2016 ಫೋನ್ ಕ್ಷೇತ್ರದಲ್ಲಿ ಬದಲಾವಣೆಯ ಹೊಸ ಅಧ್ಯಾಯ

By Shwetha
|

ಸ್ಮಾರ್ಟ್‌ಫೋನ್ ಇತಿಹಾಸದಲ್ಲಿ 2016 ಹೊಸ ದಾಖಲೆಯನ್ನು ಬರೆಯಹೊರಟಿದೆ. ಹೌದು ಈಗ ಮಾರುಕಟ್ಟೆಗೆ ಕಾಲಿಡುತ್ತಿರುವ ಮೊಬೈಲ್‌ಗಳು 2016 ರ ಅತ್ಯುನ್ನತ ಬದಲಾವಣೆಗಳನ್ನು ತನ್ನ ಫೋನ್‌ಗಳಲ್ಲಿ ಪ್ರದರ್ಶಿಸುವ ಕೌಶಲ್ಯದೊಂದಿಗೆ ಬಂದಿವೆ. ಇಂದಿನ ಲೇಖನದಲ್ಲಿ ಆ ಹೊಸ ಫೋನ್‌ಗಳು ತರುತ್ತಿರುವ ವಿಶೇಷತೆಗಳನ್ನೇ ನಾವು ನಿಮ್ಮ ಮುಂದೆ ಇರಿಸುತ್ತಿದ್ದು ಅವುಗಳು ಹೇಗಿವೆ ಎಂಬುದನ್ನು ನೋಡಿ.

ಓದಿರಿ: 90% ಸ್ಮಾರ್ಟ್‌ಫೋನ್‌ ಬಳಕೆದಾರರಿಗೆ ಫ್ಯಾಂಟಮ್‌ ರೋಗ

ಮಧ್ಯಮ ಕ್ರಮಾಂಕಿತ ಸ್ಮಾರ್ಟ್‌ಫೋನ್‌ಗಳು, ಉತ್ತಮ ವಿನ್ಯಾಸ, ಇನ್ನಷ್ಟು ವೇಗವಾಗಿರುವುದು ಮೊದಲಾದ ವೈಶಿಷ್ಟ್ಯತೆಗಳು ಇಲ್ಲಿವೆ ಹಾಗಿದ್ದರೆ ಇಂದು ನೀವು ನೋಡಲಿರುವುದು ಅಂತಹ ಸ್ಮಾರ್ಟ್‌ಫೋನ್‌ಗಳಾಗಿವೆ.

2 ಕೆ ಮತ್ತು 4 ಕೆ ಸ್ಕ್ರೀನ್‌ಗಳು

2 ಕೆ ಮತ್ತು 4 ಕೆ ಸ್ಕ್ರೀನ್‌ಗಳು

ಹೆಚ್ಚಿನ ಫ್ಲ್ಯಾಗ್‌ಶಿಪ್ ಫೋನ್‌ಗಳು ಕ್ವಾಡ್ ಎಚ್‌ಡಿ ಅಥವಾ 2 ಕೆ ಸ್ಕ್ರೀನ್‌ಗಳನ್ನು ಒಳಗೊಂಡಿವೆ. ಇದರ ರೆಸಲ್ಯೂಶನ್ 2560x1440 ಆಗಿದೆ. ಹೆಚ್ಚು ಪಿಕ್ಸೆಲ್ ಡೆನ್ಸಿಟಿಗಳನ್ನು ಇದು ಒಳಗೊಂಡಿವೆ. ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್6, ನೋಟ್ 5, ನೆಕ್ಸಸ್ 6 ಪಿ, ಎಚ್‌ಟಿಸಿ ಒನ್ ಎಮ್9 ಪ್ಲಸ್, ಎಲ್‌ಜಿ ಜಿ4.

3 ಜಿಬಿ ಮತ್ತು 4ಜಿಬಿ RAM

3 ಜಿಬಿ ಮತ್ತು 4ಜಿಬಿ RAM

ಫೋನ್‌ನ RAM ಎನ್ನುವುದು ಡಿವೈಸ್‌ ಅನ್ನು ವೇಗವಾಗಿಸುವುದು ಅಪ್ಲಿಕೇಶನ್‌ಗಳನ್ನು ಹಿನ್ನಲೆಯಲ್ಲಿ ವೇಗವಾಗಿಸುವ ಗುಣಗಳನ್ನು ಪಡೆದುಕೊಂಡಿವೆ. ಮಾರುಕಟ್ಟೆಗೆ ಅಡಿ ಇಡುತ್ತಿರುವ ಫೋನ್‌ಗಳು 4ಜಿಬಿ RAM ಅನ್ನು ಒಳಗೊಂಡು ಬಂದಿದ್ದು ಇದು ಫೋನ್‌ ಅನ್ನು ವೇಗವಾಗಿಸುವುದರಲ್ಲಿ ಸಹಕಾರಿಯಾಗಲಿದೆ.

ಫಿಂಗರ್ ಪ್ರಿಂಟ್ ಸ್ಕ್ಯಾನರ್ಸ್

ಫಿಂಗರ್ ಪ್ರಿಂಟ್ ಸ್ಕ್ಯಾನರ್ಸ್

ಫೋನ್‌ನ ಭದ್ರವಾಗಿಸುವುದರಲ್ಲಿ ಫಿಂಗರ್ ಪ್ರಿಂಟ್ ಸ್ಕ್ಯಾನರ್‌ಗಳು ಹೆಚ್ಚಿನ ಪಾತ್ರವನ್ನು ವಹಿಸುತ್ತವೆ. ಪ್ಯಾಟ್ರನ್ ಇಲ್ಲವೇ ಕಷ್ಟಕರ ಪಾಸ್‌ವರ್ಡ್‌ಗಳನ್ನು ಇರಿಸಿ ನಿಮಗೆ ತೊಂದರೆ ಉಂಟುಮಾಡುವ ಸಂಗತಿಗಳು ಇದರಲ್ಲಿ ಇರುವುದಿಲ್ಲ. ರೂ 10,000 ಕ್ಕೆ ಹೆಚ್ಚಿನ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಫೋನ್‌ಗಳು ಬರುತ್ತಿವೆ.

ತೆಳು ಬೆಜಲ್ಸ್

ತೆಳು ಬೆಜಲ್ಸ್

ಸ್ಕ್ರೀನ್‌ನ ಸುತ್ತಲೂ ಇರುವ ಕಪ್ಪು ಬಾರ್ಡರ್‌ಗಳನ್ನು ಬೆಜಲ್‌ಗಳು ಎಂದು ಕರೆಯಲಾಗುತ್ತದೆ. ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ 5 ತನ್ನ ತೆಳು ಬೆಜಲ್‌ನಿಂದಾಗಿಯೇ ಇದು ಅತ್ಯುತ್ತಮವಾಗಿ ಕಾಣುತ್ತಿದೆ. ತೆಳು ಬೆಜಲ್‌ಗಳು ಫೋನ್‌ನ ಗಾತ್ರವನ್ನು ಕಡಿಮೆ ಮಾಡಿ ಹಿಡಿಯಲು ಸುಲಭವಾಗಿಸುತ್ತದೆ.

32 ಜಿಬಿ ಆಂತರಿಕ ಸಂಗ್ರಹ

32 ಜಿಬಿ ಆಂತರಿಕ ಸಂಗ್ರಹ

ಸ್ಯಾಮ್‌ಸಂಗ್, ಸೋನಿ ಮತ್ತು ಎಲ್‌ಜಿ ಫೋನ್‌ಗಳು 32 ಜಿಬಿ ಮುಖ್ಯ ಸ್ಟೋರೇಜ್‌ನೊಂದಿಗೆ ಬಂದಿವೆ. ವೈಯು ಲಾಂಚ್ ಮಾಡಿರುವ ಯುಟೋಪಿಯಾ ಫೋನ್ ಕೂಡ 32 ಜಿಬಿ ಸಂಗ್ರಹಣೆಯೊಂದಿಗೆ ಬಂದಿದೆ.

ಯುಎಸ್‌ಬಿ ಟೈಪ್ ಸಿ

ಯುಎಸ್‌ಬಿ ಟೈಪ್ ಸಿ

ಯುಎಸ್‌ಬಿ ಟೈಪ್ ಸಿ ಅಡಾಪ್ಶನ್ ಈಗಾಗಲೇ ಆರಂಭವಾಗಿದ್ದು ಒನ್ ಪ್ಲಸ್, ಗೂಗಲ್ ನೆಕ್ಸಸ್ ಮತ್ತು ಜಿಯೋನಿ ಈಗಾಗಲೇ ಟೈಪ್ ಸಿ ಪೋರ್ಟ್ ಅನ್ನು ಒಳಗೊಂಡಿದೆ.

ಹೆಚ್ಚು ಕ್ಯಾಮೆರಾ ಅನ್ವೇಷಣೆಗಳು

ಹೆಚ್ಚು ಕ್ಯಾಮೆರಾ ಅನ್ವೇಷಣೆಗಳು

ಹೆಚ್ಚಿನ ಭಾರತೀಯ ಬ್ರ್ಯಾಂಡ್‌ಗಳು ಅನನ್ಯ ಕ್ಯಾಮೆರಾ ಪ್ರಪೊಸಿಶನ್‌ಗಳನ್ನು ಒದಗಿಸುತ್ತಿವೆ. ಡ್ಯುಯಲ್ ಲೆನ್ಸ್, ಫೇಸ್ ಡಿಟೆಕ್ಶನ್ ಆಟೊಫೋಕಸ್ ಉಳ್ಳ ವಿಶೇಷತೆಗಳನ್ನು ಹೆಚ್ಚಿನ ಬ್ರ್ಯಾಂಡ್ ಫೋನ್‌ಗಳು ಗ್ರಾಹಕರನ್ನು ಕೇಂದ್ರೀಕರಿಸಿ ಹೊರತಂದಿವೆ. ಕ್ಯಾಮೆರಾ ಗುಣಮಟ್ಟವನ್ನು ಕೂಡ ಸುಧಾರಿಸಲಾಗಿದ್ದು ಪಾಯಿಂಟ್ ಮತ್ತು ಶೂಟ್ ಕ್ಯಾಮೆರಾಗಳಲ್ಲಿ ಇದನ್ನು ನಿಮಗೆ ಗಮನಿಸಬಹುದಾಗಿದೆ.

ಫಾಸ್ಟ್ ಚಾರ್ಜಿಂಗ್ ಪರಿಹಾರಗಳು

ಫಾಸ್ಟ್ ಚಾರ್ಜಿಂಗ್ ಪರಿಹಾರಗಳು

ಚಾರ್ಜಿಂಗ್ ವಿಷಯಕ್ಕೆ ಬಂದಾಗ, ನಿಮ್ಮ ಚಾರ್ಜರ್ ಎಷ್ಟು ಚಾರ್ಜ್ ವೇಗವನ್ನು ಒಳಗೊಂಡಿದೆ ಎಂಬುದು ಮುಖ್ಯವಾಗಿದೆ. ಹೆಚ್ಚಿನ ಸ್ಮಾರ್ಟ್‌ಫೋನ್‌ಗಳು 1 ಎಮ್‌ಪಿ ಔಟ್‌ಪುಟ್ ದರದಲ್ಲಿ ಬಂದಿವೆ.

Best Mobiles in India

English summary
2016 will see a bigger shift: (a lot) better features for low- to mid-range smartphones, and better design & faster-than-ever performance for high-end models. Here's a look at the 8 ways smartphones in the Indian market are likely to change this year.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X