ಫೇಸ್‌ಬುಕ್‌ನಲ್ಲಿ ಬಾಸ್‌ ಜೊತೆ ಸಹವಾಸ ಬೇಡ

Written By:

ಫೇಸ್‌ಬುಕ್‌ನಲ್ಲಿ ಜನ ತಮಗೆ ತಿಳಿದಿರುವ ವ್ಯಕ್ತಿಯನ್ನು ಫ್ರೆಂಡ್‌ ಮಾಡಿಕೊಳ್ಳುತ್ತಾರೆ. ಗೊತ್ತಿಲ್ಲದ ವ್ಯಕ್ತಿಯನ್ನು ಗೊತ್ತು ಮಾಡಿ ಫ್ರೆಂಡ್‌ ರಿಕ್ವೆಸ್ಟ್ ಕಳುಹಿಸುತ್ತಾರೆ. ಆದರೆ ಜನರು ತನಗೆ ಉದ್ಯೋಗ ನೀಡಿದ ಬಾಸ್‌ಗೆ ಯಾವುದೇ ಕಾರಣಕ್ಕೆ ಫ್ರೆಂಡ್‌ ರಿಕ್ವೆಸ್ಟ್‌ ಕಳುಹಿಸುವುದೇ ಇಲ್ವಂತೆ.

ಫೇಸ್‌ಬುಕ್‌ ನೂತನ ಸಮೀಕ್ಷೆಯ ಪ್ರಕಾರ ಶೇ.81 ಜನ ಬಾಸ್‌ ಒಬ್ಬರನ್ನು ಬಿಟ್ಟು, ನಾವು ಯಾರಿಗೆ ಬೇಕಾದ್ರೂ ಫ್ರೆಂಡ್‌ ಆಗುತ್ತೇವೆ ಎಂದು ಹೇಳಿದ್ದಾರೆ. ಸಮೀಕ್ಷೆಗಳನ್ನು ನಡೆಸುವ ಸೋಡಾಹೆಡ್‌ ಈ 722 ಜನರನ್ನು ಸಂದರ್ಶಿಸಿ ಈ ಮಾಹಿತಿ ನೀಡಿದೆ.

ಫೇಸ್‌ಬುಕ್‌ನಲ್ಲಿ ಬಾಸ್‌ ಜೊತೆ ಸಹವಾಸ ಬೇಡ

ಯಾಕೆ ಬಾಸ್‌ ಜೊತೆ ಫ್ರೆಂಡ್‌ ಆಗಲು ಇಷ್ಟ ಪಡುದಿಲ್ಲ ಎಂಬ ಪ್ರಶ್ನೆಗೆ, ಫೇಸ್‌ಬುಕ್‌ನಲ್ಲಿ ನಮ್ಮ ವೈಯಕ್ತಿಕ, ಫ್ರೆಂಡ್‌ಗಳ ಮಾಹಿತಿ,ಫೋಟೋಗಳು ಎಲ್ಲಾ ಪ್ರದರ್ಶಿತವಾಗಿ ನಮ್ಮ ಮೆಲೆ ಅಪನಂಬಿಕೆ ಬರುವ ಸಾಧ್ಯತೆ ಇದೆ ಎಂದು ಸಮೀಕ್ಷಾರ್ಥಿಗಳು ತಿಳಿಸಿದ್ದಾರಂತೆ.ಅಷ್ಟೇ ಅಲ್ಲದೇ ಶೇ. 55 ಮಂದಿ ಫೇಸ್‌ಬುಕ್‌ನಲ್ಲಿ ತಮ್ಮ ಸಹದ್ಯೋಗಿಗಳಲ್ಲಿ ಫ್ರೆಂಡ್‌ ಆಗುವುದಕ್ಕೆ ಸಹಮತ ವ್ಯಕ್ತಪಡಿಸಿದ್ರೆ, ಶೇ.45 ಮಂದಿ ಉದ್ಯೋಗಿಗಳ ಜೊತೆ ನಾವು ಫ್ರೆಂಡ್ಸೇ ಆಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರಂತೆ.

2009ರಲ್ಲಿ ಸ್ವಿಸ್‌ ಇನ್ಯೂಶ್ಯೂರೆನ್ಸ್‌ ಕಂಪೆನಿಯಲ್ಲಿ ಮಹಿಳಾ ಉದ್ಯೋಗಿಯೊಬ್ಬಳು ಹುಷಾರಿಲ್ಲದ ನೆಪ ಹೇಳಿ ಕಂಪೆನಿ ಗೈರು ಹಾಜರಾಗಿದ್ದಳು. ಆದ್ರೆ ಗೈರುಹಾಜರಾದ ದಿನ ಅವಳು ಫೇಸ್‌ಬುಕ್‌ನಲ್ಲಿ ಆಕ್ಟಿವ್‌ ಆಗಿ ಚಾಟ್‌ ಮಾಡುತ್ತಿದ್ದಳು. ಫೇಸ್‌ಬುಕ್‌ನಲ್ಲಿ ತನ್ನ ಫ್ರೆಂಡ್‌ ಆಗಿರುವ ಉದ್ಯೋಗಿಯೇ ಈ ರೀತಿ ಸುಳ್ಳು ನೆಪ ಹೇಳಿ ಗೈರು ಹಾಜರಾಗಿದ್ದಕ್ಕೆ ಕೋಪಗೊಂಡು ಬಾಸ್‌, ಆ ಮಹಿಳಾ ಉದ್ಯೋಗಿಯನ್ನು ಕೆಲಸದಿಂದಲೇ ಕಿತ್ತು ಹಾಕಿದ್ದ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot