ಏಸರ್ ಹ್ಯಾಲೊ ಸ್ವಿಂಗ್ ಸ್ಮಾರ್ಟ್ ಸ್ಪೀಕರ್ ಅನಾವರಣ; ದಂಗುಬಡಿಸುವ ಫೀಚರ್ಸ್

|

ಸಿಇಎಸ್ 2023 ನಲ್ಲಿ ಮೈ ರೋಮಾಂಚನಗೊಳಿಸುವ ಗ್ಯಾಜೆಟ್‌ಗಳು ಎಲ್ಲರ ಗಮನ ಸೆಳೆಯುತ್ತಿದೆ. ಅದರಲ್ಲೂ ಪ್ರಮುಖ ಗ್ಯಾಜೆಟ್‌ ತಯಾರಿಕಾ ಸಂಸ್ಥೆಗಳು ತಮ್ಮದೇ ಆದ ನವೀನ ತಂತ್ರಜ್ಞಾನ ಆಧಾರಿತ ಡಿವೈಸ್‌ಗಳನ್ನು ಪರಿಚಯಿಸುತ್ತಿದ್ದು, ಇಲ್ಲಿ ಅನಾವರಣ ಆಗುತ್ತಿರುವ ಡಿವೈಸ್‌ಗಳು ಒಂದಕ್ಕೊಂದು ಪೈಪೋಟಿ ನೀಡುತ್ತಿವೆ. ಅಂತೆಯೇ ವಿಭಿನ್ನ ಫೀಚರ್ಸ್‌ ಇರುವ ಲ್ಯಾಪ್‌ಟಾಪ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಿ ಜನಪ್ರಿಯತೆ ಪಡೆದಿದ್ದ ಏಸರ್‌ ಈಗ ಸ್ಮಾರ್ಟ್‌ ಸ್ಪೀಕರ್‌ ಅನಾವರಣ ಮಾಡಿದೆ.

ಏಸರ್‌

ಹೌದು, ಏಸರ್‌ ತನ್ನ ಸ್ಮಾರ್ಟ್ ಸ್ಪೀಕರ್ ಪೋರ್ಟ್‌ಫೋಲಿಯೊವನ್ನು ಹ್ಯಾಲೊ ಸ್ವಿಂಗ್ ಪೋರ್ಟಬಲ್ ಸ್ಮಾರ್ಟ್ ಸ್ಪೀಕರ್‌ನೊಂದಿಗೆ ವಿಸ್ತರಿಸಿಕೊಳ್ಳಲು ಮುಂದಾಗಿದೆ. ಈ ಸ್ಮಾರ್ಟ್ ಸ್ಪೀಕರ್ ಸಂವಾದಾತ್ಮಕ LED ಪ್ರದರ್ಶನದೊಂದಿಗೆ ಪ್ಯಾಕ್‌ ಆಗಿದ್ದು, ಸುಧಾರಿತ ಆಡಿಯೊ ಗುಣಮಟ್ಟಕ್ಕಾಗಿ ಡಿಟಿಎಸ್‌ ಸೌಂಡ್‌ ಬೆಂಬಲವನ್ನು ಪಡೆದುಕೊಂಡಿದೆ. ಹಾಗಿದ್ರೆ ಇದರ ಇನ್ನಷ್ಟು ಪ್ರಮುಖ ಫೀಚರ್ಸ್‌ ಏನು ಎಂಬ ಮಾಹಿತಿಯನ್ನು ಈ ಲೇಖನದಲ್ಲಿ ವಿವರಿಸಲಾಗಿದೆ ಓದಿರಿ.

ಏಸರ್ ಹ್ಯಾಲೊ ಸ್ವಿಂಗ್ ಸ್ಮಾರ್ಟ್ ಸ್ಪೀಕರ್‌ ಫೀಚರ್ಸ್‌

ಏಸರ್ ಹ್ಯಾಲೊ ಸ್ವಿಂಗ್ ಸ್ಮಾರ್ಟ್ ಸ್ಪೀಕರ್‌ ಫೀಚರ್ಸ್‌

ಹ್ಯಾಲೊ ಸ್ವಿಂಗ್ ಸ್ಮಾರ್ಟ್ ಸ್ಪೀಕರ್ ಡಿಟಿಎಸ್‌ ಸರೌಂಡ್ ಸೌಂಡ್ ತಂತ್ರಜ್ಞಾನ ಹೊಂದಿದ್ದು, ಈ ಮೂಲಕ ಸ್ಪಷ್ಟ ಧ್ವನಿ ನೀಡಲಿದೆ. ಹಾಗೆಯೇ ಇದರಲ್ಲಿ ಜೋಡಿಸಲಾಗಿರುವ ಎಲ್‌ಇಡಿ ಡಿಸ್ಪ್ಲೇ ಈ ಡಿವೈಸ್‌ನ ನೋಟಕ್ಕೆ ಇನ್ನಷ್ಟು ಮೆರುಗು ನೀಡುತ್ತದೆ. ಹಾಗೆಯೇ ಈ ಡಿವೈಸ್‌ನಲ್ಲಿ ಮ್ಯೂಸಿಕ್‌ ಆಲಿಸುವಾಗ ಆರ್‌ಜಿಬಿ ಲೈಟ್‌ಗಳು ಮ್ಯೂಸಿಕ್‌ಗೆ ತಕ್ಕಂತೆ ಬೆಳಗಲಿದ್ದು, ಇನ್ನಷ್ಟು ಆಕರ್ಷಕ ಎನ್ನಬಹುದು.

ಡಿವೈಸ್‌

ಇದರೊಂದಿಗೆ ಈ ಡಿವೈಸ್‌ನಲ್ಲಿರುವ ಗೂಗಲ್‌ ಅಸಿಸ್ಟೆಂಟ್‌ ಜೊತೆ ಸಂವಹನ ನಡೆಸುವಾಗ ಬೇಸ್-ಲೈಟ್ ಬಣ್ಣಗಳು ಸಹ ಬದಲಾಗುತ್ತವೆ. ಇದರಿಂದ ಹಿಂದೆಂದೂ ಬಳಕೆ ಸಿಗದ ಅನುಭವವನ್ನು ಈ ಹೊಸ ಏಸರ್‌ ಸ್ಮಾರ್ಟ್‌ ಸ್ಪೀಕರ್‌ ನೀಡಲಿದೆ.

ಏಕಕಾಲದಲ್ಲಿ ಹೆಚ್ಚಿನ ಅನುಕೂಲತೆ

ಏಕಕಾಲದಲ್ಲಿ ಹೆಚ್ಚಿನ ಅನುಕೂಲತೆ

ಈ ಎಲ್ಲಾ ಸೌಲಭ್ಯಗಳ ಜೊತೆಗೆ ಬಳಕೆದಾರರಿಗೆ ಏಕಕಾಲದಲ್ಲಿ ಹೆಚ್ಚಿನ ಅನುಕೂಲತೆ ನೀಡಲಿದೆ. ಗೂಗಲ್‌ ಹೋಮ್‌ ಮತ್ತು ಏಸರ್‌ ಹ್ಯಾಲೊ ಸ್ವಿಂಗ್ ಆಪ್‌ಗೆ ಬೆಂಬಲಿತವಾಗಿದ್ದು, ಕನೆಕ್ಟಿವಿಟಿ ಆಯ್ಕೆಯಲ್ಲಂತೂ ತುಂಬಾನೆ ವೇಗವಾಗಿ ಕೆಲಸ ಮಾಡಲಿದೆ. ಇದರೊಂದಿಗೆ ಇತರ ಸ್ಪೀಕರ್‌ಗಳನ್ನು ಸಹ ಬಳಸಿಕೊಂಡು ಗ್ರೂಪ್‌ ಮ್ಯೂಸಿಕ್‌ ಪ್ಲೇ ಮಾಡಲು ಇದು ಅವಕಾಶ ನೀಡಲಿದ್ದು, ಸಣ್ಣ ಪಾರ್ಟಿ ಸಮಯದಲ್ಲಿ ನಿಮ್ಮ ಸಂತಸವನ್ನು ಇನ್ನಷ್ಟು ಹೆಚ್ಚಿಗೆ ಮಾಡುತ್ತದೆ.

ಹ್ಯಾಂಡ್ಸ್-ಫ್ರೀ ಆಯ್ಕೆ

ಹ್ಯಾಂಡ್ಸ್-ಫ್ರೀ ಆಯ್ಕೆ

ಈ ಸ್ಮಾರ್ಟ್‌ಸ್ಪೀಕರ್‌ನಲ್ಲಿ ಸಂಗೀತ ಆಲಿಸಲು ಅಥವಾ ಸಂಗೀತದ ದ್ವನಿ ಬದಲಾಯಿಸಲು ಹಾಗೂ ಸಂಗೀತವನ್ನು ಸ್ಟಾಪ್‌ ಮಾಡಲು, ಮುಂದುವರೆಸಲು ಹ್ಯಾಂಡ್ಸ್-ಫ್ರೀ ಆಯ್ಕೆ ನೀಡಲಾಗಿದೆ. ಇದರಿಂದ ಬಳಕೆದಾರರು ಈ ಸ್ಮಾರ್ಟ್‌ ಡಿವೈಸ್‌ ಮುಟ್ಟದೆಯೇ ಸಂಗೀತ ಲೋಕದಲ್ಲಿ ತೇಲಬಹುದು.

ಕ್ಯಾಲೆಂಡರ್‌ ಆಗಿಯೂ ಕೆಲಸ ಮಾಡುತ್ತದೆ

ಕ್ಯಾಲೆಂಡರ್‌ ಆಗಿಯೂ ಕೆಲಸ ಮಾಡುತ್ತದೆ

ಈ ಸ್ಪೀಕರ್‌ ಕೇವಲ ಸಂಗೀತವನ್ನಷ್ಟೇ ಕೇಳಲು ಅನುಕೂಲ ಮಾಡಿಕೊಡುವುದಲ್ಲದೆ ಬಳಕೆದಾರರು ತಮ್ಮ ದೈನಂದಿನ ಕಾರ್ಯಚಟುವಟಿಕೆಗಳನ್ನು ಯೋಜಿಸಬಹುದು, ಅಲಾರಂಗಳನ್ನು ಹೊಂದಿಸಬಹುದು ಮತ್ತು ಮನೆಯಲ್ಲಿ ಜೋಡಿಸಲಾದ ಸ್ಮಾರ್ಟ್ ಡಿವೈಸ್‌ಗಳನ್ನು ನಿಯಂತ್ರಣ ಮಾಡಬಹುದು. ಜೊತೆಗೆ ಮೇಲ್, ಕ್ಯಾಲೆಂಡರ್‌ಗಳು, ಜ್ಞಾಪನೆಗಳು ಮತ್ತು ಸಂದೇಶಗಳನ್ನು ಗ್ರಾಹಕೀಯಗೊಳಿಸಬಹುದು.

ಸೌಲಭ್ಯ

ಈ ಎಲ್ಲಾ ಸೌಲಭ್ಯಗಳ ಜೊತೆಗೆ ಅಪ್‌ಡೇಟ್‌ ನವೀಕರಣಗಳನ್ನು ಮಾಡಲು ಸಹ ಅವಕಾಶ ನೀಡಲಾಗಿದೆ. ಜೊತೆಗೆ ಈ ಸ್ಮಾರ್ಟ್ ಸ್ಪೀಕರ್‌ IPX5 ರೇಟ್‌ ಹೊಂದಿದ್ದು, ವಾಟರ್‌ ರೆಸಿಸ್ಟೆಂಟ್‌‌ ಆಯ್ಕೆ ಪಡೆದುಕೊಂಡಿದೆ. ಹಾಗೆಯೇ ಚರ್ಮದ ಹ್ಯಾಂಡಲ್ ಬಳಕೆ ಮಾಡಲಾಗಿದ್ದು, ಇದು ಸ್ಪೀಕರ್‌ಗೆ ಪ್ರೀಮಿಯಂ ನೋಟ ನೀಡುತ್ತದೆ.

ಸ್ಮಾರ್ಟ್‌

ಇನ್ನು ಈ ಸ್ಮಾರ್ಟ್‌ ಸ್ಪೀಕರ್ ಬ್ಲೂಟೂತ್ ಆವೃತ್ತಿ 5.2 ವಾಯರ್‌ಲೆಸ್ ಸ್ಟ್ರೀಮಿಂಗ್ ಅಥವಾ ಆಕ್ಸ್-ಇನ್ ಪೋರ್ಟ್ ಆಯ್ಕೆಗಳನ್ನು ಬೆಂಬಲಿಸುವ ಸ್ಮಾರ್ಟ್ ಲಿಂಕ್-ಸ್ವಿಚಿಂಗ್ ಸಾಮರ್ಥ್ಯ ವನ್ನು ಪಡೆದುಕೊಂಡಿದ್ದು, ಬಳಕೆದಾರರು ತಮ್ಮ ಅಗತ್ಯಕ್ಕೆ ತಕ್ಕಂತೆ ಇದನ್ನು ಬಳಸಬಹುದು.

Best Mobiles in India

English summary
Acer launches Halo Swing smart speaker.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X