಿಗಳಲ್ಲ ಎಂದು ಪರಿಗಣಿಸಲಾಗುತ್ತದಂತೆ. ಹಾಗೂ ಗೂಗಲ್‌ ಉದ್ಯೋಗಿಗಳು ಹೆಚ್ಚು ಪ್ರತಿಭಾವಂತರಾಗಿದ್ದು, ಉತ್ತಮರಿಗೆ ಆಫರ್‌ ಮಾಡುವ ವಿನ್ಯಾಸ ಮಾಡುತ್ತಿರುತ್ತಾರಂತೆ.

ಗಿಜ್‌ಬಾಟ್‌

ಗಿಜ್‌ಬಾಟ್‌

ಗೂಗಲ್‌ ಸ್ಟ್ರೀಟ್‌ವ್ಯೂನಲ್ಲಿರುವ ವಿಸ್ಮಯಗಳುಗೂಗಲ್‌ ಸ್ಟ್ರೀಟ್‌ವ್ಯೂನಲ್ಲಿರುವ ವಿಸ್ಮಯಗಳು

"ಗೂಗಲ್‌ ಕ್ರೋಮ್‌" ಬ್ರೌಸರ್‌ ವೇಗಗೊಳಿಸುವುದು ಹೇಗೆ ?

ಗೂಗಲ್‌ ಸರ್ಚ್‌ನಲ್ಲಿ ಕನ್ನಡ ಟೈಪ್‌ ಮಾಡುವುದು ಹೇಗೆ?ಗೂಗಲ್‌ ಸರ್ಚ್‌ನಲ್ಲಿ ಕನ್ನಡ ಟೈಪ್‌ ಮಾಡುವುದು ಹೇಗೆ?

ಹೊಸ ನವೀಕರಣಗಳ ಮೂಲಕ ಗೂಗಲ್ ಮ್ಯಾಪ್ಸ್ ನಿಮ್ಮ ಮುಂದೆಹೊಸ ನವೀಕರಣಗಳ ಮೂಲಕ ಗೂಗಲ್ ಮ್ಯಾಪ್ಸ್ ನಿಮ್ಮ ಮುಂದೆ

ಗಿಜ್‌ಬಾಟ್‌

ಗಿಜ್‌ಬಾಟ್‌

ಗಿಜ್‌ಬಾಟ್‌ನ ಲೇಖನಗಳನ್ನು ಫೇಸ್‌ಬುಕ್‌ನಲ್ಲಿ ಓದಲು ಲೈಕ್‌ ಮಾಡಿ ಫೇಸ್‌ಬುಕ್‌ ಪೇಜ್‌ ಮತ್ತು ಓದಿರಿ ವೆಬ್‌ಸೈಟ್‌ ಗಿಜ್‌ಬಾಟ್‌.ಕನ್ನಡ.ಕಾಂ

Best Mobiles in India

English summary
6 things no one tells you about working at Google. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X