ಇನ್ಸ್‌ಟಾಗ್ರಾಮ್‌ನಲ್ಲಿ ವೀಡಿಯೋ ಅಪ್‌ಲೋಡ್ ಮಾಡಿ

Posted By:

ಇನ್ಸ್‌ಟಾಗ್ರಾಮ್‌ ಬಳಕೆದಾರರಿಗೆ ಒಂದು ಗುಡ್‌ನ್ಯೂಸ್‌. ಇನ್ನು ಮುಂದೆ ನೀವು ಇನ್ಸ್‌ಟಾಗ್ರಾಮ್‌ನಲ್ಲಿ ವೀಡಿಯೋ ಅಪ್‌ಲೋಡ್ ಮಾಡಬಹುದು.

ನಿನ್ನೆಯಿಂದ ಈ ಸೇವೆ ಆರಂಭಗೊಂಡಿದ್ದು ಬಳಕೆದಾರರು 15 ಸೆಕೆಂಡ್‌ಗಳಿರುವ ವೀಡಿಯೋವನ್ನು ಅಪ್‌ಲೋಡ್‌ ಮಾಡಬಹುದಾಗಿದೆ. ಅಲ್ಲದೇ ಇದರಲ್ಲಿ ಎಡಿಟಿಂಗ್‌ ಮಾಡುವ ಆಯ್ಕೆಯನ್ನು ಸಹ ನೀಡಲಾಗಿದೆ. ಜೊತೆಗೆ ಇನ್ಸ್‌ಟಾಗ್ರಾಮ್‌ ವೀಡಿಯೋಗಾಗಿ 13 ವಿಶೇಷ ಫಿಲ್ಟರ್‌ಗಳನ್ನುವಿನ್ಯಾಸ ಮಾಡಿದೆ. ಆರಂಭದ ಹಂತವಾಗಿ 15 ಸೆಕೆಂಡ್‌ಗಳಿರುವ ವೀಡಿಯೋ ಅಪ್‌ ಲೋಡ್‌ ಮಾಡಲು ಸೌಲಭ್ಯ ಕಲ್ಪಿಸಿದ್ದು ಮುಂದಿನ ದಿನಗಳಲ್ಲಿ ಇದಕ್ಕೆ ಮತ್ತಷ್ಟು ವಿಶೇಷತೆಗಳನ್ನು ಸೇರಿಸಲಾಗುವುದು ಎಂದು ಇನ್ಸ್‌ಟಾಗ್ರಾಮ್‌ ತಿಳಿಸಿದೆ.

ಇನ್ಸ್‌ಟಾಗ್ರಾಮ್‌ನಲ್ಲಿ ವೀಡಿಯೋ ಅಪ್‌ಲೋಡ್ ಮಾಡಿ

ಇನ್ಸ್‌ಟಾಗ್ರಾಮ್ ಆರಂಭವಾಗಿದ್ದು 2010 ಅಕ್ಟೋಬರ್‌ 6ರಲ್ಲಿ. ಆರಂಭಗೊಂಡ ಎರಡೇ ವರ್ಷ‌ದಲ್ಲಿ ಇದರ ಜನಪ್ರಿಯತೆಯನ್ನು ನೋಡಿ ಫೇಸ್‌ಬುಕ್‌ 715.3 ಮಿಲಿಯನ್‌ ಡಾಲರ್‌ ನೀಡಿ ಖರೀದಿಸಿತು.ಇಂದು ಇನ್ಸ್‌ಟಾಗ್ರಾಮನ್ನು ನೂರು ಮಿಲಿಯನ್‌ಗಿಂತಲೂ ಅಧಿಕ ಜನ ಆಕ್ಟಿವ್‌ ಆಗಿ ಬಳಕೆ ಮಾಡುತ್ತಿದ್ದಾರೆ.

ಇದನ್ನೂ ಓದಿ : ಇನ್ಸ್‌ಟಾಗ್ರಾಮ್‌ ಪೋಲರಾಯ್ಡ್ ಕ್ಯಾಮೆರಾ ಬರುತ್ತಂತೆ.!

Please Wait while comments are loading...
Opinion Poll

Social Counting