ಮೊಬೈಲ್‌ ಬ್ಯಾಟರಿ ಬೇಗ ಖಾಲಿ ಆಗ್ತೀದೆಯಾ?..ಹಾಗಿದ್ರೆ, ಈ ಕೆಲಸ ಮಾಡೋದು ಬಿಡಿ!

|

ಸದ್ಯ ಸ್ಮಾರ್ಟ್‌ಫೋನ್‌ಗಳು ಪ್ರತಿಯೊಬ್ಬರ ಅಗತ್ಯ ಸಾಧನಗಳಲ್ಲಿ ಒಂದಾದಗಿದೆ. ಜನರು ಅನೇಕ ಆನ್‌ಲೈನ್‌ ಕೆಲಸಗಳನ್ನು ಫೋನ್‌ಗಳ ಮೂಲಕವೇ ಮಾಡುತ್ತಾರೆ. ಅಲ್ಲದೇ ಗೇಮಿಂಗ್, ವಿಡಿಯೋ ವೀಕ್ಷಣೆ ಸೇರಿದಂತೆ ಇನ್ನು ಹಲವು ಕೆಲಸಗಳನ್ನು ಫೋನ್‌ ಮೂಲಕವೇ ನಡೆಸುತ್ತಾರೆ. ಹೀಗಾಗಿ ಅತ್ಯುತ್ತಮ ಬ್ಯಾಟರಿ ಬ್ಯಾಕ್‌ಅಪ್‌ ಇರುವ ಫೋನ್‌ಗಳಿಗೆ ಡಿಮ್ಯಾಂಡ್ ಜಾಸ್ತಿ. ಈ ನಿಟ್ಟಿನಲ್ಲಿ ಸ್ಮಾರ್ಟ್‌ಫೋನ್‌ ತಯಾರಿಕಾ ಸಂಸ್ಥೆಗಳು ಇತ್ತೀಚಿಗೆ ಅಧಿಕ ಬ್ಯಾಟರಿ ಫೀಚರ್‌ ಆಯ್ಕೆ ನೀಡುತ್ತಿದ್ದಾರೆ.

ಕೆಲವೊಂದು

ಹೌದು, ಇಂದಿನ ಬಹುತೇಕ ನೂತನ ಫೋನ್‌ಗಳು ಬಿಗ್ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಒಳಗೊಂಡಿರುತ್ತವೆ. ಅದಾಗ್ಯೂ, ಕೆಲವೊಮ್ಮೆ ಕಾರಣಾಂತರಗಳಿಂದ ಫೋನ್‌ ಬ್ಯಾಟರಿ ಕೈ ಕೊಡುವ ಸಾಧ್ಯತೆಗಳಿರುತ್ತವೆ. ನಿರೀಕ್ಷಿಸಿದಷ್ಟು ಬ್ಯಾಕ್‌ಅಪ್‌ ನೀಡುವಲ್ಲಿ ವಿಫಲವಾಗುತ್ತವೆ. ಕೆಲವೊಮ್ಮೆ ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಬ್ಯಾಟರಿ ಬಾಳಿಕೆ ಸಮಸ್ಯೆ ಎನಿಸುತ್ತದೆ. ಆದರೆ ಕೆಲವೊಂದು ಕ್ರಮಗಳನ್ನು ಅನುಸರಿಸುವ ಮೂಲಕ ಮೊಬೈಲ್‌ ಬ್ಯಾಟರಿ ಬಾಳಿಕೆಯನ್ನು ವೃದ್ಧಿಸಬಹುದು.

ಬ್ಯಾಟರಿಯನ್ನು

ವಿಡಿಯೋ ಕರೆ, ಹೈ ಎಂಡ್‌ ಗೇಮ್‌ ಆಡುವುದು, ಚಾಟಿಂಗ್, ಇಂಟರ್ನೆಟ್ ಬ್ರೌಸಿಂಗ್ ಅಥವಾ ಓಟಿಟಿ ಸ್ಟ್ರೀಮಿಂಗ್ ಈ ಚಟುವಟಿಕೆಗಳು ಫೋನ್‌ ಬ್ಯಾಟರಿಯನ್ನು ಹೆಚ್ಚಾಗಿ ಬಳಸುತ್ತದೆ. ಇನ್ನು ಬಳಕೆದಾರರು, ತಮ್ಮ ಸ್ಮಾರ್ಟ್‌ಫೋನ್ ಉತ್ತಮ ಬ್ಯಾಟರಿಯನ್ನು ಹೊಂದಬೇಕೆಂದು ನಿರೀಕ್ಷಿಸುತ್ತಾರೆ. ಯಾವುದೇ ಅಡೆತಡೆಗಳಿಲ್ಲದೆ ದಿನವಿಡೀ ಬ್ಯಾಟರಿ ಬ್ಯಾಕ್‌ಅಪ್‌ ನಿರೀಕ್ಷಿಸುತ್ತಾರೆ. ಆದರೆ ಬಳಕೆದಾರರು ಸ್ಮಾರ್ಟ್‌ಫೋನ್ ಬ್ಯಾಟರಿ ಬ್ಯಾಕ್‌ಅಪ್‌ ಹೆಚ್ಚಿಸಲು ದಾರಿಗಳಿವೆ. ಹಾಗಾದರೇ ಫೋನ್‌ ಬ್ಯಾಟರಿ ಬಾಳಿಕೆ ಹೆಚ್ಚಿಸಲು ಇಲ್ಲಿವೆ ನೋಡಿ ಸರಳ ಮಾರ್ಗಗಳು. ಮುಂದೆ ಓದಿರಿ.

ಪೂರ್ಣ ಚಾರ್ಜಿಂಗ್ ಬೇಡವೇ ಬೇಡಾ

ಪೂರ್ಣ ಚಾರ್ಜಿಂಗ್ ಬೇಡವೇ ಬೇಡಾ

ಸ್ಮಾರ್ಟ್‌ಫೋನ್‌ ಅನ್ನು ಪೂರ್ಣ ಚಾರ್ಜ್ (100% ವರೆಗೆ) ಮಾಡುವುದು ಸೂಕ್ತವಲ್ಲ. ಹಾಗೆಯೇ ಬ್ಯಾಟರಿಯು 0% ಮಟ್ಟವನ್ನು ತಲುಪುವವರೆಗೆ ಬಳಕೆ ಮಾಡುವುದು ಸರಿಯಾದ ಕ್ರಮವಲ್ಲ. ಫೋನ್‌ ಬ್ಯಾಟರಿಯನ್ನು ಪೂರ್ಣ ಚಾರ್ಜ್ ಮಾಡುವ ಬದಲು 92% ರಿಂದ 96% ವರೆಗೆ ಚಾರ್ಜ್ ಆದಾಗ ಚಾರ್ಜಿಂಗ್ ತೆಗೆಯುವುದು ಉತ್ತಮ. ಹಾಗೆಯೇ ಫೋನ್‌ ಬ್ಯಾಟರಿಯು 30% ಗಿಂತ ಕೆಳಗೆ ಹೋದಾಗ ಮರೆಯದೆ ಚಾರ್ಜಿಂಗ್ ಹಾಕುವುದು ಬ್ಯಾಟರಿ ಬಾಳಿಕೆಯ ದೃಷ್ಠಿಯಿಂದ ಸೂಕ್ತ.

ಓವರ್‌ ಚಾರ್ಜಿಂಗ್ ಮಾಡಬೇಡಿ

ಓವರ್‌ ಚಾರ್ಜಿಂಗ್ ಮಾಡಬೇಡಿ

ಸ್ಮಾರ್ಟ್‌ಫೋನ್‌ 100% ಚಾರ್ಜ್ ಮಾಡಿದ ನಂತರವು, ಚಾರ್ಜಿಂಗ್ ಹಾಗೆಯೇ ಮುಂದುವರಿಸುವುದು ಬ್ಯಾಟರಿಗೆ ಹಾನಿಆಗುವ ಸಾಧ್ಯತೆಗಳಿ ಇರುತ್ತವೆ. ಪೂರ್ಣ ಚಾರ್ಜ್‌ ಆದ ಬಳಿಕ ಸ್ಮಾರ್ಟ್‌ಫೋನ್‌ಗೆ ವಿದ್ಯುತ್ ಸರಬರಾಜು ಮಾಡುವುದಿಲ್ಲ ಎಂದು ಕೆಲವರು ನಂಬುತ್ತಾರೆ. ಆದ್ರೆ ಇದರಿಂದ ಫೋನಿನ ಬ್ಯಾಟರಿಗೆ ತೊಂದರೆ ಉಂಟು ಮಾಡುವ ಸಾಧ್ಯತೆಗಳು ಇರುತ್ತವೆ. ಇನ್ನು ಕೆಲವು ಬಳಕೆದಾರರಿಗೆ ರಾತ್ರಿಯಿಡಿ ಫೋನ್ ಚಾರ್ಜ್ ಹಾಕಿ ಮಲಗುವ ಅಭ್ಯಾಸ ಇರುತ್ತದೆ. ಆದರೆ ಖಂಡಿತಾ ಇದು ಉತ್ತಮ ಆಯ್ಕೆ ಅಲ್ಲವೇ ಅಲ್ಲ. ಆ ರೀತಿ ಓವರ್ ಚಾರ್ಜ್ ಮಾಡುವುದರಿಂದ ಫೋನ್ ಬ್ಯಾಟರಿ ಬಾಳಿಕೆ ಕುಗ್ಗುವುದರಲ್ಲಿ ಅನುಮಾನವೇ ಬೇಡ. ಹೀಗಾಗಿ ರಾತ್ರಿಯಿಡಿ ಚಾರ್ಜ್ ಮಾಡಬೇಡಿರಿ.

ಅತೀಯಾದ ಬಿಸಿ ಬಗ್ಗೆ ಎಚ್ಚರ

ಅತೀಯಾದ ಬಿಸಿ ಬಗ್ಗೆ ಎಚ್ಚರ

ಅತೀಯಾದ ಬಿಸಿ ಆಗುತ್ತೀದ್ದರೇ ಅದು ಬ್ಯಾಟರಿ ಬಾಳಿಕೆಗೆ ಹಾನಿ ಉಂಟು ಮಾಡುತ್ತದೆ. ಬ್ಯಾಟರಿ ಕೂಲ್‌ ಆಗಿ ಇರುವುದು ಉತ್ತಮ. ತಾಪಮಾನವು ಬಿಸಿಯಾಗಿರುವಾಗ ಬ್ಯಾಟರಿ ಹೆಚ್ಚು ವೇಗವಾಗಿ ಬರಿದಾಗುತ್ತದೆ. ಹೀಟಿಂಗ್ ಸಮಸ್ಯೆ ಮಾತ್ರವಲ್ಲದೆ ಬ್ಯಾಟರಿ ಕೂಡ ಊದಿಕೊಳ್ಳುತ್ತದೆ ಮತ್ತು ಕೆಲವೊಮ್ಮೆ ಇದು ಅಪಾಯಕಾರಿ ಮತ್ತು ಸ್ಫೋಟಗೊಳ್ಳಬಹುದು. ಹೀಗಾಗಿ ಮೊಬೈಲ್‌ ಚಾರ್ಜರ್‌ಗೆ ಸಂಪರ್ಕಗೊಂಡಿರುವಾಗ, ಮೊಬೈಲ್‌ ಅನ್ನು ಹೆಚ್ಚು ಬಿಸಿಯಾಗುವುದನ್ನು ತಪ್ಪಿಸುವುದು ಒಳ್ಳೆಯದು. ಮೊಬೈಲ್‌ ಅನ್ನು ನೇರವಾದ ಬಿಸಿಲಿಗೆ ಇಡುವುದಕ್ಕಿಂತ, ಸಾಧ್ಯವಾದಷ್ಟು ತಂಪಾದ ಸ್ಥಳದಲ್ಲಿ ಇರಿಸುವುದು ಸೂಕ್ತ.

ಬೇರೆ ಚಾರ್ಜರ್ ಬಳಕೆ ಮಾಡಬೇಡಿ

ಬೇರೆ ಚಾರ್ಜರ್ ಬಳಕೆ ಮಾಡಬೇಡಿ

ಸ್ಮಾರ್ಟ್‌ಫೋನ್ ಚಾರ್ಜ್ ಮಾಡುವಾಗ ಮೊಬೈಲ್‌ ನೊಂದಿಗೆ ನೀಡಿರುವ ಅಧಿಕೃತ ಚಾರ್ಜರ್‌ ಅನ್ನು ಮಾತ್ರವೇ ಬಳಕೆ ಮಾಡಿರಿ. ಚಾರ್ಜರ್ ಇಲ್ಲ ಅಂತಾ ಬೇರೆ ಸಂಸ್ಥೆಯ, ಭಿನ್ನ ಸಾಮರ್ಥ್ಯದ ಚಾರ್ಜರ್ ಬಳಕೆ ಮಾಡಬೇದರೆ, ಅದು ನಿಮ್ಮ ಫೋನಿನ ಬ್ಯಾಟರಿಗೆ ಧಕ್ಕೆ ಮಾಡುವ ಜೊತೆಗೆ ಫೋನಿನ ಮದರ್‌ ಬೋರ್ಡ್‌ಗೆ ಹಾನಿ ಮಾಡುವ ಸಾಧ್ಯತೆಗಳು ಅಧಿಕ. ಹೀಗಾಗಿ ಅಧಿಕೃತ ಅಲ್ಲದ ಯಾವುದೇ ಚಾರ್ಜರ್ ಅನ್ನು ಬಳಸಿ ಫೋನ್‌ ಚಾರ್ಜ್ ಮಾಡಬೇಡಿ.

ಚಾರ್ಜಿಂಗ್ ಹಾಕಿದಾಗ ಮೊಬೈಲ್‌ ಬಳಕೆ ಮಾಡಬೇಡ

ಚಾರ್ಜಿಂಗ್ ಹಾಕಿದಾಗ ಮೊಬೈಲ್‌ ಬಳಕೆ ಮಾಡಬೇಡ

ಬಹುತೇಕ ಬಳಕೆದಾರರು ಫೋನ್‌ ಅನ್ನು ಚಾರ್ಜಿಂಗ್ ಹಾಕಿದಾಗಲೂ, ಮೊಬೈಲ್‌ ಅನ್ನು ಬಳಕೆ ಮಾಡುತ್ತಾರೆ. ಇದರಿಂದ ಫೋನಿನ ಬ್ಯಾಟರಿ ಬ್ಯಾಕ್‌ಅಪ್‌ಗೆ ಹಾನಿ ಆಗುವ ಸಾಧ್ಯತೆಗಳಿರುತ್ತವೆ. ಅಲ್ಲದೇ, ಮೊಬೈಲ್‌ ಬಳಕೆ ಮಾಡುತ್ತ ಚಾರ್ಜ್ ಮಾಡುವುದರಿಂದ ಮೊಬೈಲ್‌ ಬಿಸಿ ಆಗಬಹುದು ಹಾಗೂ ಅತೀ ಬಿಸಿಯಾಗಿ ಅಪಾಯಕಾರಿ ಹಾನಿಗೆ ಕಾರಣವಾಗಲೂಬಹುದು. ಚಾರ್ಜ್ ಮಾಡುವಾಗ ಫೋನ್ ಬಳಕೆ ಮಾಡುವ ಅಭ್ಯಾಸ ಇದ್ದರೇ ಈ ಕೂಡಲೇ ಬಿಟ್ಟುಬಿಡಿ.

ಫೋನ್‌ ಬ್ಯಾಟರಿ ಡ್ರೈ ಆಗದಂತೆ ನೋಡಿಕೊಳ್ಳಿ

ಫೋನ್‌ ಬ್ಯಾಟರಿ ಡ್ರೈ ಆಗದಂತೆ ನೋಡಿಕೊಳ್ಳಿ

ಸ್ಮಾರ್ಟ್‌ಫೋನಿನ ಪ್ರಮುಖ ಅಂಗವೇ ಬ್ಯಾಟರಿ ಆಗಿದೆ. ಫೋನಿಗೆ ಜೀವ ಒದಗಿಸುವ ಬ್ಯಾಟರಿ ಉತ್ತಮ ಸ್ಥಿತಿಯಲ್ಲಿ ಇಟ್ಟುಕೊಳ್ಳಬೇಕು. ಅಂದರೇ ಸ್ಮಾರ್ಟ್‌ಫೋನ್ ಬ್ಯಾಟರಿ ಪೂರ್ಣ 0 ಆಗುವವರೆಗೂ ಫೋನ್ ಬಳಕೆ ಮಾಡುವುದು ಒಳ್ಳೆಯದಲ್ಲ. ಹೀಗಾಗಿ ಫೋನ್ ಬ್ಯಾಟರಿ ಯಾವತ್ತು ಡ್ರೈ ಆಗಲು ಬಿಡಲೇಬೇಡಿ. ಶೇ.30% ಒಳಗೆ ಬಂದಾಗ ಫೋನ್ ಚಾರ್ಜ್ ಮಾಡುವುದು ಉತ್ತಮ.

ಬಿಸಿ ಮತ್ತು ತಂಪು ಎರಡೂ ಒಳ್ಳೆಯದಲ್ಲ

ಬಿಸಿ ಮತ್ತು ತಂಪು ಎರಡೂ ಒಳ್ಳೆಯದಲ್ಲ

ಪ್ರಸ್ತುತ ಇಂದಿನ ಬಹುತೇಕ ಸ್ಮಾರ್ಟ್‌ಫೋನ್‌ಗಳು ಲಿಥೀಯಮ್ ಬ್ಯಾಟರಿ (Lithium-ion batteries) ಗಳಿಗೆ ಅತೀಯಾದ ಬಿಸಿ ಮತ್ತು ಅತೀಯಾದ ತಂಪು ಆಗಿ ಬರುವುದಿಲ್ಲ. ಹೀಗಾಗಿ ಸ್ಮಾರ್ಟ್‌ಫೋನ್ ಚಾರ್ಜ್ ಮಾಡುವಾಗ ಎಚ್ಚರವಹಿಸಬೇಕು. ಅಗತ್ಯವಾಗ ಕ್ರಮಗಳನ್ನು ಅನುಸರಿಸಿ ಚಾರ್ಜ್ ಮಾಡುವುದು ಉತ್ತಮ.

ದಿನಕ್ಕೆ ಎಷ್ಟು ಬಾರಿ ಫೋನ್ ಚಾರ್ಜ್ ಮಾಡಬೇಕು

ದಿನಕ್ಕೆ ಎಷ್ಟು ಬಾರಿ ಫೋನ್ ಚಾರ್ಜ್ ಮಾಡಬೇಕು

ಒಂದು ದಿನಕ್ಕೆ ಒಂದೇ ಬಾರಿ ಚಾರ್ಜ್ ಮಾಡಬೇಕು ಎಂದೆನಿಲ್ಲ. ಆದರೆ ದಿನಕ್ಕೆ ಎರಡು-ಮೂರು ಬಾರಿ ಚಾರ್ಜ್ ಮಾಡುವುದರಿಂದ ಏನು ಸಮಸ್ಯೆ ಇಲ್ಲ. ಸಾಧ್ಯವಾದಷ್ಟು ಫೋನ್ ಬ್ಯಾಟರಿಯನ್ನು 60% ನಿಂದ 75% ಪರ್ಸೆಂಟ್ ನಡುವೆ ಇರುವಂತೆ ನೋಡಿಕೊಳ್ಳಿ, ಅದಾಗ್ಯೂ ಚಾರ್ಜ್ ಅನಿವಾರ್ಯ ಎಂದಾಗ ಚಾರ್ಜ್ ಮಾಡಿ ಆದರೆ ಪದೇ ಪದೇ ಚಾರ್ಜ್ ಅಂತೂ ಮಾಡಲೆಬೇಡಿ.

Best Mobiles in India

English summary
8 Easy Ways To Extend Your Android Phone Battery Life. Details.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X