ಕಡಿಮೆ ಬೆಲೆಯಲ್ಲಿ ಹೊಸ ರೀಚಾರ್ಜ್‌ ಪ್ಲ್ಯಾನ್‌ ಲಾಂಚ್‌ ಮಾಡಿದ ಏರ್‌ಟೆಲ್!

|

ಟೆಲಿಕಾಂ ಸೇವೆಗಳಲ್ಲಿ ಪ್ರಮುಖವಾಗಿರುವ ಏರ್‌ಟೆಲ್‌ ವಿವಿಧ ಸೌಲಭ್ಯದ ಜೊತೆಗೆ ರೀಚಾರ್ಜ್‌ ಪ್ಲ್ಯಾನ್‌ಗಳನ್ನು ಘೋಷಣೆ ಮಾಡಿಕೊಂಡು ಬರುತ್ತಿದೆ. ಅದರಲ್ಲೂ ಈಗ ಹೊಸದಾಗಿ ಘೋಷಣೆ ಮಾಡಲಾಗಿರುವ ಏರ್‌ಟೆಲ್‌ ಆಕ್ಸಿಸ್‌ ಬ್ಯಾಂಕ್ ಕ್ರೆಡಿಟ್‌ ಕಾರ್ಡ್‌ ಅಂತೂ ಹಲವು ಬಳಕೆದಾರರಿಗೆ ಹಲವಾರು ಅನುಕೂಲ ಮಾಡಿಕೊಡಲಿದೆ. ಇದರ ನಡುವೆ ಈಗ ಹೊಸ ರೀಚಾರ್ಜ್‌ ಪ್ಲ್ಯಾನ್‌ ಒಂದನ್ನು ಘೋಷಣೆ ಮಾಡಲಾಗಿದೆ.

ಕಡಿಮೆ ಬೆಲೆಯಲ್ಲಿ ಹೊಸ ರೀಚಾರ್ಜ್‌ ಪ್ಲ್ಯಾನ್‌ ಲಾಂಚ್‌ ಮಾಡಿದ ಏರ್‌ಟೆಲ್!

ಹೌದು, ಜಿಯೋಗೆ ನಿರಂತರವಾಗಿ ಪೈಪೋಟಿ ನೀಡುತ್ತಾ ಬರುತ್ತಿರುವ ಏರ್‌ಟೆಲ್ ಉತ್ತಮ ಪ್ಲ್ಯಾನ್‌ಗಳು ಮತ್ತು ಕೊಡುಗೆಗಳನ್ನು ನೀಡಲು ಮುಂದಾಗಿದೆ. ಅದರಲ್ಲೂ ಏರ್ ಟೆಲ್ ಇತರೆ ಕಂಪೆನಿಗಳಿಗಿಂತ ಹೆಚ್ಚಿನ ಲಾಭವನ್ನು ನೀಡಲಿದೆ ಎನ್ನಬಹುದಾಗಿದೆ. ಹಾಗಿದ್ರೆ ಈ ಹೊಸ ಪ್ರಿಪೇಯ್ಡ್‌ ಡೇಟಾ ಪ್ಲ್ನಾನ್‌ ಯಾವುವು?, ಏನೆಲ್ಲಾ ಸೌಲಭ್ಯ ಲಭ್ಯ ಎಂಬಿತ್ಯಾದಿ ಮಾಹಿತಿಯನ್ನು ಈ ಲೇಖನದಲ್ಲಿ ವಿವರಿಸಿದ್ದೇವೆ ಓದಿರಿ.

ಏರ್‌ಟೆಲ್‌ನ 35 ರೂ. ಪ್ಲ್ಯಾನ್‌
ಏರ್‌ಟೆಲ್ ಈಗ ಹೊಸದಾಗಿ 35 ರೂ. ದರದಲ್ಲಿ ಡೇಟಾ ವೋಚರ್ ಅನ್ನು ಪರಿಚಯಿಸಿದೆ. ಆದರೆ ಈ ಯೋಜನೆಯು ಏರ್‌ಟೆಲ್‌ನ ವೆಬ್‌ಸೈಟ್‌ನಲ್ಲಿ ಕಾಣಿಸಿಕೊಂಡಿಲ್ಲ. ಬದಲಾಗಿ ಏರ್ಟೆಲ್ ಮೊಬೈಲ್ ಆಪ್‌ನಲ್ಲಿ ಮಾತ್ರ ಕಾಣಿಸಿಕೊಂಡಿದೆ. ಪರಿಣಾಮ ಇನ್ಮುಂದೆ ನೀವು ಏರ್‌ಟೆಲ್ ಮೊಬೈಲ್ ಆಪ್‌ ಮೂಲಕ 35 ರೂ. ಗಳ ಪ್ರಿಪೇಯ್ಡ್ ಡೇಟಾ ವೋಚರ್ ಅನ್ನು ರೀಚಾರ್ಜ್ ಮಾಡಿಕೊಳ್ಳಬಹುದಾಗಿದೆ.

ಪ್ರಯೋಜನಗಳು?
ಏರ್‌ಟೆಲ್‌ನ 35 ರೂ. ಯೋಜನೆಯು 2 ದಿನಗಳ ಮಾನ್ಯತೆಯನ್ನು ಹೊಂದಿದೆ. ಇದರಲ್ಲಿ 2GB ಡೇಟಾ ಸಿಗಲಿದ್ದು, ಈ ಮೂಲಕ ನೀವು ಪ್ರತಿ 1GB ಡೇಟಾಗೆ 17.5 ರೂ. ಗಳನ್ನು ಪಾವತಿ ಮಾಡಬೇಕಿದೆ. ಹಾಗೆಯೆ ಹಳೆಯ 19 ರೂ. ಬೆಲೆಯ ಡೇಟಾ ಯೋಜನೆ ಸಹ ಇದ್ದು, ಇದರಲ್ಲಿ 1GB ಡೇಟಾ ಮಾತ್ರ ಲಭ್ಯವಾಗಲಿದೆ. ಆದರೆ ಈ ಡೇಟಾಗೆ 19 ರೂ. ಇರುವುದರಿಂದ ಹಾಗೂ ಒಂದು ದಿನದ ಮಾನ್ಯತೆ ಹೊಂದಿರುವುದರಿಂದ ಬಹುಪಾಲು ಜನರು ಇನ್ಮುಂದೆ ಹೊಸ ರೀಚಾರ್ಜ್‌ ಪ್ಲ್ಯಾನ್‌ ಕಡೆ ಕಣ್ಣಾಯಿಸಬಹುದಾಗಿದೆ.

ಕಡಿಮೆ ಬೆಲೆಯಲ್ಲಿ ಹೊಸ ರೀಚಾರ್ಜ್‌ ಪ್ಲ್ಯಾನ್‌ ಲಾಂಚ್‌ ಮಾಡಿದ ಏರ್‌ಟೆಲ್!

ಏರ್‌ಟೆಲ್ 319 ರೂ. ಯೋಜನೆ
ಇದರೊಂದಿಗೆ ಏರ್‌ಟೆಲ್‌ನ 319 ರೂ. ಪ್ರಿಪೇಯ್ಡ್ ಪ್ಲ್ಯಾನ್‌ ಸಹ ಲಭ್ಯವಿದ್ದು, ಈ ಮೂಲಕ ದಿನವೂ 2GB ದೈನಂದಿನ ಡೇಟಾ ಪ್ರಯೋಜನವನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ. ಈ ಯೋಜನೆಯು ಅನಿಯಮಿತ ವಾಯ್ಸ್‌ ಕಾಲ್‌ ಹಾಗೂ ದಿನಕ್ಕೆ 100 ಎಸ್‌ಎಮ್‌ಎಸ್ ಸೇರಿದಂತೆ ಇನ್ನಿತರೆ ಪ್ರಯೋಜನಗಳನ್ನು ಪಡೆದುಕೊಳ್ಳಬಹುದಾಗಿದೆ.

ಈ ಪ್ಲ್ಯಾನ್‌ನಲ್ಲಿ ವೈಂಕ್ ಮ್ಯೂಸಿಕ್, ಉಚಿತ ಹೆಲೋಟ್ಯೂನ್ಸ್, ಫಾಸ್ಟ್‌ಟ್ಯಾಗ್‌ನಲ್ಲಿ 100 ರೂ. ಕ್ಯಾಶ್‌ಬ್ಯಾಕ್, ಅಪೊಲೊ 24|7 ಸರ್ಕಲ್ ಸೇರಿದಂತೆ ಹಲವು ಪ್ರಯೋಜನಗಳು ಇದರಿಂದ ಲಭ್ಯವಾಗುತ್ತಿದ್ದು, ಈ ಯೋಜನೆಯು 28 ದಿನಗಳ ಮಾನ್ಯತೆಯನ್ನು ಹೊಂದಿರಲಿದೆ.

ಏರ್‌ಟೆಲ್ 359 ರೂ. ಯೋಜನೆ
ಹಾಗೆಯೇ ಏರ್‌ಟೆಲ್ 359 ರೂ. ಪ್ರಿಪೇಯ್ಡ್ ಯೋಜನೆಯು ಸಹ ಜನಪ್ರಿಯತೆ ಪಡೆದುಕೊಂಡಿದ್ದು, ಇದರಲ್ಲಿ 2GB ದೈನಂದಿನ ಡೇಟಾ ಪ್ರಯೋಜನ ಸಿಗಲಿದೆ. ಜೊತೆಗೆ ಅನಿಯಮಿತ ವಾಯ್ಸ್‌ ಕಾಲ್‌ ಪ್ರಯೋಜನಗಳು ಮತ್ತು ದಿನಕ್ಕೆ 100 ಎಸ್‌ಎಮ್‌ಎಸ್‌ ಪ್ರಯೋಜನಗಳೊಂದಿಗೆ ಬರುತ್ತದೆ. ಇದರ ಹೊರತಾಗಿ ಏರ್‌ಟೆಲ್ 359 ರೂ. ಪ್ರಿಪೇಯ್ಡ್ ಯೋಜನೆಯು ಎಕ್ಸ್‌ಸ್ಟ್ರೀಮ್ ಮೊಬೈಲ್ ಆಪ್‌ಗಳಿಗೆ ಪ್ರವೇಶ, ಉಚಿತ ಹೆಲೋಟ್ಯೂನ್ಸ್, ಫಾಸ್ಟ್‌ಟ್ಯಾಗ್‌ನಲ್ಲಿ 100 ರೂ. ಕ್ಯಾಶ್‌ಬ್ಯಾಕ್, ಅಪೊಲೊ 24|7 ಸರ್ಕಲ್ ಸೇರಿದಂತೆ ಇತರೆ ಪ್ರಯೋಜನಗಳನ್ನು ನೀಡಲಿದ್ದು, ಇದರ ಮಾನ್ಯತೆ 28 ದಿನಗಳ ವರೆಗೆ ಇರಲಿದೆ.

ಕಡಿಮೆ ಬೆಲೆಯಲ್ಲಿ ಹೊಸ ರೀಚಾರ್ಜ್‌ ಪ್ಲ್ಯಾನ್‌ ಲಾಂಚ್‌ ಮಾಡಿದ ಏರ್‌ಟೆಲ್!

549 ರೂ. ಗಳ ಪ್ಲ್ಯಾನ್‌
ಇದಿಷ್ಟೇ ಅಲ್ಲದೆ 549 ರೂ. ಗಳ ಪ್ರಿಪೇಯ್ಡ್ ಪ್ಲ್ಯಾನ್ 2GB ದೈನಂದಿನ ಡೇಟಾ ಪ್ರಯೋಜನವನ್ನು ನೀಡಲಿದ್ದು, ಈ ಯೋಜನೆಯು ಅನಿಯಮಿತ ವಾಯ್ಸ್‌ ಕಾಲ್‌ ಮತ್ತು ದಿನಕ್ಕೆ 100 ಎಸ್‌ಎಮ್‌ಎಸ್‌ ಪ್ರಯೋಜನಗಳೊಂದಿಗೆ ಬರುತ್ತದೆ. ಇದರ ಹೊರತಾಗಿ, ಎಕ್ಸ್‌ಸ್ಟ್ರೀಮ್ ಮೊಬೈಲ್ ಆಪ್‌ಗೆ ಪ್ರವೇಶ ಒದಗಿಸುವ ಜೊತೆಗೆ, ಉಚಿತ ಹೆಲೋಟ್ಯೂನ್ಸ್, ಫಾಸ್ಟ್‌ಟ್ಯಾಗ್‌ನಲ್ಲಿ 100 ರೂ. ಕ್ಯಾಶ್‌ಬ್ಯಾಕ್, ಅಪೊಲೊ 24|7 ಸರ್ಕಲ್ ಸೇರಿದಂತೆ ಹಲವು ಪ್ರಯೋಜನಗಳೊಂದಿಗೆ ಬರುತ್ತದೆ. ಈ ಪ್ಲ್ಯಾನ್‌ಮಾನ್ಯತೆ 56 ದಿನಗಳ ವರೆಗೆ ಇರಲಿದೆ.

Best Mobiles in India

English summary
Airtel Brings a New Rs 35 Data Plan for Prepaid Customers.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X