Subscribe to Gizbot

ಅಂಬಾನಿ ಕೊಟ್ಟ ಅಧಿಕೃತ ಮಾಹಿತಿ: ಒಂದೇ ದಿನದಲ್ಲಿ ಬುಕ್ ಆದ ಜಿಯೋ ಫೋನ್ ಎಷ್ಟು.!

Written By:

ಈಗಾಗಲೇ ಸಾಕಷ್ಟು ಹವಾ ಕ್ರಿಯೇಟ್ ಮಾಡಿರುವ ರಿಲಯನ್ಸ್ ಮಾಲೀಕತ್ವದ ಜಿಯೋ ಹೊಸದೊಂದು ದಾಖಲೆಗೆ ಸಾಕ್ಷಿಯಾಗಿದ್ದು, ಒಂದೇ ದಿನದಲ್ಲಿ ಭರ್ಜರಿ 60 ಲಕ್ಷ ಜಿಯೋ ಫೋನ್ ಬುಕ್ಕಿಂಗ್ ಮಾಡಲಾಗಿದೆ. ದೇಶದಲ್ಲಿ ಒಂದೇ ದಿನ ಇಷ್ಟು ಫೋನ್ ಬುಕ್ ಆಗಿರುವುದು ಇದೇ ಮೊದಲು ಎನ್ನಲಾಗಿದೆ.

ಅಂಬಾನಿ ಕೊಟ್ಟ ಅಧಿಕೃತ ಮಾಹಿತಿ: ಒಂದೇ ದಿನದಲ್ಲಿ ಬುಕ್ ಆದ ಜಿಯೋ ಫೋನ್ ಎಷ್ಟು.!

ಓದಿರಿ: ಜಿಯೋಗೆ ಕೌಂಟರ್ ಏರ್‌ಟೆಲ್‌ನಿಂದ ರೂ.5 ಕ್ಕೆ 4GB 4G ಡೇಟಾ.!!

ಈಗಾಗಲೇ ಜಿಯೋ ಫೋನ್ ಬುಕ್ ಮಾಡಬೇಕೆಂದ ಹಲವು ಮಂದಿ ಇನ್ನು ಕಾಯುತ್ತಿದ್ದಾರೆ. ಆದರೆ ಅಧಿಕೃತ ಬುಕಿಂಗ್ ಸದ್ಯಕ್ಕೆ ನಿಲ್ಲಿಸಲಾಗಿದ್ದು, ಮತ್ತೇ ಫುನಃ ಬುಕ್ಕಿಂಗ್ ಶುರು ವಾಗಲಿದ್ದು, ಅಲ್ಲಿಯವರೆಗೆ ಕಾಯಬೇಕಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ರಿಜಿಸ್ಟರ್ ಆಗಿದ್ದಕ್ಕಿಂತ 10 ಲಕ್ಷ ಹೆಚ್ಚು ಫೋನ್ ಬುಕ್ಕಿಂಗ್:

ರಿಜಿಸ್ಟರ್ ಆಗಿದ್ದಕ್ಕಿಂತ 10 ಲಕ್ಷ ಹೆಚ್ಚು ಫೋನ್ ಬುಕ್ಕಿಂಗ್:

ಈ ಹಿಂದೆ ಜಿಯೋ ಫೋನ್ ಕೊಳ್ಳುವುದಕ್ಕೆ ಈ ಹಿಂದೆ ಸುಮಾರು 50 ಲಕ್ಷ ಮಂದಿ ರಿಜಿಸ್ಟರ್ ಆಗಿದ್ದರೂ. ಅಲ್ಲದೇ ಇನ್ನು 10 ಲಕ್ಷ ಮಂದಿ ಜಿಯೋ ಫೋನ್ ಬುಕ್ ಮಾಡಿದ್ದಾರೆ ಎನ್ನಲಾಗಿದೆ. ಒಟ್ಟು 60 ಮಂದಿ ಈ ಫೋನ್ ಬುಕ್ ಮಾಡಿದ್ದಾರೆ.

ರೂ.500 ಮುಂಗಡ ಹಣ:

ರೂ.500 ಮುಂಗಡ ಹಣ:

ಈಗಾಗಲೇ 60 ಲಕ್ಷ ಮಂದಿ ರೂ. 500 ಅನ್ನು ಮುಂಗಡವಾಗಿ ನೀಡಿ ಜಿಯೋ ಫೋನ್ ಅನ್ನು ಬುಕ್ ಮಾಡಿದ್ದಾರೆ ಎನ್ನಲಾಗಿದೆ. ಹಲವರು ಆನ್‌ಲೈನಿನಲ್ಲಿ ಬುಕ್ ಮಾಡಿದರೆ ಇನ್ನು ಕೆಲವು ಮಂದಿ ಆಫ್‌ಲೈನ್‌ ಸ್ಟೋರ್ ಗಳಲ್ಲಿ ಬುಕ್ ಮಾಡಿದ್ದಾರೆ ಎನ್ನಲಾಗಿದೆ.

ರೂ.1500 ಠೇವಣಿ ಇಡಬೇಕು:

ರೂ.1500 ಠೇವಣಿ ಇಡಬೇಕು:

ಈ ಜಿಯೋ ಫೋನ್ ಕೊಳ್ಳಲು ಬಳಕೆದಾರರು ರೂ.1500 ಪಾವತಿ ಮಾಡಬೇಕಾಗಿದೆ. ಬುಕ್ಕಿಂಗ್ ಸಮಯದಲ್ಲಿ ರೂ.500 ಪಾವತಿ ಮಾಡಬೇಕಾಗಿದ್ದು, ಇದಾದ ಮೇಲೆ ಮೊಬೈಲ್ ಪಡೆಯುವ ಸಂದರ್ಭದಲ್ಲಿ ರೂ.1000 ಪಾವತಿ ಮಾಡಬೇಕಾಗಿದೆ. ಈ ಹಣವೂ ತಿರುಗಿ ಪಡೆಯಬಹುದಾಗಿದೆ.

Jio Monsoon Offers !! ಜಿಎಸ್‌ಟಿ ಸ್ಟಾಟರ್ ಕಿಟ್ ಜೊತೆಗೆ ಜಿಯೋ ಹೊಸ 12 ಆಫರ್‌ಗಳು !!
ನವರಾತ್ರಿಗೆ ಫೋನ್ ಗ್ರಾಹಕರ ಕೈಗೆ:

ನವರಾತ್ರಿಗೆ ಫೋನ್ ಗ್ರಾಹಕರ ಕೈಗೆ:

ಜಿಯೋ ಫೋನ್ ಬುಕ್ಕಿಂಗ್ ಈಗಾಗಲೇ ಶುರುವಾಗಿದ್ದು, ಈ ಫೋನ್ ನವರಾತ್ರಿ ಸಂದರ್ಭದಲ್ಲಿ ಗ್ರಾಹಕ ಕೈಗೆ ಸೇರಲಿದೆ. ಇದೇ ಸಂದರ್ಭದಲ್ಲಿ ಜಿಯೋ ಫೈಬರ್ ಸೇವೆಯೂ ಗ್ರಾಹಕರಿಗೆ ದೊರೆಯಲಿದ ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
As many as 60 lakh JioPhone handsets were booked across the country within a day. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot