ಏರ್‌ಟೆಲ್‌ನ ಈ ಪ್ಲಾನ್‌ನಲ್ಲಿ ಗ್ರಾಹಕರಿಗೆ ಸಿಗಲಿದೆ ಬಿಗ್‌ ಆಫರ್‌!

|

ದೇಶದ ಟೆಲಿಕಾಂ ವಲಯದಲ್ಲಿ ಗ್ರಾಹಕರ ನೆಚ್ಚಿನ ಸಂಸ್ಥೆಗಳಲ್ಲಿ ಏರ್‌ಟೆಲ್‌ ಕೂಡ ಒಂದಾಗಿದೆ. ಜಿಯೋ ಟೆಲಿಕಾಂ ಜೊತೆಗೆ ಪ್ರಬಲ ಪೈಪೋಟಿ ನಡೆಸುತ್ತಿರುವ ಏರ್‌ಟೆಲ್‌ ಗ್ರಾಹಕರಿಗೆ ಹಲವು ಆಕರ್ಷಕ ಪ್ರಿಪೇಯ್ಡ್‌ ಪ್ಲಾನ್‌ಗಳನ್ನು ಪರಿಚಯಿಸಿದೆ. ಅಲ್ಪಾವಧಿಯ ಪ್ಲಾನ್‌ಗಳ ಜೊತೆಗೆ ದೀರ್ಘಾವಧಿಯ ಪ್ಲಾನ್‌ಗಳನ್ನು ಕೂಡ ಪರಿಚಯಿಸಿ ಗ್ರಾಹಕರ ಗಮನ ಸೆಳೆದಿದೆ. ಇದಲ್ಲದೆ ಕೆಲವು ಪ್ರಿಪೇಯ್ಡ್‌ ಪ್ಲಾನ್‌ಗಳಲ್ಲಿ ಹೆಚ್ಚುವರಿ ಡೇಟಾ ಜೊತೆಗೆ ಅನೇಕ ಸ್ಟ್ರೀಮಿಂಗ್‌ ಪ್ರಯೋಜನಗಳನ್ನು ನೀಡಲಿದೆ.

ಏರ್‌ಟೆಲ್‌

ಹೌದು, ಏರ್‌ಟೆಲ್‌ ತನ್ನ ಪ್ರಿಪೇಯ್ಡ್‌ ಪ್ಲಾನ್‌ಗಳಲ್ಲಿ ಹೆಚ್ಚುವರಿ ಡೇಟಾ ನೀಡುವ ಮೂಲಕ ಗ್ರಾಹಕರ ಗಮನ ಸೆಳೆದಿದೆ. ಸದ್ಯ ಇದೀಗ 249ರೂ.ಗಳ ಪ್ರಿಪೇಯ್ಡ್‌ ಪ್ಲಾನ್‌ನಲ್ಲಿ ಬಳಕೆದಾರರಿಗೆ ಉಚಿತವಾಗಿ ದೈನಂದಿನ 500MB ಹೆಚ್ಚುವರಿ ಡೇಟಾ ಪ್ರಯೋಜನವನ್ನು ಪರಿಚಯಿಸಿದೆ. ಈ ಪ್ಲಾನ್‌ ದೈನಂದಿನ 1.5GB ಡೇಟಾ ಪ್ರಯೋಜನ ನೀಡಲಿದ್ದು, 28 ದಿನಗಳ ವ್ಯಾಲಿಡಿಟಿ ಹೊಂದಿದೆ. ಹೀಗೆ ಹೆಚ್ಚುವರಿ ಡೇಟಾ ಪ್ರಯೋಜನ ನೀಡುವ ಮೂಲಕ ಜಿಯೋದ 249ರೂ ಪ್ಲಾನ್‌ಗೆ ಸೆಡ್ಡು ಹೊಡೆದಿದೆ. ಹಾಗಾದ್ರೆ ಏರ್‌ಟೆಲ್‌ ಹೆಚ್ಚುವರಿ ಡೇಟಾ ಪರಿಚಯಿಸಿರುವ ಪ್ಲಾನ್‌ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಏರ್‌ಟೆಲ್‌ ಟೆಲಿಕಾಂ 249ರೂ. ಪ್ರಿಪೇಯ್ಡ್ ಪ್ಲಾನ್‌

ಏರ್‌ಟೆಲ್‌ ಟೆಲಿಕಾಂ 249ರೂ. ಪ್ರಿಪೇಯ್ಡ್ ಪ್ಲಾನ್‌ನಲ್ಲಿ ಇದೀಗ ಹೆಚ್ಚುವರಿ ಡೇಟಾ ಆಫರ್‌ ನೀಡಿದೆ. ದೈನಂದಿನ 1.5GB ಡೇಟಾ ಪ್ರಯೋಜನ ನೀಡುವ ಈ ಪ್ಲಾನ್‌ ಹೆಚ್ಚುವರಿ ಡೇಟಾ ಪ್ರಯೋಜನ ಪ್ರಯುಕ್ತ ಇದು ದಿನಕ್ಕೆ 2GB ಡೇಟಾ ನೀಡಲಿದೆ. ಇದನ್ನು ಏರ್‌ಟೆಲ್‌ ಥ್ಯಾಂಕ್ಸ್ ಅಪ್ಲಿಕೇಶನ್ ಮೂಲಕ ರಿಡೀಮ್ ಮಾಡಬಹುದು. ಇನ್ನು ಈ ಪ್ಲಾನ್‌ ಅನಿಯಮಿತ ಕರೆ ಹಾಗೂ ದಿನಕ್ಕೆ 100 ಎಸ್‌ಎಂಎಸ್‌ ಸೇವೆಯನ್ನು ನೀಡಲಿದೆ. ಜೊತೆಗೆ ಅಮೆಜಾನ್ ಪ್ರೈಮ್ ವೀಡಿಯೋ ಮೊಬೈಲ್ ಆವೃತ್ತಿಯ ಒನ್‌ ಮಂತ್‌ ಟ್ರಯಲ್‌, 1 ವರ್ಷ ಶಾ ಅಕಾಡೆಮಿ,ಉಚಿತ ಹೆಲೋಟ್ಯೂನ್ಸ್ ಚಂದಾದಾರಿಕೆ, ಹಾಗೂ ವಿಂಕ್ ಮ್ಯೂಸಿಕ್ ಪ್ರಯೋಜನಗಳನ್ನು ನೀಡಲಿದೆ.

ಜಿಯೋ

ಇನ್ನು ಏರ್‌ಟೆಲ್‌ ಹೆಚ್ಚುವರಿ ಡೇಟಾ ಆಫರ್‌ ನೀಡುವ ಮೂಲಕ ಜಿಯೋದ 249ರೂ ಪ್ಲಾನ್‌ಗೆ ಸೆಡ್ಡು ಹೊಡೆದಿದೆ. ಜಿಯೋ ಟೆಲಿಕಾಂನ 249ರೂ ಪ್ರಿಪೇಯ್ಡ್‌ ಪ್ಲ್ಯಾನಿನಲ್ಲಿ ಪ್ರತಿದಿನ 2GB ಇಂಟರ್‌ನೆಟ್ ಪ್ರಯೋಜನ ಸಿಗುತ್ತದೆ. ಹಾಗೆಯೇ ಜಿಯೋದಿಂದ ಜಿಯೋ ಕರೆಗಳು ಸೇರಿದಂತೆ ಜಿಯೋದಿಂದ ಇತರೆ ನೆಟವರ್ಕ ಕರೆಗಳು ಸಹ ಸಂಪೂರ್ಣ ಅನಿಯಮಿತ ಉಚಿತ. ಇದರೊಂದಿಗೆ ಪ್ರತಿದಿನ 100ಎಸ್ಎಮ್ಎಸ್‌ ಸೌಲಭ್ಯ ಲಭ್ಯ. ಈ ಪ್ಲ್ಯಾನ್ ಒಟ್ಟು 28 ದಿನಗಳ ವ್ಯಾಲಿಡಿಟಿ ಅವಧಿ ಹೊಂದಿದೆ. ಈ ಯೋಜನೆಯಲ್ಲಿ ಒಟ್ಟು 56GB ಡೇಟಾ ಸಿಗಲಿದ್ದು, ಜಿಯೋ ಆಪ್ಸ್‌ಗಳಿಗೆ ಪ್ರವೇಶವನ್ನು ಸಹ ನೀಡಲಿದೆ.

ವಿ ಟೆಲಿಕಾಂ

ಇದಲ್ಲದೆ ವಿ ಟೆಲಿಕಾಂ ಕೂಡ 249ರೂ.ಬೆಲೆಯ ಪ್ರಿಪೇಯ್ಡ್‌ ಪ್ಲಾನ್‌ ಹೊಂದಿದೆ. ಆದರೆ ಈ ಪ್ಲಾನ್‌ ದೈನಂದಿನ 1.5GB ಡೇಟಾ ನೀಡಲಿದೆ. ಇನ್ನು ಈ ಪ್ಲ್ಯಾನ್ ಅಲ್ಪಾವಧಿಯ ಪ್ಲ್ಯಾನ್‌ ಆಗಿದ್ದು, ಒಟ್ಟು 28 ದಿನಗಳ ವ್ಯಾಲಿಡಿಟಿ ಹೊಂದಿದೆ. ಈ ಅವಧಿಯಲ್ಲಿ ಅನಿಯಮಿತ ಉಚಿತ ಕರೆಗಳ ಸೌಲಭ್ಯ ದೊರೆಯುತ್ತದೆ. ಜೊತೆಗೆ ಪ್ರತಿದಿನ 100 ಉಚಿತ ಎಸ್‌ಎಮ್‌ಎಸ್‌ಗಳ ಸೌಲಭ್ಯ ದೊರೆಯಲಿದೆ. ಇದರೊಂದಿಗೆ ವೀಕೆಂಡ್ ಡೇಟಾ ರೋಲ್‌ಓವರ್ ಸೌಲಭ್ಯ ಪಡೆದಿದೆ. ಅಲ್ಲದೆ ಬಿಂಜ್ ಆಲ್ ನೈಟ್ ಆಫರ್‌ನಲ್ಲಿ, ಗ್ರಾಹಕರು ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ, ಪ್ಯಾಕ್ ಕಡಿತವಿಲ್ಲದೆ 12 ಮಧ್ಯರಾತ್ರಿಯಿಂದ ಬೆಳಿಗ್ಗೆ 6 ಗಂಟೆಯವರೆಗೆ ಸರ್ಫ್ ಮಾಡಬಹುದು ಮತ್ತು ಸ್ಟ್ರೀಮ್ ಮಾಡಬಹುದಾಗಿದೆ.

ದೈನಂದಿನ 2GB ಡೇಟಾ ನೀಡುವ ಏರ್‌ಟೆಲ್ ಪ್ರಿಪೇಯ್ಡ್‌ ಪ್ಲಾನ್‌ಗಳು!

ದೈನಂದಿನ 2GB ಡೇಟಾ ನೀಡುವ ಏರ್‌ಟೆಲ್ ಪ್ರಿಪೇಯ್ಡ್‌ ಪ್ಲಾನ್‌ಗಳು!

ಏರ್‌ಟೆಲ್‌ ಟೆಲಿಕಾಂನ 298ರೂ. ಪ್ರೀಪೇಡ್‌ ಪ್ಲ್ಯಾನ್‌ ಒಟ್ಟು 28 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದೆ. ಈ ಅವಧಿಯಲ್ಲಿ ಅನಿಯಮಿತ ಉಚಿತ ಲೋಕಲ್ ಮತ್ತು ನ್ಯಾಶನಲ್ ಕರೆಗಳ ಸೌಲಭ್ಯ ದೊರೆಯುತ್ತದೆ. ಇದರೊಂದಿಗೆ ಪ್ರತಿದಿನ 2GB ಡೇಟಾ ಹಾಗೂ 100 ಎಸ್‌ಎಮ್‌ಎಸ್‌ ಸೌಲಭ್ಯ ಸಹ ಸಿಗಲಿದೆ. ಹಾಗೆಯೇ ಈ ಪ್ಲ್ಯಾನ್ ಹೆಚ್ಚುವರಿಯಾಗಿ ಏರ್‌ಟೆಲ್ Wynk Music ಸೇವೆಯನ್ನು ಒದಗಿಸುತ್ತದೆ.

ಏರ್‌ಟೆಲ್‌ 449ರೂ. ಪ್ರೀಪೇಯ್ಡ್‌ ಪ್ಲ್ಯಾನ್ ಒಟ್ಟು 56 ದಿನಗಳ ವ್ಯಾಲಿಡಿಟಿಯ ಅವಧಿಯನ್ನು ಒಳಗೊಂಡಿದೆ. ಇದರೊಂದಿಗೆ ದಿನಕ್ಕೆ 100 ಎಸ್‌ಎಂಎಸ್ ಸೌಲಭ್ಯ ಮತ್ತು ಅನಿಯಮಿತ ವಾಯಿಸ್ ಕರೆಗಳ ಪ್ರಯೋಜನ ಹೊಂದಿದೆ. ಹಾಗೆಯೇ ಪ್ರತಿದಿನ 2GB ಡೇಟಾವನ್ನು ಪಡೆದಿದೆ. ಇದರೊಂದಿಗೆ ಹೆಚ್ಚುವರಿಯಾಗಿ ಹೆಲೋ ಟ್ಯೂನ್, ವೆಂಕ್ ಮ್ಯೂಸಿಕ್ ಸೇವೆಗಳ ಪ್ರಯೋಜನ ಸಹ ಲಭ್ಯವಾಗಲಿದೆ.

Most Read Articles
Best Mobiles in India

English summary
Bharti Airtel has introduced an additional benefit of 500MB free daily data for its prepaid users.to know more visit to kannada.gizbot.com.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X