ಏರ್‌ಟೆಲ್‌ ಟೆಲಿಕಾಂನಿಂದ 1,099ರೂ.ಬೆಲೆಯ ಬ್ಲಾಕ್‌ ಪ್ಲಾನ್‌ ಲಾಂಚ್‌! ವಿಶೇಷತೆ ಏನು?

|

ಏರ್‌ಟೆಲ್‌ ಟೆಲಿಕಾಂ ದೇಶದ ಟೆಲಿಕಾಂ ವಲಯದಲ್ಲಿ ಮುಂಚೂಣಿಯಲ್ಲಿ ಕಾಣಿಸಿಕೊಂಡಿದೆ. ಜಿಯೋ ಜೊತೆಗೆ ಪೈಪೋಟಿ ನಡೆಸುತ್ತಿರುವ ಏರ್‌ಟೆಲ್‌ ತನ್ನ ಗ್ರಾಹಕರಿಗಾಗಿ ಪ್ರಿಪೇಯ್ಡ್‌ ಹಾಗೂ ಪೋಸ್ಟ್‌ಪೇಯ್ಡ್‌ ಪ್ಲಾನ್‌ಗಳನ್ನು ಪರಿಚಯಿಸುತ್ತಾ ಬಂದಿದೆ. ಸದ್ಯ ಇದೀಗ 1,099 ರೂ ಮೌಲ್ಯದ ಹೊಸ ಏರ್‌ಟೆಲ್ ಬ್ಲಾಕ್ ಪ್ಲಾನ್ ಅನ್ನು ಪರಿಚಯಿಸಿದೆ. ಈಗಾಗಲೇ 998ರೂ, 1,349ರೂ, 1,598ರೂ ಮತ್ತು 2,099ರೂ ಬೆಲೆಯಲ್ಲಿ ಏರ್‌ಟೆಲ್‌ ಬ್ಲಾಕ್‌ ಪ್ಲಾನ್‌ಗಳನ್ನು ಪರಿಚಯಿಸಿದೆ. ಇದೇ ಸಾಲಿಗೆ ಇದೀಗ ಹೊಸ ಪ್ಲಾನ್‌ ಕೂಡ ಸೇರಿದೆ.

ಏರ್‌ಟೆಲ್

ಹೌದು, ಏರ್‌ಟೆಲ್ ಟೆಲಿಕಾಂ 1,099ರೂ. ಮೌಲ್ಯದ ಹೊಸ ಏರ್‌ಟೆಲ್ ಬ್ಲಾಕ್ ಪ್ಲಾನ್ ಅನ್ನು ಪರಿಚಯಿಸಿದೆ. ಈ ಹೊಸ ಪ್ಲಾನ್‌ನಲ್ಲಿ ಅನಿಯಮಿತ ಏರ್‌ಟೆಲ್ ಫೈಬರ್ ಮತ್ತು ಏರ್‌ಟೆಲ್ ಲ್ಯಾಂಡ್‌ಲೈನ್ ಸಂಪರ್ಕಗಳನ್ನು 200Mbps ವೇಗದೊಂದಿಗೆ ನೀಡುತ್ತದೆ. ಇದರ ಜೊತೆಗೆ, ಈ ಯೋಜನೆಯು 350ರೂ. ಮೌಲ್ಯದ ಟಿವಿ ಚಾನೆಲ್‌ಗಳಿಗೆ DTH ಸಂಪರ್ಕವನ್ನು ನೀಡುತ್ತದೆ. ಇನ್ನುಳಿದಂತೆ ಈ ಹೊಸ ಬ್ಲಾಕ್‌ ಪ್ಲಾನ್‌ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಏರ್‌ಟೆಲ್‌

ಏರ್‌ಟೆಲ್‌ 1,099ರೂ.ಬೆಲೆಯ ಬ್ಲಾಕ್‌ ಪ್ಲಾನ್‌ ಅನಿಯಮಿತ ಏರ್‌ಟೆಲ್‌ ಫೈಬರ್‌ ಮತ್ತು ಏರ್‌ಟೆಲ್ ಲ್ಯಾಂಡ್‌ಲೈನ್ ಸಂಪರ್ಕಗಳನ್ನು 200Mbps ವೇಗದೊಂದಿಗೆ ನೀಡುತ್ತದೆ. ಜೊತೆಗೆ ಅಮೆಜಾನ್‌ ಪ್ರೈಮ್‌ಗೆ ಒಂದು ವರ್ಷದ ಚಂದಾದಾರಿಕೆಯನ್ನು ಮತ್ತು ಏರ್‌ಟೆಲ್‌ ಎಕ್ಸ್‌ಟ್ರೀಮ್‌ ಅಪ್ಲಿಕೇಶನ್‌ಗೆ ಒಂದು ವರ್ಷದ ಚಂದಾದಾರಿಕೆಯನ್ನು ನೀಡುತ್ತದೆ. ಸದ್ಯ ಹೊಸದಾಗಿ ಪರಿಚಯಿಸಲಾದ 1,099ರೂ. ಏರ್‌ಟೆಲ್ ಬ್ಲಾಕ್ ಪ್ಲಾನ್‌ ಪ್ರಿಪೇಯ್ಡ್ ಸಂಪರ್ಕದೊಂದಿಗೆ ಬರುತ್ತದೆ. ಆದರೆ ಬಳಕೆದಾರರಿಗೆ ತಮ್ಮ ಏರ್‌ಟೆಲ್ ಸಂಪರ್ಕಗಳನ್ನು ಬಳಸುವುದನ್ನು ಮುಂದುವರಿಸಲು ಅವಕಾಶ ನೀಡುವ ಸಾಧ್ಯತೆಯಿದೆ.

ಏರ್‌ಟೆಲ್‌

ಇದಲ್ಲದೆ ಏರ್‌ಟೆಲ್‌ ಟೆಲಿಕಾಂ ಇತ್ತೀಚಿಗೆ ಒಂದು ತಿಂಗಳ ಮಾನ್ಯತೆ ನೀಡುವ ಎರಡು ಪ್ಲಾನ್‌ಗಳನ್ನು ಪರಿಚಯಿಸಿದೆ. ಇದರಲ್ಲಿ ಏರ್‌ಟೆಲ್‌ 296ರೂ. ಪ್ರಿಪೇಯ್ಡ್ ಪ್ಲಾನ್‌ 30 ದಿನಗಳ ವ್ಯಾಲಿಡಿಟಿಯನ್ನು ಒಳಗೊಂಡಿದೆ. ಈ ಪ್ಲಾನ್‌ 25GB ಡೇಟಾವನ್ನು ಜೊತೆಗೆ ಅನಿಯಮಿತ ಕರೆಗಳನ್ನು ಪಡೆದಿದೆ. ಒಮ್ಮೆ ಈ ಡೇಟಾ ಮಿತಿ ಮುಗಿದ ನಂತರ, ಚಂದಾದಾರರಿಗೆ ಪ್ರತಿ ಎಂಬಿ ಡೇಟಾಗೆ 50 ಪೈಸೆ ಶುಲ್ಕ ವಿಧಿಸಲಾಗುತ್ತದೆ. ಹಾಗೆಯೇ ಈ ಯೋಜನೆಯು ಪ್ರತಿದಿನ 100 SMS ಗಳನ್ನು ಸಹ ಪಡೆದಿದೆ. ಇದರೊಂದಿಗೆ ಹೆಚ್ಚುವರಿಯಾಗಿ, ಚಂದಾದಾರರು ಅಮೆಜಾನ್ ಪ್ರೈಮ್ ವಿಡಿಯೋ ಮೊಬೈಲ್ ಆವೃತ್ತಿಯ 30 ದಿನದ ಪ್ರಯೋಗವನ್ನು ಪಡೆಯುತ್ತಾರೆ.

ಏರ್‌ಟೆಲ್‌ ಟೆಲಿಕಾಂ 319ರೂ. ಪ್ರಿಪೇಯ್ಡ್ ಪ್ಲಾನ್‌

ಇನ್ನು ಏರ್‌ಟೆಲ್‌ ಟೆಲಿಕಾಂನ 319ರೂ. ಪ್ರಿಪೇಯ್ಡ್ ಪ್ಲಾನ್‌ 30 ದಿನಗಳ ವ್ಯಾಲಿಡಿಟಿಯನ್ನು ಒಳಗೊಂಡಿದೆ. ಈ ಯೋಜನೆಯಲ್ಲಿ ಪ್ರತಿದಿನ 2GB ಡೇಟಾ ದೊರೆಯಲಿದ್ದು, ತಿಂಗಳಿಗೆ ಒಟ್ಟು 60GB ಡೇಟಾ ಲಭ್ಯವಾಗಲಿದೆ. ಜೊತೆಗೆ ಅನಿಯಮಿತ ಕರೆಗಳನ್ನು ಪಡೆದಿದೆ. ಒಮ್ಮೆ ಈ ಡೇಟಾ ಮಿತಿ ಮುಗಿದ ನಂತರ, ಚಂದಾದಾರರಿಗೆ ಪ್ರತಿ ಎಂಬಿ ಡೇಟಾಗೆ 50 ಪೈಸೆ ವಿಧಿಸಲಾಗುತ್ತದೆ. ಹಾಗೆಯೇ ಈ ಯೋಜನೆಯು ಪ್ರತಿದಿನ 100 SMS ಗಳನ್ನು ಸಹ ಪಡೆದಿದೆ. ವಿ ಟೆಲಿಕಾಂ ಕೂಡ ಒಂದು ತಿಂಗಳ ಮಾನ್ಯತೆಯಲ್ಲಿ ಹೊಸ ಪ್ರಿಪೇಯ್ಡ್‌ ಪ್ಲಾನ್‌ಗಳನ್ನು ಪರಿಚಯಿಸಿದ್ದು, ಅವುಗಳ ವಿವರ ಕೆಳಗಿನ ಹಂತಗಳಲ್ಲಿ ತಿಳಿಯೋಣ ಬನ್ನಿರಿ.

ವಿ ಟೆಲಿಕಾಂ 327ರೂ. ಪ್ರಿಪೇಯ್ಡ್‌ ಪ್ಲಾನ್‌

ವಿ ಟೆಲಿಕಾಂ 327ರೂ. ಪ್ರಿಪೇಯ್ಡ್‌ ಪ್ಲಾನ್‌

ವಿ ಟೆಲಿಕಾಂನ 327ರೂ.ಗಳ ಪ್ರಿಪೇಯ್ಡ್ ಪ್ಲಾನ್‌ ಅನಿಯಮಿತ ಧ್ವನಿ ಕರೆಗಳು, ದೈನಂದಿನ ಆಧಾರದ ಮೇಲೆ 100 SMS ಸಂದೇಶಗಳು ಮತ್ತು ಒಟ್ಟು 25GB ಡೇಟಾಗೆ ಪ್ರವೇಶವನ್ನು ನೀಡಲಿದೆ. ಈ ಪ್ಲಾನ್‌ 30 ದಿನಗಳ ಮಾನ್ಯತೆಯನ್ನು ನೀಡಲಿದೆ. ಇದಲ್ಲದೆ Vi ಮೂವೀಸ್‌ ಮತ್ತು ಟಿವಿ ಚಂದಾದಾರಿಕೆಯನ್ನು ನೀಡಲಿವೆ.

ವಿ ಟೆಲಿಕಾಂನ 337ರೂ. ಪ್ರಿಪೇಯ್ಡ್ ಪ್ಲಾನ್‌
ವಿ ಟೆಲಿಕಾಂನ 337ರೂ. ಪ್ರಿಪೇಯ್ಡ್ ಪ್ಲಾನ್‌ 31 ದಿನಗಳ ಮಾನ್ಯತೆಯನ್ನು ಹೊಂದಿದೆ. ಈ ಪ್ಲಾನ್‌ನಲ್ಲಿ ಅನಿಯಮಿತ ಧ್ವನಿ ಕರೆಗಳು ಮತ್ತು ದಿನಕ್ಕೆ 100 SMS ಸಂದೇಶಗಳ ಪ್ರಯೋಜನ ಪಡೆಯಬಹುದು.ಇದಲ್ಲದೆ ಒಟ್ಟು 28GB ಡೇಟಾ ಪ್ರಯೋಜನವನ್ನು ಕೂಡ ಪಡೆಯಬಹುದಾಗಿದೆ. ಇದಲ್ಲದೆ ಈ ರೀಚಾರ್ಜ್ ಪ್ಲಾನ್‌ಗಳನ್ನು ಆಯ್ಕೆ ಮಾಡುವ ಗ್ರಾಹಕರು ವಿ ಮೂವೀಸ್‌ ಮತ್ತು TV ​​ಅಪ್ಲಿಕೇಶನ್‌ಗೆ ಪೂರಕ ಚಂದಾದಾರಿಕೆಯನ್ನು ಸಹ ಪಡೆಯುತ್ತಾರೆ.

Best Mobiles in India

English summary
Airtel has announced a new fixed plan under its Airtel Black plans. Here's everything you need to know about this plan.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X