ಓಟಿಟಿ ಗಾಗಿ ಪ್ರತ್ಯೇಕ ರೀಚಾರ್ಜ್‌ ಬೇಕಿಲ್ಲ; ಏರ್‌ಟೆಲ್, ಜಿಯೋದ ಹೊಸ ಪ್ಲ್ಯಾನ್‌ ಪರಿಶೀಲಿಸಿ!

|

ಏರ್‌ಟೆಲ್‌ ಹಾಗೂ ಜಿಯೋ ಟೆಲಿಕಾಂ ವಲಯದಲ್ಲಿ ಗ್ರಾಹಕರನ್ನು ಹೆಚ್ಚಾಗಿ ಆಕರ್ಷಿಸಲು ಆಫರ್‌ ಮೇಲೆ ಆಫರ್‌ ಘೋಷಣೆ ಮಾಡಿಕೊಂಡು ಬರುತ್ತಿವೆ. ಆದರೆ, ಸದ್ಯಕ್ಕೆ ಪರಿಚಯಿಸಲಾಗಿರುವ ಆಫರ್‌ನಿಂದ ಹಲವಾರು ಗ್ರಾಹಕರಿಗೆ ಖುಷಿಯಾಗಲಿದೆ. ಸಾಮಾನ್ಯವಾಗಿ ಈ ಟೆಲಿಕಾಂ ಆಪರೇಟರ್‌ಗಳು ದೈನಂದಿನ ಡೇಟಾ, ಕರೆ ಮತ್ತು ಎಸ್‌ಎಮ್‌ಎಸ್‌ ಪ್ರಯೋಜನಗಳನ್ನು ಒದಗಿಸಲು ವಿವಿಧ ಪ್ರಿಪೇಯ್ಡ್ ಅಥವಾ ಪೋಸ್ಟ್‌ಪೇಯ್ಡ್ ಪ್ಲ್ಯಾನ್‌ ಅನ್ನು ನೀಡುತ್ತಿದ್ದವು. ಆದರೆ, ಈಗ ಹೊಸ ಪ್ಲ್ಯಾನ್‌ ಮೂಲಕ ಪೈಪೋಟಿಗಿಳಿದಿವೆ.

ಜಿಯೋ

ಹೌದು, ಏರ್‌ಟೆಲ್‌ ಹಾಗೂ ಜಿಯೋ ಅಮೆಜಾನ್‌ ಪ್ರೈಮ್‌, ನೆಟ್‌ಫ್ಲಿಕ್ಸ್‌ ಸೇರಿದಂತೆ ಇತರೆ ಓಟಿಟಿ ಪ್ಲಾಟ್‌ಫಾರ್ಮ್‌ಗಳಿಗೆ ಉಚಿತ ಪ್ರವೇಶ ನೀಡುವ ಪ್ಲ್ಯಾನ್‌ ಘೋಷಣೆ ಮಾಡಿವೆ. ಅದರಲ್ಲಿ ರಿಲಯನ್ಸ್ ಜಿಯೋ ಆಯ್ದ ಫೈಬರ್ ಯೋಜನೆಗಳಲ್ಲಿ 150Mbps ಗಿಂತ ಹೆಚ್ಚಿನ ವೇಗ ಇಂಟರ್ನೆಟ್‌ ಮೂಲಕ ಓಟಿಟಿ ಸೇವೆ ಪ್ರಯೋಜನ ನೀಡಲಿದ್ದು, ಏರ್‌ಟೆಲ್‌ ಸಹ ಆಯ್ದ ಫೈಬರ್ ಯೋಜನೆಗಳಲ್ಲಿ ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್ ಮತ್ತು ಇತರ ಓಟಿಟಿ ಪ್ರಯೋಜನಗಳನ್ನು ನೀಡುತ್ತಿದೆ. ಹಾಗಿದ್ರೆ, ಎಷ್ಟು ಹಣಕ್ಕೆ ರೀಚಾರ್ಜ್‌ ಮಾಡಿಸಿದರೆ ಏನೆಲ್ಲಾ ಸೌಲಭ್ಯ ಸಿಗಲಿದೆ ಎಂಬ ನಿಮ್ಮ ಕಾತುರಕ್ಕೆ ಈ ಲೇಖನ ಓದಿ.

ಜಿಯೋ ಫೈಬರ್‌ 999 ರೂ. ಗಳ ಪ್ಲ್ಯಾನ್‌

ಜಿಯೋ ಫೈಬರ್‌ 999 ರೂ. ಗಳ ಪ್ಲ್ಯಾನ್‌

ಜಿಯೋ ಫೈಬರ್‌ 999 ರೂ. ಗಳ ಪ್ಲ್ಯಾನ್‌ನಲ್ಲಿ ಬಳಕೆದಾರರು 30 ದಿನಗಳವರೆಗೆ ಅನಿಯಮಿತ ಡೇಟಾ ಬಳಕೆಯೊಂದಿಗೆ 150Mbps ಇಂಟರ್ನೆಟ್ ಡೇಟಾ ವೇಗವನ್ನು ಪಡೆಯಬಹುದಾಗಿದೆ. ಇದರ ಜೊತೆಗೆ ಈ ಪ್ಲ್ಯಾನ್‌ನಲ್ಲಿ ಉಚಿತ ವಾಯ್ಸ್‌ ಕಾಲ್ ಮತ್ತು ಅಮೆಜಾನ್ ಪ್ರೈಮ್ ವಿಡಿಯೋ, ಡಿಸ್ನಿ+ ಹಾಟ್‌ಸ್ಟಾರ್, ವೂಟ್ ಸೆಲೆಕ್ಟ್, ಸೋನಿ ಲಿವ್, ಝೀ 5 ಮತ್ತು 10 ಕ್ಕೂ ಹೆಚ್ಚಿನ ಓಟಿಟಿ ಚಾನೆಲ್‌ಗಳು ಸೇರಿದಂತೆ ಓಟಿಟಿ ಆಪ್‌ಗಳಿಗೆ ಉಚಿತ ಚಂದಾದಾರಿಕೆ ಪಡೆದುಕೊಳ್ಳಬಹುದಾಗಿದೆ.

ಜಿಯೋ ಫೈಬರ್‌ 1,499  ರೂ. ಪ್ಲ್ಯಾನ್‌

ಜಿಯೋ ಫೈಬರ್‌ 1,499 ರೂ. ಪ್ಲ್ಯಾನ್‌

ಜಿಯೋ ಫೈಬರ್‌ರೂ 1,499 ರೂ. ಪ್ಲ್ಯಾನ್‌ ನಲ್ಲಿ ನೀವು 300 Mbps ವೇಗದಲ್ಲಿ ಅನಿಯಮಿತ ಇಂಟರ್ನೆಟ್ ಸೇವೆ ಪಡೆಯಬಹುದಾಗಿದ್ದು, ಈ ಪ್ಲ್ಯಾನ್‌ 30 ದಿನಗಳ ಮಾನ್ಯತೆ ಪಡೆದುಕೊಂಡಿದೆ. ಇದರೊಂದಿಗೆ ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್ ವಿಡಿಯೋ, ಡಿಸ್ನಿ+ ಹಾಟ್‌ಸ್ಟಾರ್ ಸೇರಿದಂತೆ ಇತರೆ 14 ಕ್ಕೂ ಹೆಚ್ಚಿನ ಓಟಿಟಿ ಚಾನಲ್‌ಗಳಿಗೆ ಉಚಿತ ಚಂದಾದಾರಿಕೆ ಪಡೆದುಕೊಳ್ಳಬಹುದು.

ಜಿಯೋ ಫೈಬರ್‌ 2,499 ರೂ. ಗಳ ಪ್ಲ್ಯಾನ್

ಜಿಯೋ ಫೈಬರ್‌ 2,499 ರೂ. ಗಳ ಪ್ಲ್ಯಾನ್

ಜಿಯೋ ಫೈಬರ್‌ 2,499 ರೂ. ಗಳ ಪ್ಲ್ಯಾನ್ ನಲ್ಲಿ 500Mbps ವೇಗದ ಇಂಟರ್ನೆಟ್ ಅನ್ನು ಅನಿಯಮಿತ ಡೇಟಾ ಆಯ್ಕೆ ಇದ್ದು, ಈ ಪ್ಲ್ಯಾನ್ 30 ದಿನಗಳವರೆಗೆ ಮಾನ್ಯವಾಗಿರುತ್ತದೆ ಹಾಗೆಯೇ ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್, ಡಿಸ್ನಿ+ ಹಾಟ್‌ಸ್ಟಾರ್ ಸೇರಿದಂತೆ 14 ಕ್ಕೂ ಹೆಚ್ಚಿನ ಓಟಿಟಿ ಪ್ಲಾಟ್‌ಫಾರ್ಮ್‌ಗಳಿಗೆ ಉಚಿತ ಪ್ರವೇಶ ಪಡೆದುಕೊಳ್ಳಬಹುದಾಗಿದೆ.

ಜಿಯೋ ಫೈಬರ್‌ 3,999 ರೂ. ಗಳ ಪ್ಲ್ಯಾನ್

ಜಿಯೋ ಫೈಬರ್‌ 3,999 ರೂ. ಗಳ ಪ್ಲ್ಯಾನ್

ಜಿಯೋ ಫೈಬರ್‌ 3,999 ರೂ. ಗಳ ಪ್ಲ್ಯಾನ್ ನಲ್ಲಿ ತ 1Gbps ವೇಗದಲ್ಲಿ ಅನಿಯಮಿತ ಡೇಟಾ ಆಯ್ಕೆ ಸಿಗಲಿದ್ದು, 30 ದಿನಗಳವರೆಗೆ ಮಾನ್ಯವಾಗಿರುತ್ತದೆ. ಜೊತೆಗೆ ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್ ಸೇರಿದಂತೆ 15 ಕ್ಕೂ ಹೆಚ್ಚಿನ ಓಟಿಟಿ ಚಾನಲ್‌ಗಳಿಗೆ ಉಚಿತ ಚಂದಾದಾರಿಕೆ ಸಿಗಲಿದೆ.

ಜಿಯೋ ಫೈಬರ್‌ 8,499 ರೂ. ಗಳ ಪ್ಲ್ಯಾನ್‌

ಜಿಯೋ ಫೈಬರ್‌ 8,499 ರೂ. ಗಳ ಪ್ಲ್ಯಾನ್‌

ಜಿಯೋ ಫೈಬರ್‌ 8, 499 ರೂ. ಗಳ ಪ್ಲ್ಯಾನ್‌ ನಲ್ಲಿ ಬಳಕೆದಾರರು 1Gbps ವೇಗದಲ್ಲಿ 6600GB ಡೇಟಾವನ್ನು ಪಡೆಯಲಿದ್ದು 30 ದಿನಗಳವರೆಗೆ ಈ ಪ್ಯಾಕ್‌ ಮಾನ್ಯವಾಗಿರುತ್ತದೆ. ಹಾಗೆಯೇ ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್ ವಿಡಿಯೋ ಜೊತೆಗೆ 15 ಕ್ಕೂ ಹೆಚ್ಚಿನ ಓಟಿಟಿ ಪ್ಲಾಟ್‌ಫಾರ್ಮ್‌ಗಳಿಗೆ ಉಚಿತ ಪ್ರವೇಶ ಪಡೆಯಬಹುದು.

ಏರ್‌ಟೆಲ್ ಬ್ರಾಡ್‌ಬ್ಯಾಂಡ್ ಪ್ರಿಪೇಯ್ಡ್ ಪ್ಲ್ಯಾನ್‌ಗಳು

ಏರ್‌ಟೆಲ್ ಬ್ರಾಡ್‌ಬ್ಯಾಂಡ್ ಪ್ರಿಪೇಯ್ಡ್ ಪ್ಲ್ಯಾನ್‌ಗಳು

ಏರ್‌ಟೆಲ್ 999 ರೂ. ಗಳ ಪ್ಲ್ಯಾನ್

ಏರ್‌ಟೆಲ್ 999 ರೂ. ಗಳ ಪ್ಲ್ಯಾನ್‌ನಲ್ಲಿ 200Mbps ವೇಗದ ಪ್ರಯೋಜನ ಲಭ್ಯವಾಗಲಿದ್ದು, ಡಿಸ್ನಿ+ ಹಾಟ್‌ಸ್ಟಾರ್ ಮತ್ತು ಅಮೆಜಾನ್ ಪ್ರೈಮ್‌ ಪ್ಲಾಟ್‌ಫಾರ್ಮ್‌ ಬಳಕೆ ಮಾಡಿಕೊಳ್ಳಬಹುದು. ಹಾಗೆಯೇ ಎಕ್ಸ್‌ಟ್ರೀಮ್ ಪ್ರೀಮಿಯಂ, ವಿಐಪಿ ಸೇವೆ, ಅಪೊಲೊ 24|7 ಗೆ ಚಂದಾದಾರಿಕೆ ಸಹ ಈ ಪ್ಲ್ಯಾನ್‌ನಿಂದ ಸಿಗಲಿದೆ. ಇದಿಷ್ಟೇ ಅಲ್ಲದೆ ಫಾಸ್ಟ್‌ಟ್ಯಾಗ್ ಮತ್ತು ವಿಂಕ್ ಪ್ರೀಮಿಯಂನಲ್ಲಿ ಕ್ಯಾಶ್‌ಬ್ಯಾಕ್‌ನಂತಹ ಹೆಚ್ಚುವರಿ ಪ್ರಯೋಜನಗಳನ್ನು ಈ ಪ್ಯಾಕ್‌ ಹೊಂದಿದೆ.

ಏರ್‌ಟೆಲ್  1,498 ರೂ. ಗಳ ಪ್ಲ್ಯಾನ್

ಏರ್‌ಟೆಲ್ 1,498 ರೂ. ಗಳ ಪ್ಲ್ಯಾನ್

ಏರ್‌ಟೆಲ್ 1,498 ರೂ. ಗಳ ಪ್ಲ್ಯಾನ್ ನಲ್ಲಿ 300Mbps ವೇಗದ ಇಂಟರ್ನೆಟ್ ಸೇವೆ ಲಭ್ಯವಾಗಲಿದ್ದು, ನೆಟ್‌ಫ್ಲಿಕ್ಸ್ ಬೇಸಿಕ್, ಡಿಸ್ನಿ+ ಹಾಟ್‌ಸ್ಟಾರ್, ಅಮೆಜಾನ್ ಪ್ರೈಮ್, ಎಕ್ಸ್‌ಸ್ಟ್ರೀಮ್ ಪ್ರೀಮಿಯಂ, ವಿಐಪಿ ಸೇವೆ, ಅಪೊಲೊ 24|7 ಗೆ ಚಂದಾದಾರಿಕೆ ಸಿಗಲಿದೆ.

ಏರ್‌ಟೆಲ್ 3,999 ರೂ. ಗಳ ಪ್ಲ್ಯಾನ್

ಏರ್‌ಟೆಲ್ 3,999 ರೂ. ಗಳ ಪ್ಲ್ಯಾನ್

ಏರ್‌ಟೆಲ್ 3,999 ರೂ. ಗಳ ಪ್ಲ್ಯಾನ್ ಮೂಲಕ ನೀವು 1Gbps ವೇಗದಲ್ಲಿ ಇಂಟರ್ನೆಟ್‌ ಸೇವೆ ಪಡೆದುಕೊಳ್ಳಬಹುದು. ಹಾಗೆಯೇ ಅನಿಯಮಿತ ಕರೆ ಮತ್ತು ಏರ್‌ಟೆಲ್ ಥ್ಯಾಂಕ್ಸ್ ಪ್ರಯೋಜನಗಳನ್ನು ಇದು ನೀಡುತ್ತದೆ. ಇದರೊಂದಿಗೆ ನೆಟ್‌ಫ್ಲಿಕ್ಸ್ ಪ್ರೀಮಿಯಂ, ಡಿಸ್ನಿ+ ಹಾಟ್‌ಸ್ಟಾರ್, ಅಮೆಜಾನ್ ಪ್ರೈಮ್, ಎಕ್ಸ್‌ಟ್ರೀಮ್ ಪ್ರೀಮಿಯಂ, ವಿಐಪಿ ಸೇವೆ, ಅಪೊಲೊ 24|7 ಗೆ ಚಂದಾದಾರಿಕೆ ಲಭ್ಯವಾಗಲಿದೆ.

Best Mobiles in India

English summary
Airtel and Jio offering Amazon Prime, Netflix, other OTT benefits.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X