ಗೂಗಲ್ ಸೈನ್ಸ್ ಫೇರ್‌ನಲ್ಲಿ 10,000 ಜನರನ್ನು ಸೋಲಿಸಿ ಪ್ರಥಮಳಾದ ಶ್ರೀ ಬೋಸ್

By Shwetha
|

ತನ್ನ 17 ನೇ ಹರೆಯದಲ್ಲಿ ಶ್ರೀ ಬೋಸ್ ಒಬಾಮಾ ಅವರನ್ನು ಭೇಟಿಮಾಡಿದಾಗ ಆಕೆ ಕೊಂಚ ಹೆದರಿದ್ದರು ಓವಲ್ ಕಚೇರಿಗೆ ಕಾಲಿಟ್ಟಾಗ ಭಯವಿದ್ದು ಅವರಲ್ಲಿ ಒಬಾಮಾ ಅವರನ್ನು ಭೇಟಿ ಮಾಡುವ ಕಾತರತೆ ಅವರಲ್ಲಿ ದಿಗಿಲನ್ನು ಉಂಟುಮಾಡಿತ್ತು. ಗೂಗಲ್‌ನ ಪ್ರಥಮ ಸೈನ್ಸ್ ಫೇರ್‌ನಲ್ಲಿ ವಿಜಯಿಯಾದ ಶ್ರೀ ಬೋಸ್ ಅವರನ್ನು ವೈಟ್ ಹೌಸ್‌ಗೆ ಆಹ್ವಾನಿಸಲಾಗಿತ್ತು. ಇಲ್ಲಿ ಬಂದ ಎಲ್ಲಾ ಹದಿಹರೆಯದವರು ತಮ್ಮ ಪ್ರಾಜೆಕ್ಟ್‌ಗಳನ್ನು ಸಲ್ಲಿಸಬೇಕಾಗಿತ್ತು. ಔಷಧಿ ನಿರೋಧಕ ಅಂಡಾಶಯ ಕ್ಯಾನ್ಸರ್ ವಿಷಯದ ಮೇಲೆ ಬೋಸ್ ಅಧ್ಯಯನ ಮಾಡಿದ್ದರು.

ಗೂಗಲ್ ಸೈನ್ಸ್ ಫೇರ್‌ನಲ್ಲಿ 10,000 ಜನರನ್ನು ಸೋಲಿಸಿ ಪ್ರಥಮಳಾದ ಶ್ರೀ ಬೋಸ್

ಇಲ್ಲಿ ಬಂದಿದ್ದ 10,000 ಇತರೆ ಪ್ರವೇಶಗಳನ್ನು ಸೋಲಿಸಿ ಆಕೆ ಗೂಗಲ್‌ನಿಂದ $50,000 ಸ್ಕಾಲರ್ ಶಿಪ್ ಅನ್ನು ಪಡೆದುಕೊಂಡಿದ್ದಳು ಮತ್ತು ಅಧ್ಯಕ್ಷರಿಂದ ಗುರುತಿಸಿಕೊಂಡಿದ್ದರು. ವಿಶ್ವದ ಅತಿ ಬಲಿಷ್ಟ ನಾಯಕರು ವಿಜ್ಞಾನ ವಿದ್ಯಾರ್ಥಿಗಳ ಮೇಲೆ ಅಪರಿಮಿತ ಪ್ರೀತಿ ಹಾಗೂ ಕಾಳಜಿಯನ್ನಿಟ್ಟುಕೊಂಡಿದ್ದಾರೆ ನಿಜಕ್ಕೂ ಇದೊಂದು ಪ್ರೇರಣೆಯ ವಿಷಯವಾಗಿದೆ ಎಂಬುದು ಬೋಸ್ ಒಬಾಮಾ ಬಗ್ಗೆ ಹೇಳಿರುವ ಮೆಚ್ಚುಗೆಯ ನುಡಿಗಳು.

ಬೋಸ್‌ರ ಪ್ರಶಸ್ತಿ ಪಡೆಯುವಿಕೆಯ ನಂತರ ಪ್ರಧಾನಿ ಪ್ರಸ್ತುತತೆ ಆದ ಬಳಿಕ ಸಾರ್ವಜನಿಕ ಭಾಷಣಗಳಲ್ಲಿ ಆಕೆ ಉತ್ಸುಕಳಾಗಿದ್ದು ಎಸ್‌ಟಿಎಮ್ ಎಜ್ಯುಕೇಶನ್ ಅಡ್ವೊಕೆಸಿಯಲ್ಲಿ ಆಕೆ ಭಾಷಣಗಳನ್ನು ನೀಡುತ್ತಿದ್ದಾರೆ.

#1

#1

ಬೋಸ್ ಇದೀಗ 22 ರ ಹರೆಯದವರಾಗಿದ್ದು, ಹಾರ್ವರ್ಡ್‌ನಿಂದ ಪದವಿಯನ್ನು ಗಳಿಸಿಕೊಳ್ಳಲಿದ್ದಾರೆ. ಅಂತೆಯೇ "ಪೈಪರ್" ಕಂಪೆನಿಯ ಸಹಸ್ಥಾಪಕಿಯೂ ಹೌದು. ಇದು ಇಂಜಿನಿಯರಿಂಗ್‌ನಲ್ಲಿ ಆಸಕ್ತಿ ಇರುವ ವಿದ್ಯಾರ್ಥಿಗಳಿಗೆ ಇಲೆಕ್ಟ್ರಾನಿಕ್ಸ್ ಟೂಲ್‌ಕಿಟ್ ಅನ್ನು ಮಾಡುತ್ತದೆ.

#2

#2

ಕಳೆದ ಹಲವಾರು ವರ್ಷಗಳಿಂದ ಗೂಗಲ್‌ನೊಂದಿಗೆ ಆಕೆ ಕಾರ್ಯನಿರ್ವಹಿಸುತ್ತಿದ್ದು ಸೈನ್ ಸ್ಪರ್ಧೆಗಳಲ್ಲಿ ಜಡ್ಜ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ ಅಂತೆಯೇ ಕಂಪೆನಿಯ ಹೊಸ ಉತ್ಪನ್ನಗಳನ್ನು ಪರಿಶೀಲಿಸುವವರಲ್ಲಿ ಮೊದಲಿಗರಾಗಿದ್ದಾರೆ.

#3

#3

ಸೈನ್ಸ್ ಬಗ್ಗೆ ಮಾತನಾಡಲು ಗೂಗಲ್ ಆಕೆಯನ್ನು ನ್ಯೂಯಾರ್ಕ್ ಸಿಟಿ ಕಚೇರಿಗೆ ಕರೆದುಕೊಂಡು ಬಂದಿದ್ದು ಆಕೆಯ ವಿಜ್ಞಾನ ಮತ್ತು ಗಣಿತದ ಜ್ಞಾನವನ್ನು ಹೊಸ ರಿಯಲ್ ಟೈಮ್ Q&A ಉಪಕರಣವನ್ನು ಬಳಸಿಕೊಂಡು ಪರಿಶೀಲಿಸಲಾಗುತ್ತಿದೆ.

#4

#4

ಆಕೆಯ ಪ್ರಸಂಟೇಶನ್ ಸಂದರ್ಭದಲ್ಲಿ ವಿದ್ಯಾರ್ಥಿಗಳು 170 ಕ್ಕಿಂತಲೂ ಹೆಚ್ಚಿನ ಪ್ರಶ್ನೆಗಳನ್ನು ಆಕೆಯ ಮುಂದಿರಿಸಿದ್ದಾರೆ. ಈ ಪರಿಕರವು ಪ್ರಶ್ನೆ ಕೇಳುವವರಿಗೆ ತಮ್ಮ ನರಗಳನ್ನು ವಶಪಡಿಸಿಕೊಳ್ಳಲು ನೆರವಾಗಲಿದೆ.

#5

#5

ತನ್ನ ಭಾಷಣಗಳಲ್ಲಿ ಕೇಳಿದ ಪ್ರಶ್ನೆಗಳಿಗೆ ಉತ್ತರವನ್ನೀಯಲು ಈ ಪರಿಕರವು ಸಹಾಯ ಮಾಡುತ್ತಿದೆ ಎಂಬುದು ಬೋಸ್ ಮಾತಾಗಿದ್ದು ತಾಣ ಪ್ರಶ್ನೆಗಳಿಗೆ ಉತ್ತರಿಸಲು ಹೆದರುವ ಅವಕಾಶವನ್ನು ಕಡಿಮೆ ಮಾಡುತ್ತಿದೆ.

#6

#6

ತಮ್ಮ ಕುಟುಂಬದಲ್ಲಿ ಕ್ಯಾನ್ಸರ್‌ನಿಂದ ಉಂಟಾದ ಸಾವು ಆಕೆಗೆ ಕ್ಯಾನ್ಸರ್ ಬಗ್ಗೆ ಸಂಶೋಧನೆ ನಡೆಸಲು ಆಸಕ್ತಿಯನ್ನು ಉಂಟುಮಾಡಿದ್ದು. ಗೂಗಲ್ ಸೈನ್ಸ್ ಫೇರ್‌ನಲ್ಲಿ ಆಕೆಗೆ ಧೈರ್ಯ ಉಂಟಾಗಿದ್ದು ಜಗತ್ತನ್ನೇ ತಾನು ಬದಲಾಯಿಸಬಲ್ಲೆನೆಂಬ ಧೈರ್ಯ ಉಂಟಾಯಿತು ಅಂತೆಯೇ ಕಷ್ಟಕರ ಪ್ರಶ್ನೆಗಳಿಗೆ ತನ್ನನ್ನು ತಾನು ಸಿದ್ಧಪಡಿಸಿಕೊಳ್ಳಲು ನೆರವಾಯಿತು ಎಂಬುದು ಬೋಸ್ ಮಾತಾಗಿದೆ.

ಗಿಜ್‌ಬಾಟ್ ಲೇಖನಗಳು

ಗಿಜ್‌ಬಾಟ್ ಲೇಖನಗಳು

ಟೊಮೊಟೊ/ಆಲೂಗೆಡ್ಡೆಯಿಂದ ವಿದ್ಯುತ್‌ ಉತ್ಪಾದನೆ ಹೇಗೆ?</a><br /><a href=ನಿಮ್ಮ ಸ್ಮಾರ್ಟ್‌ಫೋನ್ ಮಾಡುವ ಗೂಢಚಾರಿಕೆಯನ್ನು ನಿಲ್ಲಿಸುವುದು ಹೇಗೆ?
ಅದ್ಭುತ! 15 ರ ಹರೆಯದ ಹುಡುಗನಿಂದ ಬಯಲಾದ ಮಾಯನ್ ನಾಗರೀಕತೆ" title="ಟೊಮೊಟೊ/ಆಲೂಗೆಡ್ಡೆಯಿಂದ ವಿದ್ಯುತ್‌ ಉತ್ಪಾದನೆ ಹೇಗೆ?
ನಿಮ್ಮ ಸ್ಮಾರ್ಟ್‌ಫೋನ್ ಮಾಡುವ ಗೂಢಚಾರಿಕೆಯನ್ನು ನಿಲ್ಲಿಸುವುದು ಹೇಗೆ?
ಅದ್ಭುತ! 15 ರ ಹರೆಯದ ಹುಡುಗನಿಂದ ಬಯಲಾದ ಮಾಯನ್ ನಾಗರೀಕತೆ" loading="lazy" width="100" height="56" />ಟೊಮೊಟೊ/ಆಲೂಗೆಡ್ಡೆಯಿಂದ ವಿದ್ಯುತ್‌ ಉತ್ಪಾದನೆ ಹೇಗೆ?
ನಿಮ್ಮ ಸ್ಮಾರ್ಟ್‌ಫೋನ್ ಮಾಡುವ ಗೂಢಚಾರಿಕೆಯನ್ನು ನಿಲ್ಲಿಸುವುದು ಹೇಗೆ?
ಅದ್ಭುತ! 15 ರ ಹರೆಯದ ಹುಡುಗನಿಂದ ಬಯಲಾದ ಮಾಯನ್ ನಾಗರೀಕತೆ

ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣ

ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣ

ಇನ್ನಷ್ಟು ಸುದ್ದಿಗಳನ್ನು ಓದಲು ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣಕ್ಕೆ ಭೇಟಿ ನೀಡಿ

Best Mobiles in India

English summary
Shree Bose says that the first time she met President Obama at age 17, She'd been invited to The White House as the winner of Google's first Science Fair, an annual event that invites teenagers from all over the world to submit their projects.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X