'ಅಪಾಯಕಾರಿ ಆಪ್' ಎಂಬ ಆರೋಪ ಹೊತ್ತಿರುವ 'ಟ್ರೂ ಕಾಲರ್' ಹೇಳಿದ್ದೇನು ಗೊತ್ತಾ?

ಚೀನಾ ಆಪ್‌ಗಳು ದೇಶದ ಭದ್ರತೆಗೆ ಅಪಾಯಕಾರಿಯಾಗಿರುವುದನ್ನು ರಾ(RAW) ಮತ್ತು ರಾಷ್ಟ್ರೀಯ ತಾಂತ್ರಿಕ ಸಂಶೋಧನಾ ಸಂಸ್ಥೆ ಪತ್ತೆ ಹಚ್ಚಿದೆ.

|

ಚೀನಾ ಆಪ್‌ಗಳು ದೇಶದ ಭದ್ರತೆಗೆ ಅಪಾಯಕಾರಿಯಾಗಿರುವುದನ್ನು ರಾ(RAW) ಮತ್ತು ರಾಷ್ಟ್ರೀಯ ತಾಂತ್ರಿಕ ಸಂಶೋಧನಾ ಸಂಸ್ಥೆ ಪತ್ತೆ ಹಚ್ಚಿದೆ. ಹಾಗಾಗಿ, ಟ್ರೂಕಾಲರ್, ಶೇರ್‌ಇಟ್ ಸೇರಿದಂತೆ ಚೀನಾ ರೂಪಿಸಿದ 41 ಆಪ್‌ಗಳನ್ನು ಬಳಕೆ ಮಾಡಬಾರದು ಎಂದು ಸರ್ಕಾರವು ಸೇನೆಗೆ ತಿಳಿಸಿರುವುದು ಇದೀಗ ಟ್ರೂಕಾಲರ್ ಮತ್ತು ಯುಸಿ ಬ್ರೌಸರ್ಗಳನ್ನು ಕಂಗೆಡಿಸಿದೆ.

ಹೌದು, ಇಡೀ ವಿಶ್ವದಲ್ಲಿಯೇ ಭಾರೀ ಹೆಸರಾಗಿರುವ ಟ್ರೂಕಾಲರ್ ಆಪ್ ಮತ್ತು ವಿಶ್ವದಲ್ಲೇ ಹೆಚ್ಚು ಬಳಕೆಯ ಎರಡನೇ ಬ್ರೌಸರ್ ಯುಸಿ ಬ್ರೌಸರ್ ಭಾರತದಲ್ಲಿ ಕೋಟ್ಯಾಂತರ ಬಳಕೆದಾರರನ್ನು ಹೊಂದಿದ್ದವು. ಆದರೆ, ಸಾಮಾನ್ಯರ ಭದ್ರತೆಗೂ ಅಪಾಯಕಾರಿಯಾದ ಆಪ್‌ಗಳು ಇವು ಎಂಬ ಆರೋಪದಿಂದಾಗಿ ತನ್ನ ಬಳಕೆದಾರರನ್ನು ಕಳೆದುಕೊಳ್ಳುವ ಭೀತಿಯಲ್ಲಿವೆ.

'ಅಪಾಯಕಾರಿ ಆಪ್' ಎಂಬ ಆರೋಪ ಹೊತ್ತಿರುವ 'ಟ್ರೂ ಕಾಲರ್' ಹೇಳಿದ್ದೇನು ಗೊತ್ತಾ?

'ಕೆಲವು ವರದಿಗಳ ಪ್ರಕಾರ ನಮ್ಮ ಆಪ್‌ ಅಪಾಯಕಾರಿ ಎಂಬ ಮಾಹಿತಿ ಹೊರಬಿದ್ದಿದೆ. ಯಾಕೆ ನಮ್ಮ ಆಪ್‌ ಈ ಪಟ್ಟಿಯಲ್ಲಿ ಸೇರಿದೆ ಎಂಬುದೇ ತಿಳಿಯುತ್ತಿಲ್ಲ. ಈ ಬಗ್ಗೆ ತನಿಖೆ ನಡೆಯುತ್ತಿದೆ. ಟ್ರೂಕಾಲರ್ ಮಾಲ್‌ವೇರ್‌ ಅಲ್ಲವೇ ಅಲ್ಲ. ನಮ್ಮ ಎಲ್ಲಾ ಗುಣಗಳು ಅನುಮತಿ ಪಡೆದೇ ಕಾರ್ಯನಿರ್ವಹಿಸುತ್ತಿವೆ' ಎಂದು ಟ್ರೂಕಾಲರ್ ವಕ್ತಾರರೊಬ್ಬರು ತಿಳಿಸಿದ್ದಾರೆ.

ತನ್ನ ಬಳಕೆದಾರನ ದತ್ತಾಂಶವನ್ನು ಇದು ಮಾರಾಟ ಮಾಡುತ್ತಿದೆ ಮತ್ತು ಪ್ರಸ್ತುತ ಮತ್ತು ವಿವಾದಾತ್ಮಕ ಚಿತ್ರಗಳನ್ನು ತನ್ನ ನೋಟಿಫಿಕೇಶನ್‌ನಲ್ಲಿ ಯುಸಿ ಬ್ರೌಸರ್ ಬಳಸುತ್ತಿದೆ ಎಂದು ಸುದ್ದಿ ಹಬ್ಬಿದ ನಂತರವು ನಿಯಮ ಮತ್ತು ಷರತ್ತುಗಳನ್ನು ಉಲ್ಲಂಘನೆ ಮಾಡಿಲ್ಲ ಎಂದು ಯುಸಿ ಬ್ರೌಸರ್ ಹೇಳಿದ್ದು, ತನ್ನ ತಾಣ ಸಂಪೂರ್ಣ ಸುರಕ್ಷಿತವೆಂದು ಹೇಳಿಕೊಂಡಿದೆ.

'ಅಪಾಯಕಾರಿ ಆಪ್' ಎಂಬ ಆರೋಪ ಹೊತ್ತಿರುವ 'ಟ್ರೂ ಕಾಲರ್' ಹೇಳಿದ್ದೇನು ಗೊತ್ತಾ?

ಇನ್ನು ಇಡೀ ವಿಶ್ವದಲ್ಲೇ ಹೆಚ್ಚು ಬಳಕೆಯ ಎರಡನೇ ಬ್ರೌಸರ್ ಎಂಬ ಹೆಗ್ಗಳಿಕೆಯನ್ನು ಹೊಂದಿರುವ ಯುಸಿ ಬ್ರೌಸರ್ ಜಗತ್ತಿನಲ್ಲಿ 50 ಕೋಟಿ ಡೌನ್‌ಲೋಡ್‌ ಹೊಂದಿದ್ದರೆ, ಜನಪ್ರಿಯ ಟ್ರೂಕಾಲರ್ ಆಪ್ ಕೂಡ ಭಾರೀ ಹೆಸರಾಗಿದೆ.ಭಾರತದಲ್ಲಿ 100ರಲ್ಲಿ 60 ಜನ ಸ್ಮಾರ್ಟ್‌ಫೋನ್ ಬಳಕೆದಾರರು ಟ್ರೂಕಾಲರ್ ಸೇವೆಯನ್ನು ಬಳಸುತ್ತಿದ್ದಾರೆ ಎಂದು ವರದಿಯೊಂದು ತಿಳಿಸಿದೆ.

Xiaomi Mi TV 4A ಹೇಗಿದೆ?..ಖರೀದಿಸಲು ಬೆಸ್ಟ್ ಟಿವಿ ಇದೇನಾ?

ಓದಿರಿ: ಗೂಗಲ್ ಸಂಗ್ರಹಿಸಿಟ್ಟ "ವಾಯ್ಸ್ ಸರ್ಚ್" ಹಿಸ್ಟರಿ ಡಿಲೀಟ್ ಮಾಡುವುದು ಹೇಗೆ?

Best Mobiles in India

Read more about:
English summary
Caller ID app "Truecaller" has been called out for using IMEI and nothing else to identify users in its systems. to know m ore visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X