TRENDING ON ONEINDIA
-
ಸಾಕ್ಷ್ಯಾಧಾರ ಇಲ್ಲದೆ ಪಾಕಿಸ್ತಾನವನ್ನು ದೂಷಿಸಬೇಡಿ ಎಂದ ಚೀನಾ
-
7 ಸೀಟರ್ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆಯಾಗಲಿದೆ ಕಿಯಾ ಕಾರ್ನಿವಾಲ್
-
ಯಾವುದೇ ಆಪ್ಗಳ ಕ್ಯಾಶೆ ಕ್ಲಿಯರ್ ಮಾಡುತ್ತಿರಬೇಕು ಏಕೆ ಮತ್ತು ಹೇಗೆ?
-
'ಬೆಲ್ ಬಾಟಮ್' ಪಾಸು, 'ಕೆಮಿಸ್ಟ್ರಿ ಆಫ್ ಕರಿಯಪ್ಪ'ನ ಫಾರ್ಮೂಲಾ ವರ್ಕೌಟ್
-
ಭಾರತ ಪಾಕ್ ನಡುವೆ ಯುದ್ದ ನಡೆದರೆ ಉಂಟಾಗುವ ಆರ್ಥಿಕ ದುಷ್ಪರಿಣಾಮಗಳೇನು?
-
ಮುಖಮೈಥುನ ನಡೆಸುವ ಪುರುಷರಿಗೆ 'ಬಾಯಿ-ಗಂಟಲ ಕ್ಯಾನ್ಸರ್' ಬರಬಹುದು!
-
ಅಭಿಮಾನಿಗಳಿಂದ ಕೊಹ್ಲಿ-ಎಬಿಡಿ ಪೋಸ್ಟರ್ಗೆ ಹಾಲಭಿಷೇಕ: ವಿಡಿಯೋ
-
ಐಟಿಐ ಲಿಮಿಟೆಡ್ ನಲ್ಲಿ ಕಾನೂನು ಪದವಿ ಅಭ್ಯರ್ಥಿಗೆ ಉದ್ಯೋಗಾವಕಾಶ
ಸ್ಮಾರ್ಟ್‌ಫೋನ್ ಬಳಕೆದಾರರೇ ನಿಮ್ಮ ಕಣ್ಣುಗಳು ಜೋಪಾನ!!
ಸ್ಮಾರ್ಟ್‌ಫೋನ್ ನೋಡೋದು ಅಕ್ಷರಶಃ ಕಣ್ಣುಗಳಿಗೆ ನೋವುಂಟು ಮಾಡುವ ಚಟುವಟಿಕೆ. ಅಲ್ಲದೇ ದಿನ ಒಂದಕ್ಕೆ 150 ಕ್ಕೂ ಹೆಚ್ಚು ಭಾರಿ ನೋಡುವವರಿಗೆ ಹಾಗೆ ನಿರಂತರವಾಗಿ ಬಳಸುವವರಿಗೆ ಕಣ್ಣುಗಳಿಗೆ ಆಗುವ ಸಮಸ್ಯೆ ತಪ್ಪಿದಲ್ಲಾ. ಸ್ಮಾರ್ಟ್‌ಫೋನ್ ಮಾತ್ರವಲ್ಲದೇ ಟ್ಯಾಬ್ಲೆಟ್, ಲ್ಯಾಪ್‌ಟಾಪ್, ಡಿಜಿಟಲ್ ಸ್ಕ್ರೀನ್ ಯಾವುದನ್ನೇ ಹೆಚ್ಚು ಸಮಯ ನೋಡುವುದು ಕಣ್ಣಿನ ಸಮಸ್ಯೆಗೆ ಕಾರಣವಾಗುವುದರಲ್ಲಿ ಸಂಶಯವಿಲ್ಲ. ದೀರ್ಘ ಕಾಲ ಡಿಜಿಟಲ್ ಸ್ಕ್ರೀನ್‌ಗಳನ್ನು ನೋಡುವುದರಿಂದ ಕಣ್ಣುಗಳಿಗೆ ಹೆಚ್ಚು ನೋವು, ನವೆ, ಕಣ್ಣಿನ ಶುಷ್ಕತೆ, ಮಂದ ದೃಷ್ಟಿ ಮತ್ತು ತಲೆನೋವು ಸಮಸ್ಯೆಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಾ ಹೋಗುತ್ತವೆ.
ಅಂದಹಾಗೆ ಸ್ಮಾರ್ಟ್‌ಫೋನ್ ಮತ್ತು ಡಿಜಿಟಲ್ ಸ್ಕ್ರೀನ್ ನೋಡುವುದರಿಂದ ಎದುರಾಗುವ ಕಣ್ಣಿನ ಸಮಸ್ಯೆಗಳನ್ನು ದೂರವಿಡಲು ಗಿಜ್‌ಬಾಟ್‌ನ ಇಂದಿನ ಲೇಖನದಲ್ಲಿ ಕೆಲವು ಸರಳ ಮಾಹಿತಿಗಳನ್ನು ನೀಡಲಾಗುತ್ತಿವೆ. ಆ ಮಾಹಿತಿಯ ಸಲಹೆಗಳನ್ನು ಪಾಲಿಸುವುದರ ಮುಖಾಂತರ ಸ್ಮಾರ್ಟ್‌ಫೋನ್ ಬಳಸುವ ಮತ್ತು ಹೆಚ್ಚು ಸಮಯ ಡಿಜಿಟಲ್ ಸ್ಕ್ರೀನ್ ನೋಡುವವರು ತಮ್ಮ ಕಣ್ಣುಗಳನ್ನು ಕಾಪಾಡಿಕೊಳ್ಳಿ. ಹಾಗೆ ಮಂದ ದೃಷ್ಟಿಯಾಗುವುದರಿಂದ, ತಲೆನೋವು ಪ್ರಾರಂಭವಾಗುವುದರಿಂದ ತಪ್ಪಿಸಿಕೊಳ್ಳಿ.
ಕಣ್ಣನ್ನು ಮಿಟುಕಿಸುವಿಕೆ
ಕಣ್ಣನ್ನು ಸ್ಮಾರ್ಟ್‌ಫೋನ್ ಸ್ಕ್ರೀನ್ ನೋಡುವಾಗ ಮತ್ತು ಯಾವುದೇ ಡಿಜಿಟಲ್ ಸ್ಕ್ರೀನ್ ನೋಡುವಾಗ ಹೆಚ್ಚು ಕಣ್ಣನ್ನು ಮಿಟುಕಿಸುವಿಕೆಯಿಂದ ಕಣ್ಣಲ್ಲಿ ತೇವಾಂಶ ಹಿಡಿದಿಡಬಹುದು. ಮತ್ತು ಕಣ್ಣಿಗೆ ಆಗುವ ಕಿರಿಕಿರಿಯನ್ನು ತಪ್ಪಿಸಬಹುದು.
ಕಣ್ಣಿನಲ್ಲಿ ತೇವಾಂಶ
ಪ್ರೀತಿಯಿಂದ ಸ್ಮಾರ್ಟ್‌ಫೋನ್ ನೋಡುವಾಗ 20 ನಿಮಿಷಕ್ಕೆ 10ಕ್ಕಿಂತ ಹೆಚ್ಚು ಬಾರಿ ಕಣ್ಣನ್ನು ಮಿಟುಕಿಸುವಿಕೆಯಿಂದ ತೇವಾಂಶವನ್ನು ಕಣ್ಣಲ್ಲಿ ಹಿಡಿದಿಡಿ. ಈ ರೀತಿ ಮಾಡುವುದರಿಂದ ಗಮನಕೊಡುವಲ್ಲಿ ಸಹಾಯವಾಗುತ್ತದೆ.
ಪ್ರಕಾಶಿಸುವಿಕೆ ಕಡಿಮೆ
ನೀವು ಬಳಸುವ ಸ್ಮಾರ್ಟ್‌ಫೋನ್ ಮತ್ತು ಯಾವುದೇ ಡಿಜಿಟಲ್ ಸ್ಕ್ರೀನ್ ಕಡಿಮೆ ಪ್ರಕಾಶತೆ ಹೊಂದಿರಲಿ. ಮುಂದಿನ ಸ್ಲೈಡ್ ಓದಿ...
ಪ್ರಕಾಶಿಸುವಿಕೆ ಕಡಿಮೆ
ಸ್ಮಾರ್ಟ್‌ಫೋನ್ ಬಳಸುವವರು ತಮ್ಮ ಕಣ್ಣುಗಳ ಸುರಕ್ಷೆಗಾಗಿ ಕಡಿಮೆ ಪ್ರಜ್ವಲಿಸುವ 'ಕಾರ್ನಿಂಗ್ ಗೊರಿಲ್ಲಾ ಗ್ಲಾಸ್' ಅಥವಾ ಮ್ಯಾಟ್ ಸ್ಕ್ರೀನ್ ಪ್ರೊಟೆಕ್ಟರ್ ಬಳಸಿ. ಕಡಿಮೆ ವೆಚ್ಚದಲ್ಲಿ ಅತ್ಯಮೂಲ್ಯ ಕಣ್ಣುಗಳನ್ನು ಕಾಪಾಡಿಕೊಳ್ಳಿ.
ವಿರಾಮ ತೆಗೆದುಕೊಳ್ಳುವಿಕೆ
ಹೆಚ್ಚು ಪ್ರಜ್ವಲಿಸುವ ನಿಮ್ಮ ಸ್ಮಾರ್ಟ್‌ಫೋನ್ ಅಥವಾ ಡಿಜಿಟಲ್ ಸ್ಕ್ರೀನ್ ನೋಡುವಿಕೆಯಿಂದ ಆಗಾಗ ವಿರಾಮ ತೆಗೆದುಕೊಳ್ಳಿ. ಸ್ಮಾರ್ಟ್‌ಫೋನ್‌ನಲ್ಲಿನ ಸೌಂಡ್ ಕೆಲವೊಮ್ಮೆ ಭಯ ತರಬಹುದು. ಆದರೆ ಕಣ್ಣುಗಳು ಮಾತ್ರ ಸ್ಕ್ರೀನ್ ನೋಡಲು ಹಾತೊರೆಯುತ್ತವೆ. ಅಂದಹಾಗೆ ನಿಮಗೆ 20-20-20 ನಿಯಮ ಗೊತ್ತಾ? ಗೊತ್ತಿಲ್ಲಾ ಅಂದ್ರೆ ಮುಂದೆ ಸ್ಲೈಡ್ ಕ್ಲಿಕ್ ಮಾಡಿ ಓದಿ ತಿಳಿಯಿರಿ
20-20-20 ನಿಯಮ
ಅಂದಹಾಗೆ 20-20-20 ನಿಯಮ ಸ್ಮಾರ್ಟ್‌ಫೋನ್ ಸ್ಕ್ರೀನ್ ನೋಡುವುದರಿಂದ ವಿರಾಮ ತೆಗೆದುಕೊಳ್ಳುವ ಬಗ್ಗೆ. ನೀವು ಸ್ಮಾರ್ಟ್‌ಫೋನ್ ಮತ್ತು ಡಿಜಿಟಲ್ ಸ್ಕ್ರೀನ್ ನೋಡುತ್ತಿದ್ದಲ್ಲಿ ಪ್ರತಿ 20 ನಿಮಿಷಕ್ಕೆ ಒಮ್ಮೆ 20 ಸೆಕೆಂಡ್‌ಗಳ ಕಾಲ 20 ಅಡಿ ದೂರಕ್ಕೆ ನೋಡುವ ಮುಖಾಂತರ ಕಣ್ಣುಗಳಿಗೆ ವಿರಾಮ ತೆಗೆದುಕೊಳ್ಳಿ.
ಬ್ರೈಟ್‌ನೆಸ್ ವ್ಯವಸ್ಥೆ
ಸ್ಮಾರ್ಟ್‌ಫೋನ್ ಆಗಲಿ ಅಥವಾ ಯಾವುದೇ ಇತರ ಡಿಜಿಟಲ್ ಸ್ಕ್ರೀನ್ ಆಗಲಿ ಹೆಚ್ಚು ಬ್ರೈಟ್‌ನೆಸ್ ಹೊಂದುವುದು ಕಣ್ಣುಗಳಿಗೆ ಹೆಚ್ಚು ಸಮಸ್ಯೆ ಉಂಟುಮಾಡುತ್ತಿದೆ. ಆದ್ದರಿಂದ ಸ್ಮಾರ್ಟ್‌ಫೋನ್ ಸೆಟ್ಟಿಂಗ್‌ಗೆ ಹೋಗಿ ಬ್ರೈಟ್‌ನೆಸ್ ವ್ಯವಸ್ಥೆಯನ್ನು ಕಡಿಮೆ ಇರಿಸಿಕೊಳ್ಳಿ. ಬ್ರೈಟ್‌ನೆಸ್ ನೀವಿರುವ ವಾತಾವರಣಕ್ಕೆ ಸರಿಹೊಂದುವಂತೆ ಇರಲಿ.
ತೀವ್ರ ಪ್ರಕಾಶತೆ
ಹೆಚ್ಚು ಪ್ರಕಾಶಯುತವಾದ ಸ್ಮಾರ್ಟ್‌ಫೋನ್ ಸ್ಕ್ರೀನ್ ಅನ್ನು ರಾತ್ರಿ ವೇಳೆ ಕಪ್ಪು ವಾತಾವರಣದಲ್ಲಿ ಹೆಚ್ಚು ನೋಡುವುದರಿಂದ ನಿದ್ರಾಹೀನತೆ ಮತ್ತು ಲೈಂಗಿಕ ಆಸಕ್ತಿ ಕಡಿಮೆಯಾಗಲು ಕಾರಣವಾಗುತ್ತದೆ.
ವಾತಾವರಣಕ್ಕೆ ತಕ್ಕ ಪಠ್ಯ ಗಾತ್ರ ಮತ್ತು ಕಾಂಟ್ರಾಸ್ಟ್
ಫೋನ್ ಪ್ರಕಾಶಮಾನಕ್ಕೆ ತಕ್ಕಂತೆ ನಿಮ್ಮ ಸ್ಮಾರ್ಟ್‌ಫೋನ್ ಪಠ್ಯ ಗಾತ್ರವನ್ನು ಓದಲು ಸರಿಹೊಂದುವಂತೆ ವ್ಯವಸ್ಥೆಹೊಂದುವುದು ಪರಿಹಾರವಾಗಿದೆ. ವೆಬ್ ಮಾಹಿತಿ, ಇಮೇಲ್ ಮೆಸೇಜ್, ಕ್ಯಾಲೆಂಡರ್ ಕಾರ್ಯಕ್ರಮಗಳನ್ನು ಓದಲು ಹಿತವಾಗಿರುವಂತೆ ಪಠ್ಯ ಗಾತ್ರ ಹೊಂದಿಸುವುದು ಉತ್ತಮ
ಸ್ವಚ್ಛ ಸ್ಕ್ರೀನ್
ಸ್ಮಾರ್ಟ್‌ಫೋನ್ ಮೇಲಿನ ಡಸ್ಟ್, ಮಸಿಹಚ್ಚು, ಹೊಗೆಕಾರಕ, ಬೆರಳಚ್ಚನ್ನು ಸ್ವಚ್ಛ ಮಾಡುವುದಕ್ಕೆ ಒಣಗಿನ ಸ್ವಚ್ಛ ಬಟ್ಟೆ ಉಪಯೋಗಿಸುವುದು ಉತ್ತಮ. ಹೀಗೆ ಮಾಡುವುದರಿಂದಲೂ ಸಹ ನಿಮ್ಮ ಸ್ಮಾರ್ಟ್‌ಫೋನ್ ಸ್ಕ್ರೀನ್ ನೋಡಲು ಸುಲಭವಾಗುತ್ತದೆ.
ಸ್ಮಾರ್ಟ್‌ಫೋನ್ ಬಳಕೆ 16-18 ಇಂಚು ದೂರ
ಕಣ್ಣು ಅತ್ಯಮೂಲ್ಯ ಅಂಗ. ಅಂದಹಾಗೆ ಅತಿ ಹೆಚ್ಚು ಜನರು ಕೇವಲ 8 ಇಂಚು ಹತ್ತಿರದಿಂದ ಸ್ಮಾರ್ಟ್‌ಫೋನ್ ನೋಡುತ್ತಾ ಬಳಸುತ್ತಾರೆ. ಆದರೆ ಈ ವಾಡಿಕೆ ಹೆಚ್ಚು ಅಪಾಯಕಾರಿ. ಆದ್ದರಿಂದ ಸ್ಮಾರ್ಟ್‌ಫೋನ್ ಅನ್ನು 16-18 ಇಂಚು ದೂರದಿಂದ ನೋಡುವುದರ ಮೂಲಕ ಬಳಸಲು ಪ್ರಯತ್ನಿಸಿ. ಆದರೆ ಇಷ್ಟುದೂರದಿಂದ ನೋಡುವುದನ್ನು ಸಹ ಹೆಚ್ಚು ಕಾಲ ಬಳಸ ಬೇಡಿ.
ಗಿಜ್‌ಬಾಟ್
ದೆವ್ವಗಳು ಖಂಡಿತ ಇಲ್ಲ, ಈ ವೀಡಿಯೋ ನೋಡಿದ ನಂತರ ಹೇಳಿ!!
ಭಾರತದ ಬಗ್ಗೆ ಆಪಲ್ ಸಿಇಓ ಹೇಳಿದ್ದೇನು ಗೊತ್ತೇ?
ಪ್ರಪಂಚದ ಅತ್ಯದ್ಭುತ ರಿಯಲ್ ಫೋಟೋಗಳು ಕ್ಯಾಮೆರಾದಲ್ಲಿ ಕಂಡಿದ್ದು ಹೀಗೆ
ಸಾಮಾಜಿಕ ತಾಣದಲ್ಲಿ ವೈರಲ್ ಆದ ಗಿಜ್‌ಬಾಟ್ ಟಾಪ್ ಲೇಖನಗಳು
ಗಿಜ್‌ಬಾಟ್
ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
ಕನ್ನಡ.ಗಿಜ್‌ಬಾಟ್.ಕಾಂ