Home
ಸುದ್ದಿಜಾಲ

ಗಗನಯಾತ್ರಿ 'ಕಲ್ಪನಾ ಚಾವ್ಲಾ'ರ ಬಗ್ಗೆ ಯಾರಿಗೂ ತಿಳಿಯದ ಮಾಹಿತಿ ಏನು ಗೊತ್ತೇ?

By Suneel

ಬಾಹ್ಯಾಕಾಶಕ್ಕೆ ಹಾರಿದ ಭಾರತೀಯ ಪ್ರಥಮ ಮಹಿಳೆ "ಕಲ್ಪನಾ ಚಾವ್ಲಾ". ಅವರು ಇಂದು ಬದುಕಿದ್ದರೆ ಮಾರ್ಚ್‌ 17 ಕ್ಕೆ ಸರಿಯಾಗಿ 54 ವರ್ಷ ತುಂಬುತ್ತಿತ್ತು ಅಷ್ಟೆ. ಆದ್ರೆ ಭಾರತೀಯ ಮೂಲದ ಅಮೇರಿಕ ಪ್ರಜೆಯಾಗಿದ್ದ ಇವರು 2003 ರ ಫೆಬ್ರವರಿ 1 ರಲ್ಲಿ ತೀರಿಕೊಂಡರು. ಇವರನ್ನು ಇಂದಿನ ದಿನ ಏಕೆ ನೆನಪು ಮಾಡಿಕೊಳ್ಳುತ್ತಿದ್ದೇವೆ ಅಂದ್ರೆ ಅವರು ಬದುಕಿದ್ದರೆ 54 ವರ್ಷಗಳು ಮಾತ್ರ ಆಗಿರುತ್ತಿತ್ತು. ಹಾಗೆಯೇ ಎಷ್ಟೋ ಭಾರತೀಯ ಮಹಿಳೆಯರ ಸಾಧನೆಯ ಮಾರ್ಗಕ್ಕೆ ಇನ್ನು ಅಧಿಕವಾದ ಸ್ಫೂರ್ತಿಸಿಗುತ್ತಿತ್ತು.

ಅಂದಹಾಗೆ ಕಲ್ಪನಾ ಚಾವ್ಲಾ ಅವರು ಭಾರತೀಯ ಮೊದಲ ಮಹಿಳಾ ಗಗನಯಾತ್ರಿ ಅನ್ನೋದು ಬಿಟ್ರೆ, ಅಸಂಖ್ಯಾತ ಜನರಿಗೆ ಅವರ ಬಗ್ಗೆ ಬೇರೇನೂ ಗೊತ್ತಿರಬಹುದು. ಅಬ್ಬಬ್ಬಾ ಅಂದ್ರೆ ಅವರ ವಿಳಾಸ, ಶಿಕ್ಷಣ, ಅವರು ಅಮೇರಿಕದ ಪ್ರಜೆಯಾಗಿ ಗಗನಯಾತ್ರಿ ಆದದ್ದು ತಿಳಿದಿರಬಹುದು. ಆದ್ರೆ ಅವರ ಬಗ್ಗೆ ಯಾರು ತಿಳಿಯದೇ ಇರುವ ಕೆಲವು ಮಾಹಿತಿಗಳಿವೆ. ಅವುಗಳೇನು ಎಂದು ನಮ್ಮ ಭಾರತದ ಹೆಮ್ಮೆಯ ಮಹಿಳೆ ಕಲ್ಪನಾ ಚಾವ್ಲಾ'ರವರ ಬಗ್ಗೆ ಲೇಖನದಲ್ಲಿ ಓದಿ ತಿಳಿಯಿರಿ.

 ಕಲ್ಪನಾ ಚಾವ್ಲಾರ ಬಗ್ಗೆ ತಿಳಿಯಲೇ ಬೇಕಾದ ಮಾಹಿತಿ

ಕಲ್ಪನಾ ಚಾವ್ಲಾರ ಬಗ್ಗೆ ತಿಳಿಯಲೇ ಬೇಕಾದ ಮಾಹಿತಿ

ಅವರಿಗೆ ಮೊದಲು ಮಾಂಟೊ ಎಂದು ಹೆಸರು ಇಡಲಾಗಿತ್ತು. ನಂತರದಲ್ಲಿ ಅವರು ಅವರೆ ಕಲ್ಪನಾ ಎಂದು ಹೆಸರು ಕೊಟ್ಟುಕೊಂಡರು. ನಂತರದಲ್ಲಿ ಮಾಂಟೊ ಎಂಬ ಹೆಸರನ್ನೇ ನಿಕ್‌ನೇಮ್‌ ಎಂಬಂತೆ ಬಳಸತೊಡಗಿದರು.

ಕಲ್ಪನಾ ಚಾವ್ಲಾರ ಬಗ್ಗೆ ತಿಳಿಯಲೇ ಬೇಕಾದ ಮಾಹಿತಿ

ಕಲ್ಪನಾ ಚಾವ್ಲಾರ ಬಗ್ಗೆ ತಿಳಿಯಲೇ ಬೇಕಾದ ಮಾಹಿತಿ

ಕಲ್ಪನಾ ಚಾವ್ಲಾ'ರವರು ಗಗನಯಾತ್ರಿ ಆಗಿರುವುದನ್ನು ನೋಡಿ ಅವರು ಶೈಕ್ಷಣಿಕವಾಗಿ ಟಾಪರ್‌ ಅಂತ ಅಂದುಕೊಳ್ಳಬೇಡಿ. ಯಾಕಂದ್ರೆ ಅವರು ಟಾಪ್ 5 ವಿದ್ಯಾರ್ಥಿಗಳಲ್ಲಿ ಒಬ್ಬರಾಗಿರುತ್ತಿದ್ರು. ಅಲ್ಲದೇ ಕವಿತೆ, ನೃತ್ಯ, ಸೈಕಲಿಂಗ್, ರನ್ನಿಂಗ್‌ಗಳಲ್ಲಿ ಅತ್ಯಧಿಕ ಆಸಕ್ತಿ ಹೊಂದಿದ್ದರು. ವಿಶೇಷ ಏನಪ್ಪಾ ಅಂದ್ರೆ ಯಾವಾಗಲು ಸಹ ರನ್ನಿಂಗ್‌ನಲ್ಲಿ ಇವರೇ ಮೊದಲು ಬರುತ್ತಿದ್ದರು.

ಕಲ್ಪನಾ ಚಾವ್ಲಾರ ಬಗ್ಗೆ ತಿಳಿಯಲೇ ಬೇಕಾದ ಮಾಹಿತಿ

ಕಲ್ಪನಾ ಚಾವ್ಲಾರ ಬಗ್ಗೆ ತಿಳಿಯಲೇ ಬೇಕಾದ ಮಾಹಿತಿ

ಭಾರತದಲ್ಲಿ ಇಂಜಿನಿಯರಿಂಗ್‌ ಮುಗುಸಿ ಕಲ್ಪನಾ ಚಾವ್ಲಾ'ರವರು 1982ರಲ್ಲಿ ಅಮೇರಿಕಕ್ಕೆ ಓದರು. ಅಲ್ಲಿ ಏರಿಯೋಸ್ಪೇಸ್‌ ಇಂಜಿನಿಯರಿಂಗ್‌ ಅಧ್ಯಯನ ಮಾಡಿ ನಂತರದಲ್ಲಿ ನಾಸಾಗೆ ಸೇರಿದರು. ಗಗನಯಾತ್ರಿಯಾಗಿ ಹೊರಹೊಮ್ಮುವ ಮೊದಲು ನಾಸಾದಲ್ಲಿ ಸಂಶೋಧನಾ ಕೇಂದ್ರದ ಓವರ್‌ಸೆಟ್‌ ಮಾದರಿಯ ಉಪಾಧ್ಯಕ್ಷರಾಗಿ ಅಲ್ಲದೇ ಹಲವು ಪಾತ್ರಗಳನ್ನು ನಿರ್ವಹಿಸಿದ್ದಾರೆ.

ಕಲ್ಪನಾ ಚಾವ್ಲಾರ ಬಗ್ಗೆ ತಿಳಿಯಲೇ ಬೇಕಾದ ಮಾಹಿತಿ

ಕಲ್ಪನಾ ಚಾವ್ಲಾರ ಬಗ್ಗೆ ತಿಳಿಯಲೇ ಬೇಕಾದ ಮಾಹಿತಿ

ಕಲ್ಪನಾರವರು ವಾಣಿಜ್ಯ ಪೈಲಟ್‌ ಆಗಿ ಅರ್ಹತೆ ಪಡೆದುದರ ಜೊತೆಗೆ, ಮಲ್ಟಿ ಇಂಜಿನಿಯರ್‌ ಮತತು ಸೀಪ್ಲೇನ್‌ ಚಾಲನೆಗೆ ಪರವಾನಗಿಯನ್ನು ಸಹ ಪಡೆದರು. ನಂತರದಲ್ಲಿ ವಿಮಾನ ಮಾರ್ಗದರ್ಶಕರಾಗಿ ಅರ್ಹತೆ ಪಡೆದುದರ ಜೊತೆಗೆ 1983 ರಲ್ಲಿ ಅಮೇರಿಕದ ವಾಯುಯಾನ ಲೇಖಕರಾದ 'ಜೀನ್ ಪಿಯರ್ ಹ್ಯಾರಿಸನ್' ಅನ್ನು ವಿವಾಹವಾದರು.

ಕಲ್ಪನಾ ಚಾವ್ಲಾರ ಬಗ್ಗೆ ತಿಳಿಯಲೇ ಬೇಕಾದ ಮಾಹಿತಿ

ಕಲ್ಪನಾ ಚಾವ್ಲಾರ ಬಗ್ಗೆ ತಿಳಿಯಲೇ ಬೇಕಾದ ಮಾಹಿತಿ

1991 ರಲ್ಲಿ ಅಮೇರಿಕದ ಪ್ರಜೆಯಾದ ನಂತರ ನಾಸಾ ಗಗನಯಾತ್ರಿ ಕಾರ್ಪ್ಸ್ ಸದಸ್ಯರಾದರು. 6 ವರ್ಷಗಳ ನಂತರ ಇವರ ಮೊದಲ ವಿಮಾನವನ್ನು ಬಾಹ್ಯಾಕಾಶಕ್ಕೆ ತೆಗೆದುಕೊಂಡುಹೋದರು.

ಕಲ್ಪನಾ ಚಾವ್ಲಾರ ಬಗ್ಗೆ ತಿಳಿಯಲೇ ಬೇಕಾದ ಮಾಹಿತಿ

ಕಲ್ಪನಾ ಚಾವ್ಲಾರ ಬಗ್ಗೆ ತಿಳಿಯಲೇ ಬೇಕಾದ ಮಾಹಿತಿ

ಕಲ್ಪನಾ ಚಾವ್ಲಾರು ನಿಧನಹೊಂದಿದ ನಂತರದಲ್ಲಿ ಹಲವು ಗೌರವಗಳು ದಯಪಾಲಿಸಿದವು. ಕೊಲಂಬಿಯಾದ ಒಂದು ಬೆಟ್ಟಕ್ಕೆ ಕಲ್ಪನಾ ಬೆಟ್ಟ ಎಂದು ಹೆಸರಿಸಲಾಯಿತು. ಅಲ್ಲದೇ ಅವರು ಓದಿದ ಎಲ್ಲಾ ಕಾಲೇಜು ಮತ್ತು ವಿಶ್ವವಿದ್ಯಾಲಯಗಳಲ್ಲಿ ಅವರ ಮೆಡಲ್ ಮತ್ತು ವಿದ್ಯಾರ್ಥಿವೇತನವನ್ನು ಅವರ ಹೆಸರಿನಲ್ಲಿ ನೀಡಲಾಯಿತು. ಅಲ್ಲದೇ "ಕಾಂಗ್ರೇಸ್‌ ನ್ಯಾಷನಲ್‌ ಸ್ಪೇಸ್‌ ಮೆಡಲ್‌", "ನಾಸಾ ಸ್ಪೇಸ್‌ ಫ್ಲೈಟ್‌ ಮೆಡಲ್‌" ಗೌರವ ಸಹ ಲಭಿಸಿತು.

ಕಲ್ಪನಾ ಚಾವ್ಲಾರ ಬಗ್ಗೆ ತಿಳಿಯಲೇ ಬೇಕಾದ ಮಾಹಿತಿ

ಕಲ್ಪನಾ ಚಾವ್ಲಾರ ಬಗ್ಗೆ ತಿಳಿಯಲೇ ಬೇಕಾದ ಮಾಹಿತಿ

ಸುನೀತಾ ವಿಲಿಯಮ್ಸ್‌'ರವರು ಬಾಹ್ಯಾಕಾಶಕ್ಕೆ ಹೋದ ಎರಡನೇ ಮಹಿಳಾ ಗಗನಯಾತ್ರಿ. ಆದರೆ ಮೊಟ್ಟ ಮೊದಲು ಬಾಹ್ಯಾಕಾಶಕ್ಕೆ ಹಾರಿದ ಭಾರತೀಯ ಮಹಿಳೆ ಕಲ್ಪನಾ ಚಾವ್ಲಾ'ರವರು. ಬಾಹ್ಯಾಕಾಶಕ್ಕೆ ಮೊದಲು ಹಾರಿದವರು Valentina Vladimirovna Tereshkova. ಇವರು ರಷ್ಯಾ'ದವರು.

ಗಿಜ್‌ಬಾಟ್‌

ಗಿಜ್‌ಬಾಟ್‌

Best Mobiles in India

English summary
7 Things You Need To Know About Kalpana Chawla, First Indian Woman In Space. Read more about this in kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+