7ರ ಪೋರಿ ಬಿಡಿಸಿದ ಚಿತ್ರಕ್ಕೆ ಗೂಗಲ್‌ನಿಂದ 55 ಲಕ್ಷ ರೂ.ಬಹುಮಾನ!!

  ಜಗತ್ತಿನ ಅಂತರ್ಜಾಲ ದೈತ್ಯ ಕಂಪನಿ ಗೂಗಲ್‌ ಅಮೆರಿಕಾದ ವರ್ಜಿನಿಯಾದಲ್ಲಿ 1ನೇ ತರಗತಿ ವಿದ್ಯಾರ್ಥಿನಿ ಬಿಡಿಸಿದ ಒಂದು ಚಿತ್ರಕ್ಕೆ ಸರಿಸುಮಾರು 55,00,000 ರೂಪಾಯಿಗಳ ಬಹುಮಾನವನ್ನು ನೀಡಿದೆ. ಗೂಗಲ್‌ನ 10ನೇ ವಾರ್ಷಿಕ 'ಡೂಡಲ್ 4 ಗೂಗಲ್' ಸ್ಪರ್ಧೆಯಲ್ಲಿ 7 ವರ್ಷ ಪ್ರಾಯದ ಪೋರಿ ವಿಜೇತಳಾಗಿ ಹೊರಹೊಮ್ಮಿ ಈ ಪ್ರಶಸ್ತಿ ಪಡೆದಿದ್ದಾಳೆ.

  ಸುಮಾರು 1 ಲಕ್ಷದ 80 ಸಾವಿರ ಅಮೆರಿಕನ್ ವಿದ್ಯಾರ್ಥಿಗಳು ಭಾಗವಹಿಸಿದ್ದ 'ಡೂಡಲ್ 4 ಗೂಗಲ್' ಸ್ಪರ್ಧೆಯಲ್ಲಿ ಅಮೆರಿಕಾದ ವರ್ಜಿನಿಯಾದಲ್ಲಿ 1ನೇ ತರಗತಿ ವಿದ್ಯಾರ್ಥಿನಿಯಾಗಿರುವ ಸಾರಾ ಗೊಮೆಜ್ ಲೇನ್ ಬಿಡಿಸಿರುವ ಡೂಡಲ್ ಚಿತ್ರವನ್ನು ಆಯ್ಕೆ ಮಾಡಿತ್ತು. ಜೂನ್ ಮೊದಲ ವಾರದಲ್ಲಿಯೇ ಸಾಫ್ಟ್‌ವೇರ್ ದೈತ್ಯ ಗೂಗಲ್‌ ಸಾರಾ ವಿಜೇತಳಾಗಿದ್ದಾಳೆಂದು ಪ್ರಕಟಿಸಿತ್ತು.

  7ರ ಪೋರಿ ಬಿಡಿಸಿದ ಚಿತ್ರಕ್ಕೆ ಗೂಗಲ್‌ನಿಂದ 55 ಲಕ್ಷ ರೂ.ಬಹುಮಾನ!!

  ಹಾಗಾಗಿ, ಗೂಗಲ್ ಕಂಪನಿಯು ಸಾರಾ ಗೊಮೆಜ್ ಲೇನ್ ಕಾಲೇಜು ಶಿಕ್ಷಣಕ್ಕಾಗಿ $30000 ಹಾಗೂ ಶಾಲೆಗೆ $50000 ಬಹುಮಾನ ನೀಡಿದೆ. ಇದರ ಮೊತ್ತ ಭಾರತದ ರೂಪಾಯಿಗಳ ಲೆಕ್ಕದಲ್ಲಿ ಸರಿಸುಮಾರು 55 ಲಕ್ಷ ರೂಪಾಯಿಗಳಾದ್ದು, ಇದರೆ ಜೊತೆಗೆ ಸಾರಾಗೆ 'ಮೌಂಟನ್ ವೀವ್'ಗೆ ಪ್ರವಾಸ ಮತ್ತು ಫನ್ ಗೂಗ್ಲಿ ಸ್ವಾಗ್ ಬಹುಮಾನವನ್ನೂ ಗೂಗಲ್ ನೀಡಿ ಗೌರವಿಸಿದೆ.

  ನನ್ನಿಷ್ಟದ ಡೈನೋಸರ್‌ಗಳು ಡೂಡಲ್‌ನ ಭಾಗವಾಗಿವೆ. ನಾನು ಪಳಯುಳಿಕೆ ತಜ್ಞಳಾಗಬಯಸುತ್ತೇನೆ. ತಾನು ಬಿಡಿಸಿರುವ ಈ ಚಿತ್ರದಲ್ಲಿರುವ ಕಾಣುವ ಸಲಿಕೆಯು ತನ್ನ ಭವಿಷ್ಯದ ಉದ್ಯೋಗಕ್ಕಾಗಿ ಎಂದು ಸಾರಾ ಹೇಳಿದ್ದಾಳೆ. ಇನ್ನು 'ಡೂಡಲ್ 4 ಗೂಗಲ್' ಸ್ಪರ್ಧೆಯಲ್ಲಿ ಈವರೆಗೆ ವಿಜೇತರಾದವರ ಪೈಕಿ ಸಾರಾ ಅತೀ ಕಿರಿಯಳು ಎಂದು ಹೇಳಲಾಗಿದೆ.

  1998ರಲ್ಲಿ ಗೂಗಲ್ ತನ್ನ ಹೋಮ್ ಪೇಜಿನಲ್ಲಿ ಡೂಡಲ್‌ಗಳನ್ನು ಮೊದಲ ಬಾರಿ ಬಳಸಲು ಆರಂಭಿಸಿತ್ತು. ಮೊದಲ ಬಾರಿಗೆ ಲೋಗೋವನ್ನು ಬಳಸಲಾಗಿತ್ತು, ಬಳಿಕದ ವರ್ಷಗಳಲ್ಲಿ ಅದಕ್ಕೆ ಕಲಾ ಮೆರುಗನ್ನು ನೀಡಲಾಯಿತು. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗಾಗಿ ಗೂಗಲ್ ಕಂಪನಿಯು 2014ರಿಂದ ಪ್ರತಿವರ್ಷ ಡೂಡಲ್ 4 ಗೂಗಲ್ ಸ್ಪರ್ಧೆಯನ್ನು ಆಯೋಜಿಸುತ್ತಿದೆ.

  ಓದಿರಿ: ಭಾರತ ಸರ್ಕಾರದ ಐತಿಹಾಸಿಕ ಘೋಷಣೆಗೆ ಮತ್ತೆ ಬೆಚ್ಚಿಬಿದ್ದವು 'ಟೆಲಿಕಾಂ' ಕಂಪೆನಿಗಳು!!

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  ಗೂಗಲ್ ಸಾಫ್ಟ್‌ವೇರ್ ನಿಗದಿಯಂತೆ ಮೃತಪಟ್ಟಳು ಆಕೆ!..ನಿಮ್ಮ ಸಾವು ಯಾವಾಗ ಕೇಳಿ?!

  ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ (ಕೃತಕ ಬುದ್ದಿಮತ್ತೆ) ಈಗ ಬರೀ ಸ್ಮಾರ್ಟ್‌ಫೋನ್‌ಗಷ್ಟೇ ಸೀಮಿತವಾಗಿಲ್ಲ. ಬದಲಾಗಿ ಎಲ್ಲರ ನಿರೀಕ್ಷೆ ಮೀರಿ ಬೆಳೆದುನಿಂತಿದೆ. ಸ್ಮಾರ್ಟ್‌ಫೋನ್ ಪರದೆ ಮೇಲೆ ಕೈಯಾಡಿಸದೇ ಒಂದು ಸ್ಮಾರ್ಟ್ ಫೋನ್‌ನ್ನು ಹೇಗೆಲ್ಲಾ ಬಳಸಬಹುದು ಎಂದು ತೋರಿಸಿಕೊಟ್ಟಿದ್ದ ಈ ತಂತ್ರಜ್ಞಾನ ಮನುಷ್ಯನ ಜೀವನವನ್ನೇ ಬದಲಾಯಿಸೋಕೆ ಹೊರಟಿದೆ.

  ಹೌದು, ಹುಟ್ಟು ಮತ್ತು ಸಾವು ಎರಡೂ ನಮ್ಮ ಕೈಯಲಿಲ್ಲ. ಮನುಷ್ಯ ಅತಿಯಾಗಿ ಭಯಪಡುವ ವಿಷಯಗಳಲ್ಲಿ ಸಾವೂ ಒಂದು. ಈಗ ಇರುವವನು ಮುಂದಿನ ಕ್ಷಣದಲ್ಲಿ ಇರುತ್ತಾನೋ ಇಲ್ಲವೋ ಎಂಬ ಯುಗದಲ್ಲಿ ನಾವು ಈಗ ಜೀವಿಸುತ್ತಿದ್ದೇವೆ. ಈ ಸಮಯದಲ್ಲಿ ಮನುಷ್ಯನ ಸಾವು ಯಾವಾಗ ಸಂಭವಿಸಬಹುದು ಎಂದು ಭವಿಷ್ಯ ಹೇಳುವ ತಂತ್ರಜ್ಞಾನ ಬಂದರೆ ಹೇಗೆ.?

  ಇದೊಂದು ನಂಬಲಸಾಧ್ಯವಾದ ಮಾತೆಂದು ನಾವು ನೀವು ಹೇಳಬಹುದು. ಆದರೆ ಮಾಹಿತಿ ತಂತ್ರಜ್ಞಾನದ ಶ್ರೇಷ್ಠ ದಿಗ್ಗಜ ಎಂದಲೇ ಖ್ಯಾತಿಯಾಗಿರುವ ಗೂಗಲ್ ಇದು ಸಾಧ್ಯ ಎಂದು ಹೇಳಿದೆ. ಯಮನಿಗೇ ಸವಾಲೆಸೆಯೋಕೆ ಹೊರಟಿದೆ ಈ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನ. ಹಾಗಾದರೆ, ಏನಿದು ವೈರಲ್ ಸ್ಟೋರಿ ಎಂಬುದನ್ನು ಮುಂದೆ ಓದಿ ತಿಳಿಯಿರಿ.

  ನಿಗದಿಯಂತೆ ಮೃತಪಟ್ಟಳು ಆಕೆ!

  ಇತ್ತೀಚಿಗಷ್ಟೇ ಗೂಗಲ್ ತನ್ನ ಆರ್ಟಿಫಿಷಿಯಲ್ ಇಂಟೆಲಿಜೆನ್‌ಸ್ ಸಾಫ್ಟ್‌ವೇರ್ ಅನ್ನು ಸ್ತನ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಒಬ್ಬ ಮಹಿಳೆಯ ಮೇಲೆ ಪ್ರಯೋಗಿಸಲಾಗಿತ್ತು. ಆ ಮಹಿಳೆಯ ಮೇಲೆ ಅಧ್ಯಯನ ನಡೆಸಿದ್ದ ಗೂಗಲ್ ಆಕೆ ಅಸುನೀಗುವ ದಿನಾಂಕವನ್ನ ಅಂದಾಜಿಸಿತ್ತು. ಸೋಜಿಗ ಎಂಬಂತೆ ಅದು ನಿಗದಿಪಡಿಸಿದ್ದ ದಿನಾಂಕದಂದೇ ಮೃತಪಟ್ಟಿದ್ದಳು.!

  ರೋಗಿಗಳ ಭವಿಷ್ಯವನ್ನ ಹೇಳುವ ತಂತ್ರಜ್ಞಾನ!

  ಗೂಗಲ್ ಕಂಪನಿಯ ಮೆಡಿಕಲ್ ಬ್ರೇನ್‌ಟೀಂನ ತಂತ್ರಜ್ಞರು ಒಂದು ವಿನೂತನ ಆರ್ಟಿಫಿಷಿಯಲ್ ಇಂಟೆಲಿಜೆನ್‌ಸ್ ಆಲ್ಗೋರಿಥಮ್ ಅಭಿವೃದ್ಧಿಪಡಿಸಿದ್ದು ಈ ಮೂಲಕ ಆಸ್ಪತ್ರೆಯಲ್ಲಿ ದಾಖಲಾಗಿರುವ ರೋಗಿಗಳು ಬದುಕುಳಿಯುತ್ತಾರಾ ಅಥವಾ ಇಲ್ಲವಾ ಅನ್ನೋದರ ಬಗ್ಗೆ ಭವಿಷ್ಯವನ್ನ ಹೇಳುತ್ತದೆ.

  93ರಷ್ಟು ಯಶಸ್ಸು ಕಂಡಿರುವ ತಂತ್ರಜ್ಞಾನ!

  ಈ ತಂತ್ರಜ್ಞಾನ ಅಭಿವೃದ್ಧಿಪಡಿಸುವುದಕ್ಕೆ ಗೂಗಲ್‌ನ ಮೆಡಿಕಲ್ ಬ್ರೇನ್ ತಂಡ ಹಲವಾರು ಹಂತಗಳಲ್ಲಿ ಅಧ್ಯಯನ ನಡೆಸಿದೆ. ಅಧ್ಯಯನದ ಮೊದಲ ಹಂತದಲ್ಲಿ ಶೇ 95ರಷ್ಟು ಹಾಗೂ ಎರಡನೇ ಹಂತದಲ್ಲಿ 93ರಷ್ಟು ಯಶಸ್ಸು ಕಂಡಿದ್ದು ಈ ಮೂಲಕ ಸಾವನ್ನು ಪ್ರೆಡಿಕ್‌ಟ್ ಮಾಡುವುದಕ್ಕೆ ಸಾಧ್ಯ ಎಂದು ತೋರಿಸಿಕೊಟ್ಟಿದೆ.

  ಈ ಬಗ್ಗೆ ಗೂಗಲ್ ಹೇಳಿದ್ದೇನು?

  ಕಳೆದ ವಾರವಷ್ಟೇ ಗೂಗಲ್ ತಾನು ಹೇಗೆ ಈ ತಂತ್ರಜ್ಞಾನವನ್ನ ಅಭಿವೃದ್ಧಿಪಡಿಸುವುದಕ್ಕೆ ಸಾಧ್ಯವಾಗಿದೆ ಎಂದು ಬ್ರಿಟನ್‌ನ ನಿಯತಕಾಲಿಕೆಯಲ್ಲಿ ಪ್ರಕಟಿಸಿದೆ. ತಾನು ಅಭಿವೃದ್ಧಿಪಡಿಸಿರುವ ತಂತ್ರಜ್ಞಾನ ವೈದ್ಯರು ಸೂಚಿಸಿರುವ ಮಾದರಿಗಳಿಗಿಂತಲೂ ವಿಭಿನ್ನ ಹಾಗೂ ಇನ್ನೂ ಹೆಚ್ಚು ಪರಿಣಾಮಕಾರಿಯಾಗಿದೆ ಎಂದು ತಿಳಿಸಿದೆ.

  ತಂತ್ರಜ್ಞಾನ ಬಳಕೆಯಾಗುವುದು ಹೇಗೆ?

  ಗೂಗಲ್‌ನ ಈ ಸಾಫ್ಟ್‌ವೇರ್ ರೋಗಿಗಳ ವೈದ್ಯಕೀಯ ವರದಿಯನ್ನ ಸಂಪೂರ್ಣವಾಗಿ ವಿಶ್ಲೇಷಿಸಲಿದೆ. ಇದರಲ್ಲಿ ಅವರ ವಯಸ್ಸು, ಲಿಂಗ, ಈ ಹಿಂದೆ ಪರೀಕ್ಷಿಸಿದ್ದ ಎಲ್ಲಾ ರೀತಿಯ ವರದಿಗಳನ್ನು ನೋಡಲಿದೆ. ರೋಗಿಯ ಎಲ್ಲಾ ಮೆಡಿಕಲ್ ರೆಕಾರ್ಡ್‌ಸ್ ಮತ್ತು ವೈದ್ಯರು ರೋಗಿಗಳಿಗೆ ನಡೆಸುವ ತಪಾಸಣೆಯ ವಿವರಗಳನ್ನೂ ತಪಾಸಣೆ ಮಾಡಿ ಮರಣದ ಬಗ್ಗೆ ಭವಿಷ್ಯ ನುಡಿಯುತ್ತದೆ.

  ಮರಣದ ದಿನಾಂಕ ಊಹೆ ಕಷ್ಟವಲ್ಲ!!

  ಈ ತಂತ್ರಜ್ಞಾನವನ್ನ ಇನ್ನೂ ಪರಿಣಾಮಕಾರಿಯಾಗಿ ಸಿದ್ಧಪಡಿಸಲು ಗೂಗಲ್ ಪ್ರಯತ್ನಿಸುತ್ತಿದೆ. ಈ ಮೂಲಕ ರೋಗಿಗಳ ಖರ್ಚುಗಳ ಬಗ್ಗೆ ನಿಗಾ ಇಡಬಹುದಾಗಿದೆ. ಎಲ್ಲಾ ಅಂದುಕೊಂಡಂತೆ ಆದಲ್ಲಿ ಮುಂದೊಂದು ದಿನ ವ್ಯಕ್ತಿಗಳ ಸಾಯುವ ದಿನಾಂಕವನ್ನ ಅಂದಾಜಿಸುವ ಒಂದು ನಿಖರವಾದ ಯಂತ್ರ ಬಂದರೆ ಅದು ಆಶ್ಚರ್ಯವೇನಿಲ್ಲ.

  21ನೇ ವಯಸ್ಸಿಗೆ ಕೋಟ್ಯಾಧೀಶ್ವರ; ಸ್ವಂತ ಮನೆ, ಬಿಎಂಡಬ್ಲೂ ಒಡೆಯನಾದ ಬಡ ಯುವಕನ ಯಶೋಗಾಥೆ!!

  ಹತ್ತನೇ ವಯಸ್ಸಿನಲ್ಲಿ ಆತನಿಗೆ ಉಡುಗೊರೆಯಾಗಿ ಸಿಕ್ಕಿದ್ದು ಒಂದು ಕಂಪ್ಯೂಟರ್ ಮಾತ್ರ. ಅಲ್ಲಿಂದ ಆತ ಯಾವತ್ತೂ ಸಹ ಜೀವನವನ್ನು ಹಿಂತಿರುಗಿ ನೋಡಲೇ ಇಲ್ಲ. ಏಕೆಂದರೆ, ಆ ಕಂಪ್ಯೂಟರ್ ಜೊತೆಗಿನ ಅವನ ಒಡನಾಟ ಮತ್ತು ಆತನ ಕಠಿಣ ಪರಿಶ್ರಮ ಇಂದು ಆತನನ್ನು ಕೋಟ್ಯಾಧಿಪತಿಯನ್ನಾಗಿಸಿದೆ. ಆತನ 21ನೇ ವಯಸ್ಸಿನ ವೇಳೆಗೆ ವಾರ್ಷಿಕ ಎರಡು ಕೋಟಿ ರೂಪಾಯಿ ಆದಾಯ ಹೊಂದಿರುವ ಕಂಪೆನಿಯ ಮಾಲಿಕನನ್ನಾಗಿಸಿದೆ ಎಂದರೆ ನೀವು ನಂಬಲೇಬೇಕು.!
  ಹೌದು, ಇದು ಕೇರಳ ರಾಜ್ಯದ ಕಣ್ಣೂರಿನ ಹುಡುಗ ಜಾವೇದ್ ಎಂಬ ಯುವಕನ ಯಶಸ್ವಿ ಯುವಕನ ಕಥೆ. ಈ ಉದ್ಯಮಶೀಲ ಯುವಕನ ಯಶೋಗಾಥೆ ಎಲ್ಲರಿಗೂ ಸ್ಪೂರ್ತಿಯ ಚಿಲುಮೆ. ಎಳೆಯ ವಯಸ್ಸಿನಲ್ಲಿಯೇ ಕಠಿಣ ಪರಿಶ್ರಮ ಮತ್ತು ಸಾಮರ್ಥ್ಯದಿಂದ ಅದ್ಬುತ ಯಶಸ್ಸನ್ನು ಸಾಧಿಸಿರುವ ಈತ ಈಗ ಯುವಕರ ಆಶಾಕಿರಣ ಎಂದರೆ ತಪ್ಪಾಗಲಾರದು.! ಏಕೆಂದರೆ, ಈಗ ತನ್ನ 21ನೇ ವಯಸ್ಸಿನ ವೇಳೆಗೆ ಹತ್ತಾರು ಜನರಿಗೆ ಉದ್ಯೋಗ ನೀಡಿರುವ ಈಗ ವಿಶ್ವದಾಧ್ಯಂತ ಗ್ರಾಹಕರನ್ನು ಹೊಂದಿದ್ದಾನೆ.

  ಇ-ಕಾಮರ್ಸ್, ವೆಬ್‌ಡಿಸೈನ್ ಮತ್ತು ಮೊಬೈಲ್ ಅಪ್ಲಿಕೇಷನ್ ಅಭಿವೃದ್ದಿಪಡಿಸುವ "ಟಿಎಂಎನ್ ಆನ್‌ಲೈನ್ ಸೊಲ್ಯೂಷನ್'' ಎಂಬ ತನ್ನದೇ ಸ್ವಂತ ಕಂಪೆನಿಯನ್ನು ಹುಟ್ಟಿಹಾಕಿಕೊಂಡಿರುವ ಜಾವೇದ್ ಈಗ ಎಲ್ಲರಿಗೂ ಚಿರಪರಿಚಿತನಾಗಿದ್ದಾನೆ, ಹಾಗಾದರೆ, ಕಣ್ಣೂರಿನ ಹುಡುಗ ಜಾವೇದ್ ಬಾಲ್ಯ ಜೀವನ ಹೇಗಿತ್ತು? ಕಂಪ್ಯೂಟರ್ ಪ್ರಪಂಚದಲ್ಲಿ ಜಾವೇದ್ ಕೋಟಿ ಕೋಟಿ ಹಣವನ್ನು ಗಳೀಸಲು ಸಾಧ್ಯವಾಗಿದ್ದು ಹೇಗೆ? ಕಂಪ್ಯೂಟರ್ ಜೊತೆಗಿನ ಜಾವೆದ್‌ನ ಒಡನಾಟ ಮತ್ತು ಆತನ ಕಠಿಣ ಪರಿಶ್ರಮ ಹೇಗಿತ್ತು ಎಂಬ ಕುತೋಹಲ ಮಾಹಿತಿಯನ್ನು ಮುಂದೆ ತಿಳಿಯಿರಿ.

  ಕಂಪ್ಯೂಟರ್ ಮತ್ತು ಇಂಟರ್‌ನೆಟ್!!

  ಈಗ ಯಶಸ್ವಿ ಉದ್ಯಮಿಯಾಗಿರುವ ಜಾವೇದ್ ಅವರ ಮೂಲ ಹೆಸರು ಮೊಹಮ್ಮದ್ ಜಾವೇದ್ ಟಿ ಎನ್ ಎಂದಾಗಿತ್ತು. ಹತ್ತನೇ ವಯಸ್ಸಿನಲ್ಲಿ ಜಾವೇದ್ ಹುಟ್ಟುಹಬ್ಬಕ್ಕೆ ಅವರ ತಂದೆ ಕಂಪ್ಯೂಟರ್ ಮತ್ತುನ ಇಂಟರ್‌ನೆಟ್ ಅನ್ನು ಉಡುಗೊರೆಯಾಗಿ ನೀಡಿದ್ದರು. ಇದು ಜಾವೇದ್‌ಗೆ ಬಹಳ ಕುತೋಹಲ ಮೂಡಿಸಿತ್ತು. ನಂತರದ ದಿನಗಳಲ್ಲಿ ಜಾವೇದ್‌ನ ಕಂಪ್ಯೂಟರ್ ಮೇಲಿನ ಕುತೋಹಲ ಅವನನ್ನು ಕಂಪ್ಯೂಟರ್ ಲೋಕಕ್ಕೆ ಇಳಿಸಿಬಿಟ್ಟಿತ್ತು.

  ಗೂಗಲ್ ಕೊಟ್ಟಿದ್ದು ಲಕ್ಕಿ ನೇಮ್!!

  ಅಪ್ಪ ಏನೋ ಕಂಪ್ಯೂಟರ್ ಕೊಡಿಸಿದರು. ಆದರೆ, ಆ ಹಂತದಲ್ಲಿ ಜಾವೇದ್ ಬಳಿಯಲ್ಲಿ ಐಡಿ ಇರಲಿಲ್ಲ. ಹಾಗಾಗಿ, ಜಾವೇದ್ ಹೆಸರಿನಲ್ಲಿ ಐಡಿ ಕ್ರಿಯೇಟ್ ಮಾಡಲು ಮುಂದಾಗಿದ್ದರೆ, ಆ ಹೆಸರಿನಲ್ಲಿ ಐಡಿ ಲಭ್ಯವಿರಲಿಲ್ಲ. ಇದರ ಬದಲಾಗಿ ಟಿಎನ್‌ಎಮ್ ಜಾವೇದ್ ಎಂಬ ಹೆಸರಿನಲ್ಲಿ ಐಡಿ ಸೃಷ್ಟಿಸುವಂತೆ ಗೂಗಲ್‌ನಿಂದ ಸಲಹೆ ಬಂತು. ಆ ಹೆಸರು ಜಾವೇದ್ ಅವರಿಗೆ ಲಕ್ಕಿ ಹೆಸರಾಗಿಯೂ ಕ್ಲಿಕ್ ಆಯಿತು. ಗೂಗಲ್‌ನ ಸದ್ಬಳಕೆಯಿಂದ ಕೋಟಿ, ಕೋಟಿ ಹಣಗಳಿಸುವಂತೆ ಸಹ ಮಾಡಿತು.

  ವೆಬ್‌ಸೈಟ್ ಸೃಷ್ಟಿಸುವುದು ಹೇಗೆ?

  ಬಾಲಕ ಜಾವೇದ್ ಕಂಪ್ಯೂಟರ್ ಜೊತೆಗೆ ಸಮಯ ಕಳೆಯುವ ವೇಳೆ ಆತನಿಗೆ ಯಾವಾಗಲೂ ತಲೆಯಲ್ಲಿ ಪ್ರಶ್ನೆಗಳು ತುಂಬಿರುತ್ತಿದ್ದವಂತೆ.! ವೆಬ್‌ಸೈಟ್ ಸೃಷ್ಟಿಸುವುದು ಹೇಗೆ?, ಅವು ಹೇಗೆ ಕಾರ್ಯನಿರ್ವಹಿಸುತ್ತವೆ? ಇದನ್ನೆಲ್ಲಾ ಮಾಡುವವರು ಯಾರು? ಹೀಗೆ ಪ್ರತಿಯೊಂದನ್ನು ತಿಳಿದುಕೊಳ್ಳುವುದರಲ್ಲಿ ನನಗೆ ಕುತೋಹಲವಿತ್ತು. ಒಂದರ್ಥದಲ್ಲಿ ಆ ಸಮಯದಲ್ಲಿ ನಾನು ಕಂಪ್ಯೂಟರ್ ವ್ಯಸನಿಯಾಗಿದ್ದೆ, ಆದರೆ ಒಳ್ಳೆಯ ಉದ್ದೇಶಕ್ಕಾಗಿ ಎಂದು ಜಾವೇದ್ ಅವರು ನೆನಪಿಸಿಕೊಳ್ಳುತ್ತಾರೆ.

  10 ನೇ ತರಗತಿಯಲ್ಲಿ ವೆಬ್‌ಸೈಟ್ ತಯಾರಿಸಿದ!!

  ಕಂಪ್ಯೂಟರ್ ಜಗತ್ತಿನ ಬಗ್ಗೆ ಜಾವೇದ್‌ಗೆ ತಿಳಿದುಕೊಳ್ಳುವ ಹಂಬಲದಿಂದ ಆ ಕಂಪ್ಯೂಟರ್ ಬಗ್ಗೆ ಹೆಚ್ಚೆಚ್ಚು ತಿಳಿಯಲು ಆರಂಭಿಸಿದ. ಬ್ಲಾಗಿಂಗ್ ಮತ್ತು ವೆಬ್‌ಡಿಸೈನಿಂಗ್ ವಿಷಯಗಳ ಬಗ್ಗೆ ಆನ್‌ಲೈನ್ ಮೂಲಕವೇ ಹೆಚ್ಚು ತಿಳಿದುಕೊಳ್ಳುತ್ತಿದ್ದನಂತೆ. ತನ್ನ ಹತ್ತನೇ ತರಗತಿ ವೇಳೆಗೆ ಹಲವು ಬ್ಲಾಗ್‌ಗಳನ್ನು ಸೃಷ್ಟಿಸಿದ್ದ ಜಾವೇದ್, ನಂತರ ತನ್ನ ಸಹಪಾಠಿ ಸಿರಾಜ್ ಜೊತೆ ಸೇರಿ ಜೆಸ್ರಿ.ಟಿಕೆ ಎಂಬ ವೆಬ್‌ಸೈಟ್ ಕ್ರಿಯೇಟ್ ಮಾಡಿದ್ದರಂತೆ. ಡೊಮೈನ್ ಖರೀದಿಸಲು ಹಣವಲ್ಲದೇ ಉಚಿತ ಡೊಮೈನ್ ಮೂಲಕ ವೆಬ್‌ಸೈಟ್ ಸೃಷ್ಟಿಮಾಡಿದ್ದರಂತೆ.!

  "ಟಿಎಂಎನ್ ಆನ್‌ಲೈನ್ ಸೊಲ್ಯೂಷನ್''

  ಕಂಪ್ಯೂಟರ್ ಆಸಕ್ತಿಯ ಜೊತೆಗೆ ಅಧ್ಯಯನಕ್ಕೆ ಯಾವುದೇ ತೊಂದರೆಯಾಗದಂತೆ ನೋಡಿಕೊಂಡ ಜಾವೇದ್, ವೆಬ್‌ಸೈಟ್ ಅಭಿವೃದ್ದಿಗೆ ಸಾಕಷ್ಟು ಅವಕಾಶಗಳಿರುವುದನ್ನು ಅಂದೇ ಕಂಡುಕೊಂಡಿದ್ದ. ಆಗಲೇ ತನ್ನ ಮೊಟ್ಟ ಮೊದಲ "ಟಿಎಂಎನ್ ಆನ್‌ಲೈನ್ ಸೊಲ್ಯೂಷನ್'' ಎಂಬ ಡೊಮೈನ್ ನೇಮ್ ಅನ್ನು ನೊಂದಾಯಿಸಿದ. ಅಂದು ಜಾವೇದ್ ನೊಂದಾಯಿಸಿದ ಈ ಡೊಮೈನ್ ನೇಮ್ ಈಗಲೂ ವರ್ಚುವಲ್ ಕಂಪೆನಿಯಾಗಿ ಬೆಳದುನಿಂತಿದೆ. ಆಗಲೇ ಹೇಳಿದಂತೆ ಜಾವೇದ್‌ಗೆ ಇದು ಗೂಗಲ್ ಲಕ್ಕಿ ನೇಮ್.!!

  ಸಾವಿರ ರೂಪಾಯಿಗೆ ವೆಬ್‌ಸೈಟ್ ಆಫರ್!!

  ಡೊಮೈನ್ ನೇಮ್ ಖರೀದಿಸಿ ಕಂಪೆನಿಯನ್ನು ಕಟ್ಟಿದ ಜಾವೇದ್, ಸಾವಿರ ರೂಪಾಯಿಗೆ ವೆಬ್‌ಸೈಟ್ ಆಫರ್ ಅನ್ನು ಫೇಸ್‌ಬುಕ್‌ನಲ್ಲಿ ಪ್ರಕಟಿಸಿದ. ಆದರೆ, ಹೆಚ್ಚಿನ ತಾಂತ್ರಿಕ ಕೌಶಲ್ಯಗಳಿಲ್ಲದೆ ಅವರ ಕೆಲಸ ವಿಫಲವಾಗಿತ್ತು. ಆದರೆ, ಛಲಬಿಡದ ಜಾವೇದ್ ಕೆಲ ವೆಬ್‌ಸೈಟ್ ಡಿಸೈನ್ ಕಂಪೆನಿಗಳಿಗೆ ಭೇಟಿ ನೀಡಿ ಅಲ್ಲಿ ಹೆಚ್ಚಿನದನ್ನು ತಿಳಿದುಕೊಂಡ. ನಂತರ ಶಿಕ್ಷಕಿಯೋರ್ವರು ಕೇಳಿದಂತೆ ಮೊದಲ ವೆಬ್‌ಸೈಟ್ ತಯಾರಿಸಿ ನೀಡಿ 2500 ರೂ.ಹಣಗಳಿಸಿ ತನ್ನ ತಾಯಿಯ ಕೈಗಿಟ್ಟನಂತೆ ಜಾವೇದ್.!

  ಕಂಪೆನಿ ಬಂಡವಾಳಕ್ಕೂ ಕಷ್ಟವಿತ್ತು!!

  ಜಾವೇದ್ ಇತ್ತ ವೆಬ್‌ಡಿಸೈನಿಂಗ್ ಕಲಿಯುತ್ತದ್ದ ವೇಳೆಯೇ ಅವನಿಗೆ ಮತ್ತೊಂದು ಕಷ್ಟ ಎದುರಾಗಿತ್ತು. ದುಬೈನಲ್ಲಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದ ಜಾವೇದ್ ತಂದೆ ಉದ್ಯೋಗ ತೊತರೆದು ವಾಪಸ್ ಆಗಿದ್ದರು. ಇದರಿಂದ ಜಾವೇದ್ ಅವರ ಮನೆಯ ಪರಿಸ್ಥಿತಿ ಬಹಳ ಕಷ್ಟವಾಗಿತ್ತು. ಈ ಸಮಯದಲ್ಲಿ ಜಾವೇದ್ ಅವರ ತಂದೆಗೆ 1 ಲಕ್ಷ ಹಣ ನೀಡಿದರೆ ಕಂಪೆನಿ ಶುರುಮಾಡುವುದಾಗಿ ಕೇಳಿಕೊಂಡನು. ಕಂಪ್ಯೂಟರ್ ಬಗ್ಗೆ ಜಾವೇದ್‌ಗೆ ಇದ್ದ ಆಸಕ್ತಿ ನೋಡಿ ಆ ಕಷ್ಟದಲ್ಲಿಯೇ ಅವರ ತಂದೆ 1 ಲಕ್ಷ ಹಣವನ್ನು ಹೊಂದಿಸಿ ನೀಡಿದ್ದರಂತೆ.

  ಕಂಪೆನಿ ಬಂಡವಾಳಕ್ಕೂ ಕಷ್ಟವಿತ್ತು!!

  ಜಾವೇದ್ ಇತ್ತ ವೆಬ್‌ಡಿಸೈನಿಂಗ್ ಕಲಿಯುತ್ತದ್ದ ವೇಳೆಯೇ ಅವನಿಗೆ ಮತ್ತೊಂದು ಕಷ್ಟ ಎದುರಾಗಿತ್ತು. ದುಬೈನಲ್ಲಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದ ಜಾವೇದ್ ತಂದೆ ಉದ್ಯೋಗ ತೊತರೆದು ವಾಪಸ್ ಆಗಿದ್ದರು. ಇದರಿಂದ ಜಾವೇದ್ ಅವರ ಮನೆಯ ಪರಿಸ್ಥಿತಿ ಬಹಳ ಕಷ್ಟವಾಗಿತ್ತು. ಈ ಸಮಯದಲ್ಲಿ ಜಾವೇದ್ ಅವರ ತಂದೆಗೆ 1 ಲಕ್ಷ ಹಣ ನೀಡಿದರೆ ಕಂಪೆನಿ ಶುರುಮಾಡುವುದಾಗಿ ಕೇಳಿಕೊಂಡನು. ಕಂಪ್ಯೂಟರ್ ಬಗ್ಗೆ ಜಾವೇದ್‌ಗೆ ಇದ್ದ ಆಸಕ್ತಿ ನೋಡಿ ಆ ಕಷ್ಟದಲ್ಲಿಯೇ ಅವರ ತಂದೆ 1 ಲಕ್ಷ ಹಣವನ್ನು ಹೊಂದಿಸಿ ನೀಡಿದ್ದರಂತೆ.

  ಇಂದು ಸ್ವಂತ ಮನೆ, ಐಶಾರಾಮಿ ಕಾರು!!

  ಹಗಲು, ರಾತ್ರಿ ಎನ್ನದೇ ಸಿಕ್ಕಿದ ಕೆಲ ಗ್ರಾಹಕರ ಜೊತೆ ವ್ಯವಹರಿಸಿದ ಜಾವೇದ್ ನಂತರ ಕೇರಳದಲ್ಲಿ 10 ಸಣ್ಣ ಪ್ರಮಾಣದ ಕೆಲಸ ಪಡೆದರಂತೆ. ಆ ಸಮಯದಲ್ಲಿ ಆದಾಯಕ್ಕಿಂತ ಕೆಲಸದಲ್ಲಿ ವೈವಿಧ್ಯ ಮುಖ್ಯ ಎಂಬುದನ್ನು ಅರಿತ ಜಾವೇದ್ ಅವರು ಗ್ರಾಹಕರ ನಂಬಿಕೆಯನ್ನು ಉಳಿಸಿಕೊಂಡಿದ್ದಾರೆ. ನಂತರ ಯಶಸ್ವಿ ವೆಬ್‌ಡಿಸೈನ್ ಉದ್ಯಮಿಯಾಗಿ ಜಾವೇದ್ ಬೆಳೆದು ನಿಂತಿದ್ದಾರೆ. ಬಾಡಿಗೆ ಮನೆಯಲ್ಲಿಯೇ ಬೆಳೆದ ಜಾವೇದ್ ತನ್ನ ಆಸೆಯಂತೆ 19ನೇ ವಯಸ್ಸಿನಲ್ಲಿಯೇ ಸ್ವಂತ ಮನೆಯನ್ನು ಕಟ್ಟಿದ್ದಾರೆ. ಬಿಎಂಡಬ್ಲೂ ಕಾರನ್ನು ಸಹ ಖರೀದಿಸಿದ್ದಾರೆ.!

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  English summary
  7-year-old Google contest winner awarded prizes worth $80,000 and a trip to Mountain View. to know more visit to kannada.gizbot.com
  Opinion Poll

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more