ಹಳೆಯ ಟಿವಿಯಲ್ಲೇ ಸ್ಮಾರ್ಟ್‌ಟಿವಿ ಸೌಲಭ್ಯ ಬೇಕೆ?... ಏರ್‌ಟೆಲ್‌ನ ಈ ಡಿವೈಸ್‌ ಖರೀದಿಸಿ!

|

ಈಗಂತೂ ಹಲವಾರು ಕಂಪೆನಿಗಳು ವಿವಿಧ ಫೀಚರ್ಸ್‌ ಆಯ್ಕೆಯ ಜೊತೆಗೆ ಸ್ಮಾರ್ಟ್‌ಟಿವಿಗಳನ್ನು ಪರಿಚಯಿಸುತ್ತಿವೆ. ಈ ಮೂಲಕ ಬೇಕಾದ ಓಟಿಟಿ ಪ್ಲಾಟ್‌ಫಾರ್ಮ್‌ಗೆ ಭೇಟಿ ನೀಡಬಹುದು, ಹಲವಾರು ವೆಬ್‌ಶೋಗಳನ್ನು ವೀಕ್ಷಣೆ ಮಾಡಬಹುದು. ಆದರೆ, ಈ ಸ್ಮಾರ್ಟ್‌ಟಿವಿಯನ್ನು ಹೆಚ್ಚಿನ ಹಣ ಕೊಟ್ಟು ಖರೀದಿ ಮಾಡಲಾಗದವರು ಹಳೆಯ ಟಿವಿಯಲ್ಲಿ ಏನು ಬರುತ್ತದೋ ಅದನ್ನು ನೋಡಿಕೊಂಡು ಸುಮ್ಮನಿದ್ದರು. ಆದರೆ, ಈಗ ಆ ಟಿವಿಗಳಲ್ಲೂ ಕೂಡ ಈ ಡಿವೈಸ್‌ ಮೂಲಕ ಸ್ಮಾರ್ಟ್‌ಟಿವಿ ಫೀಚರ್ಸ್‌ ಪಡೆದುಕೊಳ್ಳಬಹುದು.

ಸ್ಮಾರ್ಟ್

ಹೌದು, ನಿಮ್ಮ ಮನೆಯಲ್ಲಿ ಸ್ಮಾರ್ಟ್ ಟಿವಿ ಇಲ್ಲವೇ? ಸ್ಮಾರ್ಟ್ ಟಿವಿಯಲ್ಲಿ ಲಭ್ಯವಿರುವ ಎಲ್ಲಾ ಫೀಚರ್ಸ್‌ಗಳು ನಿಮ್ಮ ಹಳೆಯ ಟಿವಿಯಲ್ಲಿ ಲಭ್ಯವಾಗಬೇಕೆಂದು ನೀವು ಬಯಸುತ್ತಿದ್ದೀರ? ಹಾಗಿದ್ದರೆ ಈ ಲೇಖನ ಓದಲೇಬೇಕು. ಈ ಮೂಲಕ ನೀವು ನಿಮ್ಮ ಮನೆಯ ಹಳೆಯ ಟಿವಿಯಲ್ಲೇ ಸ್ಮಾರ್ಟ್‌ಟಿವಿ ಫೀಚರ್ಸ್‌ ಪಡೆದುಕೊಳ್ಳಬಹುದು. ಹಾಗೆಯೇ ಬೇಕಾದ ಶೋಗಳನ್ನು ಬೇಕಾದಾಗ ವೀಕ್ಷಣೆ ಮಾಡಬಹುದು. ಹಾಗಿದ್ರೆ, ಕಡಿಮೆ ಬೆಲೆಯಲ್ಲಿ ಹಳೆಯ ಟಿವಿಯನ್ನು ಸ್ಮಾರ್ಟ್‌ಟಿವಿಯನ್ನಾಗಿ ಮಾಡಿಕೊಳ್ಳುವುದು ಹೇಗೆ ಎಂಬುದನ್ನು ಈ ಲೇಖನದಲ್ಲಿ ವಿವರಿಸಿದ್ದೇವೆ ಓದಿರಿ.

ಹೊಸ ಸ್ಮಾರ್ಟ್ ಟಿವಿಯನ್ನು ಖರೀದಿಸಬೇಡಿ, ಹಳೆಯ ಟಿವಿಯೇ ಸಾಕು!

ಹೊಸ ಸ್ಮಾರ್ಟ್ ಟಿವಿಯನ್ನು ಖರೀದಿಸಬೇಡಿ, ಹಳೆಯ ಟಿವಿಯೇ ಸಾಕು!

ಈಗಾಗಲೇ ನಿಮ್ಮ ಮನೆಯಲ್ಲಿರುವ ಟಿವಿ ಎಷ್ಟೇ ಹಳೆಯದಾಗಿದ್ದರೂ ತಲೆ ಕೆಡಿಸಿಕೊಳ್ಳಬೇಡಿ. ಆ ಟಿವಿಯನ್ನೇ ಸ್ಮಾರ್ಟ್‌ಟಿವಿಯನ್ನಾಗಿ ಪರಿವರ್ತಿಸುವುದು ಏರ್‌ಟೆಲ್‌ನ ಈ ಡಿವೈಸ್‌ ಮೂಲಕ ಸುಲಭವಾಗಿದೆ. ಇದರಿಂದ ನೀವು ಓಟಿಟಿ ಚಾನಲ್‌ ಹಾಗೂ ಆಪ್‌ಗಳನ್ನು ಇನ್‌ಸ್ಟಾಲ್‌ ಸಹ ಮಾಡಿಕೊಳ್ಳಬಹುದು. ಹೀಗಾಗಿ ಸ್ಮಾರ್ಟ್‌ಟಿವಿಯಲ್ಲಿ ಪ್ರಸಾರವಾಗುವ ಶೋಗಳನ್ನು ನೋಡಲು ಸ್ಮಾರ್ಟ್‌ಟಿವಿಯೇ ಬೇಕು ಎಂಬ ಅಗತ್ಯ ಇಲ್ಲ.

ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಬಾಕ್ಸ್

ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಬಾಕ್ಸ್

ಹೌದು, ನೀವು ನಿಮ್ಮ ಹಳೆಯ ಟಿವಿಯನ್ನು ಸ್ಮಾರ್ಟ್‌ಟಿವಿಯನ್ನಾಗಿ ಮಾಡಿಕೊಳ್ಳಬೇಕು ಎಂದರೆ ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಬಾಕ್ಸ್ ಬಳಕೆ ಮಾಡುಬೇಕು. ಇದಕ್ಕೇನು ಹೆಚ್ಚಿನ ಬೆಲೆ ಕೊಡಬೇಕಾಗಿಲ್ಲ. ಈ ಬಾಕ್ಸ್‌ ಏರ್‌ಟೆಲ್ ವಿಶೇಷವಾಗಿ ಪರಿಚಯಿಸಿದ ಡಿವೈಸ್‌ ಆಗಿದ್ದು, ಏರ್‌ಟೆಲ್ ಡಿಜಿಟಲ್ ಟಿವಿಯ ಉತ್ಪನ್ನವಾಗಿದೆ. ಇದು ನಿಮ್ಮ ಹಳೆಯ ಟಿವಿಯನ್ನು ತಕ್ಷಣವೇ ಸ್ಮಾರ್ಟ್ ಟಿವಿಯಲ್ಲಿಯೇ ಸ್ಮಾರ್ಟ್‌ಟಿವಿ ಫೀವರ್ಸ್‌ ನೀಡಲಿದೆ. ಹಾಗೆಯೇ ಎಲ್ಲಾ ಓಟಿಟಿ ಪ್ಲಾಟ್‌ಫಾರ್ಮ್‌ಗಳಿಗೆ ಈ ಮೂಲಕ ನೀವು ಎಂಟ್ರಿಯಾಗಬಹುದು.

ಇದರಲ್ಲಿ ಏನೆಲ್ಲಾ ಲಭ್ಯ?

ಇದರಲ್ಲಿ ಏನೆಲ್ಲಾ ಲಭ್ಯ?

ಈ ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಬಾಕ್ಸ್ ಒಂದು ಸೆಟ್-ಟಾಪ್ ಬಾಕ್ಸ್ ಆಗಿದ್ದು, ಸೋನಿ LIV, ಅಮೆಜಾನ್‌ ಪ್ರೈಮ್‌, ಎರೋಸ್ ನೌ, ಡಿಸ್ನಿ+ ಹಾಟ್‌ಸ್ಟಾರ್ ಸೇರಿದಂತೆ ಇತರೆ ಪ್ರಮುಖ ಓಟಿಟಿ ಪ್ಲಾಟ್‌ಫಾರ್ಮ್‌ಗಳನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ.

5000+ ಆಪ್‌ಗಳು ಹಾಗೂ 500 ಟಿವಿ ಚಾನೆಲ್‌ಗಳು ಲಭ್ಯ

5000+ ಆಪ್‌ಗಳು ಹಾಗೂ 500 ಟಿವಿ ಚಾನೆಲ್‌ಗಳು ಲಭ್ಯ

ಈ ವಿಷಯವಂತೂ ನಿಮಗೆ ಆಶ್ಚರ್ಯ ಎನಿಸಬಹುದು. ಯಾಕೆಂದರೆ ಈ ಬಾಕ್ಸ್‌ನಲ್ಲಿ 5000+ ಆಪ್‌ಗಳು ಲಭ್ಯವಿದ್ದು, ಬೇಕಾದದ್ದನ್ನು ಇನ್‌ಸ್ಟಾಲ್‌ ಮಾಡಿಕೊಳ್ಳಬಹುದು. ಹಾಗೆಯೇ ಇನ್‌ಬಿಲ್ಟ್‌ ಕ್ರೋಮಾಕಾಸ್ಟ್‌ ಆಯ್ಕೆ ಸಹ ಇದೆ. ಇದರೊಂದಿಗೆ 500+ ಟಿವಿ ಚಾನೆಲ್‌ಗಳು, ಗೂಗಲ್‌ ಅಸಿಸ್ಟೆಂಟ್‌ ಫೀಚರ್ಸ್‌ ಇದ್ದು ವಿಶೇಷ ಅನುಭವ ನೀಡಲಿದೆ.

4K ರೆಸಲ್ಯೂಶನ್‌, ಸ್ಮಾರ್ಟ್‌ ರಿಮೋಟ್‌

4K ರೆಸಲ್ಯೂಶನ್‌, ಸ್ಮಾರ್ಟ್‌ ರಿಮೋಟ್‌

ರೆಸಲ್ಯೂಶನ್‌ ವಿಷಯಕ್ಕೆ ಬಂದರೆ ಈ ಡಿವೈಸ್‌ನಲ್ಲಿ ನೀವು 4K ರೆಸಲ್ಯೂಶನ್‌ ಸಾಮರ್ಥ್ಯದ ವಿಡಿಯೋಗಳನ್ನು ವೀಕ್ಷಣೆ ಮಾಡಬಹುದು. ಹಾಗೆಯೇ ಸ್ಮಾರ್ಟ್‌ಟಿವಿಯಲ್ಲಿ ಬಳಕೆ ಮಾಡುವ ರಿಮೋಟ್‌ ಅನ್ನು ಸಹ ಇದರಲ್ಲಿ ಬಳಕೆ ಮಾಡಬಹುದು. ಇದರಲ್ಲಿ ಹಾಟ್‌ ಕೀಗಳು ಸಹ ಲಭ್ಯವಿದ್ದು, ಬೇಕಾದ ಪ್ಲಾಟ್‌ಫಾರ್ಮ್‌ನಲ್ಲಿ ಬೇಗನೆ ಸ್ಟ್ರೀಮಿಂಗ್‌ ಮಾಡಬಹುದು.

ಎಷ್ಟು ಹಣ ಖರ್ಚಾಗುತ್ತದೆ?

ಎಷ್ಟು ಹಣ ಖರ್ಚಾಗುತ್ತದೆ?

ಸ್ಮಾರ್ಟ್‌ಟಿವಿ ಖರೀದಿ ಮಾಡಬೇಕು ಎಂದುಕೊಂಡರೆ ನೀವು ಸರಿಸುಮಾರು 15,000 ರೂ. ಮೇಲ್ಪಟ್ಟು ಹಣ ಖರ್ಚು ಮಾಡಬೇಕು. ಆದರೆ ಈ ಡಿವೈಸ್‌ಗೆ ಕೇವಲ 1,500 ರೂ. ಪಾವತಿ ಮಾಡಿದರೆ ಸಾಕು. ಇನ್ನು ಇದರ ಮೂಲ ಬೆಲೆ 2,650 ರೂ. ಗಳಾಗಿದ್ದು, ಆಫರ್‌ ಬೆಲೆಯಲ್ಲಿ ಇದು ಲಭ್ಯವಿದೆ. ಈ ಡಿವೈಸ್‌ ಅನ್ನು ನೀವು ಎಲ್ಲಾ ರಿಟೇಲರ್‌ ಸ್ಟೋರ್‌ ಹಾಗೂ ಆನ್‌ಲೈನ್‌ನಲ್ಲೂ ಖರೀದಿ ಮಾಡಬಹುದು.

Best Mobiles in India

English summary
Airtel Can Convert Your TV into Smart TV; How?.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X