90% ಸ್ಮಾರ್ಟ್‌ಫೋನ್‌ ಬಳಕೆದಾರರಿಗೆ ಫ್ಯಾಂಟಮ್‌ ರೋಗ

By Suneel
|

ಮೊಬೈಲ್‌ ಬಳಕೆ ಇಂದು ಬಹುಸಂಖ್ಯಾತರಿಗೆ ಅತ್ಯಾವಶ್ಯಕ. ಆದರೂ ಸಹ ಮೊಬೈಲ್‌ ಎಷ್ಟು ಉಪಯುಕ್ತವೋ ಅಷ್ಟೇ ಅಪಾಯಕಾರಿ ಎಂಬುದನ್ನು ನಾವು ಮರೆಯುವಂತಿಲ್ಲ. ಅದಕ್ಕೆ ಸಾಕ್ಷಿಯಾಗಿ ಈ ಮೊದಲು ಎಷ್ಟೋ ಅಪಾಯಗಳು ಮೊಬೈಲ್‌ನಿಂದ ಆಗಿರುವ ಸನ್ನಿವೇಶಗಳನ್ನು ನೋಡಿರಬಹುದು. ಸ್ಮಾರ್ಟ್‌ಫೋನ್‌ ಬಳಕೆದಾರರಿಗೆ ಇಂದು ಒಂದು ಆತಂಕಕಾರಿ ಮಾಹಿತಿಯನ್ನು ನೀಡುತ್ತಿದ್ದೇವೆ.

ಓದಿರಿ: ಅಧಿಕ ಫೋನ್ ಬಳಕೆ ಅಪಾಯ ಕಟ್ಟಿಟ್ಟ ಬುತ್ತಿ

10 ಸ್ಮಾರ್ಟ್‌ಫೋನ್‌ ಬಳಕೆದಾರರಲ್ಲಿ 9 ಸ್ಮಾರ್ಟ್‌ಫೋನ್‌ ಬಳಕೆದಾರರಿಗೆ ಅಂದರೇ ಶೇಕಡ 90 ರಷ್ಟು ಜನರು ಫ್ಯಾಂಟಮ್‌ ಎಂಬ ಸಿಂಡ್ರೋಮ್‌ನಿಂದ ಬಳಲುತ್ತಿರುವ ಬಗ್ಗೆ ಅಧ್ಯಯನವೊಂದು ಹೇಳಿದೆ. ಈ ಬಗ್ಗೆ ವಿಶೇಷ ಮಾಹಿತಿಯನ್ನು ಸ್ಲೈಡರ್‌ಗಳಲ್ಲಿ ಓದಿ ತಿಳಿಯಿರಿ.

ಫ್ಯಾಂಟಮ್‌ ಸಿಂಡ್ರೋಮ್‌

ಫ್ಯಾಂಟಮ್‌ ಸಿಂಡ್ರೋಮ್‌

10 ಸ್ಮಾರ್ಟ್‌ಫೋನ್‌ ಬಳಕೆದಾರರಲ್ಲಿ 9 ಸ್ಮಾರ್ಟ್‌ಫೋನ್‌ ಬಳಕೆದಾರರು "ಫ್ಯಾಂಟಮ್‌ ವೈಬ್ರೇಶನ್‌ ಸಿಂಡ್ರೋಮ್‌" ಎಂಬ ರೋಗದಿಂದ ಬಳಲುತ್ತಿದ್ದಾರೆ ಎನ್ನಲಾಗಿದೆ.

 ಫ್ಯಾಂಟಮ್‌ ಸಿಂಡ್ರೋಮ್‌ ಎಂದರೇನು ?

ಫ್ಯಾಂಟಮ್‌ ಸಿಂಡ್ರೋಮ್‌ ಎಂದರೇನು ?

ಸ್ಮಾರ್ಟ್‌ಫೋನ್‌ ಬಳಕೆದಾರರು ತಮ್ಮ ಜೇಬಿನಲ್ಲಿ ಮೊಬೈಲ್‌ ಇರಿಸಿದ್ದು, ಫೋನ್‌ ವೈಬ್ರೇಟ್‌ ಆಗದಿದ್ದರು ಸಹ ವೈಬ್ರೇಟ್‌ ಆಗುತ್ತಿದೆ ಎಂದು ತಪ್ಪಾಗಿ ತಿಳಿಯುವುದಾಗಿದೆ.

ದೈಹಿಕ ಅಭ್ಯಾಸಗಳು

ದೈಹಿಕ ಅಭ್ಯಾಸಗಳು

ಜಾರ್ಜಿಯಾ ಟೆಕ್ನಾಲಜಿ ಸಂಸ್ಥೆಯ ತತ್ವಶಾಸ್ತ್ರಜ್ಞರು ಮತ್ತು ಸಹಾಯಕ ಪ್ರಾಧ್ಯಾಪಕರು ಆದ "ಡಾ|| ರಾಬರ್ಟ್‌ ರೋಸೆನ್‌ಬರ್ಗರ್‌" ರವರು ಸ್ಮಾರ್ಟ್‌ಫೋನ್‌ ಬಳಸುವವರ ದೈಹಿಕ ಅಭ್ಯಾಸಗಳ ವಿದ್ಯಾಮಾನವು ಈ ರೋಗಕ್ಕೆ ಕಾರಣವಾಗಿದೆ ಎಂದಿದ್ದಾರೆ.

 ಅಧ್ಯಯನ

ಅಧ್ಯಯನ

ಈ ಮಾಹಿತಿಯು ಕಂಪ್ಯೂಟರ್‌ ಮತ್ತು ಮಾನವ ಹವ್ಯಾಸಗಳು ಎಂಬ ನಿಯತಕಾಲಿಕೆಯಲ್ಲಿ ಪ್ರಕಟಿತವಾಗಿದ್ದು, ಸ್ಮಾರ್ಟ್‌ಫೋನ್‌ ಬಳಕೆದಾರರು ಜೇಬಿನಲ್ಲಿ ಮೊಬೈಲ್‌ ಇರಿಸಿ ಅದನ್ನು ಸಹ ತಮ್ಮ ದೇಹದ ಒಂದು ಅಂಗ ಎಂದು ಭಾವಿಸುತ್ತಾರೆ ಎಂದು ಹೇಳಿದೆ. ಹಾಗೂ ಸ್ಮಾರ್ಟ್‌ಫೋನ್‌ ಬಳಸುವುದನ್ನು ಸಹ ಸುಲಭವಾಗಿ ಬಿಡಬಹುದು ಎಂದು ಅಧ್ಯಯನದಲ್ಲಿ ಹೇಳಲಾಗಿದೆ.

ವೈಬ್ರೇಶನ್‌

ವೈಬ್ರೇಶನ್‌

ಜನರು ಕೆಲವೊಮ್ಮೆ ಬಟ್ಟೆ ಧರಿಸುವಾಗಲು ಸಹ ಸ್ನಾಯು ಸೆಳೆತಕ್ಕೆ ಒಳಗಾಗುತ್ತಾರೆ. ಆಗಲು ಸಹ ಅವರು ಮೊಬೈಲ್‌ ವೈಬ್ರೇಟ್‌ ಆಗುತ್ತಿದೆ ಎಂದು ಭಾವಿಸುತ್ತಾರೆ ಎಂದು ಪ್ರಾಧ್ಯಾಪಕರು ಹೇಳಿದ್ದಾರೆ.

 ಬಿಬಿಸಿ ವಾಹಿನಿ ಸಂದರ್ಶನ

ಬಿಬಿಸಿ ವಾಹಿನಿ ಸಂದರ್ಶನ

ಡಾ|| ರಾಬರ್ಟ್‌ ರೋಸೆನ್‌ಬರ್ಗರ್‌" ರವರು ಬಿಬಿಸಿ ವಾಹಿನಿಯ ಸಂದರ್ಶನದಲ್ಲಿ "ಇತ್ತೀಚಿಗಿನ ಪದವಿ ಪೂರ್ವ ವಿದ್ಯಾರ್ಥಿಗಳ ವರದಿಯೊಂದರಲ್ಲಿ ಶೇಕಡ 90 ರಷ್ಟು ಜನರು ಫ್ಯಾಂಟಮ್‌ಅನುಭವವನ್ನು ಪಡೆದಿರುವ ಬಗ್ಗೆ ಉತ್ತರಿಸಿದ್ದಾರೆ " ಎಂದು ಹೇಳಿದ್ದಾರೆ.

 ಆತಂಕಿತರು

ಆತಂಕಿತರು

ಇಮೇಲ್‌ಗಳು ಮತ್ತು ಸಂದೇಶಗಳು ಸೇರಿದಂತೆ ಜನರು ಇತ್ತೀಚೆಗೆ ವಿವಿಧ ಟೆಕ್ನಾಲಜಿಗಳಿಂದ ಹೆಚ್ಚು ಆತಂಕಕಾರಿಯಾಗಿದ್ದಾರೆ. ನಾವು ಹೃದಯ ಕಂಪಿಸುವ ಮತ್ತು ಫ್ಯಾಂಟಮ್‌ ವೈಬ್ರೇಶನ್‌ ಅನ್ನು ಸಹ ಹೆಚ್ಚು ಅನುಭವ ಪಡೆಯುತ್ತಿದ್ದೀವಿ ಎಂದು ಹೇಳಿದ್ದಾರೆ.

Best Mobiles in India

English summary
90% of smartphone users suffer from this syndrome. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X