ಇಸ್ರೇಲಿ ಸಂಶೋಧಕರಿಂದ AI ಡಿವೈಸ್ ನಿರ್ಮಾಣ; ಹೃದಯಾಘಾತದ ಮುನ್ಸೂಚನೆ ನೀಡುತ್ತೆ?!

|

ಭಾರತವೂ ಸೇರಿದಂತೆ ಜಗತ್ತಿನಾದ್ಯಂತ ಹೃದಯ ವೈಫಲ್ಯದಿಂದ ಹಲವಾರು ಜನರು ಸಾಯುತ್ತಿದ್ದಾರೆ. ತಂತ್ರಜ್ಞಾನ ಎಷ್ಟೇ ಅಭಿವೃದ್ಧಿ ಹೊಂದಿದ್ದರೂ ಸಹ ಈ ರೀತಿಯ ಸಮಸ್ಯೆಗೆ ಸಂಪೂರ್ಣ ಪರಿಹಾರ ಕಂಡುಕೊಳ್ಳಲು ಈವರೆಗೂ ಕಷ್ಟಕರವಾಗಿದೆ. ಆದರೆ, ಇಸ್ರೇಲ್‌ನಲ್ಲಿ ಸಂಶೋಧಕರು AI ಉಪಕರಣವೊಂದನ್ನು ಅಭಿವೃದ್ಧಿಪಡಿಸಿದ್ದು, ಇದು 80% ನಿಖರತೆಯೊಂದಿಗೆ ಹೃದಯ ವೈಫಲ್ಯವನ್ನು ಊಹಿಸುತ್ತದೆ. ಈ ಮೂಲಕ ರೋಗಿಗಳು ಎಚ್ಚೆತ್ತುಕೊಳ್ಳಬಹುದಾಗಿದೆ.

ಇಸ್ರೇಲ್‌

ಹೌದು, ಇಸ್ರೇಲ್‌ನ ಈ ಹೊಸ AI ಉಪಕರಣವು ಜೀವಗಳನ್ನು ಉಳಿಸಲು ಸಹಾಯ ಮಾಡಲಿದೆ. ಈ ಕೃತಕ ಬುದ್ಧಿಮತ್ತೆ ಸಾಧನವು ಹೃದಯ ವೈಫಲ್ಯ ಸಂಭವಿಸುವ ವಾರಗಳ ಮೊದಲು ಹೆಚ್ಚಿನ ನಿಖರತೆಯೊಂದಿಗೆ ಮಾಹಿತಿ ನೀಡಲಿದೆ. ಈಗಾಗಲೇ ಈ ಉಪಕರಣವನ್ನು ಮೈಯೋಸಿಟಿಸ್ ಅಥವಾ ಸ್ನಾಯುಗಳ ಉರಿಯೂತದ ರೋಗಿಗಳ ಮೇಲೆ ಪರೀಕ್ಷಿಸಲಾಗಿದ್ದು, ಯಶಸ್ವಿಯಾಗಿದೆ. ಹಾಗೆಯೇ ಮುಂದಾಗುವ ಅನಾಹುತವನ್ನು ತಪ್ಪಿಸಿದೆ.

ಇದು ಹೇಗೆ ಕೆಲಸ ಮಾಡುತ್ತದೆ?

ಇದು ಹೇಗೆ ಕೆಲಸ ಮಾಡುತ್ತದೆ?

ಇಸ್ರೇಲ್‌ನ ಸಂಶೋಧಕರು ಈ ಕೃತಕ ಬುದ್ಧಿಮತ್ತೆ (AI) ಉಪಕರಣವನ್ನು ನಿರ್ಮಿಸಿದ್ದು, ಈ ಉಪಕರಣ ಇಸಿಜಿ ಪರೀಕ್ಷೆಗಳನ್ನು ವಿಶ್ಲೇಷಿಸಿ ರೋಗಿಯ ಹೃದಯ ಯಾವ ಸಮಯದಲ್ಲಿ ವಿಫಲ ಆಗುತ್ತದೆ ಎಂಬ ಬಗ್ಗೆ ನಿಖರ ಮಾಹಿತಿಯನ್ನು ತಿಳಿಸುತ್ತದಂತೆ. ಇದರಿಂದ ವೈದ್ಯರು ಎಚ್ಚೆತ್ತುಕೊಂಡು ಅದರ ನಿಯಂತ್ರಣಕ್ಕೆ ಸಂಬಂಧಿಸಿದ ಚಿಕಿತ್ಸೆ ನೀಡಲು ಮುಂದಾಗಬಹುದಾಗಿದೆ.

ಪರೀಕ್ಷೆ ಯಶಸ್ವಿ

ಪರೀಕ್ಷೆ ಯಶಸ್ವಿ

ಇನ್ನು 2000 ಮತ್ತು 2020 ರ ನಡುವೆ ಮಯೋಸಿಟಿಸ್‌ನಿಂದ ಬಳಲುತ್ತಿರುವ 89 ರೋಗಿಗಳ ಇಸಿಜಿ ಸ್ಕ್ಯಾನ್‌ಗಳು ಮತ್ತು ವೈದ್ಯಕೀಯ ದಾಖಲೆಗಳಿಂದ ಡೇಟಾವನ್ನು ಫೀಡ್ ಮಾಡುವ ಮೂಲಕ ಈ ಉಪಕರಣದಿಂದ ಮಾಹಿತಿ ಕಲೆ ಹಾಕಲಾಗಿದೆಯಂತೆ. ಈ ವೇಳೆ ಈ ಉಪಕರಣ ಇಸಿಜಿಗಳಲ್ಲಿ ಸೂಕ್ಷ್ಮ ಮಾದರಿಗಳ ಚಿತ್ರವನ್ನು ನಿರ್ಮಿಸಿದ್ದು, ಇದು ಹೃದಯ ವೈಫಲ್ಯದ ಹೆಚ್ಚಿನ ವಿಷಯಕ್ಕೆ ಸಂಬಂಧಿಸಿದೆ ಎಂದು ವೈದ್ಯರು ಕಂಡುಕೊಂಡಿದ್ದಾರೆ.

ನೇತೃತ್ವ

ಈ ಸಂಶೋಧನೆಯ ನೇತೃತ್ವ ವಹಿಸಿರುವ ರಾಂಬಮ್ ಹೆಲ್ತ್‌ಕೇರ್ ಕ್ಯಾಂಪಸ್‌ನ ಡಾ. ಶಹರ್ ಶೆಲ್ಲಿ ಅವರು ಈ ಬಗ್ಗೆ ಮಾಹಿತಿ ನೀಡಿದ್ದು, ಇದು ವಿಶೇಷವಾಗಿ ಜನರಿಗಾಗಿ ನಿರ್ಮಿಸಲಾದ ಮೊದಲ AI ಡಿವೈಸ್‌ ಆಗಿದೆ. ಈ ಉಪಕರಣವು ವಿಶಿಷ್ಟವಾದ ಹೃದಯದ ಮಾದರಿಗಳನ್ನು ವಿಶ್ಲೇಷಿಸುತ್ತದೆ ಮತ್ತು ಮುಂಚಿತವಾಗಿ ಹೃದಯ ವೈಫಲ್ಯದ ಮಾಹಿತಿಯನ್ನು ಪತ್ತೆ ಮಾಡುತ್ತದೆ. ನಮ್ಮ ಸಂಶೋಧನೆಯಲ್ಲಿ ಮಯೋಸಿಟಿಸ್ ರೋಗಿಗಳ ಮಾದರಿಯಲ್ಲಿ 80 ಪ್ರತಿಶತದಷ್ಟು ಹೃದಯ ವೈಫಲ್ಯದ ಪ್ರಕರಣಗಳನ್ನು ಈ ಅಲ್ಗಾರಿದಮ್ ಯಶಸ್ವಿಯಾಗಿ ಊಹಿಸಿದೆ ಎಂದು ತಿಳಿಸಿದ್ದಾರೆ.

AI

ನಾವು AI ಮಾದರಿಯ ಮೂಲಕ ಇಸಿಜಿ ಪರೀಕ್ಷೆಗಳನ್ನು ನಡೆಸುತ್ತಿದ್ದೇವೆ, ಇದು ವೈದ್ಯರು ಸಾಮಾನ್ಯವಾಗಿ ಪತ್ತೆಹಚ್ಚಲು ಸಾಧ್ಯವಾಗದ ವಿವರಗಳನ್ನು ಅಧ್ಯಯನ ಮಾಡುತ್ತದೆ. ಈ ಮೂಲಕ ವ್ಯಕ್ತಿಗೆ ಯಾವ ಸಮಯದಲ್ಲಿ ಹೃದಯಾಘಾತ ಸಂಭವಿಸುತ್ತದೆ ಎನ್ನುವುದನ್ನು ನಿಖರವಾಗಿ ತಿಳಿಯುತ್ತದೆ. ಈ ಹೃದಯದ ಅಪಸಾಮಾನ್ಯ ಕ್ರಿಯೆಗಳು ಸಾಮಾನ್ಯವಾಗಿ ಜನರನ್ನು ಕೊಲ್ಲುತ್ತವೆ, ಆದರೆ, ಈ ಡಿವೈಸ್‌ ಜೀವಗಳನ್ನು ಉಳಿಸುತ್ತದೆ ಎಂದು ವಿವರಿಸಿದ್ದಾರೆ.

ಮೇಯೊ

ಯುಎಸ್ ಮೂಲದ ಮೇಯೊ ಕ್ಲಿನಿಕ್ ಮೆಡಿಕಲ್ ಸೆಂಟರ್‌ನಲ್ಲಿ ಕಾರ್ಡಿಯಾಲಜಿ ವಿಭಾಗದ ಡಾ. ಶೆಲ್ಲಿ ಮತ್ತು ಇತರ ಸಂಶೋಧಕರು ಈ ಅಧ್ಯಯನ ನಡೆಸಿದ್ದಾರೆ. ಈ ಮಾದರಿಯ ಬಳಕೆಯು ರೋಗಿಗಳ ವೈದ್ಯಕೀಯ ಸ್ಥಿತಿಯು ಹದಗೆಡುವ ಮೊದಲು ಆರಂಭಿಕ ಹಂತದಲ್ಲಿ ಸೂಕ್ತ ಚಿಕಿತ್ಸೆಯನ್ನು ಒದಗಿಸಲು ಅನುವು ಮಾಡಿಕೊಡಲಿದೆ.

ಪ್ರತಿವರ್ಷ 17.9 ಮಿಲಿಯನ್ ಜನ ಸಾಯುತ್ತಿದ್ದಾರೆ

ಪ್ರತಿವರ್ಷ 17.9 ಮಿಲಿಯನ್ ಜನ ಸಾಯುತ್ತಿದ್ದಾರೆ

ಹೃದಯರಕ್ತನಾಳದ ಕಾಯಿಲೆಗಳು ಪ್ರಪಂಚದಾದ್ಯಂತ ಸಾವಿನ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ. WHO ಪ್ರಕಾರ ಪ್ರತಿ ವರ್ಷ ಸುಮಾರು 17.9 ಮಿಲಿಯನ್ ಜೀವಗಳು ಈ ರೀತಿಯ ಸಮಸ್ಯೆಯಿಂದ ಬಲಿಯಾಗುತ್ತವೆ. ಆದರೆ, ಈ ಹೊಸ ಇಸ್ರೇಲಿ AI ಉಪಕರಣವು ಜೀವಗಳನ್ನು ಉಳಿಸಲು ಸಹಾಯ ಮಾಡಲಿದೆ.

Best Mobiles in India

Read more about:
English summary
AI tool developed for predict heart failure weeks in advance .

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X