ಭಾರತದಲ್ಲಿ ಏಸರ್‌ನ ಹೊಸ ಲ್ಯಾಪ್‌ಟಾಪ್‌ ಲಾಂಚ್‌; ವಿಶ್ವದ ಅತ್ಯಂತ ಹಗುರವಾದ ಡಿವೈಸ್‌ ಇದು!

|

ಏಸರ್ ಕಂಪೆನಿಯು ಬಹುರಾಷ್ಟ್ರೀಯ ಹಾರ್ಡ್‌ವೇರ್ ಮತ್ತು ಎಲೆಕ್ಟ್ರಾನಿಕ್ಸ್ ಕಾರ್ಪೊರೇಶನ್ ಆಗಿದ್ದು, ಕೈಗೆಟಕುವ ಬೆಲೆಯಿಂದ ದುಬಾರಿ ಬೆಲೆ ಲ್ಯಾಪ್‌ಟಾಪ್‌ಗಳನ್ನು ಪರಿಚಯಿಸಿ ಜನಪ್ರಿಯತೆ ಗಳಿಸಿಕೊಂಡಿದ್ದು, ಇದರ ನಡುವೆ ಹೊಸದಾಗಿ ಲ್ಯಾಪ್‌ಟಾಪ್‌ವೊಂದನ್ನು ಅನಾವರಣ ಮಾಡಿದೆ. ವಿಶೇಷ ಎಂದರೆ ಇದು ಜಗತ್ತಿನ ಅತೀ ಹಗುರವಾದ ಲ್ಯಾಪ್‌ಟಾಪ್‌ ಎನಿಸಿಕೊಂಡಿದೆ.

ಫೋಲ್ಡಬಲ್‌

ಹೌದು, ಸದ್ಯಕ್ಕೆ ಹಗುರವಾದ ಹಾಗೂ ಫೋಲ್ಡಬಲ್‌ ಲ್ಯಾಪ್‌ಟಾಪ್‌ಗಳಿಗೆ ಹೆಚ್ಚಿನ ಬೇಡಿಕೆ ನಿರ್ಮಾಣ ಆಗಿದೆ. ಈ ಕಾರಣಕ್ಕೆ ಪ್ರಮುಖ ಕಂಪೆನಿಗಳು ಈ ವಿಷಯಗಳನ್ನು ಕೇಂದ್ರೀಕರಿಸಿಕೊಂಡು ಲ್ಯಾಪ್‌ಟಾಪ್‌ ಅನ್ನು ತಯಾರು ಮಾಡುತ್ತಿವೆ. ಇದರ ನಡುವೆ ಏಸರ್‌ ಸ್ವಿಫ್ಟ್ ಎಡ್ಜ್ ಲ್ಯಾಪ್‌ಟಾಪ್‌ ಅನ್ನು ಭಾರತದಲ್ಲಿ ಏಸರ್‌ ಕಂಪೆನಿ ಅನಾವರಣ ಮಾಡಿದೆ. ಈ ಲ್ಯಾಪ್‌ಟಾಪ್‌ ಎಎಮ್‌ಡಿ ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, ಬಯೋಮೆಟ್ರಿಕ್ ಭದ್ರತೆಗಾಗಿ ಫಿಂಗರ್‌ಪ್ರಿಂಟ್ ರೀಡರ್ ಆಯ್ಕೆ ನೀಡಲಾಗಿದೆ. ಹಾಗಿದ್ರೆ, ಇದರ ಮತ್ತಷ್ಟು ಫೀಚರ್ಸ್‌ ಹಾಗೂ ಭಾರತದಲ್ಲಿ ಇದರ ಬೆಲೆ ಎಷ್ಟು ಎಂಬಿತ್ಯಾದಿ ಮಾಹಿತಿಯನ್ನು ಈ ಲೇಖನದಲ್ಲಿ ವಿವರಿಸಲಾಗಿದೆ ಓದಿರಿ.

ಡಿಸ್‌ಪ್ಲೇ ವಿವರ

ಡಿಸ್‌ಪ್ಲೇ ವಿವರ

ಏಸರ್ ಸ್ವಿಫ್ಟ್ ಎಡ್ಜ್ ಲ್ಯಾಪ್‌ಟಾಪ್‌ 16 ಇಂಚಿನ 4K OLED ಡಿಸ್‌ಪ್ಲೇ ಆಯ್ಕೆ ಹೊಂದಿದ್ದು, 3840 x 2400 ಪಿಕ್ಸೆಲ್‌ ರೆಸಲ್ಯೂಶನ್‌ ನೀಡಲಿದೆ. ಹಾಗೆಯೇ 500 nits ಬ್ರೈಟ್‌ನೆಸ್‌ ಆಯ್ಕೆ ಇದರಲ್ಲಿದ್ದು, ಪ್ರಕಾಶಮಾನವಾದ ಸೂರ್ಯನ ಬೆಳಕಿನಲ್ಲಿಯೂ ಸ್ಪಷ್ಟ ಚಿತ್ರಣ ನೀಡಲಿದೆ. ಈ ಮೂಲಕ ಹೊರಾಂಗಣದಲ್ಲಿಯೂ ಕೆಲಸ ಮಾಡಬಹುದಾಗಿದೆ.

ಪ್ರೊಸೆಸರ್‌ ಮಾಹಿತಿ

ಪ್ರೊಸೆಸರ್‌ ಮಾಹಿತಿ

ಏಸರ್ ಸ್ವಿಫ್ಟ್ ಎಡ್ಜ್ ಲ್ಯಾಪ್‌ಟಾಪ್‌ ಎಎಮ್‌ಡಿ ರೈಜೆನ್ 7 6800U ಆಕ್ಟಾ-ಕೋರ್ ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, 16GB RAM ಹಾಗೂ 1TB ಇಂಟರ್ನಲ್‌ ಸ್ಟೋರೇಜ್‌ ಆಯ್ಕೆ ಪಡೆದುಕೊಂಡಿದೆ.

ಇತರೆ ಫೀಚರ್ಸ್‌

ಇತರೆ ಫೀಚರ್ಸ್‌

ಇನ್ನುಳಿದಂತೆ ಈ ಲ್ಯಾಪ್‌ಟಾಪ್‌ ಕೀಬೋರ್ಡ್‌ನಲ್ಲಿ ಸಂಖ್ಯೆಯ ಪ್ಯಾಡ್ ಅನ್ನು ಹೊಂದಿಲ್ಲ. ಆದರೂ ಬಯೋಮೆಟ್ರಿಕ್ ಭದ್ರತೆಗಾಗಿ ಫಿಂಗರ್‌ಪ್ರಿಂಟ್ ರೀಡರ್ ಆಯ್ಕೆ ಹೊಂದಿರುವುದು ವಿಶೇಷ. ಅದರಂತೆ ಹೆಚ್ಚು ಸಂಕೀರ್ಣವಾದ ಸೈಬರ್‌ಟಾಕ್‌ಗಳ ವಿರುದ್ಧ ಹೋರಾಡಲು ಮೈಕ್ರೋಸಾಫ್ಟ್ ಪ್ಲುಟನ್ ಭದ್ರತಾ ಪ್ರೊಸೆಸರ್ ಅನ್ನು ಇದು ಪಡೆದುಕೊಂಡಿದೆ.

ಲ್ಯಾಪ್‌ಟಾಪ್‌

ಈ ಲ್ಯಾಪ್‌ಟಾಪ್‌ 1.17 ಕೆಜಿ ತೂಕ ಹೊಂದಿದ್ದು, ಇದರ ನಿರ್ಮಾಣಕ್ಕೆ ಮಿಶ್ರಲೋಹದ ವಸ್ತುವನ್ನು ಬಳಕೆ ಮಾಡಲಾಗಿದೆ. ಇದರಿಂದ 20 ಪ್ರತಿಶತದಷ್ಟು ಹಗುರವಾಗಿರುತ್ತದೆ ಮತ್ತು ಸಾಮಾನ್ಯ ಅಲ್ಯೂಮಿನಿಯಂಗಿಂತ 2x ಬಲವಾಗಿರುತ್ತದೆ ಎಂದು ಸಂಸ್ಥೆ ಹೇಳಿದೆ. ಈ ಮೂಲಕ ವಿಶ್ವದ ಅತ್ಯಂತ ಹಗುರವಾದ ಲ್ಯಾಪ್‌ಟಾಪ್‌ ಎಂಬ ಖ್ಯಾತಿ ತನ್ನದಾಗಿಸಿಕೊಂಡಿದೆ.

 ಹೆಚ್‌ಡಿ ವೆಬ್‌ಕ್ಯಾಮ್‌

ಹೆಚ್‌ಡಿ ವೆಬ್‌ಕ್ಯಾಮ್‌

ಈ ಹೊಸ ಏಸರ್ ಸ್ವಿಫ್ಟ್ ಎಡ್ಜ್ ಫುಲ್‌ ಹೆಚ್‌ಡಿ ವೆಬ್‌ಕ್ಯಾಮ್‌ನೊಂದಿಗೆ 60fps ನಲ್ಲಿ ವಿಡಿಯೋವನ್ನು ರೆಕಾರ್ಡ್‌ ಮಾಡಲು ಅನುಕೂಲ ಮಾಡಿಕೊಡಲಿದೆ. ಹಾಗೆಯೇ ವಿಡಿಯೋ ಕರೆಗಳ ಸಮಯದಲ್ಲಿ ಸ್ಪಷ್ಟವಾದ ವಾಯ್ಸ್‌ ಅನುಭವವನ್ನೂ ಪಡೆಯಬಹುದಾಗಿದೆ. ಇದಕ್ಕಾಗಿ ಈ ಲ್ಯಾಪ್‌ಟಾಪ್‌ ಟೆಂಪೊರಲ್ ನಾಯ್ಸ್ ರಿಡಕ್ಷನ್ ಅನ್ನು ಬೆಂಬಲಿಸುತ್ತದೆ.

ಬ್ಯಾಟರಿ ಸಾಮರ್ಥ್ಯ ಹಾಗೂ ಇತರೆ

ಬ್ಯಾಟರಿ ಸಾಮರ್ಥ್ಯ ಹಾಗೂ ಇತರೆ

ಹೊಸ ಲ್ಯಾಪ್‌ಟಾಪ್‌ನ ಕನೆಕ್ಟಿವಿಟಿ ವಿಚಾರದಲ್ಲಿ ಯುಎಸ್‌ಬಿ ಟೈಪ್‌ ಸಿ ಪೋರ್ಟ್‌ಗಳು, ಯುಎಸ್‌ಬಿ 3.2 ಜನ್‌ 1 ಪೋರ್ಟ್ ಹಾಗೂ ಹೆಚ್‌ಡಿಎಮ್‌ಐ ಪೋರ್ಟ್ ಪಡೆದುಕೊಂಡಿದೆ. ಹಾಗೆಯೇ ವೈ-ಫೈ 6E ವಾಯರ್‌ಲೆಸ್ ಸಂಪರ್ಕದ ಫೀಚರ್ಸ್‌, ಸ್ಟೀರಿಯೋ ಸ್ಪೀಕರ್‌ಗಳು, ಬ್ಲೂಟೂತ್ ಆವೃತ್ತಿ 5.2 ಫೀಚರ್ಸ್‌ ಹೊಂದಿದೆ. ಇದರ ಜೊತೆಗೆ ಏಸರ್ ಸ್ವಿಫ್ಟ್ ಎಡ್ಜ್ 54Wh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದುಕೊಂಡಿದ್ದು, ಇದನ್ನು 65W PD ಅಡಾಪ್ಟರ್ ಬಳಸಿ ಚಾರ್ಜ್ ಮಾಡಿಕೊಳ್ಳಬಹುದಾಗಿದೆ.

ಬೆಲೆ ಹಾಗೂ ಲಭ್ಯತೆ

ಬೆಲೆ ಹಾಗೂ ಲಭ್ಯತೆ

ಏಸರ್ ಸ್ವಿಫ್ಟ್ ಎಡ್ಜ್ ಲ್ಯಾಪ್‌ಟಾಪ್ ಭಾರತೀಯ ಮಾರುಕಟ್ಟೆಯಲ್ಲಿ 124,999 ರೂ. ಗಳ ಬೆಲೆಯಿಂದ ಪ್ರಾರಂಭವಾಗುತ್ತದೆ. ಹಾಗೆಯೇ ಈ ಲ್ಯಾಪ್‌ಟಾಪ್ ಏಸರ್ ಇಂಡಿಯಾದ ಇ-ಸ್ಟೋರ್ ಮತ್ತು ಅಮೆಜಾನ್‌ನಲ್ಲಿ ಲಭ್ಯವಿರುತ್ತದೆ. ಇನ್ನು ಈ ಲ್ಯಾಪ್‌ಟಾಪ್‌ ಒಲಿವೈನ್ ಬ್ಲ್ಯಾಕ್‌ ಬಣ್ಣದಲ್ಲಿ ಮಾತ್ರ ಕಂಡುಬರಲಿದೆ.

Best Mobiles in India

English summary
Acer launches world's lightest laptop With AMD processor in India.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X