ಟ್ರೂಕಾಲರ್ ಆಪ್‌ನಲ್ಲಿ ಯಾರು ತಿಳಿಯದ ರಹಸ್ಯ ಫೀಚರ್‌ಗಳು

By Suneel
|

ಸ್ಮಾರ್ಟ್‌ಫೋನ್‌ ಬಳಕೆದಾರರು ತಮ್ಮ ಮೊಬೈಲ್‌ಗೆ ಅಪರಿಚಿತ ನಂಬರ್‌ಗಳಿಂದ ಕರೆ ಬಂದರೆ ಹೆಚ್ಚು ಕುತೂಹಲಗೊಳ್ಳುವುದು ಸಾಮಾನ್ಯ. ಅಲ್ಲದೇ ಅವರು ಯಾರು, ಏಕೆ ಕರೆ ಮಾಡಿದ್ದರು, ಇನ್ನು ಹಲವು ರೀತಿಯ ಪ್ರಶ್ನೆಗಳು ಕಾಡದಿರವು. ಆದ್ರೆ ಆಂಡ್ರಾಯ್ಡ್‌ ಫೋನ್‌ ಬಳಸುವವರು ಇಂದು "ಟ್ರೂಕಾಲರ್‌ " ಅಪ್ಲಿಕೇಶನ್‌ ಬಳಸಿದರೆ ಸಾಕು ಕರೆ ಮಾಡಿದವರು, ಯಾರು ಎಂಬಿತ್ಯಾದಿ ವಿಷಯಗಳನ್ನು ಒಮ್ಮೆಲೆ ತಿಳಿಯಬಹುದಾಗಿದೆ.

ಓದಿರಿ:ಟ್ರುಕಾಲರ್‌ನಿಂದ ನಿಮ್ಮ ಸಂಖ್ಯೆಯನ್ನು ಅಳಿಸುವುದು ಹೇಗೆ?

ಆಂಡ್ರಾಯ್ಡ್‌ ಫೋನ್‌ನಲ್ಲಿ ಬಳಸಬಹುದಾದ "ಟ್ರೂಕಾಲರ್‌" ಆಪ್‌ ಈಗ ಕೇವಲ ಒಂದು ಕ್ಲಿಕ್‌ ನಲ್ಲಿ ನಿಮ್ಮಗೆ ಕರೆ ಮಾಡಿದ್ದ ಅಪರಿಚಿತರು ಯಾರು ಎಂದು ತಿಳಿಯಬಹುದಾಗಿದೆ. ಅಲ್ಲದೇ ಟ್ರೂಕಾಲರ್ ಆಪ್‌ನಲ್ಲಿರುವ 7 ರಹಸ್ಯ ಫೀಚರ್‌ಗಳು ಅತ್ಯುತ್ತಮವಾದ ಉಪಯೋಗ ನೀಡಲಿವೆ. ಅವುಗಳು ಯಾವುವು ಎಂದು ಈ ಲೇಖನದಲ್ಲಿ ನಿಮಗೆ ತಿಳಿಸಲಿದ್ದೇವೆ.

 ಕರೆಗಳ ಬ್ಲಾಕ್‌

ಕರೆಗಳ ಬ್ಲಾಕ್‌

ನಿಮಗೆ ಅಪರಿಚಿತ ವ್ಯಕ್ತಿಗಳ ಕರೆ ಅನಾವಶ್ಯಕವಾದಲ್ಲಿ ಆ ಕರೆಗಳು ಬರದಂತೆ ಬ್ಲಾಕ್‌ ಮಾಡಬಹುದಾಗಿದೆ. ಆದರೆ ಉದಾಹರಣೆಗೆ 8051 ನಂಬರ್‌ಗಳಿಂದ ಪ್ರಾರಂಭವಾಗುವ ಅಪರಿಚಿತ ನಂಬರ್‌ಗಳೆಲ್ಲವನ್ನು ಬ್ಲಾಕ್‌ ಮಾಡಬಹುದಾಗಿದೆ.

ಕರೆ ಮಾಡಿದ ಅಪರಿಚಿತರು ಯಾರು ತಿಳಿದುಕೊಳ್ಳಿ

ಕರೆ ಮಾಡಿದ ಅಪರಿಚಿತರು ಯಾರು ತಿಳಿದುಕೊಳ್ಳಿ

ಟ್ರೂಕಾಲರ್‌ ಆಪ್‌ನಲ್ಲಿ ನೀವು ಇಂಟರ್ನೆಟ್‌ ಸಂಪರ್ಕ ಇಲ್ಲದಿದ್ದರೂ ಸಹ ಒಮ್ಮೆ ಆಪ್‌ ನಂಬರ್‌ ಅನ್ನು ಗುರುತಿಸಿದರೆ ಸಾಕು ಕರೆ ಮಾಡಿದ ಅಪರಿಚಿತರು ಯಾರು ಎಂದು ಗುರುತಿಸುತ್ತದೆ.

ಮೋಸಗಾರರಿಂದ ನಿಮ್ಮನ್ನು ರಕ್ಷಿಸಿಕೊಳ್ಳಿ

ಮೋಸಗಾರರಿಂದ ನಿಮ್ಮನ್ನು ರಕ್ಷಿಸಿಕೊಳ್ಳಿ

ಟ್ರೂಕಾಲರ್ ಆಪ್‌ ಸ್ವಯಂ ರಕ್ಷಿಸುವ ಫೀಚರ್ ಹೊಂದಿದೆ. ಒಮ್ಮೆ ನಿಮ್ಮ ಡಿವೈಸ್‌ಗೆ ಆಪ್‌ ಡೌನ್‌‌ಲೋಡ್‌ ಮಾಡಿದ ನಂತರ "ಯಾರು ತಮ್ಮ ಗುರುತಿನ ಬಗ್ಗೆ ವಿವರ ನೀಡಿರುವುದಿಲ್ಲವೋ ಅವರ ಕರೆಗಳನ್ನು ರಿಜೆಕ್ಟ್‌ ಮಾಡಬಹುದು. ಆದರೆ ಈ ಬಗ್ಗೆ ತಿಳಿಯಲು ಒಮ್ಮೆ ನೀವು ಟ್ರೂಕಾಲರ್‌ ನಿಂದ ಕರೆ ಮಾಡಿ ತಿಳಿದುಕೊಳ್ಳಬಹುದಾಗಿದೆ.

 ಟ್ರೂ ಡಯಲರ್‌  ಬಳಕೆ

ಟ್ರೂ ಡಯಲರ್‌ ಬಳಕೆ

ಟ್ರೂಕಾಲರ್ ಆಪ್‌ನಲ್ಲಿ ಟ್ರೂಡಯಲರ್‌ ಅನ್ನು ಡಿಫಾಲ್ಟ್‌ ಡಯಲರ್‌ ಆಗಿ ಆಯ್ಕೆ ಮಾಡಬಹುದಾಗಿದೆ ಇದರಿಂದ ನಿಮ್ಮ ವಿವರ ಇತರೆ ನಿಮ್ಮ ಗೆಳೆಯರಿಗೆ ಫೇಸ್‌ಬುಕ್‌, ಹಾಗೂ ಟ್ವಿಟರ್‌ನಲ್ಲಿ ರೆಫರ್‌ ಆಗಲು ಸಹಾಯವಾಗುತ್ತದೆ. ಇದರಿಂದ ಇತರರನ್ನು ಸಹ ಟ್ರೂಕಾಲರ್‌ನಲ್ಲೇ ಸೋಶಿಯಲ್‌ ಸೈಟ್‌ಗಳಿಂದ ಪತ್ತೆ ಹಚ್ಚಬಹುದಾಗಿದೆ.

 ಸರ್ಚ್‌ ಬಾರ್‌ನಲ್ಲಿ ನಂಬರ್‌ ಪತ್ತೆ

ಸರ್ಚ್‌ ಬಾರ್‌ನಲ್ಲಿ ನಂಬರ್‌ ಪತ್ತೆ

ಟ್ರೂಕಾಲರ್‌ ಆಪ್‌ ಅನ್ನು ಡಿವೈಸ್‌ನಲ್ಲಿ ಇನ್ಸ್ಟಾಲ್‌ ಮಾಡಿದ ನಂತರ ಅಪರಿಚಿತ ನಂಬರ್ ಯಾರದು ಎಂದು ತಿಲಿಯಲು ನಂಬರ್‌ ಅನ್ನು ಸರ್ಚ್ ಬಾರ್‌ನಲ್ಲಿ ಟೈಪ್‌ ಮಾಡಿ. ಹಾಗೂ ಅವರ ವಿಳಾಸ ಹೆಸರು ಏನು ಎಂದು ಸಹ ತಿಳಿಯಿರಿ.

ನಿಮ್ಮ ಫ್ರೊಫೈಲ್‌ ವ್ಯವಸ್ಥೆಗೊಳಿಸಿ

ನಿಮ್ಮ ಫ್ರೊಫೈಲ್‌ ವ್ಯವಸ್ಥೆಗೊಳಿಸಿ

ನೀವು ಇತರರಿಗೆ ಕರೆ ಮಾಡಿದರೆ ನಿಮ್ಮ ಬಗ್ಗೆ ಅವರಿಗೆ ತಿಳಿಯಲು ನಿಮ್ಮ ಸವಿವರಗಳನ್ನು ಟ್ರೂಕಾಲರ್‌ ಆಪ್‌ನಲ್ಲಿ ವ್ಯವಸ್ಥೆ ಮಾಡಿ. ನಿಮ್ಮ ಭಾವಚಿತ್ರ ಸಹಿತ ಎಲ್ಲಾ ಮಾಹಿತಿಯನ್ನು ವೆಬ್‌ಸೈಟ್‌ನಲ್ಲಿ ನೀಡುವಂತೆ ನೀಡಿ.

ನಿಮ್ಮ ನಂಬರ್‌ ಅನ್ನು ಡೇಟಾ ಬೇಸ್‌ನಿಂದ ತೆಗೆಯಿರಿ

ನಿಮ್ಮ ನಂಬರ್‌ ಅನ್ನು ಡೇಟಾ ಬೇಸ್‌ನಿಂದ ತೆಗೆಯಿರಿ

ನಿಮ್ಮ ನಂಬರ್‌ ಅನ್ನು ಟ್ರೂಕಾಲರ್ ಆಪ್‌ನಲ್ಲಿ‌ ಡೇಟ್ ಬೇಸ್‌ನಿಂದ ತೆಗೆಯಲು http:/www.truecaller.com/unlist ಲಿಂಕ್‌ಗೆ ಭೇಟಿ ನೀಡಿ. ನಂತರ ನಿಮ್ಮ ನಂಬರ್‌ ಅನ್ನು ದೇಶದ ಕೋಡ್‌ನೊಂದಿಗೆ ಟೈಪ್‌ ಮಾಡಿ. ನಂಬರ್‌ ತೆಗೆಯಲು ಕಾರಣವನ್ನು ಆಯ್ಕೆ ಮಾಡಿ ನಂತರ unlist ಬಟನ್‌ ಪ್ರೆಸ್‌ ಮಾಡಿ.

Most Read Articles
Best Mobiles in India

English summary
7 hidden features in Truecaller. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X