ಅನಿಯಮಿತ ಕರೆ ಮತ್ತು ಅಧಿಕ ಡಾಟಾಗೆ ಇದುವೇ ಬೆಸ್ಟ್‌ ಪ್ಲ್ಯಾನ್‌!

|

ದೇಶದ ಟೆಲಿಕಾಂ ವಲಯದಲ್ಲಿ ಸದ್ಯ ಬೆಲೆ ಏರಿಕೆಯದ್ದೇ ಚರ್ಚೆ. ಪ್ರಮುಖ ಖಾಸಗಿ ಟೆಲಿಕಾಂಗಳೆಲ್ಲವು ಪ್ಲ್ಯಾನ್‌ಗಳ ದರದ ಹೆಚ್ಚಳ ಮಾಡಿರುವುದು ಗ್ರಾಹಕರನ್ನು ಕಂಗೆಡಿಸಿರುವುದು ಸುಳ್ಳಲ್ಲ. ಏರ್‌ಟೆಲ್, ವೊಡಫೋನ್ ಟೆಲಿಕಾಂಗಳ ಹೊಸ ಪ್ಲ್ಯಾನ್‌ಗಳು ಬಹುತೇಕ ಒಂದಕ್ಕೊಂದು ಸಾಮ್ಯತೆ ಹೊಂದಿದ್ದು, ಅಧಿಕ ಡೇಟಾ ಜೊತೆಗೆ ಸಂಪೂರ್ಣ ಅನಿಯಮಿತ ಉಚಿತ ಕರೆಗಳ ಸೌಲಭ್ಯವನ್ನು ಘೋಷಿಸಿವೆ. ಈ ಪ್ಲ್ಯಾನ್‌ಗಳು ಜಿಯೋಗೆ ಭಾರಿ ಹೊಡೆತ ನೀಡುವ ಸೂಚನೆಗಳನ್ನು ಹೊರಹಾಕಿವೆ.

ಏರ್‌ಟೆಲ್, ವೊಡಾಫೋನ್

ಹೌದು, ಸದ್ಯ ಜಿಯೋ ಸೇರಿದಂತೆ ಏರ್‌ಟೆಲ್, ವೊಡಾಫೋನ್ ಸಂಸ್ಥೆಗಳು ಪ್ರೀಪೇಡ್ ಪ್ಲ್ಯಾನ್‌ಗಳ ದರ ಹೆಚ್ಚಳ ಮಾಡಿವೆ. ಜಿಯೋದ ಹೊಸ ಆಲ್‌-ಇನ್-ಒನ್ ಪ್ಲ್ಯಾನ್‌ಗಳು ಇತರೆ ನೆಟವರ್ಕ ಕರೆಗಳಿಗೆ ಉಚಿತ ನಿಮಿಷಗಳ ಮಿತಿ ಹೊಂದಿವೆ. ಆದ್ರೆ ಏರ್‌ಟೆಲ್‌ ಮತ್ತು ವೊಡಾಫೋನ್ ಸಂಸ್ಥೆಗಳು ದೇಶದ ಯಾವುದೇ ನೆಟವರ್ಕಗೆ ಕರೆ ಮಾಡಿದರೂ ಅನಿಯಮಿತ ಕರೆ ಸೌಲಭ್ಯ ನೀಡುವುದಾಗಿ ಹೇಳಿವೆ.

56 ದಿನಗಳ ವ್ಯಾಲಿಡಿಟಿ

ಮೂರು ಟೆಲಿಕಾಂಗಳು 56 ದಿನಗಳ ವ್ಯಾಲಿಡಿಟಿ ಪ್ಲ್ಯಾನ್‌ಗಳನ್ನು ಪರಿಚಯಿಸಿವೆ. ಆದರೂ ಅವುಗಳು ಭಿನ್ನ ಪ್ರಯೋಜನಗಳನ್ನು ಹೊಂದಿವೆ. ಹೆಚ್ಚು ಕರೆ ಬಯಸದ ಗ್ರಾಹಕರಿಗೆ ಜಿಯೋ ಆಲ್‌-ಇನ್-ಒನ್ ಪ್ಲ್ಯಾನ್‌ಗಳು ಉತ್ತಮ ಅನಿಸುತ್ತವೆ. ಇನ್ನು ಡೇಟಾ ಮತ್ತು ಕರೆ ಪ್ರಯೋಜನಗಳನ್ನು ಬಯಸುವವರಿಗೆ ಏರ್‌ಟೆಲ್ ಮತ್ತು ವೊಡಾಫೋನ್ ಸಂಸ್ಥೆಗಳ ಮೀಡ್‌ರೇಂಜ್ ಬೆಲೆಯ ಪ್ಲ್ಯಾನ್‌ಗಳು ಆಕರ್ಷಕ ಎಂದೆನಿಸುತ್ತವೆ. ಹಾಗಾದರೇ ಜಿಯೋ, ಏರ್‌ಟೆಲ್ ಮತ್ತು ವೊಡಾಫೋನ್ ಸಂಸ್ಥೆಗಳ 56 ದಿನಗಳ ವ್ಯಾಲಿಡಿಟಿಯ ಪ್ಲ್ಯಾನ್‌ಗಳಲ್ಲಿ ಯಾವುದು ಆಕರ್ಷಕ ಎನ್ನುವುದುನ್ನು ಮುಂದೆ ತಿಳಿಯೋಣ ಬನ್ನಿರಿ.

ಜಿಯೋ -56 ದಿನಗಳ ವ್ಯಾಲಿಡಿಟಿ ಪ್ಲ್ಯಾನ್

ಜಿಯೋ -56 ದಿನಗಳ ವ್ಯಾಲಿಡಿಟಿ ಪ್ಲ್ಯಾನ್

ಜಿಯೋ 399ರೂ ಮತ್ತು 444ರೂ.ಗಳ ಬೆಲೆಯ ಎರಡು ಹೊಸ ಪ್ಲ್ಯಾನ್‌ಗಳನ್ನು ಪರಿಚಯಿಸಿದ್ದು, ಈ ಎರಡು ಪ್ಲ್ಯಾನ್‌ಗಳು ಒಟ್ಟು 56 ದಿನಗಳ ವ್ಯಾಲಿಡಿಟಿ ಅವಧಿಯನ್ನು ಒಳಗೊಂಡಿವೆ. ಹಾಗೆಯೇ ಈ ಎರಡು ಪ್ಲ್ಯಾನ್‌ಗಳು ಜಿಯೋ ಟು ಜಿಯೋ ಕರೆ ಉಚಿತ ಹಾಗೂ ಇತರೆ ಟೆಲಿಕಾಂಗಳಿಗೆ 2000 ನಿಮಿಷಗಳ ಉಚಿತ ಕರೆ ಮಿತಿಯ ಸೌಲಭ್ಯ ಹೊಂದಿವೆ. ಇನ್ನು 399ರೂ ಪ್ಲ್ಯಾನ್‌ ಪ್ರತಿದಿನ 1.5GB ಮತ್ತು 444ರೂ.ಪ್ಲ್ಯಾನ್ ಪ್ರತಿದಿನ 2GB ಡೇಟಾ ಪ್ರಯೋಜನ ಪಡೆದಿವೆ.

ಏರ್‌ಟೆಲ್-56 ದಿನಗಳ ವ್ಯಾಲಿಡಿಟಿ ಪ್ಲ್ಯಾನ್

ಏರ್‌ಟೆಲ್-56 ದಿನಗಳ ವ್ಯಾಲಿಡಿಟಿ ಪ್ಲ್ಯಾನ್

ಏರ್‌ಟೆಲ್ ಸಹ 399ರೂ ಮತ್ತು 449ರೂ.ಬೆಲೆಯ ಎರಡು ಪ್ರೀಪೇಡ್‌ ಪ್ಲ್ಯಾನ್‌ಗಳನ್ನು ಬಿಡುಗಡೆ ಮಾಡಿದ್ದು, ಇವುಗಳು 56 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿವೆ. ಈ ವ್ಯಾಲಿಡಿಟಿ ವಾಯ್ದೆಯಲ್ಲಿ ಸಂಪೂರ್ಣ ಅನಿಯಮಿತ ಉಚಿತ ಕರೆಗಳ ಪ್ರಯೋಜನವನ್ನು ಒಳಗೊಂಡಿವೆ. ಇನ್ನು 399ರೂ. ಪ್ಲ್ಯಾನಿನಲ್ಲಿ ಪ್ರತಿದಿನ 1.5GB ಡೇಟಾ ಲಭ್ಯವಾಗಲಿದೆ. ಹಾಗೂ 449ರೂ. ಪ್ಲ್ಯಾನಿನಲ್ಲಿ 2GB ಡೇಟಾ ಪ್ರಯೋಜನ ಸಿಗಲಿದೆ.

ವೊಡಾಫೋನ್-56 ದಿನಗಳ ವ್ಯಾಲಿಡಿಟಿ ಪ್ಲ್ಯಾನ್

ವೊಡಾಫೋನ್-56 ದಿನಗಳ ವ್ಯಾಲಿಡಿಟಿ ಪ್ಲ್ಯಾನ್

ವೊಡಾಫೋನ್ 56 ದಿನಗಳ ವ್ಯಾಲಿಡಿಟಿ ಅವಧಿಯ ಎರಡು ಪ್ಲ್ಯಾನ್‌ಗಳನ್ನು ಪರಿಚಯಿಸಿದ್ದು, ಅವು ಕ್ರಮವಾಗಿ 399ರೂ ಮತ್ತು 449ರೂ.ಬೆಲೆಯನ್ನು ಹೊಂದಿವೆ. ಈ ಎರಡು ಪ್ಲ್ಯಾನ್‌ಗಳು ಒಟ್ಟು ಪೂರ್ಣ ವ್ಯಾಲಿಡಿಟಿ ವಾಯ್ದೆಗೆ ಸಂಪೂರ್ಣ ಅನಿಯಮಿತ ಉಚಿತ ಕರೆಗಳ ಪ್ರಯೋಜನ ಪಡೆದಿವೆ. ಇನ್ನು 499ರೂ ಪ್ಲ್ಯಾನಿನಲ್ಲಿ ಪ್ರತಿದಿನ 2GB ಡೇಟಾ ಲಭ್ಯವಾಗಲಿದೆ. ಹಾಗೂ 399ರೂ. ಪ್ಲ್ಯಾನಿನಲ್ಲಿ 1.5GB ಡೇಟಾ ಪ್ರಯೋಜನ ಸಿಗಲಿದೆ.

56 ದಿನ ವ್ಯಾಲಿಡಿಟಿಯಲ್ಲಿ ಯಾವ ಪ್ಲ್ಯಾನ್ ಬೆಸ್ಟ್

56 ದಿನ ವ್ಯಾಲಿಡಿಟಿಯಲ್ಲಿ ಯಾವ ಪ್ಲ್ಯಾನ್ ಬೆಸ್ಟ್

ಜಿಯೋ, ಏರ್‌ಟೆಲ್ ಮತ್ತು ವೊಡಾಫೋನ್ ಮೂರು ಸಂಸ್ಥೆಗಳು 56 ದಿನ ವ್ಯಾಲಿಡಿಟಿಯ ಎರಡು ಪ್ರೀಪೇಡ್‌ ಪ್ಲ್ಯಾನ್‌ಗಳನ್ನು ಪರಿಚಯಿಸಿವೆ. ಇತರೆ ನೆಟವರ್ಕ ಕರೆಗಳಿಗೆ ಉಚಿತ ನಿಮಿಷಗಳ ಮಿತಿ ಹೇರಿರುವುದನ್ನು ಹೊರತುಪಡಿಸಿದರೇ ಜಿಯೋದ ಆಲ್‌-ಇನ್‌-ಪ್ಲ್ಯಾನ್‌ಗಳು ಉತ್ತಮ ಅನಿಸುತ್ತವೆ. ಆದ್ರೆ ಇತರೆ ಕರೆಗಳಿಗೆ ಅನಿಯಮಿತ ಕರೆ ಪ್ರಯೋಜನ ಬಯಸೋದಾದ್ರೆ ಏರ್‌ಟೆಲ್‌ ಅಥವಾ ವೊಡಾಫೋನ್ ಎರಡು ಪ್ಲ್ಯಾನ್‌ಗಳು ಉತ್ತಮ ಅನಿಸುತ್ತವೆ.

Most Read Articles
Best Mobiles in India

English summary
The telecom operators like Reliance Jio, Bharti Airtel and Vodafone Idea have all introduced two new prepaid plans. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X