ಏರ್‌ಟೆಲ್ 399ರೂ. ಹಾಟ್‌ಸ್ಪಾಟ್ ಪ್ಲ್ಯಾನ್‌ ; 50GB ಡೇಟಾ ಖಚಿತ, ಆನಂತರ ಉಚಿತ!

|

ಏರ್‌ಟೆಲ್‌ ಟೆಲಿಕಾಂ ಸಂಸ್ಥೆಯು ಇತ್ತೀಚಿಗೆ ಏರ್‌ಟೆಲ್‌ ಥ್ಯಾಂಕ್ಸ್‌ ಕಸ್ಟಮರ್‌ ರಿವಾರ್ಡ್‌ ಪ್ರೊಗ್ರಾಂ ನಡೆಸಿದ್ದು, ಪ್ರೀಪೇಡ್‌ ಬಳಕೆದಾರರಿಗೆ ಭರ್ಜರಿ ಪ್ಲ್ಯಾನಗಳನ್ನು ಪರಿಚಯಿಸಿದೆ. ಆದರೆ ಕಂಪನಿಯು ಇದೀಗ ಹೊಸ ಬಿಸಿನೆಸ್ ಲೆಕ್ಕಾಚಾರ ಮಾಡಿದ್ದು, ಏರ್‌ಟೆಲ್‌ 4G ಹಾಟ್‌ಸ್ಪಾಟ್ ಡಿವೈಸ್‌ಗಳತ್ತ ಹೆಚ್ಚಿನ ಒಲವು ನೀಡಿದೆ. ಹಾಟ್‌ಸ್ಪಾಟ್ ಡಿವೈಸ್‌ಗಳನ್ನು ಬಳಸುವವರ ಸಂಖ್ಯೆಯೆನು ಕಡಿಮೆ ಇಲ್ಲ ಅವರಿಗಾಗಿ ಬೆಸ್ಟ್ ರೀಚಾರ್ಜ್‌ ಪ್ಲ್ಯಾನ್ ಬಿಡುಗಡೆ ಮಾಡಿದೆ.

ಏರ್‌ಟೆಲ್ 399ರೂ. ಹಾಟ್‌ಸ್ಪಾಟ್ ಪ್ಲ್ಯಾನ್‌ ; 50GB ಡೇಟಾ ಖಚಿತ, ಆನಂತರ ಉಚಿತ!

ಹೌದು, ಏರ್‌ಟೆಲ್ ಕಂಪನಿಯು ತನ್ನ 4G ಹಾಟ್‌ಸ್ಪಾಟ್‌ (ಡೊಂಗಲ್)ಡಿವೈಸ್‌ಗೆ ಹೊಸ ರೀಚಾರ್ಜ್‌ ಪ್ಲ್ಯಾನ್‌ ಅನ್ನು ಪರಿಚಯಿಸಿದ್ದು, ಗ್ರಾಹಕರು 399ರೂ.ಗಳ ರೀಚಾರ್ಜ್‌ ಮಾಡಿ ಹೊಸ ಪ್ಲ್ಯಾನಿನ ಸೇವೆಯ ಪಡೆಯಬಹುದಾಗಿದೆ. ಒಂದು ತಿಂಗಳ ವ್ಯಾಲಿಡಿಟಿಯ ಕಾಲಾವಧಿಯನ್ನು ಒಳಗೊಂಡಿದ್ದು, ಹೆಚ್ಚಿನ ಡೇಟಾ ಸಹ ದೊರೆಯಲಿದೆ. ಹಾಗಾದರೇ ಏರ್‌ಟೆಲ್ 4G ಹಾಟ್‌ಸ್ಪಾಟ್‌ ಡಿವೈಸ್‌ ಪ್ಲ್ಯಾನಿನ ವಿಶೇಷತೆಗಳೆನು ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

50GB ಡೇಟಾ

50GB ಡೇಟಾ

ಏರ್‌ಟೆಲ್‌ ಡೊಂಗಲ್ ಬಳಸುವ ಗ್ರಾಹಕರಿಗೆ ಈ ಆಫರ್ ಭಾರಿ ಡೇಟಾ ಒದಗಿಸಲಿದ್ದು, ಪ್ರತಿ ತಿಂಗಳು 50GB ಡೇಟಾ ಲಭ್ಯವಾಗಲಿದೆ. ಸದ್ಯ ಏರ್‌ಟೆಲ್ 4G ಹಾಟ್‌ಸ್ಪಾಟ್‌ ಡಿವೈಸ್‌ ಬಳಸುತ್ತಿರುವವರು ಸೇರಿದಂತೆ ಹೊಸದಾಗಿ ಡಿವೈಸ್‌ ಖರೀದಿಸಿ ಕನೆಕ್ಷನ್ ಪಡೆದುಕೊಂಡ ಗ್ರಾಹಕರು ಸಹ ಈ ಪ್ಲ್ಯಾನಿನ ಪ್ರಯೋಜನ ಪಡೆಯಬಹುದಾಗಿದೆ.

ಡೇಟಾ ಕ್ಯಾರಿ ಓವರ

ಡೇಟಾ ಕ್ಯಾರಿ ಓವರ

ಪ್ರತಿ ತಿಂಗಳು 50GB ಡೇಟಾ ದೊರೆಯಲಿದ್ದು, ಬಳಕೆದಾರರು ಆ ಅವಧಿಯಲ್ಲಿ ಪೂರ್ಣ 50GB ಡೇಟಾ ಬಳಕೆ ಮಾಡಿಕೊಳ್ಳದಿದ್ದರೇ ಉಳಿದ ಡೇಟಾ ಮುಂದಿನ ತಿಂಗಳಿಗೆ ಕ್ಯಾರಿ ಓವರ ಆಗುತ್ತದೆ. ಒಂದು ವೇಳೆ ಬಳಕೆದಾರ ವ್ಯಾಲಿಡಿಟಿ ಅವಧಿಯೊಳಗೆ 50GB ಡೇಟಾ ಪೂರ್ಣ ಉಪಯೋಗಿಸಿದರೆ. 80 Kbps ವೇಗದಲ್ಲಿ ಇಂಟರ್ನೆಟ್ ಸೇವೆಯು ಮುಂದುವರಿಯಲಿದೆ.

ಇತರೆ ಡಿವೈಸ್‌ಗಳಿಗೆ ಕನೆಕ್ಟ್

ಇತರೆ ಡಿವೈಸ್‌ಗಳಿಗೆ ಕನೆಕ್ಟ್

ಏರ್‌ಟೆಲ್‌ 4G ಹಾಟ್‌ಸ್ಪಾಟ್‌ ಡಿವೈಸ್‌ನಿಂದ ಸ್ಮಾರ್ಟ್‌ಪೋನ್‌ ಒಳಗೊಂಡಂತೆ ಇತರೆ ಸುಮಾರು ಹತ್ತು ಡಿವೈಸ್‌ಗಳಿಗೆ ಏಕಕಾಲದಲ್ಲಿ ವೈ ಪೈ ಕನೆಕ್ಷನ ನೀಡಬಹುದಾಗಿದೆ. ಏರ್‌ಟೆಲ್‌ ಹಾಟ್‌ಸ್ಪಾಟ್‌ ಡಿವೈಸ್‌ನಿಂದ ಕಂಪನಿಯ ಸಿಮ್‌ ಹೊರೆ ತೆಗೆದರೆ ಸೇವೆಗಳು ಸ್ಥಗಿತವಾಗುವ ಸಾಧ್ಯತೆಗಳಿವೆ ಎನ್ನಲಾಗಿದೆ.

ಡಿವೈಸ್‌ ಬೆಲೆ

ಡಿವೈಸ್‌ ಬೆಲೆ

ಏರ್‌ಟೆಲ್ 4G ಹಾಟ್‌ಸ್ಪಾಟ್‌ ಡಿವೈಸ್‌ ಬೆಲೆಯು 999ರೂ.ಗಳು ಆಗಿದ್ದು, ಹೊಸ ಕನೆಕ್ಷನ ಪಡೆಯುವ ಗ್ರಾಹಕರು ಕಂಪನಿಯ ಅಧಿಕೃತ ವೆಬ್‌ಸೈಟ್‌ನಿಂದ ಖರೀದಿಸಬಹುದಾಗಿದೆ. ಈ ಡಿವೈಸ್ ಸುಮಾರು 6 ಗಂಟೆಗಳ ಬ್ಯಾಟರಿ ಬ್ಯಾಕ್‌ಅಪ್‌ ಒದಗಿಸುವ ಸಾಮರ್ಥ್ಯವನ್ನು ಪಡೆದಿದೆ.

Best Mobiles in India

English summary
Airtel 4G Hotspot now offers 50 GB data at ₹399 monthly rental.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X