ಸಾಮಾಜಿಕ ಜಾಲತಾಣಕ್ಕಾಗಿ ಗುಪ್ತ ಲಕ್ಷಣಗಳ ಅಪ್ಲಿಕೇಶನ್‌

By Suneel

  ಸಾಮಾಜಿಕ ಜಾಲತಾಣಗಳು ಇಂದು ಸರಳ ವಿನ್ಯಾಸ ಮತ್ತು ಹಲವು ಅನುಕೂಲತೆಗಳಿಂದ ಎಲ್ಲಾ ರೀತಿಯ ಜನರನ್ನು ಬಳಕೆಮಾಡುವಂತೆ ಸೆಳೆದಿದೆ. ಹೆಚ್ಚು ಓದಿಲ್ಲದಿದ್ದರೂ ಪರವಾಗಿಲ್ಲ ಅಂತಹ ಜನರು ಸಹ ಇಂದು ಸಾಮಾಜಿಕ ಜಾಲತಾಣಗಳನ್ನು ಒಂದಲ್ಲಾ ಒಂದು ರೀತಿ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಆದರೆ ಈ ಸಾಮಾಜಿಕ ಜಾಲತಾಣಗಳ ಬಳಕೆ ಹೆಚ್ಚು ಕಲರ್‌ ಪುಲ್‌ ಆದಂತೆಲ್ಲಾ ಹಲವರು ದುರ್ಬಳಕೆ ಮಾಡಿಕೊಳ್ಳುತ್ತಿರುವುದು ತಿಳಿದಿರುವ ವಿಷಯ. ಸಾಮಾಜಿಕ ಜಾಲತಾಣಗಳಲ್ಲಿ ಇಂದು ನಾವು ಹಲವರು ಅನಾವಶ್ಯಕ ಮತ್ತು ಅನಾರೋಗ್ಯಕರ ಚಿತ್ರಗಳನ್ನು ಖಾತೆಗೆ ಟ್ಯಾಗ್‌ ಮಾಡುವುದು ಹಾಗೂ ನಾವೇ ಕೆಲವೊಮ್ಮೆ ಹಿಂದಿನ ಚಟುವಟಿಕೆಗಳು ಏನು ಎಂಬುದನ್ನು ತಿಳಿಯಲು ಕಿರಿ ಕಿರಿ ಅನುಭವಿಸುತ್ತೇವೆ. ಅದಕ್ಕೆ ಈಗ ಪರಿಹಾರ ಇಲ್ಲಿದೆ.

  ಓದಿರಿ:ಸೂಪರ್ ಮೂನ್ ಆಗಮನದಿಂದ ಪ್ರಪಂಚದ ಅಂತ್ಯ!!!

  ಹೌದು, ಅಂತಹ ಕಿರಿ ಕಿರಿಗಳನ್ನು ತಪ್ಪಿಸಲು ಈಗ ಇನ್‌ಸ್ಟಗ್ರಾಂ ಎಂಬ ಹೊಸ ಅಪ್ಲಿಕೇಶನ್‌ ತಯಾರಾಗಿದೆ. ಇದು ಫೋಟೊ ಹಂಚಿಕೆ ಅಪ್ಲಿಕೇಶನ್‌ ಆಗಿದ್ದು, ಕ್ರಾಪ್‌ಮಾಡಲು ಮತ್ತು ನಿಮ್ಮ ಖಾತೆಯಲ್ಲಿ ಹಲವು ರೀತಿಯ ಫಿಲ್ಟರ್‌ ಬಳಸಿ ಸುಂದರವಾಗಿ ಕಾಣುವಂತೆ ಮಾಡಲು ಸಹಾಯಕವಾಗಿದೆ. ಈಗಾಗಲೇ 400 ಮಿಲಿಯನ್‌ ಬಳಕೆದಾರರಿದ್ದು, ಬಳಕೆಮಾಡಲು ಸರಳ ರೀತಿಯಲ್ಲಿದೆ.

  ಇನ್‌ಸ್ಟಗ್ರಾಂ ಬಗ್ಗೆ ತಿಳಿಯದ 7 ಗುಪ್ತ ಲಕ್ಷಣಗಳು ನಿಮಗಾಗಿ

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  ನೀವು ಬಳಕೆ ಮಾಡದಿದ್ದಲ್ಲಿ ಫೋಟೊ ಫಿಲ್ಟರ್ಸ್‌ ಹೈಡ್‌ ಮಾಡಿ

  ಇನ್‌ಸ್ಟಗ್ರಾಂ ಫೋಟೊ ಫಿಲ್ಟರ್‌ ಅವಕಾಶ ಹೊಂದಿದ್ದು, ಫೋಟೊ ಎಡಿಟ್‌ ತೆಗೆದು ಮೇನೇಜ್‌ಬಟನ್‌ ಮೇಲೆ ಕ್ಲಿಕ್‌ ಮಾಡಿ. ಅದರಲ್ಲಿ ನಿಮಗೆ ಫೋಟೊ ಫಿಲ್ಟರ್‌ ಅವಕಾಶ ದೊರೆಯುತ್ತದೆ.

  ನಿಮ್ಮ ಖಾತೆಗೆ ಇತರರು ಟ್ಯಾಗ್‌ ಮಾಡಿರುವ ಅನಾರೋಗ್ಯಕರ ಫೋಟೊಗಳನ್ನು ಹೈಡ್‌ ಮಾಡಿ

  ನಿಮ್ಮ ಖಾತೆಗೆ ಇತರರು ಅನಾರೋಗ್ಯಕರ ಫೋಟೊಗಳನ್ನು ಟ್ಯಾಗ್‌ ಮಾಡಿದಲ್ಲಿ ಆ ಫೋಟೊ ಮೇಲೆ ಟ್ಯಾಪ್‌ ಮಾಡಿ "ಹೈಡ್‌ ಫ್ರಂ ಮೈ ಪ್ರೊಫೈಲ್‌" ಎಂದು ಕ್ಲಿಕ್‌ ಮಾಡಿ ಫಿನಿಸ್‌ಕೊಡಿ.

  ನಿಮ್ಮ ಸ್ನೇಹಿತರು ಯಾವುದನ್ನು ಹೆಚ್ಚು ಲೈಕ್‌ ಮಾಡುತ್ತಿದ್ದಾರೆ ಎಂಬುದನ್ನು ತಿಳಿಯಿರಿ

  ನಿಮ್ಮ ಸ್ನೇಹಿತರು ಯಾವ ವಿಷಯಗಳನ್ನು ಹೆಚ್ಚು ಲೈಕ್‌ ಮಾಡುತ್ತಿದ್ದಾರೆ ಎಂಬುದನ್ನು ತಿಳಿಯಲು ಆಕ್ಟಿವಿಟಿ ಯಲ್ಲಿ ಸಂಪೂರ್ಣ ಮಾಹಿತಿ ತಿಳಿಯಿರಿ

  ಈ ಹಿಂದೆ ಲೈಕ್‌ ಮಾಡಿದ ಎಲ್ಲಾ ಫೋಟೊಗಳನ್ನು ನೋಡಿ

  ನೀವು ಈ ಹಿಂದೆ ಲೈಕ್‌ ಮಾಡಿದ ಎಲ್ಲಾ ಫೋಟೊಗಳನ್ನು ನೋಡಲು "ಫೋಟೊಸ್‌ ಯು ಹ್ಯಾವ್‌ ಲೈಕ್ಡ್" ಸೆಟ್ಟಿಂಗ್ಸ್‌ ಮೇಲೆ ಕ್ಲಿಕ್‌ ಮಾಡಿ

  ನಿಮ್ಮ ಇಷ್ಟವಾದ ಖಾತೆಗಳ ಪೋಸ್ಟ್‌ಗಳ ಅಧಿಸೂಚನೆ ಪಡೆಯಿರಿ

  ಇನ್‌ಸ್ಟಗ್ರಾಂ ಅಪ್ಲಿಕೇಶನ್‌ ಇದ್ದಲ್ಲಿ ನಿಮಗೆ ಇಷ್ಟವಾದ ಖಾತೆದಾರರ ಪೋಸ್ಟ್‌ಗಳನ್ನು ಅಧಿಸೂಚನೆ ಪಡೆಯಲು "ಟರ್ನ್‌ ಆನ್‌ ಪೋಸ್ಟ್‌ ನೋಟಿಫಿಕೇಶನ್" ಮೇಲೆ ಕ್ಲಿಕ್‌ ಮಾಡಿ

  ಇನ್‌ಸ್ಟಗ್ರಾಂನ ಸಂದೇಶ

  ಈ ಅಪ್ಲಿಕೇಶನ್‌ ಮೂಲಕ ನೀವು ನಿಮ್ಮ ಸ್ನೇಹಿತರಿಗೆ ಸಾಮಾಜಿಕ ಜಾಲತಾಣದಲ್ಲಿ ವಯಕ್ತಿಕ ಸಂದೇಶ ಕಳುಹಿಸಬಹುದಾಗಿದೆ.

  ಸ್ನೇಹಿತರಿಗೆ ನೇರ ಸಂದೇಶ ಕಳುಹಿಸಿ

  400 ಮಿಲಿಯನ್‌ ಬಳಕೆದಾರರಲ್ಲಿ 85 ಮಿಲಿಯನ್‌ ಬಳಕೆದಾರರು ತಿಂಗಳಲ್ಲಿ ಈ ಅಪ್ಲಿಕೇಶನ್‌ ಮೂಲಕ ವಯಕ್ತಿಕ ಸಂದೇಶ ಕಳುಹಿಸುತ್ತಾರೆ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  English summary
  With its simple design and optimizations for social connections, it is not surprise that Instagram is the world's most popular photo-sharing app, with as many as 400 million users.
  Opinion Poll

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more