ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್6: ಮಳೆಯಲ್ಲಿ ನೆಂದರೂ ಮಿಂಚುವ ಫೋನ್

By Shwetha
|

ಬಾರ್ಸಿಲೋನಾದಲ್ಲಿ ತನ್ನ ಉಗಮವನ್ನು ಕಂಡ ಗ್ಯಾಲಕ್ಸಿ ಎಸ್6 ಸ್ಮಾರ್ಟ್‌ಫೋನ್ ಆಪಲ್ ಅನ್ನು ಹಿಂದಿಕ್ಕುವ ಆಟದಲ್ಲಿ ಸ್ಯಾಮ್‌ಸಂಗ್‌ನ ಹೊಸ ದಾಳವಾಗಿ ಮಾರ್ಪಟ್ಟಿದೆ. ಸ್ಯಾಮ್‌ಸಂಗ್ ಪ್ರಿಯರು ವಾಹ್! ಎಂದು ಉದ್ಗಿರಿಸುವಂತೆ ಮಾಡುವ ಅಸದಳ ಫೀಚರ್‌ಗಳನ್ನು ಡಿವೈಸ್ ಪಡೆದುಕೊಂಡಿದ್ದು ಬಳಕೆದಾರರು ನಿಜಕ್ಕೂ ಈ ಫೋನ್‌ಗೆ ಮನಸೋಲಲೇ ಬೇಕು. [ಓದಿರಿ: ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್6 ಮತ್ತು ಎಸ್6 ಎಡ್ಜ್ ಕಣ್ಸೆಳೆಯುವ ಅತ್ಯಪೂರ್ಣ ನೋಟ]

ಇಂದಿನ ಲೇಖನದಲ್ಲಿ ಸ್ಮಾರ್ಟ್‌ಫೋನ್ ಕುರಿತಾದ ಟಾಪ್ ಫೀಚರ್‌ಗಳನ್ನು ನಾವು ನಿಮಗೆ ಒದಗಿಸುತ್ತಿದ್ದು ಈ ಫೋನ್ ನಮ್ಮ ಅದೃಷ್ಟ ಎಂಬ ಉದ್ಗಾರವನ್ನು ನೀವು ಹೊರಡಿಸುವುದಂತೂ ಖಚಿತ. [ಓದಿರಿ: ಆಪಲ್ ಫೋನ್‌ನಲ್ಲೂ ಸ್ಯಾಮ್‌ಸಂಗ್ ಫೋನ್‌ನಲ್ಲೂ ಇರುವ 10 ವ್ಯತ್ಯಾಸ]

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್6:  ಸ್ಟೈಲ್

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್6: ಸ್ಟೈಲ್

ತನ್ನ ಹೊಸ ಕೊಡುಗೆಯ ಮೂಲಕ ತನ್ನ ಎಂದಿನ ವಿನ್ಯಾಸಕ್ಕೆ ಸ್ಯಾಮ್‌ಸಂಗ್ ಮರಳಿದೆ. ಗ್ಲಾಸ್ ಮತ್ತು ಮೆಟಲ್ ಅನ್ನು ಈ ಫೋನ್ ಬಳಸಿದ್ದು ವಿನ್ಯಾಸಪೂರ್ಣ ಎಡ್ಜ್‌ಗಳನ್ನು ನಮಗೆ ಡಿವೈಸ್‌ನಲ್ಲಿ ಕಾಣಬಹುದು. ಗ್ಯಾಲಕ್ಸಿ ಎಸ್6 ನಿಜಕ್ಕೂ ಒಂದು ಅದ್ಭುತ ಫೋನ್ ಎಂಬುದರಲ್ಲಿ ಸಂದೇಹವೇ ಇಲ್ಲ.

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್6: ಹೊಸ ಸುಧಾರಣೆಗಳು

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್6: ಹೊಸ ಸುಧಾರಣೆಗಳು

ಎಕ್ಸೋನಸ್ 7 ಓಕ್ಟಾ ಕೋರ್ ಪ್ರೊಸೆಸರ್ ಇದರಲ್ಲಿದ್ದು, 2.1 GHZ ಮತ್ತು 1.5 GHZ ಜೊತೆಗೆ 3 ಜಿಬಿ RAM ಅನ್ನು ಫೋನ್ ಪಡೆದುಕೊಂಡಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್6: ಫೋನ್‌ ಕ್ಯಾಮೆರಾ

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್6: ಫೋನ್‌ ಕ್ಯಾಮೆರಾ

ಫೋನ್‌ನ ರಿಯರ್ ಕ್ಯಾಮೆರಾ 16 ಮೆಗಾಪಿಕ್ಸೆಲ್ ಆಗಿದ್ದು ಮುಂಭಾಗದಲ್ಲಿ 5 ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ನಿಮಗೆ ಕಾಣಬಹುದು. ಎಚ್‌ಡಿ ಆರ್ ಶೂಟಿಂಗ್ ಸಾಮರ್ಥ್ಯವನ್ನು ಡಿವೈಸ್‌ನಲ್ಲಿ ಕಾಣಬಹುದಾಗಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್6: ಆಂಡ್ರಾಯ್ಡ್ 5.0 ಲಾಲಿಪಪ್

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್6: ಆಂಡ್ರಾಯ್ಡ್ 5.0 ಲಾಲಿಪಪ್

ನಿಜಕ್ಕೂ ಆಂಡ್ರಾಯ್ಡ್ 5.0 ಲಾಲಿಪಪ್ ಅನ್ನು ಡಿವೈಸ್ ಪಡೆದುಕೊಂಡಿರುವುದು ಇನ್ನಷ್ಟು ಹಿರಿಮೆಯ ಗರಿಯನ್ನು ಫೋನ್‌ಗೆ ತೊಡಿಸಿದೆ. ಈ ಓಎಸ್ ಫೋನ್‌ನ ಹೆಚ್ಚಿನ ವೇಗ ಅಂತೆಯೇ ಕ್ಷಿಪ್ರತೆಗೆ ಸಹಕಾರಿ ಎಂದೆನಿಸಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್6: ಮೆಮೊರಿ ಕಾರ್ಡ್ ಸ್ಲಾಟ್

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್6: ಮೆಮೊರಿ ಕಾರ್ಡ್ ಸ್ಲಾಟ್

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್6 ಮೈಕ್ರೋ ಎಸ್‌ಡಿ ಕಾರ್ಡ್‌ಗೆ ಬೆಂಬಲವನ್ನು ಒದಗಿಸುತ್ತಿದ್ದು ಆಂತರಿಕ ಸಾಮರ್ಥ್ಯ 32 ಜಿಬಿಯಾಗಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್6: ಉತ್ತಮ ಬ್ಯಾಟರಿ

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್6: ಉತ್ತಮ ಬ್ಯಾಟರಿ

ವೈರ್‌ಲೆಸ್ ಚಾರ್ಜಿಂಗ್‌ಗೆ ಬೆಂಬಲವನ್ನು ಒದಗಿಸುವ ಫೋನ್ ಆಗಿದ್ದು, ಸ್ಯಾಮ್‌ಸಂಗ್ ಬಳಕೆದಾರರು ಫೋನ್ ಬ್ಯಾಟರಿ ಬಗ್ಗೆ ತಲೆಕೆಡಿಸಿಕೊಳ್ಳುವ ಕಾಲ ಮರೆಯಾಯಿತು ಎಂದೇ ಹೇಳಬಹುದು.

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್6: ಜಲನಿರೋಧಕ ಶಕ್ತಿ

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್6: ಜಲನಿರೋಧಕ ಶಕ್ತಿ

ಸ್ಯಾಮ್‌ಸಂಗ್ ತನ್ನ ಗ್ಯಾಲಕ್ಸಿ ಎಸ್6 ಗೆ ಜಲನಿರೋಧಕ ಶಕ್ತಿಯನ್ನು ಅಳವಡಿಸಿದ್ದು ಮಳೆಯಲ್ಲೂ ಫೋನ್‌ ಅನ್ನು ಧೈರ್ಯವಾಗಿ ಬಳಸಬಹುದು.

Most Read Articles
Best Mobiles in India

English summary
With high brightened display, waterproof speciality galaxy S6 may be the big rival for Apple iphone. Samsung used its galaxy S6 against Cupertino giant Apple to defeat its all upcomings. Today we can see the rich functions of galaxy S6 and what it is having to defeat apple iphones.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more